Homeಮುಖಪುಟಬೆಳ್ಳಿಚುಕ್ಕಿ: ಆಂಡ್ರೋಮಿಡಾ ಗ್ಯಾಲಾಕ್ಸಿ ನೋಡೋಣ ಬನ್ನಿ..

ಬೆಳ್ಳಿಚುಕ್ಕಿ: ಆಂಡ್ರೋಮಿಡಾ ಗ್ಯಾಲಾಕ್ಸಿ ನೋಡೋಣ ಬನ್ನಿ..

- Advertisement -
- Advertisement -

2021ರ ಡಿಸೆಂಬರ್ 22ರಿಂದ ಸೂರ್ಯನ ಪಥ ದಕ್ಷಿಣ ದಿಕ್ಕಿನ ತುದಿಮುಟ್ಟಿ ಉತ್ತರ ದಿಕ್ಕಿನ ಕಡೆಗೆ ಚಲಿಸಲಾರಂಭಿಸಿದೆ. ಸೂರ್ಯನ ಪಥ ಉತ್ತರ ದಿಕ್ಕಿಗೆ ಚಲಿಸಿದಂತೆ, ಉತ್ತರಾರ್ಧ ಗೋಳದಲ್ಲಿರುವ ನಮಗೆ ಚಳಿಗಾಲ ಕಳೆದು ಬೇಸಿಗೆ ಬರುತ್ತದೆ. ಈಗಾಗಲೇ, ಚಳಿ ಸ್ವಲ್ಪ ಕಡಿಮೆಯಾಗುತ್ತಿರುವ ಬಗ್ಗೆ ನಿಮಗೂ ಅನುಭವ ಆಗಿರಬಹುದು. ಇದೆಲ್ಲದರ ಜೊತೆಗೆ ಚಳಿಗಾಲದ ಆಕಾಶ ಬಹಳ ವಿಶೇಷತೆಗಳಿಂದ ಕೂಡಿರುತ್ತದೆ. ಸುಲಭವಾಗಿ ಬರಿಗಣ್ಣಿನಲ್ಲಿ ನೋಡಬಹುದಾದ ಹಲವು ನಕ್ಷತ್ರ ಪುಂಜಗಳು, ನಿಹಾರಿಕೆಗಳು, ನಕ್ಷತ್ರ ಸಮೂಹಗಳು ಮತ್ತು ಮುಸ್ಸಂಜೆ ಹಾಗೂ ಇಳಿಸಂಜೆ ಆಗಸದಲ್ಲಿ ಬೆಳಗುವ ಗ್ರಹಗಳ ಕಾರಣದಿಂದ!

ಗುರು ಗ್ರಹ

ಸೂರ್ಯಾಸ್ತದ ನಂತರ ಪಶ್ಚಿಮ ದಿಕ್ಕಿನಲ್ಲಿ ನೋಡಿದರೆ, ಪ್ರಕಾಶಮಾನವಾಗಿ ಹೊಳೆಯುವ ಒಂದು ಚುಕ್ಕಿಯನ್ನು ಕಾಣಬಹುದು. ಇದು ಗುರು ಗ್ರಹ. ನಿಮ್ಮ ಬಳಿ ಬೈನಾಕ್ಯುಲರ್ ಇದ್ದರೆ, ಇದರ ಸಹಾಯದಿಂದ ಗುರು ಗ್ರಹವನ್ನು ಕಂಡಾಗ (ಬೈನಾಕ್ಯುಲರ್ ಅಲುಗಾಡದೆ ಹಿಡಿದುಕೊಳ್ಳಿ) ಅದರೆ ಉಪಗ್ರಹಗಳಾದ ಗೆಲಿಲಿಯನ್ ಸ್ಯಾಟಲೈಟ್‌ಗಳನ್ನು ಕಾಣಬಹುದು. ಈ ಉಪಗ್ರಹಗಳ ಹೆಸರು ಐಯೋ, ಗ್ಯಾನಿಮಿಡ, ಕ್ಯಾಲಿಸ್ಟೋ ಮತ್ತು ಯುರೋಪಾ. ಗುರು ಗ್ರಹಗಳನ್ನು ಮೊದಲ ಬಾರಿಗೆ ಗೆಲಿಲಿಯೋ ಕಂಡಾಗ ಈ ನಾಲ್ಕು ಉಪಗ್ರಹಗಳು ಇವೆ ಎಂದು ಗುರುತಿಸಿದ. ಆ ಕಾರಣದಿಂದ ಇವನ್ನು ಗೆಲಿಲಿಯೋ ಉಪಗ್ರಹಗಳು ಎಂದು ಕರೆಯಲಾಗುತ್ತಿದೆ.

