Homeಅಂಕಣಗಳುನಾವೀಗ ಚುನಾವಣಾ ಸರ್ವಾಧಿಕಾರದತ್ತ ನಡೆಯುತ್ತಿದ್ದೇವೆಯೇ? – ಎಚ್.ಎಸ್ ದೊರೆಸ್ವಾಮಿ

ನಾವೀಗ ಚುನಾವಣಾ ಸರ್ವಾಧಿಕಾರದತ್ತ ನಡೆಯುತ್ತಿದ್ದೇವೆಯೇ? – ಎಚ್.ಎಸ್ ದೊರೆಸ್ವಾಮಿ

ಬಿಜೆಪಿ ಈ ಚುನಾವಣೆಯಲ್ಲಿ ಬ್ರೂಟ್ majority ಪಡೆದಿರುವುದಕ್ಕೆ ಎರಡು ಕಾರಣ

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |

ಇದೊಂದು ಪೂರ್ವ ನಿರ್ಧಾರಿತ ಚುನಾವಣೆ ಎಂದು ಚುನಾವಣೆಯ ಫಲಿತಾಂಶ ಹೇಳುತ್ತದೆ. ಬಿಜೆಪಿ ಈ ಚುನಾವಣೆಯಲ್ಲಿ ಬ್ರೂಟ್ majority ಪಡೆದಿರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು, ವ್ಯವಸ್ಥಿತವಾಗಿ ಮತ ಎಣಿಕೆ ಯಂತ್ರಗಳನ್ನು ಬಿಜೆಪಿಯ ಪರವಾಗಿ ಹೊಂದಾಣಿಕೆ ಮಾಡಿಕೊಂಡಿರಬಹುದು. ಇಲ್ಲವೇ ಮತದಾರರೆಲ್ಲ ಬಿಜೆಪಿ ಕಡೆಗೆ ವಾಲಿರಬಹುದು. ಈ ಸಂದೇಹ ಮೂಡುವುದಕ್ಕೆ ಕಾರಣ ಏನು? ನೋಡಿ ವಿರೋಧ ಪಕ್ಷಗಳ ನಾಯಕರನ್ನೂ ಯಂತ್ರ ಬಲಿ ತೆಗೆದುಕೊಂಡಿರುವುದು. ನಾಲ್ಕಾರು ಮತಯಂತ್ರಗಳಲ್ಲಿ ಮಾತ್ರ ಈ ಪ್ರಮಾದ ನಡೆದಿದೆಯೆಂದರೆ ಪ್ರತಿಪಕ್ಷಗಳು ದೇಶದ ತುಂಬಾ ಹುಯಿಲೆಬ್ಬಿಸುತ್ತಿದ್ದರು. ಸಾರಾಸಗಟಾಗಿ ಎಲ್ಲಾ ಮತಯಂತ್ರಗಳು ಒಂದೇ ಬಗೆಯ ಫಲಿತಾಂಶವನ್ನು ಪ್ರಕಟಿಸಿರುವುದರಿಂದ ಎಲ್ಲಾ ಪಕ್ಷಗಳ ಬಾಯಿ ಬಂದಾಗಿದೆ.

ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಒ.ಪಿ.ರಾವತ್ ಅವರು ಹೇಳಿಕೆ ನೀಡಿ, ಚುನಾವಣೆಗಳು ಮುಗಿದ ಮೇಲೆ ಭದ್ರವಾಗಿ ಇಡಬೇಕಾಗಿರುವ ಮತಯಂತ್ರಗಳನ್ನು ಹೊತ್ತ ಲಾರಿಗಳು ಅನೇಕ ಕೇಂದ್ರಗಳಿಂದ ಸಾಗಿಸಲ್ಪಟ್ಟಿರುವುದನ್ನು ತಾವು ನೋಡಿದ್ದಾಗಿ ಹೇಳಿದ್ದಾರೆ. ಅವು ಎಲ್ಲಿಗೆ ಕೊಂಡೊಯ್ಯಲಾದವು? ಏಕೆ ಕೊಂಡೊಯ್ಯಲಾದವು? ಆ ಮತಯಂತ್ರಗಳನ್ನು ಮೊದಲು ಇಟ್ಟ ಸ್ಥಳಗಳಲ್ಲಿಯೇ ಭದ್ರವಾಗಿ ಇಡಬೇಕಾಗಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಮುಗಿದಿದೆ. ಫಲಿತಾಂಶ ಪ್ರಕಟವಾಗಿದೆ. ಪ್ರತಿಪಕ್ಷದ ದಿಗ್ಗಜಗಳು ಉರುಳಿಬಿದ್ದಿವೆ. ಪಾರ್ಲಿಮೆಂಟಿನಲ್ಲಿ ಶಕ್ತಿಯುತವಾದ ಪ್ರತಿಪಕ್ಷ ಇಲ್ಲವಾಗಿದೆ. ಅಲ್ಲದೆ ಪ್ರತಿಪಕ್ಷದವರ ಸಂಖ್ಯಾಬಲವು ಕುಸಿದಿದೆ.
ಮೋದಿಯವರಿಗೆ ಈಗ ಆನೆ ಬಲ ಬಂದಿದೆ. ಅವರ ಮುಂದೆ ಎರಡು option ಗಳಿವೆ. ಮೋದಿಯವರು ಸೇಡಿನ ರಾಜಕೀಯ ಆರಂಭಿಸಬಹುದು. ಎಲ್ಲ ಪಕ್ಷಗಳ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರನ್ನೆಲ್ಲ ಸೆರೆಮನೆಗೆ ಕಳಿಸಿ, ಆ ಸಂಸ್ಥೆಗಳು ಅನಾಥವಾಗುವಂತೆ ಮಾಡಿ ಆ ಪಕ್ಷಗಳನ್ನು ನಿರ್ನಾಮ ಮಾಡಲು ಪೊಲೀಸ್, ಸಿಬಿಐ, ಆದಾಯ ತೆರಿಗೆ ಇಲಾಖೆಯವರನ್ನು ಹಸ್ತಕರನ್ನಾಗಿ ಮಾಡಿಕೊಂಡು ಅವರ ಮುಖಾಂತರ ಕ್ರಮಕೈಗೊಳ್ಳಬಹುದು. ಈ ಮುಖಾಂತರ ಭಾರತದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಏಕಸ್ವಾಮ್ಯದ ಚಕ್ರಾಧಿಪತ್ಯ ಕಟ್ಟುವ ಸಂಕಲ್ಪ ಮಾಡಬಹುದು. ಮೇಲೆ ಹೇಳಿದ ಹುನ್ನಾರವನ್ನು ಮೋದಿಯವರು ತಮ್ಮ ಅಧಿಕಾರದ ಮೊದಲ ಅವಧಿಯಲ್ಲೇ ಆರಂಭ ಮಾಡಿದ್ದಾರೆ. ಆ ಕೆಲಸವನ್ನು ಪೂರ್ಣಗೊಳಿಸಲು ಈ ಎರಡನೆಯ ಅವಧಿಯನ್ನು ಬಳಸಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕು . ಎರಡನೆಯ ಪ್ರತೀಕಾರದ ಕಾರ್ಯಕ್ರಮವಾಗಿ ಹಿಂದುತ್ವ ಪ್ರತಿಪಾದಕರನ್ನು ಎದುರಿಸುತ್ತಿರುವ ಸಿವಿಲ್ ಸೊಸೈಟಿಯ ಕಾರ್ಯಕರ್ತರನ್ನು ಬಗ್ಗುಬಡಿಯುವ ಸಂಕಲ್ಪ ಮಾಡಬಹುದು. ಇಲ್ಲವೇ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗೆಗೆ ದೇಶದ ಪ್ರಗತಿಯ ಬಗೆಗೆ, ರಕ್ಷಣೆಯ ಬಗೆಗೆ, ಬಡತನ ನಿರ್ಮೂಲನೆ ಬಗೆಗೆ ಬಡವ-ಬಲ್ಲಿದರ ಮಧ್ಯದ ಕಂದಕವನ್ನು ಮುಚ್ಚುವ ಬಗೆಗೆ ಮಾತ್ರ ಗಮನಕೊಟ್ಟು ಬಡವರ, ದಲಿತರ, ದುಡಿಮೆಗಾರರ ಶ್ರೇಯಸ್ಸನ್ನು ಕೋರುವ ಕೆಲಸಕ್ಕೆ ಪೂರ್ಣ ಸಮಯ ಕೊಡುತ್ತಾರೆಯೇ ಎಂಬುದನ್ನು ಕಾತರದಿಂದ ಸಿವಿಲ್ ಸೊಸೈಟಿ ಎದುರುನೋಡುತ್ತಿದೆ.

