Homeಅಂಕಣಗಳುಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

ಈ ಐದು ವರ್ಷದಲ್ಲಿ ಮೋದಿಯವರು ಸಾಧಿಸಿದ್ದೇನು?

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |

2019ರ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಭಾರತೀಯ ಜನತಾ ಪಕ್ಷ ಎಲ್ಲಾ ಪಕ್ಷಗಳಿಗಿಂತ ಹೆಚ್ಚಿನ ಹಣವನ್ನು ಕಾರ್ಪೊರೇಟ್ ಕಂಪನಿಗಳಿಂದ ಪಡೆದಿದೆ. ಅವರು ಅಷ್ಟು ಹಣ ಬಿಟ್ಟಿ ಕೊಟ್ಟಿಲ್ಲ. ಮೋದಿ ಸರ್ಕಾರ ಅದಾನಿ, ಅಂಬಾನಿ ಮುಂತಾದ ಕಾರ್ಪೊರೇಟ್‍ಗಳ 50 ಕೋಟಿ ಸಾಲ ಮನ್ನಾ ಮಾಡಿದೆ. ಸರ್ಕಾರದ ಈ ಉಪಕಾರಕ್ಕಾಗಿ ಮೋದಿಯವರ ಪಕ್ಷಕ್ಕೆ ವಿಶೇಷ ಗಿಫ್ಟ್ ಕೊಡಮಾಡಲಾಗಿದೆ. ಮೋದಿ ಸರ್ಕಾರ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಮ್ಮ ಚುನಾವಣಾ ಪ್ರಚಾರದ ಹ್ಯಾಂಡ್‍ಬಿಲ್‍ನಲ್ಲಿ ಹೇಳಿದ್ದಾರೆ. ಮೋದಿಯವರ ಸರ್ಕಾರದ ಭ್ರಷ್ಟಾಚಾರಕ್ಕೆ ಒಂದು ಉದಾಹರಣೆಯಾಗಿ ರಫೆಲ್ ಯುದ್ಧವಿಮಾನ ಖರೀದಿಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಕಛೇರಿಯಿಂದ ಒಪ್ಪಂದ ಕುದುರಿಸಿದ್ದು ಈಗ ಹೊರಬಿದ್ದಿದೆ. ಅದಕ್ಕಾಗಿ ನೇಮಕವಾಗಿದ್ದ ರಕ್ಷಣಾ ಇಲಾಖೆಯ ಸದಸ್ಯರ ನಿಯೋಗ ಅಂತಿಮಗೊಳಿಸಿದ ಕರಾರುಗಳನ್ನು ಬದಲಿಸುವ ಕೆಲಸ ಸರ್ಕಾರದಿಂದ ನಡೆದಿದೆ. ಅದನ್ನು ಪ್ರಶ್ನಿಸಿದ ರಕ್ಷಣಾ ಇಲಾಖೆಯ ನಿಯೋಗದವರು ಸರ್ಕಾರವೇ ಒಪ್ಪಂದವನ್ನು ನೇರವಾಗಿ ಒಪ್ಪಂದ ಮಾಡಿಕೊಳ್ಳಲಿ ನಮಗೆ ಮುಜುಗರ ಉಂಟುಮಾಡುವುದು ಬೇಡ ಎಂದು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಸರ್ಕಾರ ವಿಮಾನ ನಿರ್ಮಾಣದ ಗಂಧವೇ ಇಲ್ಲದ ಅಂಬಾನಿಯನ್ನು ಒಬ್ಬ ಪಾಲುದಾರನನ್ನಾಗಿ ಮಾಡಿಕೊಂಡು ಅವರಿಗೆ 65 ಕೋಟಿ ರೂಪಾಯಿ ಲಾಭ ಅನಾಯಾಸವಾಗಿ ಮಾಡಿಕೊಡುವ ಹುನ್ನಾರ ಮಾಡಿದೆ.