ಶುಕ್ರ ಮತ್ತು ಮಂಗಳ ಗ್ರಹಗಳು

ಈ ವಾರದಲ್ಲಿ ನೀವೇನಾದರೂ ನಿದ್ದೆಯಿಂದ ಬೆಳಗ್ಗೆ ಬೇಗನೇ ಎದ್ದು, 5ರಿಂದ 5.30 ಗಂಟೆ ಒಳಗೆ ಪೂರ್ವದಿಕ್ಕಿಗೆ ನೋಡಿದರೆ ಅಲ್ಲಿ ಅತ್ಯಂತ ಪ್ರಕಾಶಮಾನವಾಗಿ ಬೆಳಗುವ ಒಂದು ಚುಕ್ಕಿಯನ್ನು ಕಾಣುತ್ತೀರಿ. ಇದು ಬೆಳ್ಳಿ ಚುಕ್ಕಿ ಅಂದರೆ ಶುಕ್ರ ಗ್ರಹ. ಸರಿಸುಮಾರು ಭೂಮಿಯ ಗಾತ್ರದಲ್ಲಿಯೇ ಇರುವ ಗ್ರಹ ಇದು. ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯು ಶುಕ್ರ ಗ್ರಹವೇ. ಆ ಕಾರಣದಿಂದಲೇ ಇದನ್ನು ಬೆಳ್ಳಿ ಚುಕ್ಕಿ ಎಂದು ಕರೆಯುವುದು. ಈ ಶುಕ್ರ ಗ್ರಹದ ಬಲಗಡೆ ಕೆಂಪಾಗಿ ಹೊಳೆಯುವ ಚುಕ್ಕಿಯನ್ನು ನೀವು ಗಮನಿಸಿರಬಹುದು. ಅದು ಮಂಗಳ ಗ್ರಹ.