ಮೋದಿಯವರು ತಮ್ಮ ಮೊದಲ ಅವಧಿಯಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನೂ ಪ್ರಾರಂಭಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಅನೇಕ ಆಶ್ವಾಸನೆಗಳು, ಆಶ್ವಾಸನೆಗಳಾಗಿಯೇ ಉಳಿದವು. ಉದಾಹರಣೆಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ಭ್ರಷ್ಟಾಚಾರ ನಿರ್ಮೂಲನೆ, ನಮ್ಮ ದೇಶದಲ್ಲಿ, ಪರದೇಶಗಳಲ್ಲಿ ಭಾರತೀಯರು ಹೊಂದಿರುವ ಕಾಳಧನವನ್ನು ಹೊರತೆಗೆಯುವುದು ಮುಂತಾದ ಭರವಸೆಗಳು ಕಾರ್ಯಗತವಾಗಲೇ ಇಲ್ಲ. ಬಡವರಿಗೆಲ್ಲ ಉಚಿತ ಗ್ಯಾಸ್ ನೀಡುವ ಕಾರ್ಯ ನಡೆದಿದೆ. ಆದರೆ ಕೆಲ ಕೋಟಾಧಿಪತಿಗಳಿಗೆ ಸಾಲಮನ್ನಾ ಮಾಡಲಾಗಿದೆ. ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬರ್ಬರ ಕಾನೂನುಗಳನ್ನು ರಚಿಸಲಾಗಿದೆ. ವಿರೋಧ ವ್ಯಕ್ತಪಡಿಸುವವರನ್ನು ದಂಡಿಸಲು ಈ ಕಾನೂನುಗಳನ್ನು ಬಳಸಲಾಗಿದೆ.
ಚುನಾವಣೆಯ ಫಲಿತಾಂಶವನ್ನು ಅಂದಾಜು ಮಾಡುವ ಪರಿಣತ ಸಂಸ್ಥೆಗಳು, ಹಿಂದೆಲ್ಲಾ ಅಂದಾಜು ಮಾಡಿದಾಗ, ಅವುಗಳಲ್ಲಿ ತುಂಬಾ ವ್ಯತ್ಯಾಸ ಕಂಡುಬರುತ್ತಿತ್ತು. ಈ ಸಾರಿ ಎಣಿಕೆಗೆ ಎರಡು ದಿನ ಮೊದಲು ಪ್ರಕಟವಾದ ಫಲಿತಾಂಶಗಳಲ್ಲಿ ವ್ಯತ್ಯಾಸವೇನು ಕಾಣಲಿಲ್ಲ. ಅಷ್ಟು ನಿಖರವಾಗಿ ಎಲ್ಲಾ ಪರಿಣಿತ ಸಂಸ್ಥೆಗಳು ಒಂದೇ ರೀತಿಯ ಫಲಿತಾಂಶ ಪ್ರಕಟಿಸಿದ್ದಂತೂ ಚುನಾವಣಾ ಆಯೋಗವೇ ಪೂರ್ವಭಾವಿಯಾಗಿ ಫಲಿತಾಂಶವನ್ನು ಹೇಳಿಬರೆಸಿದಂತಿತ್ತು.

