Homeರಾಜಕೀಯ56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

- Advertisement -
- Advertisement -

ಸೋಮಶೇಖರ್ ಚಲ್ಯ |

ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಸಾಮಾನ್ಯರ ಸೇವೆಯನ್ನು ಬದಿಗಿಟ್ಟು ಕಾರ್ಪೊರೇಟ್ ಖದೀಮರ ಸೇವೆಯಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಕಾರಣಗಳಿದ್ದವು. ಆದರೆ ನಿರ್ದಿಷ್ಟ ಹಗರಣಗಳಾಗಿ ಹೊರಬಿದ್ದಿರಲಿಲ್ಲ. ಆದರೆ ಅವು ಈಗ ವಾರಕ್ಕೊಂದರಂತೆ ಎಕ್ಸ್ಪೋಸ್ ಆಗುತ್ತಿವೆ. ಮೋದಿಯವರ ಹಗರಣ ಖಾತೆಗಳಲ್ಲಿರುವ ರಫೇಲ್ ಹಗರಣ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಹಗರಣಗಳಂತಹವುಗಳ ಜೊತೆಗೆ ಹೊಸದೊಂದು ಹಗರಣ ಸೇರ್ಪಡೆಯಾಗಿದೆ. ಅದೂ ನಿಮಿಷದ ಲೆಕ್ಕದ್ದು.

ಕೆಲವು ಕಂಪನಿಗಳು ವಿಶೇಷ ಆಫರ್‌ಗಳ ಸ್ಕ್ರಾಚ್‌ ಕಾರ್ಡ್ಗಳನ್ನು ನೀಡುತ್ತವೆ. ಸ್ಕ್ರಾಚ್ ಮಾಡಿ ನೋಡಿದರೆ, ಕೆಲವು ಕಾರ್ಡ್ಗಳಲ್ಲಿ ಬೆಟರ್ ಲಕ್ ನೆಕ್ಸ್ಟ್ ಟೈಮ್ ಎಂದಿರುತ್ತವೆ. ಇದೂ ಸಹಾ ಅಂತಹದೊಂದು ‘ಭರ್ಜರಿ ಆಫರ್’. ಮೋದಿ ಸಾಹೇಬರು ಪ್ರಜೆಗಳಿಗೆ ನವೆಂಬರ್ 2ರಂದು ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ್ದಾರೆಂದು ಕೆಲವು ಮಾಧ್ಯಮಗಳು ತಮ್ಮ ಸ್ವಾಮಿನಿಷ್ಟೆಯನ್ನು ಪ್ರದರ್ಶಿಸಿದ್ದವು. ಆದರೆ ಅದೀಗ ಜನರ ಪಾಲಿಗೆ ದೀಪಾವಳಿಯ ಟುಸ್ ಪಟಾಕಿಯಾದಂತಿದ್ದರೂ ಕಾರ್ಪೊರೇಟ್‌ಗಳ ಖಾತೆ ತುಂಬಿ ತುಳುಕುವಂತಾಗಿದೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ ವರದಾನವಾಗಲಿದೆ. ಅದರಲ್ಲಿ ಪ್ರಮುಖವಾದದ್ದು 59 ನಿಮಿಷದಲ್ಲಿ ಒಂದು ಕೋಟಿಯವರೆಗಿನ ಲೋನ್ ಮೇಳದ ಸೌಲಭ್ಯ’ ಎಂದು ಮೋದಿ ಪುಂಗಿ ಊದಿದ್ದರು. ಈ ಯೋಜನೆಯಡಿಯಲ್ಲಿ ಸಾಲ ಪಡೆದವರಿಗೆ ಶೇ.3ರಿಂದ ಶೇ.5 ರಷ್ಟು ಬಡ್ಡಿ ರಿಯಾಯತಿ, ಮಹಿಳಾ ಉದ್ಯಮಿಗಳಿಂದ ಶೇ.3ರಷ್ಟು ಸರ್ಕಾರವೇ ಖರೀದಿಸುತ್ತದೆ. ಈ ಯೋಜನೆಗಾಗಿ 6,000ರೂ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ಈ ಯೋಜನೆಯ ಫಲಾನುಭವಿಯಾಗಲು ಪ್ರತ್ಯೇಕ ವೆಬ್‌ಪೇಜ್‌ಯಿದ್ದು www.psbloansin59minutes.com ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಒಬ್ಬ ವ್ಯಕ್ತಿ ಅಪ್ಲಿಕೇಷನ್ ಹಾಕಿದ್ದು 85 ಲಕ್ಷರೂಗಳ ಅಪ್ರೂವಲ್ ಕೂಡ ಪಡೆದು ವಿಜಯಾ ಬ್ಯಾಂಕಿನಲ್ಲಿ ಲೋನ್ ಕೇಳಲು ಹೋಗಿದ್ದಾರೆ. ಬ್ಯಾಂಕ್‌ನವರು ಹೇಳಿದ್ದು ಕೇಳಿ ಹೌಹಾರಿ ಹೋಗಿದ್ದಾರೆ. ಅಲ್ಲಿ ‘ನೀವೇ ಮೊದಲು 85 ಲಕ್ಷ ರೂ.ಗಳನ್ನು ಕಟ್ಟಬೇಕು. ಆನಂತರ ನಿಮಗೆ ಒಂದು ಕೋಟಿಯ ಲೋನ್ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಆ ವ್ಯಕ್ತಿ ಬ್ಯಾಂಕಿನವರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದ ಹೆಚ್‌ಡಬ್ಲ್ಯು ನ್ಯೂಸ್ ವರದಿಗಾರರು, ಇದರ ಅಸಲೀಯತ್ತೇನೆಂದು ತಿಳಿಯಲು ತಾವೇ ಒಬ್ಬರಿಂದ ಅಪ್ಲಿಕೇಶನ್ ಹಾಕಿಸಿದ್ದಾರೆ. ಈ ಅಪ್ಲಿಕೇಶನ್ ಮೋದಿ ಸಾಹೇಬರ 59 ನಿಮಿಷದ ಹಗರಣವನ್ನು ಬಯಲು ಮಾಡಿದೆ.

