Homeಅಂಕಣಗಳುಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

- Advertisement -
- Advertisement -

ಸಂತೆಯ ಗದ್ದಲದಲ್ಲಿ ಗಂಟು ಕಳ್ಳರು ತಾವು ಮಾಡುವ ಕೆಲಸವನ್ನ ನಿರಾತಂಕವಾಗಿ ಮಾಡಿ ಮುಗಿಸಿದಂತೆ ವಿಧಾನಸಭೆಯಲ್ಲಿ ಧರಣಿ, ಗೌಜು ಗದ್ದಲ ನಡೆಯುತ್ತಿದ್ದಾಗಲೇ, ಇತ್ತ ಶಾಸಕರು ಮಂತ್ರಿಗಳು ಮತ್ತು ಮುಖ್ಯಮಂತ್ರಿಯ ಸಂಬಳ ಹೆಚ್ಚಿಸುವ ಬಿಲ್ಲನ್ನು ಸದ್ದಿಲ್ಲದೆ ಜಾರಿಮಾಡಿಕೊಂಡರಂತಲ್ಲಾ. ಸಾಮಾನ್ಯವಾಗಿ ಜೇಬುಗಳ್ಳರು ಮಾತ್ರ ಇಂತಹ ಕೆಲಸ ಮಾಡುತ್ತಾರೆಂದು ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಗಲುಗಳ್ಳರು ತಮ್ಮ ತುಟ್ಟಿಭತ್ಯೆಗಳನ್ನು ಏರಿಸಿಕೊಳ್ಳುವುದನ್ನು ಅನಾದಿಕಾಲದಿಂದ ನೋಡುತ್ತ ಬಂದಿದ್ದಾರೆ ಸಾಮಾನ್ಯ ಜನ. ಈಗಲೂ ಕೂಡ ಕನಿಕರದ ಒಪ್ಪಿಗೆ ಕೊಡುತ್ತಿದ್ದರು. ಆದರದು ಚರ್ಚೆಯಾಗಬೇಕಿತ್ತು. ಶಾಸಕರು ಹಾಲಿ ಪಡೆಯುತ್ತಿರುವ ಸಂಬಳ ಸಾಲುತ್ತಿಲ್ಲ, ಅಜ್ಜಿ ಹೊಸೆದ ದಾರವೆಲ್ಲಾ ಅಜ್ಜನ ಉಡದಾರಕ್ಕೆ ಸಾಲುತ್ತಿಲ್ಲ ಎಂಬಂತೆ, ಸರಕಾರ ಈಗ ಕೊಡುತ್ತಿರುವುದೆಲ್ಲಾ ಹಿಂದಿನ ಚುನಾವಣೆಗಾಗಿ ಮಾಡಿಕೊಂಡ ಸಾಲದ ಬಡ್ಡಿಗೇ ಸಾಲುತ್ತಿಲ್ಲ ಎಂಬುದು ಹಲವು ಶಾಸಕರ ಸುಳ್ಳು ಆಳಲಾಗಿತ್ತು. ವಾಸ್ತವವಾಗಿ ಈಗ ಸರಕಾರದ ಅಭಿವೃದ್ಧಿ ಕೆಲಸಗಳಲ್ಲಿ ನಲವತ್ತು ಪರಸೆಂಟು ಶಾಸಕರ ಪಟಾಲಂಗೆ ಸೇರುತ್ತಿದೆಯಂತೆ, ಇನ್ನ ರೆವಿನ್ಯೂ ಇಲಾಖೆ, ಅಬಕಾರಿ ಇಲಾಖೆ, ಕಾಡಿನ ಇಲಾಖೆ, ಗಣಿಗಾರಿಕೆ ಬಾಬ್ತು ಮತ್ತು ಪೊಲೀಸ್ ಠಾಣೆಗಳು ಒಪ್ಪಿಸುವ ಕಪ್ಪ ಕಾಣಿಕೆಯನ್ನ ಬರೆದುಕೊಂಡು ಟೋಟ್ಲು ಮಾಡಿದರೆ, ಈಗ ಸರಕಾರ ಗುಪ್ತವಾಗಿ ಮಂಜೂರು ಮಾಡಿಕೊಂಡ ಸಂಬಳದ ಮೊತ್ತ ಜುಜುಬಿ ಚಿಲ್ಲರೆ ಕಾಸಂತಲ್ಲಾ ಥೂತ್ತೇರಿ.