ಮೋದಿ ಆಡಳಿತ ನಡೆಸಿದ್ದಕ್ಕಿಂತಲೂ ಹೆಚ್ಚಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿಯೇ ಈ ಐದೂ ವರ್ಷ ಕಳೆದರು. ವಿರೋಧ ಪಕ್ಷಗಳು ಮೋದಿಯವರ ಈ sಣಡಿಚಿಣegಥಿ ಯನ್ನು ಗಮನಿಸಲೇ ಇಲ್ಲ. ಮೋದಿ ಒಬ್ಬ ಸಾಂಪ್ರದಾಯಕ ರಾಜಕಾರಣಿಯಲ್ಲ ಎಂಬುದನ್ನು ವಿರೋಧ ಪಕ್ಷಗಳವರು ಬಹಳ ನಿಧಾನವಾಗಿ ತಿಳಿದರು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಮೋದಿಯ ಅಡಿಯಾಳಾಗಿ ಕೆಲಸ ಮಾಡಿದವು. ಅವೆಲ್ಲವನ್ನೂ ಇವರು ಕೊಂಡಿದ್ದರು ಎನ್ನುವ ರೀತಿಯಲ್ಲಿ ಅವು ನಡೆದುಕೊಂಡವು.

ಮೋದಿ ಸರ್ಕಾರದ ಸಣ್ಣಪುಟ್ಟ ಸಾಧನೆಗಳತ್ತ ಅಬ್ಬರದ ಪ್ರಚಾರ ನೀಡುವ ಮೂಲಕ ಜನರ ಗಮನ ಸೆಳೆದರು. ಮೋದಿಯವರ ಆರ್ಥಿಕ ವೈಫಲ್ಯಗಳನ್ನು ಪಟ್ಟಿಮಾಡಿ ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ದಾಳಿ ಮಾಡಿದರೂ ಮೋದಿ ಮತ್ತು ಷಾ ಅದನ್ನು ಅಲ್ಲಗಳೆದು ಹೂಂಕಾರ ಮಾಡಿದರು. ಮೋದಿ ಅವರ ಬಣ್ಣಬಣ್ಣದ ಮಾತುಗಾರಿಕೆ ಮಸುಕಾಗಲೇ ಇಲ್ಲ. ಆರ್ಥಿಕ ತಜ್ಞರು ಮೋದಿಯ ವೈಫಲ್ಯವನ್ನು ಸುದೀರ್ಘವಾಗಿ ಬರೆದು ತಿಳಿಸಿದರೂ ತಮ್ಮ ವಿರೋಧವಾಗಿ ಹೇಳುವುದು ತಜ್ಞರ ಚಾಳಿ ಎಂದು ಭಂಡವಾದ ಮಾಡಿದರು.
ಮೋದಿ ಬಾಯಿಬಡುಕರು ಜನಸಾಮಾನ್ಯರನ್ನು ಭಾವೋದ್ರೇಕಗೊಳಿಸುವುದರಲ್ಲಿ ಪ್ರವೀಣರು. Mass appeal ಮಾಡುವ ವ್ಯಕ್ತಿಗಳಾದ ಜವಾಹರ್‍ಲಾಲ್ ನೆಹರೂ, ಸರ್ದಾರ್ ವಲ್ಲಭಾಯಿ ಪಟೇಲ್, ಜೆ.ಬಿ. ಕೃಪಾಲಾನಿ, ಪಟ್ಟಾಭಿ ಸೀತಾರಾಮಯ್ಯ, ಸಿ.ರಾಜಗೋಪಾಲಾಚಾರಿ, ಬಾಲಗಂಗಾಧರ ತಿಲಕ್, ಟಿ.ಪ್ರಕಾಶಂ, ಕೆ.ಟಿ.ಭಾಷ್ಯಂ, ಕೆ.ಪಟ್ಟಾಭಿರಾಮನ್, ಗಂಗಾಧರರಾವ್ ದೇಶಪಾಂಡೆ ಮುಂತಾದವರು ಪ್ರತಿ ಪ್ರಾಂತದಲ್ಲೂ ಇದ್ದರು. ಆದರೆ ಅವರ್ಯಾರು ಬಾಯಿ ಬಡುಕರಾಗಿರಲಿಲ್ಲ. ಈಗ ಈ ಪರಂಪರೆಯ ನಾಯಕರನ್ನು ದುರ್ಬೀನು ಹಿಡಿದುಕೊಂಡು ಹುಡುಕಬೇಕು. ಬಾಯಿ ಬಡುಕ ಮೋದಿಯವರ ಎದುರಿಗೆ ನಿಂತು ಸೇರಿಗೆ ಸವ್ವಾಸೇರು ಎಂದು ಬಾಯಿ ಬಡಿಯುವ ನೇತಾರರು ಯಾವ ಪಕ್ಷದಲ್ಲೂ ಇಲ್ಲ.