ಅಪ್ಲೇ ಮಾಡಿದ ವ್ಯಕ್ತಿಯಿಂದ ಪಾನ್ ನಂಬರ್, ಜಿಎಸ್‌ಟಿ ನಂಬರ್ ಅಷ್ಟೇ ಅಲ್ಲದೆ ಲಾಗಿನ್ ಐಡಿಯ ಪಾಸ್‌ರ‍್ಡ್ ಕೂಡ ಅಪ್ಲಿಕೇಷನ್‌ನಲ್ಲಿ ಪಡೆದುಕೊಂಡಿದ್ದಾರೆ. ಅಪ್ಲೇ ಮಾಡಿದ ಕೇವಲ 47 ನಿಮಿಷದಲ್ಲಿ ಲೋನ್‌ಗೆ 1,48,000ರೂ.ಗಳಿಗೆ ಅಪ್ರೂವಲ್ ಸಿಕ್ಕಿದೆ. ತಮಾಷೆಯೆಂದರೆ ಅಪ್ರುವಲ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ (ತಾತ್ವಿಕ ಒಪ್ಪಿಗೆ) ಎಂದು ನೀಡಲಾಗಿದ್ದು, ಸಾಲವನ್ನು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಬ ಬ್ಯಾಂಕಿನಿಂದ ಪಡೆಯಬೇಕು ಎಂದು ಬ್ಯಾಂಕಿನ ವಿವರಗಳನ್ನೂ ಸಹ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ ಈತ 1,180ರೂ ಗಳ ಡಿಡಿಯನ್ನು ಕ್ಯಾಪಿಟ ವರ್ಲ್ಡ್ ಪ್ಲಾಟ್‌ಫಾರ್ಮ ಪ್ರೈ. ಲಿ. ಎಂಬ ಖಾಸಗೀ ಕಂಪನಿಯ ಹೆಸರಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದರೆ ಸರ್ಕಾರಕ್ಕೆ ಡಿಡಿ ಕಟ್ಟುವುದು ಮಾಮೂಲಿ. ಆದರೆ ಈ ಸ್ಕೀಮ್‌ಗೆ ಮಾತ್ರ ಖಾಸಗಿ ಕಂಪನಿ ಹೆಸರಿನಲ್ಲಿ ಕಟ್ಟಬೇಕೆನ್ನುವುದೇ ಈ ಹಗರಣದ ಮೊದಲ ಹಂತ.