ನಕ್ಷತ್ರ ಪುಂಜಗಳು, ನೆಬುಲ್ಲಾ ಮತ್ತು ಗ್ಯಾಲಾಕ್ಸಿ

ರಾತ್ರಿ ಸುಮಾರು ಏಳುವರೆಯಿಂದ ಎಂಟು ಗಂಟೆಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನೆತ್ತಿಯ ಮೇಲೆ ನೋಡಿದರೆ, ಈ ಕೆಳಗಿನ ಚಿತ್ರದಲ್ಲಿ ತೋರಿಸಿರುವ ಒಂದು ನಕ್ಷತ್ರ ಪುಂಜವು ಕಾಣುತ್ತದೆ. ಈ ಹಿಂದೆ ಇದೇ ಅಂಕಣದಲ್ಲಿ ಈ ನಕ್ಷತ್ರ ಪುಂಜದ ವೀಕ್ಷಣೆಯ ಬಗ್ಗೆ ವಿವರವಾಗಿ ಬರೆಯಲಾಗಿತ್ತು. ಇದು ಒರೆಯಾನ್ ನಕ್ಷತ್ರ ಪುಂಜ. ಚಳಿಗಾಲದಲ್ಲಿ ರಾತ್ರಿ ಆಕಾಶವನ್ನು ವೀಕ್ಷಣೆ ಮಾಡಲು ಈ ಒರೆಯಾನ್ ಒಂದು ದಿಕ್ಸೂಚಿಯಾಗಿದೆ. ಏಕೆಂದರೆ, ಒರೆಯಾನ್ ನಕ್ಷತ್ರ ಪುಂಜವನ್ನು ಎಲ್ಲರೂ ಸುಲಭವಾಗಿ ಗುರುತಿಸಬಹುದು. ಈ ನಕ್ಷತ್ರ ಪುಂಜದಿಂದ ಇತರೆ ಆಕಾಶಕಾಯಗಳನ್ನು ಹಾಗೂ ದಿಕ್ಕುಗಳನ್ನು ಗುರುತಿಸುವುದು ಸುಲಭ. ಒರೆಯಾನ್‌ನ ಎರಡು ನಕ್ಷತ್ರಗಳು ಅತ್ಯಂತ ಪ್ರಕಾಶಮಾನವಾದವು. ಚಿತ್ರದಲ್ಲಿ ತೋರಿಸಿರುವಂತೆ, ರಾತ್ರಿ ಆಕಾಶದಲ್ಲಿ, ಬೀಟಲ್‌ಗೀಸ್ ನಕ್ಷತ್ರ ಆರೆಂಜ್ ಬಣ್ಣದಲ್ಲಿ ಕಂಡರೆ, ರೀಗಲ್ ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತದೆ. ಬೀಟಲ್‌ಗೀಸ್ ಸೂರ್ಯನಿಗಿಂತಲೂ ಸುಮಾರು 950 ಪಟ್ಟು ಹೆಚ್ಚು ದೊಡ್ಡದಿದ್ದು, 548 ಬೆಳಕಿನ ವರ್ಷದಷ್ಟು ದೂರವಿದೆ. ರೀಗಲ್ ಯೌವ್ವನದ ಸ್ಥಿತಿಯಲ್ಲಿರುವ ನಕ್ಷತ್ರ, ಇದು ಸೂರ್ಯನಿಗಿಂತಲೂ 79 ಪಟ್ಟು ದೊಡ್ಡದಿದ್ದು, 863 ಬೆಳಕಿನ ವರ್ಷದಷ್ಟು ದೂರವಿದೆ. ಅಂದಹಾಗೆ, ಒರೆಯಾನ್ ನಕ್ಷತ್ರ ಪುಂಜದಲ್ಲಿರುವ ಒರೆಯಾನ್ ನೆಬುಲ್ಲಾವನ್ನು ನೋಡಲು ಮರೆಯದಿರಿ. ಈ ನಿಹಾರಿಕೆಯು
ನಕ್ಷತ್ರಗಳು ಹುಟ್ಟುವ ಪ್ರದೇಶವಾಗಿದೆ. ಬೈನಾಕ್ಯುಲರ್ ಸಹಾಯದಿಂದ ನೋಡಿದರೆ ಇನ್ನಷ್ಟು ವಿವರವಾಗಿ ಒರೆಯಾನ್ ನೆಬುಲ್ಲಾವನ್ನು ನೀವು ಗಮನಿಸಬಹುದು.

ಒರೆಯಾನ್ ನಕ್ಷತ್ರ ಪುಂಜದ ಬೀಟಲ್‌ಗೀಸ್ ನಕ್ಷತ್ರದಿಂದ ನೆತ್ತಿಯ ಕಡೆಗೆ ನೋಡಿದರೆ ಮತ್ತೊಂದು ಕೆಂಪು ಮತ್ತು ಹಳದಿ ಬಣ್ಣದ ನಕ್ಷತ್ರ ಕಾಣುತ್ತದೆ. ಈ ನಕ್ಷತ್ರದ ಹೆಸರು ರೋಹಿಣಿ ನಕ್ಷತ್ರ (ಅಲ್ಡಿಬರಾನ್ ಎಂದು ಕರೆಯುತ್ತಾರೆ). ರೋಹಿಣಿ ಇರುವ ನಕ್ಷತ್ರ ಪುಂಜ ವೃಷಭ. ಈ ರೋಹಿಣಿ ನಕ್ಷತ್ರದ ನೆತ್ತಿಯ ಮೇಲೆ ಕಣ್ಣು ಚಾಚಿ ನೋಡಿದರೆ, ಒಂದು ನಕ್ಷತ್ರದ ಗೊಂಚಲುಗಳು ಕಾಣುತ್ತದೆ. ಇದೇ ಕೃತ್ತಿಕಾ ನಕ್ಷತ್ರ ಸಮೂಹ/ಗೊಂಚಲು/ಕ್ಲಸ್ಟರ್. ಬೈನಾಕ್ಯುಲಾರ್‌ನಲ್ಲಿ ಕಂಡಾಗ ಹಲವು ನಕ್ಷತ್ರಗಳು ಕಾಣುತ್ತದೆ.