ಪ್ರತಿ ಪ್ರಾಂತದಲ್ಲೂ ಆಗ ಇಬ್ಬರು, ಮೂವರು ಅಖಿಲ ಭಾರತ ನಾಯಕರಿದ್ದರು. ಉತ್ತರ ಪ್ರದೇಶದಲ್ಲಿ ಮೋತಿಲಾಲ್ ನೆಹರೂ, ಜವಾಹರ್‍ಲಾಲ್ ನೆಹರೂ, ಗೋವಿಂದ ವಲ್ಲಭ ಪಂತ್, ಮದನ ಮೋಹನ ಮಾಳವೀಯ, ವಾಯುವ್ಯ ಗಡಿಪ್ರಾಂತ್ಯದಲ್ಲಿ ಖಾನ್ ಅಬ್ದುಲ್ ಗಫರ್‍ಖಾನ್, ಖಾನ್ ಸಾಹೇಬ್, ಗುಜರಾತಿನಲ್ಲಿ ಮಹಾತ್ಮಗಾಂಧಿ, ವಿಠ್ಠಲ್ ಭಾಯ್ ಪಟೇಲ್, ವಲ್ಲಭ ಭಾಯ್ ಪಟೇಲ್, ಮೊರಾರ್ಜಿ ದೇಸಾಯಿ, ಬಂಗಾಳದಲ್ಲಿ ಸುಭಾಷ್ ಚಂದ್ರ ಭೋಸ್, ಶರತ್ ಚಂದ್ರ ಭೋಸ್, ಬಿ.ಸಿ.ರಾಯ್, ಬಿಪಿನ್ ಚಂದ್ರಪಾಲ್, ಆಂಧ್ರದಲ್ಲಿ ಪಟ್ಟಾಭಿ ಸೀತಾರಾಮಯ್ಯ, ಬುಲುಸು ಸಾಂಬಮೂರ್ತಿ, ಟಿ.ಪ್ರಕಾಶಂ, ಕೇರಳದಲ್ಲಿ ಕೇಳಪ್ಪನ್, ಪಟ್ಟಂತಾನು ಪಿಳ್ಳೈ, ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕ್, ಎಸ್.ಕೆ.ಪಾಟೀಲ್, ಕರ್ನಾಟಕದಲ್ಲಿ ಗಂಗಾಧರ್ ದೇಶಪಾಂಡೆ, ಆರ್.ಆರ್.ದಿವಾಕರ್, ಕೆ.ಟಿ.ಭಾಷ್ಯಂ, ಕೌಜಲಗಿ ಹನುಮಂತರಾವ್, ಕಾರ್ನಾಡ್ ಸದಾಶಿವರಾವ್, ಅಣ್ಣು ಗುರೂಜಿ, ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ – ಇವರೆಲ್ಲ ಅಖಿಲ ಭಾರತ ಮಟ್ಟದ ನಾಯಕರಾಗಿದ್ದರು. ಅವರಿಗೆಲ್ಲಾ ಹೋಲಿಸಿದರೆ ಈಗಿನ ನಾಯಕರು ಪಿಗ್ಮಿಗಳು. ಅದೊಂದು ಪರ್ವಕಾಲ. ಎಲ್ಲಾ ಕ್ಷೇತ್ರಗಳಲ್ಲೂ ದಿಗ್ಗಜರು ಜನಿಸಿದ ಯುಗ ಸಾಹಿತ್ಯ ಕ್ಷೇತ್ರದಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮಚಂದ್ರ ಚಟರ್ಜಿ, ಕೆ.ವಿ.ಪುಟ್ಟಪ್ಪ, ವಿಜ್ಞಾನ ಕ್ಷೇತ್ರದಲ್ಲಿ ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್, ಧಾರ್ಮಿಕ ಕ್ಷೇತ್ರದಲ್ಲಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ರಮಣಮಹರ್ಷಿಗಳು, ಅರವಿಂದ ಘೋಷ್, ದಯಾನಂದ ಸರಸ್ವತಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದಿಗ್ಗಜರು ಹುಟ್ಟಿಕೊಂಡರು. ಅದೊಂದು ರಿನೈಸೆನ್ಸ್ ಕಾಲ.