ಯೋಗ, ಸ್ವಚ್ಛ ಭಾರತ ಎರಡೂ ಹೊಸ ಯೋಜನೆಗಳಲ್ಲ. ಕರ್ನಾಟಕದಲ್ಲಿ ಯೋಗ ತರಗತಿ ಹತ್ತಾರು ವರ್ಷ ಹಿಂದಿನಿಂದ ತರಗತಿಗಳ ಸ್ಥಾನಗಳಿಂದ ನಡೆಯುತ್ತಿವೆ. ಸ್ವಚ್ಛ ಭಾರತದ ಯೋಜನೆಯನ್ನು ಬಿಜೆಪಿಯವರಿಗೂ ಹಿಂದಿನಿಂದಲೂ ನಡೆಸುತ್ತಿದ್ದಾರೆ. ಅದನ್ನು ಪ್ರಥಮವಾಗಿ ರೂಪಿಸಿದವರು ಪ್ರೊ.ಮರುಳಸಿದ್ಧಯ್ಯನವರು. ಅದನ್ನು ಜಾರಿಗೆ ತಂದವರು ಸಚಿವ ಎಂ.ಪಿ.ಪ್ರಕಾಶ್‍ರವರು. ಇನ್ನು ಸ್ವಾವಲಂಬನೆ ಸಾಧಿಸುವ, ಅಂದರೆ ಉದ್ಯೋಗಾವಕಾಶ ಕಲ್ಪಿಸುವ ಕೆಲಸ ಕುಂಟುತ್ತಾ ಸಾಗಿದೆ. ಅದಕ್ಕಾಗಿ ಘೋಷಿಸಲಾದ ಯೋಜನೆಗಳಿಂದ ಲಾಭ ಪಡೆದವರು ಗಣನೀಯ ಸಂಖ್ಯೆಯಲ್ಲಿಲ್ಲ. ಗ್ರಾಮಗಳಲ್ಲಿ ಇರುವವರೆಲ್ಲರಿಗೂ ಉಳುಮೆಗೆ ಭೂಮಿ ಕೊಡಬೇಕು. ದುಡಿದುಕೊಂಡು ತಿನ್ನಲು ಅವಕಾಶ ಮಾಡಿಕೊಡಬೇಕು. ಇದಾಗಬೇಕಾದರೆ ಭೂ ಸುಧಾರಣೆ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು. ಭೂ ಮಿತಿ ಶಾಸನವನ್ನು ಪುನರ್ ರೂಪಿಸಬೇಕು. ದುಡಿಯುವ ಎಲ್ಲರಿಗೂ ಕನಿಷ್ಠ 5 ಎಕರೆ ಜಮೀನು ಸಿಗಬೇಕು. ಅನ್ನ ಕಲಸಿ ಕೊಡುವುದು, ಬಡವರ ಖಾತೆಗೆ ಹಣ ಹಾಕುವುದು ಬಡತನ ನಿವಾರಣೆಗೆ ಪರಿಹಾರವಲ್ಲ. ಅದು ಓಟು ಗಿಟ್ಟಿಸಲು ಹೂಡುವ ತಂತ್ರ. ಈ ಗಿಮಿಕ್ ಬಿಟ್ಟು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದ್ದರೆ ಮೋದಿ ಅವರನ್ನು ಮೆಚ್ಚಿಕೊಳ್ಳಬಹುದಾಗಿತ್ತು.

ಉಚಿತ ಎಲ್‍ಪಿಜಿ ಸೌಲಭ್ಯವನ್ನು ಬಡವರಿಗೆ ನೀಡಿರುವುದು ಅವರ ಸಾಧನೆ ಎಂಬುದನ್ನು ಒಪ್ಪಬಹುದು. ಕೈಗೆಟುಕುವ ದರದಲ್ಲಿ ಜನೌಷಧಿ ಜನರಿಗೆ ಒದಗಿಸುವ ಅವರ ಯೋಜನೆಯೂ ಒಳ್ಳೆಯದೇ.

ಆದರೆ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಈ 5 ವರ್ಷದ ಅವರ ಅಧಿಕಾರದ ಅವಧಿಯಲ್ಲಿ 10 ಕೋಟಿ ಉದ್ಯೋಗಗಳು ಸೃಷ್ಠಿಯಾಗಬೇಕಾಗಿತ್ತು. ಉದ್ಯೋಗ ಸೃಷ್ಟಿಸುವ ರೀತಿ ಘೋಷಣೆಯಾಗಿ ಬೆಳೆಯಿತು. ಗುಡಿಸುವ ಕೆಲಸಕ್ಕೆ ಅರ್ಜಿ ಕರೆದರೆ ಒಂದು ಲಕ್ಷ ಅರ್ಜಿಗಳು ಬರುತ್ತವೆ. ಅದರಲ್ಲಿ 2ರಿಂದ 3 ಸಾವಿರ ಜನ ಪದವೀಧರರು, ಸ್ನಾತಕೋತ್ತರ ಪದವೀಧರರೂ ಇರುತ್ತಾರೆ. ಅಂದರೆ ಓದಿದವರಿಗೂ, ಓದದವರಿಗೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂಬುದು ಉತ್ಪ್ರೇಕ್ಷೆಯಲ್ಲ.

ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳೆದರೂ ಬಡತನವನ್ನೂ ನೀಗುವ ಕೆಲಸ ನಡೆದೇ ಇಲ್ಲ. ಬಡವರ ಓಟನ್ನು ಕಿತ್ತುಕೊಂಡು ಅಧಿಕಾರಕ್ಕೆ ಬರುತ್ತೀರಿ, ಅವರ ಬಗೆಗೆ ಲೋಕಸಭೆ ಸದಸ್ಯರಾಗುವವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಬಡತನದ ಸಂಪೂರ್ಣ ನಿವಾರಣೆಗೆ ಸರ್ಕಾರ ಮತ್ತು ಪಾರ್ಲಿಮೆಂಟ್ ಸದಸ್ಯರು ಒಂದು ಪರಿಣಾಮಕಾರಿ ಕಾನೂನನ್ನು ತರುವುದರಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೂ ಅದರ ಪ್ರಸ್ತಾಪ ಇರುವುದಿಲ್ಲ. ಶ್ರೀಮಂತರನ್ನು ಓಲೈಸುವ ಪಕ್ಷ ಭಾರತೀಯ ಜನತಾ ಪಕ್ಷ. ಸಮಾನತೆಯನ್ನು ಸಾಧಿಸುವ ವಿಚಾರ ಅವರಿಗೆ ಬೇಕಾಗಿಲ್ಲ. ಅವರು Statusquoists. ಅಸಮಾನತೆಯ ಸಮಾಜದ ನಿರ್ಮಾಣವೇ ಅವರ ಗುರಿ, ದೊಡ್ಡ ಜಮೀನ್ದಾರರು, ಪಟ್ಟಭದ್ರ ಹಿತಾಸಕ್ತಿಗಳು, ಕಾರ್ಪೊರೇಟ್ ಸಂಸ್ಥೆಗಳ ಮಾಲೀಕರು ಅರೆಸ್ಸೆಸ್ ಮತ್ತು ಬಿಜೆಪಿಯ ಬೆನ್ನೆಲುಬು. ಈ ಕಠೋರ ಮನೋಭಾವದ ಭಾಜಪಕ್ಕೆ ಮತ ನೀಡಬೇಕೇ?.

ಹಳ್ಳಿಗಳಲ್ಲಿ ದುಡಿಯಲು ಆಸಕ್ತಿಯುಳ್ಳ ಎಲ್ಲ ಭೂ ಹೀನ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ನೀಡುವ ಮೂಲಕ ಗ್ರಾಮೀಣ ಬಡತನ ನೀಗಬೇಕು. ಅದರಂತೆಯೇ ಪಟ್ಟಣ ಮತ್ತು ತಾಲ್ಲೂಕು ಕೇಂದ್ರದಲ್ಲಿರುವ ಬಡವರ ಬಡತನ ನೀಗಲು ಬಿಜೆಪಿ ಯಾವ ಕಾರ್ಯಕ್ರಮವನ್ನೂ ಹಾಕಿಕೊಂಡಿಲ್ಲ. ಹಳ್ಳಿಗಳಲ್ಲಿ ದುಡಿದುಕೊಂಡು ತಿನ್ನುವ ಸಲುವಾಗಿ ಭೂಮಿ ಹಂಚುವ ರೀತಿಯಲ್ಲಿ ನಗರ ಪ್ರದೇಶಗಳಲ್ಲಿ ಪ್ರತಿಮನೆಯೂ ಒಂದು ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ ಕೇಂದ್ರವಾಗಬೇಕು. ಆಗ ಜನರು ಸ್ವಾವಲಂಬಿಗಳಾಗುತ್ತಾರೆ.

ಜವಹರಲಾಲ್ ನೆಹ್ರು ಪ್ರಧಾನಿಯಾಗಿದ್ದಾಗ ಈ ಪ್ರಯೋಗ ಪಂಜಾಬಿನಲ್ಲಿ ನಡೆಯಿತು. ಆಗ ಕೈರಾನ್ ಎಂಬುವವರು ಪಂಜಾಬಿನ ಮುಖ್ಯಮಂತ್ರಿ ಆಗಿದ್ದರು. ಅವರು ಪಂಜಾಬನ್ನು ಗೃಹ ಕೈಗಾರಿಕೆಗಳ, ಗುಡಿ ಕೈಗಾರಿಕೆಗಳ ಆಗರ ಮಾಡಲು ಸಂಕಲ್ಪ ಮಾಡಿದರು. ಆ ಕೆಲಸದಲ್ಲಿ ಅವರು ಗೆಲುವನ್ನೂ ಸಂಪಾದಿಸಿದರು. ಬಡತನದ ಖಾಯಂ ನಿವಾರಣೆಗೆ ಬುನಾದಿಯನ್ನು ಹಾಕಿದರು. ಆದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆಂಬ ಅಪವಾದಕ್ಕೆ ತುತ್ತಾಗಿದ್ದರು. ಅದಕ್ಕಾಗಿ ಅವರ ಕೊಲೆಯಾಯಿತು. ಆದರೆ ಬಡತನ ನಿವಾರಣೆಗೆ ಅವರು ಕೈಗೊಂಡ ಕ್ರಮಗಳ ಬಗೆಗೆ ಪಂಜಾಬಿನ ಜನತೆ ಇಂದಿಗೂ ಕೈರಾನ್‍ರನ್ನು ನೆನೆಯುತ್ತಾರೆ.

ಪಂಜಾಬಿನಲ್ಲಿ ನಡೆದ ಈ ಪ್ರಯೋಗ ಭಾರತದಾದ್ಯಂತ ಪಸರಿಸಬೇಕು. ಈ ಕುರಿತು ಭಾಜಪ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...