ಹಾಗೆಯೇ ಸ್ವಲ್ಪ ಉತ್ತರದ ದಿಕ್ಕಿಗೆ ತಿರುಗಿ. ಉತ್ತರ ದಿಕ್ಕು ಯಾವುದು ಅಂತ ಯೋಚಿಸುತ್ತಿದ್ದೀರಾ? ಒರೆಯಾನ್ ನಕ್ಷತ್ರ ಪುಂಜಕ್ಕೆ ಮುಖ ಮಾಡಿ ನಿಂತಾಗ ಬೀಟಲ್‌ಗೀಸ್ ನಕ್ಷತ್ರ ನಿಮ್ಮ ಎಡಭಾಗಕ್ಕೆ ಇದ್ದರೆ, ರೀಗಲ್ ನಿಮ್ಮ ಬಲಭಾಗಕ್ಕೆ ಇರುತ್ತದೆ. ಈಗ ನಿಮ್ಮ ಎಡಕ್ಕಿರುವ ದಿಕ್ಕೇ ಉತ್ತರ ದಿಕ್ಕು. ಉತ್ತರದಲ್ಲಿ ಕಾಣುವ ನಕ್ಷತ್ರಗಳನ್ನು ಸ್ವಲ್ಪ ಹೊತ್ತು ಗಮನಿಸುತ್ತಾ ಹೋದರೆ, ಈ ಕೆಳಗಿನ ಚಿತ್ರದಲ್ಲಿರುವಂತೆ ಒಂದು M(ಎಂ) ಆಕಾರದ ರಚನೆಯನ್ನು ನೀವು ಆಕಾಶದಲ್ಲಿ ಗುರುತಿಸಬಹುದು. ಈ ನಕ್ಷತ್ರ ಪುಂಜದ ಹೆಸರು ಕ್ಯಾಸಿಯೋಪಿಯ. ಇದು ಉತ್ತರ ದಿಕ್ಕನ್ನು ಸುಲಭವಾಗಿ ಗುರುತಿಸಲು ಉಪಯೋಗಿಸುವ ನಕ್ಷತ್ರ ಪುಂಜ. ಹೇಗೆ ನಾವು ಒರೆಯಾನ್‌ಅನ್ನು ಸುಲಭವಾಗಿ ಗುರುತಿಸಬಹುದೋ, ಹಾಗೆಯೇ ಈ M ಆಕಾರದ ನಕ್ಷತ್ರ ಪುಂಜವನ್ನು ಆಕಾಶದಲ್ಲಿ ನೋಡಿದರೆ, ಅದು ಉತ್ತರ ದಿಕ್ಕು ಎಂದು ಯಾವುದೇ ದಿಕ್ಸೂಚಿಯಂತಹ ಸಲಕರಣೆಗಳಲ್ಲಿದೆ ತಿಳಿಯಬಹುದು. ಇದಲ್ಲದೆ ಈ ಕೆಳಗಿನ ಚಿತ್ರದಲ್ಲಿರುವ ಇತರೆ ನಕ್ಷತ್ರ, ನಕ್ಷತ್ರ ಪುಂಜಗಳನ್ನು ಗುರುತಿಸಲು ಪ್ರಯತ್ನ ಮಾಡಿ.