ಈ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಸತ್ಯದ ಮುಖವಾಡವಿರುವ ಅಸತ್ಯದ ಮಾತುಗಳನ್ನೇ ಷಾ ಮತ್ತು ಮೋದಿ ಅವರು ಬಳಸಿದರು. ಚೌಕಿದಾರ್ ಚೋರ್ ಎಂದರು ರಾಹುಲ್ ಗಾಂಧಿ. ಆ ಚೌಕಿದಾರರು ಮತ್ತೆ ಅಧಿಕಾರ ಹಿಡಿದಿದ್ದಾರೆ. ಮೋದಿ ಸರ್ಕಾರದ ವೈಫಲ್ಯಗಳನ್ನು ವಿರೋಧ ಪಕ್ಷಗಳು ಸಾರಿ ಹೇಳಿದರಾದರೂ ಪರಸ್ಪರ ನಿಂದನೆಯ ಪ್ರವಾಹದಲ್ಲಿ ಅದು ಮುಳುಗಿಹೋಯಿತು.
ಮೋದಿಗಿಂತ ಮೊದಲು ಪ್ರಧಾನಿಗಳಾದವರು ವಿಷಯಾಧಾರಿತ ಟೀಕೆಗಳನ್ನೇ ಚುನಾವಣೆಯ ಉದ್ದಕ್ಕೂ ಮಾಡುತ್ತಿದ್ದರು. ಮೋದಿಯಂತೆ ಕಾಂಗ್ರೆಸ್ ಅನ್ನೂ ನಿರ್ನಾಮ ಮಾಡುತ್ತೇನೆ ಎಂದು ಅಬ್ಬರದ ವೀರಾವೇಶದ ಭಾಷಣಗಳನ್ನು ಮಾಡಲಿಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ. ಈ ಚುನಾವಣೆ ನಮ್ಮ ಗಣರಾಜ್ಯವನ್ನು ಧ್ವಂಸಮಾಡಲು ಚುನಾವಣಾ ಸರ್ವಾಧಿಕಾರವನ್ನು (Electoral dictatorship) ಚಲಾಯಿಸಲು ಹೊರಟಿದೆ. ಇದು ಮೋದಿಯವರ ಮೊದಲ ಹೆಜ್ಜೆಯ ಪ್ರಯೋಗ ಎಂದು ಭವಿಷ್ಯ ನುಡಿದವರು ಯೋಗೇಂದ್ರ ಯಾದವ್. ಬಹುಶಃ ಆ ದಿಕ್ಕಿನತ್ತ ಈ ದೇಶವು ನಡೆದಿರುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ. ಮೇಲೆ ಹೇಳಿದ ಭಾರತದ ರಿನೈಸನ್ಸ್ ಕಾಲದ ಮುತ್ಸದ್ದಿತನಕ್ಕೆ, ಪ್ರಜಾತಾಂತ್ರಿಕ ನಡವಳಿಕೆಗಳಿಗೆ ಹಂತಹಂತವಾಗಿ ಮರಳಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುವುದೊಂದೇ ಇದಕ್ಕೆ ಪರಿಹಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿರ್ಸಾ ಮುಂಡಾ 150ನೇ ಜಯಂತಿ ಹೆಸರಿನಲ್ಲಿ ಆದಿವಾಸಿ ಹಕ್ಕುಗಳ ಮೇಲೆ ಸಂಘ ಪರಿವಾರದ ಕಣ್ಣು?