*******

ಈ ಶಾಸಕ ಮಂತ್ರಿ ಮಹೋದಯರ ಸವಲತ್ತಿನ ಹಣವನ್ನು ಈ ಸಮಯದಲ್ಲಿ ಹೆಚ್ಚು ಮಾಡಿಕೊಂಡದ್ದು ಜೀವಂತ ಮಿಕಗಳನ್ನ ಹರಿದು ತಿನ್ನುವಂತಹ ಹೈನಾಗಳ ಕೃತ್ಯವಾಗಿದೆಯಂತಲ್ಲಾ. ಸದರಿ ಸರಕಾರ ಪ್ರವಾಹದಿಂದ ಬೀದಿಗೆ ಬಿದ್ದ ಕುಟುಂಬಗಳ ಯೋಗಕ್ಷೇಮ ನೋಡಲಿಲ್ಲ. ಕೊರೊನಾದಿಂದ ನಿರ್ಗತಿಕರಾದವರಿಗೆ ಏನು ಮಾಡಿದರೆಂಬುದು ತಿಳಿಯಲಿಲ್ಲ. ಕೊರೊನಾ ಸಾವಿಗೆ ತುತ್ತಾಗಿ ಸತ್ತವರ ಮಕ್ಕಳು ಅನಾಥರಾಗಿ, ಆ ಮಕ್ಕಳು ಯಾವ ಸವಲತ್ತಿಗೆ ತುತ್ತಾದರೆಂಬ ಮಾಹಿತಿ ಯಾರಿಗೂ ಇಲ್ಲ. ಈ ನಡುವೆ ಸರಕಾರದ ಮಾಸಾಶನ ಕಾಯುತ್ತ ಕುಳಿತವರ ಕಣ್ಣು ಒದ್ದೆಯಾಗಿವೆ. ಅತಿಥಿ ಉಪನ್ಯಾಸಕರು, ಪ್ರವಾಹಕ್ಕೆ ಸಿಕ್ಕವರು ನಡುಗೋಡೆಯ ಮೇಲೆ ನಿಂತಂತೆ ದಿಕ್ಕುಕಾಣದಂತಹ ಕಣ್ಣುಗಳಿಂದ ಸರಕಾರದ ಕಡೆ ನೋಡುತ್ತಿದ್ದಾರೆ. ಇನ್ನ ಮೂರುದಶಕದ ಹಿಂದೆ ಗ್ರಾಮಪಂಚಾಯ್ತಿ ಗ್ರಂಥಾಲಯಗಳಿಗೆ ಗೌರವಧನದಿಂದ ನೇಮಕವಾದ ಗ್ರಂಥಾಲಯ ಮೇಲ್ವಿಚಾರಕರು ಈಗ ಪಿಂಚಣಿಯಿಲ್ಲದೆ ನಿವೃತ್ತರಾಗುತ್ತಿದ್ದಾರೆ. ಕಡೆ ತಿಂಗಳ ಗೌರವಧನವಾದ ಹನ್ನೆರಡು ಸಾವಿರ ತೆಗೆದುಕೊಂಡು ಮುಂದೆ ಅವರ ಹೆಂಡತಿ ಮಕ್ಕಳ ಕತೆಯೇನು ಎಂದು ನೆನಸಿಕೊಂಡರೆ ಭಯವಾಗುತ್ತದೆ. ಪ್ರತಿ ಕೆಲಸಕ್ಕೂ ಫೈನಾನ್ಸ್ ಡಿಪಾರ್ಟ್‌ಮೆಂಟಿನ ಒಪ್ಪಿಗೆ ಬೇಕಾಗುತ್ತದೆಂಬ ತಕರಾರು ತೆಗೆವ ಈ ಜನಪ್ರತಿನಿಧಿಗಳು ಇಂತಹ ಭೀಕರ ಸ್ಥಿತಿಯಲ್ಲಿಯೂ ತಮ್ಮ ಸವಲತ್ತುಗಳನ್ನು ಏರಿಸಿಕೊಂಡು ನಿಜಕ್ಕೂ ಸರಕಾರದ ಖಜಾನೆ ಕಳ್ಳರಾದರಂತಲ್ಲಾ ಥೂತ್ತೇರಿ.