ಈ M ಆಕಾರದ ಕ್ಯಾಸಿಯೋಪಿಯ ನಕ್ಷತ್ರ ಪುಂಜದಿಂದ ಸ್ವಲ್ಪ ಎತ್ತರಕ್ಕೆ ಹಾಗೂ ದಕ್ಷಿಣ ದಿಕ್ಕಿಗೆ ನೋಡುತ್ತಿದ್ದರೆ, ಅಲ್ಲಿ ಅಂಡ್ರೋಮಿಡಾ ಎಂಬ ನಕ್ಷತ್ರ ಪುಂಜವನ್ನು ಗುರುತಿಸಬಹುದು. ಮೊದಲನೇ ಬಾರಿಗೆ ಗುರುತಿಸುವುದು ಕಷ್ಟ ಅನ್ನಿಸಬಹುದು, ಆದರೆ ಆಕಾಶ ವೀಕ್ಷಣೆಯನ್ನು ಅಭ್ಯಾಸ ಮಾಡುತ್ತಿದ್ದರೆ ಅಷ್ಟೇನು ಕಷ್ಟವಾಗುವುದಿಲ್ಲ. ಪ್ರಥಮ ಬಾರಿಗೆ ಈ ಕೆಳಗೆ ನೀಡಿರುವ ಚಿತ್ರದ ಸಹಾಯದಿಂದ ಗುರುತಿಸಲು ಪ್ರಯತ್ನಿಸಿ. ಈ ಆಂಡ್ರೋಮಿಡಾ ನಕ್ಷತ್ರ ಪುಂಜದ ನಕ್ಷತ್ರಗಳನ್ನು ಗುರುತಿಸಲು M ಆಕಾರದ ಕ್ಯಾಸಿಯೋಪಿಯ ನಕ್ಷತ್ರ ಪುಂಜವನ್ನು ಬಳಸಿಕೊಳ್ಳಿ. ಆಂಡ್ರೋಮಿಡಾ ನಕ್ಷತ್ರ ಪುಂಜದ Mirach ನಕ್ಷತ್ರವನ್ನು ಗುರುತಿಸಿ, ನಂತರ ಅದರ ಕೆಳಗಿನ ಎರಡು ನಕ್ಷತ್ರಗಳನ್ನು, ಚಿತ್ರದಲ್ಲಿರುವ ಕಾಲ್ಪನಿಕ ಗೆರೆಯಂತೆ ನೀವೇ ಊಹಿಸಿಕೊಂಡು ಆಕಾಶದಲ್ಲಿ ಗುರುತಿಸಿ. ಈ ಗೆರೆಯ ಮೂರನೇ ನಕ್ಷತ್ರದ ಬಳಿ ಒಂದು ಮಸುಕಾದ ಆಕಾರ ಕಾಣುತ್ತದೆ. ಅದೇ ಆಂಡ್ರೋಮಿಡಾ ಗ್ಯಾಲಾಕ್ಸಿ. ನಾವು ಇರುವ ಹಾಲು ಹಾದಿ ಗ್ಯಾಲಾಕ್ಸಿಗೆ ಹತ್ತಿರದಲ್ಲಿರುವ ಮತ್ತೊಂದು ಗ್ಯಾಲಾಕ್ಸಿ ಅದು. ಬೈನಾಕ್ಯುಲರ್ ಸಹಾಯದಿಂದ ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ನೋಡಿ, ಇನ್ನೂ ಸುಂದರವಾಗಿ ಅದನ್ನು ಗುರುತಿಸಬಹುದು. ಬರಿಗಣ್ಣಿಗೆ ಅಥವಾ ಬೈನಾಕ್ಯುಲರ್‌ನಿಂದ ನೋಡಿದಾಗ ಗ್ಯಾಲಾಕ್ಸಿಯ ಬಣ್ಣಗಳು ಕಾಣುವುದಿಲ್ಲ. ಗ್ಯಾಲಾಕ್ಸಿಗಳಿಂದ ಬರುವ ಮಸುಕಾದ ಬೆಳಕಿನ ಕಿರಣಗಳಿಂದ ನಮ್ಮ ಕಣ್ಣುಗಳು ಬಣ್ಣಗಳನ್ನು ಊಹಿಸುವಷ್ಟು ಸಾಮರ್ಥ್ಯ ಹೊಂದಿಲ್ಲ. ಕ್ಯಾಮರಾದ ಸಹಾಯದಿಂದ ಹೆಚ್ಚು ಎಕ್ಸಪೋಶರ್ ಹೊಂದಿದ ಪೋಟೋ ತೆಗೆದರೆ, ಈ ಆಂಡ್ರೋಮಿಡಾ ಗ್ಯಾಲಾಕ್ಸಿಯ ಅದ್ಭುತವು ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಆಗಸದಲ್ಲಿನ ನಕ್ಷತ್ರ ಪುಂಜಗಳನ್ನು ಗುರುತಿಸಿದ ನಂತರ, ಅಲ್ಲಿ ಕಾಣುವ ಗ್ಯಾಲಾಕ್ಸಿ, ನೆಬುಲ್ಲಾ ಮತ್ತು ಕ್ಲಸ್ಟರ್‌ಗಳನ್ನು ಕಾಣಲು ನಕ್ಷತ್ರ ಪುಂಜಗಳನ್ನು ದಿಕ್ಸೂಚಿಯಾಗಿ ಬಳಸುತ್ತಾರೆ. ಸಾಮಾನ್ಯವಾಗಿ ಖಗೋಳ ವಿಜ್ಞಾನಿಗಳು, ಹವ್ಯಾಸಿ ಖಗೋಳ ವಿಜ್ಞಾನಿಗಳು ಇಂತಹ ವೀಕ್ಷಣೆಯನ್ನು Deep Sky Object Seeing/Observing ಎಂದು ಕರೆಯುತ್ತಾರೆ. ಇಂತಹ Deep Sky Objectಗಳನ್ನು ನಗರ ಪ್ರದೇಶಗಳಲ್ಲಿ ನೋಡಲು, ಬೆಳಕಿನ ಮಾಲಿನ್ಯ, ವಾಯುಮಾಲಿನ್ಯಗಳು ಅಡ್ಡಿಪಡಿಸುತ್ತವೆ. ಹವ್ಯಾಸಿ ಖಗೋಳ ವಿಜ್ಞಾನಿಗಳು ನಗರ ಪ್ರದೇಶದಿಂದ ಸುಮಾರು ನೂರು ಕಿಲೋಮಿಟರ್ ದೂರ ಹೋಗಿ ಅಥವಾ ದೂರದ ಹಳ್ಳಿಯಲ್ಲಿ ರಾತ್ರಿಯೆಲ್ಲಾ ವಾಸ್ತವ್ಯ ಹೂಡಿ ಆಕಾಶ ವೀಕ್ಷಣೆ ಮತ್ತು ಫೋಟೋಗ್ರಫಿಯನ್ನು ಮಾಡುತ್ತಾರೆ. ಆದರೂ ಕೆಲವೊಂದು Deep Sky Objectಗಳನ್ನು ನಗರ ಪ್ರದೇಶಗಳಿಂದಲೂ ಗುರುತಿಸಬಹುದಾಗಿದೆ.