ಮೇ 24 ರಂದು ನವದೆಹಲಿಯ ಕೆಂಪುಕೋಟೆಯಲ್ಲಿ (Red Fort) ಭಾರತದಾದ್ಯಂತದ ಲಕ್ಷಾಂತರ ಪರಿಶಿಷ್ಟ ಪಂಗಡದ (ST) ಸಮುದಾಯಗಳ ಜನರು ಒಟ್ಟಿಗೆ ಸೇರಿದ್ದರು. ‘ಜಂಜಾತಿ ಸುರಕ್ಷಾ ಮಂಚ್’ (ಬುಡಕಟ್ಟು ರಕ್ಷಣಾ ವೇದಿಕೆ) ಆಯೋಜಿಸಿದ್ದ ಈ...

ಆಪರೇಷನ್ ಕಮಲ ಭೀತಿ: ರಾಜ್ಯಸಭಾ ಚುನಾವಣೆಗೂ ಮುನ್ನ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಶಿಫ್ಟ್‌?

ಜೂನ್ 18 ರ ರಾಜ್ಯಸಭಾ ಚುನಾವಣೆಗೆ ಮುನ್ನ ಬಿಜೆಪಿಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಅಡ್ಡ ಮತದಾನ ತಡೆಗಟ್ಟುವ ಜೊತೆಗೆ ತನ್ನ ಶಿಬಿರದ ಒಗ್ಗಟ್ಟು...

ವೀರಪ್ಪನ್ ಹೇಳಿದ ಕಥೆಗೆ 30 ವರ್ಷಗಳ ಬಳಿಕ ಕ್ಲೈಮ್ಯಾಕ್ಸ್ : ಸನ್ ಟಿವಿ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ನಟಿ ಸುಕನ್ಯಾ​

ತೊಂಬತ್ತರ ದಶಕದಲ್ಲಿ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟರೊಂದಿಗೆ ನಟಿಸಿ, ಅಪಾರ ಜನಪ್ರಿಯತೆ ಗಳಿಸಿದ್ದ ನಟಿ ಸುಕನ್ಯಾ ರಮೇಶ್, ಪ್ರಸ್ತುತ ಕೆಲವು ಅಪರೂಪದ ಪಾತ್ರಗಳನ್ನು ಹೊರತುಪಡಿಸಿದರೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಈ ನಡುವೆ 2024ರಲ್ಲಿ...

“ರಾಜೀನಾಮೆ ನೀಡಿ, ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ”: ಟಿಎಂಸಿ ಬಂಡುಕೋರರಿಗೆ ಮಹುವಾ ಮೊಯಿತ್ರಾ ನೇರ ಸವಾಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗೆ ತೀವ್ರ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲು ಮುಂದಾಗಿರುವ ಸ್ವಪಕ್ಷದ ಬಂಡಾಯ ಸಂಸದರ ವಿರುದ್ಧ ಟಿಎಂಸಿ ಸಂಸದೆ...

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...