Hijab Live | ‘ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ’: ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ವಾದ | NaanuGauri

********

 

ಹಿಜಾಬ್ ಬಟ್ಟೆಯ ವಿಷಯ ಕರ್ನಾಟಕದ ತುಂಬ ಹರಡಿದ ಸನ್ನಿವೇಶವನ್ನ ಬಳಸಿಕೊಂಡು ಕೇಸರಿ ವಸ್ತ್ರವನ್ನ ಕರ್ನಾಟಕದ ತುಂಬ ಹಾಸಲು ಕೊರಟ ಕೇಸರಿ ಕಂದಗಳು ಧರ್ಮಸ್ಥಳಕ್ಕೆ ಹೊರಟ ಶಿವಭಕ್ತಾದಿಗಳನ್ನು ಹಿಡಿದು ಕೇಸರಿ ವಸ್ತ್ರಕೊಟ್ಟು, ಜೊತೆಗೆ ಮಜ್ಜಿಗೆ ಪಾನಕ ಕೊಟ್ಟು ಕಳಿಸುತ್ತಿದ್ದಾರಂತಲ್ಲಾ. ಈ ಕಂದಗಳ ಈ ಶ್ರಮ ನೋಡಿದ ಕಾಂಗೈಗಳು ಕಂಗಾಲಾಗಿ ತಾವೇನು ಹಂಚಬೇಕೆಂಬುದು ಹೊಳೆಯದೆ, ಮೇಕೆದಾಟಿನ ಕಡೆ ಹೊರಟರಂತಲ್ಲಾ. ಅತ್ತ ಕೇಸರಿ ವಸ್ತ್ರ ವಿತರಣೆ ಇತ್ತ ಮೇಕೆದಾಟಿನ ಪಾದಯಾತ್ರೆ ನೋಡಿದ ಕುಮಾರಣ್ಣನವರು ಇವರಿಬ್ಬರದೂ ಅಧಿಕಾರ ದಾಹದ ನಡವಳಿಕೆ ಎಂದು ನಿರ್ಲಿಪ್ತವಾಗಿ ಹೇಳಿ, ಈಗೇನು ಮಾಡಬೇಕೆಂಬ ಗೊಂದಲಕ್ಕೆ ಬಿದ್ದರಂತಲ್ಲಾ. ಈ ನಡುವೆ ಕರ್ನಾಟಕದ ಕೆಲ ಬುದ್ಧಿಜೀವಿಗಳು, ನೋಡಿ ಎಡೂರಪ್ಪನವರು ಸಂಘಪರಿವಾರದಿಂದ ಬಂದವರು, ಆದರೂ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡುವಾಗ ಹಸಿರು ಶಾಲು ಹಾಕಿದ್ದರು, ಅದೇ ಬಸವರಾಜ ಬೊಮ್ಮಾಯಿ ಎಂಬ ವ್ಯಕ್ತಿ, ರಾಯಿಸ್ಟ್ ಬೊಮ್ಮಾಯಿ ಎಂದು ಹೆಸರಾಗಿದ್ದ ಎಸ್ಸಾರ್ ಬೊಮ್ಮಾಯಿ ಮಗ, ಈತನಿಗೂ ಕೇಸರಿ ಶಾಲಿಗೂ ಯಾವ ಸಂಬಂಧವೂ ಇಲ್ಲ, ಆದರೂ ಕೇಸರಿ ಶಾಲನ್ನ ಹೊದ್ದು ಕುಂಟುತ್ತ ನಡೆದದ್ದು ನಿಜವೊ ನಟನೆಯೋ ಎಂಬುದೇ ಗೊತ್ತಾಗುತ್ತಿಲ್ಲ, ಒಟ್ಟಿನಲ್ಲಿ ಇವರೊಬ್ಬ ಸೂತ್ರದ ಗೊಂಬೆ ಎಂದರಂತಲ್ಲಾ ಥೂತ್ತೇರಿ.