ಈ ಸಂಚಿಕೆಯಲ್ಲಿ ಒರಿಯಾನ್ ನೆಬುಲ್ಲಾ, ಕೃತ್ತಿಕಾ ನಕ್ಷತ್ರ ಪುಂಜ ಮತ್ತು ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ಗುರುತಿಸುವುದು ಹೇಗೆ ಎಂದು ತಿಳಿದುಕೊಂಡೆವು. ನಿಮ್ಮ ಬಳಿ ಕಂಪ್ಯೂಟರ್ ಇದ್ದರೆ, Stellarium (www.stellarium.org) ಎಂಬ ಉಚಿತ ತಂತ್ರಾಂಶವನ್ನು install ಮಾಡಿಕೊಳ್ಳಿ. ಇದರಲ್ಲಿ ನೀವಿರುವ ಜಾಗವನ್ನು ಆಯ್ಕೆ ಮಾಡಿದರೆ, ನಿಮ್ಮ ಪ್ರದೇಶದಿಂದ ಆಕಾಶ ಹೇಗೆ ಕಾಣುತ್ತದೆ ಎಂಬ ನೈಜ ಗ್ರಾಫಿಕ್ಸ್ ಲಭ್ಯವಾಗುತ್ತದೆ. ಇಲ್ಲಿ ನೀಡಿರುವ ಚಿತ್ರಗಳೆಲ್ಲವೂ ಅಲ್ಲಿಂದಲೇ ಪಡೆದದ್ದು. ಈ ತಂತ್ರಾಂಶವನ್ನು ಉಪಯೋಗಿಸಲು ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಅಲ್ಲದೆ, ಮೊಬೈಲ್‌ನಲ್ಲಿ Sky Map ಎನ್ನುವ ತಂತ್ರಾಂಶವನ್ನು install ಮಾಡಿಕೊಳ್ಳಿ. ಇದೂ ಸಹ ಲೈವ್ Sky Mapಅನ್ನು ಮೊಬೈಲ್ ಪರದೆ ಮೇಲೆ ಬಿತ್ತರಿಸುತ್ತದೆ.

ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ನಕ್ಷತ್ರ ಪುಂಜಗಳು ಹಾಗೂ Deep Sky Objectಗಳನ್ನು ಗುರುತಿಸುವುದು ಮತ್ತು ಅದರ ವಿಶೇಷತೆಗಳನ್ನು ತಿಳಿದುಕೊಳ್ಳೋಣ. ಈ ವಾರ ಆಂಡ್ರೋಮಿಡಾ ಗ್ಯಾಲಾಕ್ಸಿಯನ್ನು ಆಕಾಶದಲ್ಲಿ ಗುರುತಿಸಲು ಪ್ರಯತ್ನಿಸಿ.


ಇದನ್ನೂ ಓದಿ: ನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...