Homeಮುಖಪುಟಕೇಂದ್ರದಲ್ಲಿ ಖಾಲಿ ಇರುವ 8 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ರಾಜ್ಯಸಭಾ ಸಂಸದರ ಒತ್ತಾಯ!

ಕೇಂದ್ರದಲ್ಲಿ ಖಾಲಿ ಇರುವ 8 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ರಾಜ್ಯಸಭಾ ಸಂಸದರ ಒತ್ತಾಯ!

- Advertisement -
- Advertisement -

ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿ ಸರ್ಕಾರದ ಹುದ್ದೆಗಳನ್ನು ಖಾಲಿ ಇಡುವುದು ನ್ಯಾಯಸಮ್ಮತವಲ್ಲ. ಕೇಂದ್ರ ಸರ್ಕಾರದ ಅಡಿಯಲ್ಲಿ ಖಾಲಿ ಇರುವ ಎಂಟು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮಂಗಳವಾರ ರಾಜ್ಯಸಭಾ ಸಂಸದರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್‌ ಅಧಿವೇಶನದ ವೇಳೆ ರಾಜ್ಯಸಭಾ ಸದನದಲ್ಲಿ ಶೂನ್ಯವೇಳೆಯಲ್ಲಿ ನಿರುದ್ಯೋಗ ವಿಚಾರವನ್ನು ಪ್ರಸ್ತಾಪಿಸಿದ ವೈಎಸ್ಆರ್ ಕಾಂಗ್ರೆಸ್ ಸಂಸದ ವಿ ವಿಜಯಸಾಯಿ ರೆಡ್ಡಿ, ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ ಸರ್ಕಾರಿ ವಲಯವು ಖಾಲಿ ಹುದ್ದೆಗಳಿಂದ ತುಂಬಿ ತುಳುಕುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಸಶಸ್ತ್ರ ಪಡೆಗಳಲ್ಲಿ ಒಂದು ಲಕ್ಷ ಮತ್ತು ರೈಲ್ವೆಯಲ್ಲಿ ಎರಡು ಲಕ್ಷ ಸೇರಿದಂತೆ ಕೇಂದ್ರ ಸರ್ಕಾರದಲ್ಲಿ ಸುಮಾರು ಎಂಟು ಲಕ್ಷ ಹುದ್ದೆಗಳು ಖಾಲಿ ಇವೆ. “ಸರ್ಕಾರವು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ, ಪರೀಕ್ಷೆಯನ್ನು ನಡೆಸುತ್ತಿಲ್ಲ ಮತ್ತು ಫಲಿತಾಂಶವನ್ನು ಪ್ರಕಟಿಸುತ್ತಿಲ್ಲ” ಎಂದು ಹೇಳಿದ್ದಾರೆ.

ವಿವಿಧ ಸಚಿವಾಲಯಗಳು ನೀಡಿರುವ ಅಂಕಿಅಂಶಗಳ ಪ್ರಕಾರ, ಸಶಸ್ತ್ರ ಪಡೆಗಳಲ್ಲಿ 1,25,555 ಹುದ್ದೆಗಳು, ರೈಲ್ವೆಯಲ್ಲಿ 2,65,547 ಮತ್ತು 80,752 ಗೆಜೆಟೆಡ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಘಟಕಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು ಎಂದು ಸಿಪಿಎಂ ಸಂಸದ ವಿ ಶಿವದಾಸನ್ ಒತ್ತಾಯಿಸಿದ್ದಾರೆ.

ಎಲ್‌ಜೆಡಿ ಸಂಸದ ಎಂವಿ ಶ್ರೇಯಮ್ಸ್ ಕುಮಾರ್ ಮಾತನಾಡಿ, “ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು 8%ಗೆ ತಲುಪಿತ್ತು. ಕೇಂದ್ರ ಸರ್ಕಾರದಲ್ಲಿ ಎಂಟು ಲಕ್ಷ ಹುದ್ದೆಗಳು ಖಾಲಿಯಾಗಿವೆ. ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸುತ್ತೇನೆ” ಎಂದಿದ್ದಾರೆ.

ವಲಸೆ ಹೋಗುತ್ತಿರುವ ಭಾರತೀಯರ ವಿಷಯವನ್ನು ಪ್ರಸ್ತಾಪಿಸಿದ ಡಿಎಂಕೆ ಸಂಸದ ತಿರುಚಿ ಶಿವ, “18 ಮಿಲಿಯನ್ ಜನರು ದೇಶದ ಹೊರಗೆ ವಾಸಿಸುತ್ತಿದ್ದಾರೆ. 2000 ಮತ್ತು 2020 ರ ನಡುವೆ, 10 ಮಿಲಿಯನ್ (ಒಂದು ಕೋಟಿ) ನಾಗರಿಕರು ಇತರ ದೇಶಗಳಿಗೆ ತೆರಳೀದ್ದು, ಇದರಿಂದ ಭಾರತವು ಅತಿದೊಡ್ಡ ವಲಸೆಯನ್ನು ಕಂಡಿದೆ. 2015 ಮತ್ತು 2021ರ ನಡುವೆ 8.81 ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ” ಎಂದು ಮಾಹಿತಿ ನೀಡುವ ಮೂಲಕ ಗಮನ ಸೆಳೆದರು.

“ಭಾರತದಿಂದ ವಲಸೆ ಹೋಗಿರುವ ಇವರೆಲ್ಲರೂ ಕೆಳಸ್ತರದಿಂದ ಬಂದವರು ಮತ್ತು ಕೌಶಲ್ಯರಹಿತರಲ್ಲ. ಅವರೆಲ್ಲೂ ವಿಜ್ಞಾನಿಗಳು, ಸಂಶೋಧಕರು, ವೈದ್ಯರು, ಐಟಿ ವೃತ್ತಿಪರರು ಮತ್ತು ಎಂಜಿನಿಯರ್‌ಗಳಂತಹ ನುರಿತ ಸಿಬ್ಬಂದಿಗಳು. ಅಂತಹವರ ವಲಸೆಯನ್ನು ತಡೆಯಲು ಸರ್ಕಾರವು ದೇಶದೊಳಗೆ ಅವಕಾಶಗಳನ್ನು ಸೃಷ್ಟಿಸಬೇಕು” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಕುಶಾಲನಗರ: ಕೇಸರಿ ಶಾಲು ಹಾಕುವಂತೆ ಒತ್ತಾಯಿಸಿದ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...