ಸಾಮಾಜಿಕ ಜಾಲತಾಣಗಳಲ್ಲಿ ಕಳೆದ 5 ದಿನಗಳಿಂದ ಒಂದು ಪುಟ್ಟ ಬಾಲಕಿಯ ವಿಡಿಯೋ ಸಾಕಷ್ಟು ಹವಾ ಎಬ್ಬಿಸಿದೆ. ಮಿಜೋರಾಂನ 4 ವರ್ಷದ ಬಾಲಕಿಯೊಬ್ಬಳು ಸಖತ್ ಫೇಮಸ್ ಆಗ್ತಿದ್ದಾಳೆ. ಎಸ್ತರ್ ಹ್ನಮ್ಟೆ ಅನ್ನೋ ಹೆಸರಿನ ಈ ಕ್ಯೂಟೆಸ್ಟ್ ಬಾಲಕಿ ಬಗ್ಗೆ ತಿಳಿದುಕೊಳ್ಳಲು ಅನೇಕ ಮಂದಿ ಹುಡುಕಾಡಿದ್ದಾರೆ.
ಹೌದು, ಮುದ್ದು ಮುದ್ದಾಗಿ ವಂದೇ ಮಾತರಂ ಹಾಡನ್ನು ಹಾಡಿ ನೆಟ್ಟಿಗರ ಮನ ಕದ್ದಿದ್ದಾಳೆ ಈ ಪುಟಾಣಿ. ಈ ಮಗುವಿನ ಹಾಡಿಗೆ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಫಿದಾ ಆಗಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಿಜೋರಾಮ್ ಮುಖ್ಯಮಂತ್ರಿ ಝೋರಾಮ್ತಂಗಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 25 ರಂದು ಈ ಬಾಲಕಿಯ ವಿಡಿಯೋ ಅಪ್ಲೋಡ್ ಮಾಡಿದ್ದು, ಈಗಾಗಲೇ 70 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ನೋಡಿದ್ದಾರೆ. ಜೊತೆಗೆ 75 ಸಾವಿರ ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಭಾರತದ ತಿರಂಗ ಹಿಡಿದು ಮುಗ್ಧ ಕಂಠದಿಂದ ಹಾಡುತ್ತಿರುವ ವಂದೇ ಮಾತರಂ ಗೀತೆ ಮೈ ರೋಮಾಂಚನಗೊಳಿಸುವಂತಿದೆ.
ಇದನ್ನೂ ಓದಿ; ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು…..
82 ಸಾವಿರಕ್ಕೂ ಹೆಚ್ಚು ಮಂದಿ ಬಾಲಕಿಯ ಯೂಟ್ಯೂಬ್ ಚಾನೆಲ್‌ಗೆ ಚಂದಾದಾರರಾಗಿದ್ದಾರೆ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸೇರಿದಂತೆ ಅನೇಕ ಗಣ್ಯರು ವಿಡಿಯೋ ಶೇರ್ ಮಾಡಿದ್ದಾರೆ.
When you are showered with cuteness and love ??Esther (4 years) https://t.co/AgCjcLXfov via @YouTube
— A.R.Rahman (@arrahman) October 30, 2020
ಪ್ರಧಾನಿ ನರೇಂದ್ರ ಮೋದಿ ಕೂಡ ಪುಟಾಣಿ ಎಸ್ತರ್ ಹ್ನಮ್ಟೆ ವಿಡಿಯೋ ಹಂಚಿಕೊಂಡಿದ್ದು, ಹಾಡು ಮುದ್ದಾಗಿದೆ, ಪ್ರಶಂಸನಾರ್ಹವಾಗಿದೆ. ಈ ಗೀತೆ ಹಾಡಿದ ಎಸ್ತರ್ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಶ್ಲಾಘಿಸಿದ್ದಾರೆ.
Adorable and admirable! Proud of Esther Hnamte for this rendition. https://t.co/wQjiK3NOY0
— Narendra Modi (@narendramodi) October 31, 2020