ಅಂದರೆ ಮೋದಿ ಸಾಹೇಬರು ಈ ಸ್ಕೀಮ್ ಮೂಲಕ ಖಾಸಗೀ ಕಂಪನಿಯ ಖಜಾನೆ ತುಂಬಿಸುವ ಪ್ಲಾನ್ ಮಾಡಿದ್ದಾರೆ ಎಂಬುದು ಕಣ್ಣೋಟಕ್ಕೆ ಕಾಣುವ ವಿಚಾರ. ಕೇವಲ ಒಂದು ಮಿಲಿಯನ್ ಅರ್ಜಿಗಳು ಬಂದರೂ 118 ಕೋಟಿ ರೂ.ಗಳು ಆ ಖಾಸಗಿ ಕಂಪೆನಿಗೆ ದಕ್ಕುತ್ತವೆ. ಪ್ರಧಾನಿ ಮೋದಿ ಈ ಸ್ಕೀಮ್ ಘೋಷಿಸಿದ ಮಾರನೆಯ ದಿನವೇ 23,582 ಕೋಟಿ ರೂ.ಗಳಷ್ಟು ಸಾಲ ನೀಡುವ 1.69 ಲಕ್ಷ ಅರ್ಜಿಗಳನ್ನು ಅಪ್ರೂವಲ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವೇನೆಂದರೆ ಅಲ್ಲಿಯವರೆಗೆ ಒಬ್ಬರಿಗೂ ಲೋನ್ ಹಣ ಸಿಕ್ಕಿರಲಿಲ್ಲ. ಈ ಲೆಕ್ಕವನ್ನು ಪ್ರಶ್ನಿಸಿದ ಕ್ಷಣಗಳಲ್ಲಿ ಮಾಹಿತಿಯನ್ನು ಅಳಿಸಿ ಹಾಕಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಅಂದಹಾಗೆ ರಫೇಲ್ ಹಗರಣದ ಮೂಲಕ ಅಂಬಾನಿಯ ಖಜಾನೆ ತುಂಬಿಸಹೊರಟಿದ್ದ ಮೋದಿ ಈ ಸ್ಕೀಮ್‌ಗೆ ಕೈಜೋಡಿಸಿದ್ದು ಇದೇ ಅಂಬಾನಿಯ ಆಪ್ತಮಿತ್ರ ಅಹಮದಾಬಾದ್ ವಿನೋದ್ ಮೋದ, ಜಿನಂದ್ ಶಾ ಮತ್ತು ಚಕ್ರಬೋಟ್ರಿ ಪಾಲುದಾರಿಕೆಯ ಕ್ಯಾಪಿಟಾ ವರ್ಲ್ಡ್ ಕಂಪನಿಯೊಂದಿಗೆ. ಈ ಕಂಪನಿ ಉದ್ಭವವಾಗಿದ್ದು ಮೋದಿ ಅಧಿಕಾರಕ್ಕೇರಿದ ಒಂದು ವರ್ಷದ ನಂತರ 2015ರಲ್ಲಿ. ಈ ಕಂಪನಿ ಆರಂಭಗೊಂಡ ಮೊದಲ ವರ್ಷ ಅಂದರೆ 2016ರಲ್ಲಿ ಇದರ ಆದಾಯ ಸೊನ್ನೆ ಮಾತ್ರ. ನಂತರ 2017ರಲ್ಲಿ 15.680 ರೂ. ಲಾಭ ಗಳಿಸಿತ್ತು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈ ಕಂಪನಿಯ ಶೇರ್‌ನಲ್ಲಿ ಎಸ್‌ಐಡಿಬಿಐ ಬ್ಯಾಂಕ್ ಸೇರಿದಂತೆ 9 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಂದು ಶೇರ್‌ಗೆ 119.39 ರೂ.ಗಳಂತೆ 17.43.371 ಶೇರ್‌ಗಳಿಗೆ 22.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.