*******

ಶ್ರೀಕೃಷ್ಣರಾಜೇಂದ್ರ ಒಡೆಯರು ಗಾಂಧೀಜಿಯಿಂದ ರಾಜರ್ಷಿ ಎಂಬ ಹೆಸರು ಪಡೆದವರು. ಕಲೆ, ಸಾಹಿತ್ಯ, ಸಂಗೀತ ಮತ್ತು ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಇಂತಹ ಮಹನೀಯರ ಮಹತ್ವದ ತೀರ್ಮಾನದಿಂದ ರಚನೆಗೊಂಡು ಮುನ್ನಡೆದ ಕನ್ನಡ ಸಾಹಿತ್ಯ ಪರಿಷತ್ತಿಗೆ ಗಂಡಾಂತರ ಬಂದಿದೆಯಂತಲ್ಲಾ. ಕನ್ನಡ ಸಾಹಿತ್ಯ ಪರಿಷತ್‌ಗೆ ಆಯ್ಕೆಯಾಗಿ ಬಂದ ಜೋಷಿ ಕನ್ನಡ ಸಾಹಿತ್ಯ ಪರಿಷತ್‌ಅನ್ನು ಬ್ರಾಹ್ಮಣೀಕರಿಸಲು ಮನಸ್ಸು ಮಾಡಿದ ದಿನದಿಂದಲೇ ಎಲ್ಲ ಕಾಯಿಲೆಗಳು ಪ್ರಾರಂಭವಾಗಿದೆಯಂತಲ್ಲಾ. ಕಳೆದ ಶತಮಾನದಿಂದ ನಿರಾತಂಕವಾಗಿ ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತ ಬಂದ ಸಾಹಿತ್ಯ ಪರಿಷತ್‌ಅನ್ನು ತನ್ನ ಪುರೋಹಿತಶಾಹಿ ಚಿಂತನೆಗಳಿಂದ ಬದಲಾಯಿಸಲು ಹೊರಟ ಜೋಷಿ ತಾನು ಗುರುಗೋವಿಂದರ ಸಂಬಂಧಿ ಎಂದು ಹೇಳಿಕೊಂಡಿದ್ದಾರೆ, ಗುರುಗೋವಿಂದರನ್ನ ಅವರ ಶಿಷ್ಯ ಶಿಶುನಾಳ ಶರೀಫರು “ವಜ್ರದ ಹರಳು” ಎಂದು ಕರೆದರು. ಅಂತಹ ವಜ್ರದ ಹರಳಿನ ವಂಶದ ಈತ ಮರಳಿನ ಕಣವಾಗುವ ಕಡೆ ನಡೆಯುವ ಮೊದಲು, ಕನ್ನಡ ಸಾಹಿತ್ಯ ಪರಂಪರೆಯ ನಡೆಯನ್ನ ಅವಲೋಕಿಸಬೇಕಿದೆಯಂತಲ್ಲಾ. ಅದಕ್ಕಿಂತ ಮೊದಲು ತಲೆಯಲ್ಲಿ ತುಂಬಿಕೊಂಡಿರುವ ಅಸಂಬದ್ಧ ಸಂಗತಿಗಳನ್ನು ಆಚೆಹಾಕಿ, ಮೈಸೂರು ಸ್ಯಾಂಡಲ್ ಸೋಪಿನಿಂದ ತೊಳೆದುಕೊಂಡು ಹೊಸದಾಗಿ ಯೋಚಿಸಬೇಕಿದೆಯಂತಲ್ಲಾ ಥೂತ್ತೇರಿ


ಇದನ್ನೂ ಓದಿ: ಕಾನೂನುಗಳಿಗಿಂತ ಧರ್ಮವೇ ದೊಡ್ಡದಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...