ಇಷ್ಟೆಲ್ಲಾ ಹೂಡಿಕೆ ಮಾಡಿರುವ ಈ ಕಂಪನಿಯ ಲಾಭ 15.680 ಇದ್ದುದರಿಂದ ಮೋದಿ ಸಾಹೇಬರು ಈ ಕಂಪನಿಯನ್ನು ಮೇಲೆತ್ತುವ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಕಂಪನಿ ಆರಂಭಗೊಂಡು 3 ವರ್ಷವಾಗಿದ್ದು ಇದರ ಸಿಇಓಗಳು ಮೂರು ಭಾರಿ ಬದಲಾಗಿದ್ದರೆ. ಜಿನಾಬ್ ವೈ ಶಾ, ವಿಕಾಸ್ ಮನಿಲಾಲ್ ಷಾ, ಅಖಿಲ್ ಹಂಡಾ ಈ ಮೂವರೂ ಕ್ಯಾಪಿಟಾವರ್ಲ್ಡ್ನ ಸಿಇಓಗಳಾಗಿದ್ದು, ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರದ ಬ್ಯಾಟಿಂಗ್ ಮಾಡಿದ್ದರು ಎಂಬುದು ವಿಶೇಷ.

ಹಾಗಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದ ಸಿಇಓಗಳು, ಮಿತ್ರ ಅಂಬಾನಿಯ ಸ್ನೇಹಿತರ ಕಂಪನಿಯನ್ನು ಉಳಿಸುವ ಸಲುವಗಿ 59 ನಿಮಿಷದಲ್ಲಿ ಸಾಲ ಸೌಲಭ್ಯದ ಮೋದಿಯ ಸ್ಕೀಮ್‌ಗೆ ಲಕ್ಷಾಂತರ ಜನ ಅಪ್ಲಿಕೇಷನ್ ಹಾಕಿದ್ದು ತಲಾ 1.180ರೂ ಡಿಡಿಯಂತೆ ಬಿಲಿಯನ್‌ಗಟ್ಟಲೆ ಸಾರ್ವಜನಿಕರ ಹಣ ಕ್ಯಾಪಿಟಾವರ್ಲ್ಡ್ನ ಪಾಲಿಗೆ ದಯಪಾಲಿಸಿದೆ, ಅಷ್ಟೇ ಅಲ್ಲದೆ ಅಪ್ಲೇ ಮಾಡಿದವರ ವ್ಯವಹಾರದ ಎಲ್ಲಾ ಡಿಟೈಲ್ಸ್ಗಳನ್ನು ಈ ಕಂಪನಿ ಪಡೆದುಕೊಂಡಿದೆ. ಅಪ್ರುವಲ್‌ನಲ್ಲಿಯೇ ಇರುವಂತೆ ಅದು ತಾತ್ವಿಕ ಒಪ್ಪಿಗೆಯಾಗಿದ್ದು, ಸಾಲ ನೀಡಬಹುದೆಂದಷ್ಟೇ ಸೂಚಿಸಿದ್ದು ಸಾಲ ದೊರೆತೇಬಿಡುತ್ತದೆ ಎಂದೇನೂ ಇಲ್ಲವಾದ್ದರಿಂದ ಲೋನ್‌ನ ಆಸೆಯನ್ನು ಮರೆಯುವುದೇ ಸೂಕ್ತವೆಂಬಂತೆ ಪರೋಕ್ಷವಾಗಿ ಕಂಪನಿ ತಿಳಿಸಿದೆ. ಒಟ್ಟಿನಲ್ಲಿ ಇದುವರೆಗೂ ಸರ್ಕಾರದ ಹಣದಿಂದ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿದ್ದ ದಾರಿಗಿಂತ ಭಿನ್ನವಾಗಿ ನೇರವಾಗಿ ಸಾರ್ವಜನಿಕರ ಜೇಬಿನಿಂದ ಕಾರ್ಪೊರೇಟ್ ಖಜಾನೆ ತುಂಬಿಸಿರುವ ಮೊದಲ ಹಗರಣ ಪ್ರಧಾನ ಕಾರ್ಪೊರೇಟ್ ಸೇವಕ ಮೋದಿಯದ್ದು. ಮುದ್ರಾ, ಫಸಲ್ ಬಿಮಾ ಯೋಜನೆಗಳಿಂದ ಜನರನ್ನು ಯಾಮಾರಿಸಿದ್ದ ಮೋದಿ ಈ ಹಗರಣದಲ್ಲಿ ನೇರವಾಗಿ ಜನರ ಜೇಬಿಗೆ ಕತ್ತರಿಹಾಕಿ ಯಾಮಾರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...