Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-ಕೊನೆಯ ಕಂತು; ’ಮಗಳು ಪೂರ್ಣಿಮನ ಕಂಡ್ರೆ ’ನನ್ನವ್ವಾ' ಅನ್ನನು; ಅವುಳಲ್ಲಿ ಅವುರವ್ವನ ಕಾಣ್ತಿದ್ದ’

ಹಿಂಗಿದ್ದ ನಮ್ಮ ರಾಮಣ್ಣ-ಕೊನೆಯ ಕಂತು; ’ಮಗಳು ಪೂರ್ಣಿಮನ ಕಂಡ್ರೆ ’ನನ್ನವ್ವಾ’ ಅನ್ನನು; ಅವುಳಲ್ಲಿ ಅವುರವ್ವನ ಕಾಣ್ತಿದ್ದ’

- Advertisement -
- Advertisement -

ಅವುನು ಮಂಡ್ಯಕ್ಕೆ ಬರದ್ಕು ಮದ್ಲಿಂದ ರೈತ ಸಂಘದ ಅಭಿಮಾನಿಯಾಗಿದ್ದ. ಪ್ರೊ. ನಂಜುಂಡಸ್ವಾಮಿಯವರ ಮಾತು-ಹೋರಾಟ ಅವುನಿಗೆ ಭಾಳ ಮೆಚ್ಚುಗೆಯಾಗಿದ್ದೊ. ರೈತ ಹೋರಾಟ ಶಿವಮೊಗ್ಗ ಬಿಟ್ರೆ ಮಂಡ್ಯದಲ್ಲೇ ದೊಡ್ಡ ಚಳವಳಿಯಾಗಿ ಬೆಳದಿತ್ತು. ರಾಮಣ್ಣ ರೈತರ ಬೆಂಬಲಿಗನಾಗಿ ಚಳವಳಿನೂ ಮೆಚ್ಚಿ ಮಾತಾಡತಿಂದ್ರಿಂದ ರವಿಕಾಂತೇಗೌಡನೂ ರೈತ ಹೋರಾಟದಲ್ಲಿದ್ದ. ಆಗ ಮಂಡ್ಯದಲ್ಲಿ ಈ ಚಳವಳಿ ರೈತ ಹೋರಾಟದ ಜತೆಗೆ, ಮೂಢನಂಬಿಕೆ ವಿರುದ್ಧನೂ ಹೋರಾಡ್ತ ಸರಳ ಮದುವೆನೂ ಮಾಡುಸತಿತ್ತು. ರಾಮಣ್ಣ ಬೆಸಗರಹಳ್ಳಿಲೆ ಒಂದು ರೈತ ಸಭೆಯಾಗಂಗೆ ಮಾಡಿ ಕೆ.ಟಿ.ಗಂಗಾಧರ್ ಕರಸಿ ಭಾಷಣ ಮಾಡಿಸಿದ್ದ. ಮಂತ್ರ ಮಾಂಗಲ್ಯ ಮದುವೆ ಕುವೆಂಪು ಹೇಳಿದಂಗೆ ನ್ಯಡಿಯದಿಲ್ಲ ಅಂತ ಗೊತ್ತಾದಾಗ “ಅಲ್ಲ ಕಲಾ ಕುವೆಂಪು ಹೇಳಿದ್ದೇನು, ಈ ಬಡ್ಡೆತವು ಮಾಡ್ತ ಯಿರದೇನು? ಯಿಂಗೂ ಮಾಡ್ತವೆ ಅಂಗೂ ಮಾಡ್ತವೆ ಕಲ. ಮಂತ್ರ ಮಾಂಗಲ್ಯ ಅಂತ ಐನೂರು ಸಾವಿರ ಜನ ಸೇರ್ತರೆ. ಇನ್ನ ಬೀಗರೂಟಕಂತೂ ಇದರ ಡಬ್ಬಲ್ ಸೇರ್ತರೆ ಕಲ. ಅಲ್ಲಿಗೆ ಕುವೆಂಪು ಹೇಳಿದ್ಕೆ ಬ್ಯಲೆ ಎಲ್ಲಿ ಬತ್ತೂ. ಪುರೋಹಿತ ಯಿಲ್ಲ ಅರ್ಥವಾಗದ ಮಂತ್ರ ಇಲ್ಲ ಅನ್ನದು ಬುಟ್ರೆ ಇನ್ಯಲ್ಲ ಜಾತ್ರೆನೂ ಅದಪ್ಪ. ಕುವೆಂಪು ಎಷ್ಟು ಜನ ಇರಬೇಕು ಅಂತ್ಲೂ ಹೇಳ್ಯವುರೆ ಕಲ. ಅದೇನು ಬಲವಂತ ಮಾಡಿಲ್ಲ ಅವುರು. ಮಂತ್ರ ಮಾಂಗಲ್ಯ ಮದುವೆ ಮಾಡದೆ ಆದ್ರೆ ಹಿಂಗೆ ಮಾಡಿ ಇಲ್ಲ ಅಂದ್ರೆ ಮಾಡಬ್ಯಾಡಿ ಅಂತ್ಲೆ ಹೇಳವುರೆ” ಅಂದಿದ್ದ.

ರಾಮಣ್ಣ ಹೇಳಿದ್ದು ನಮ್ಮ ಹೆಚ್. ಎಲ್. ಸೋಮರಾಜು ಮಗಳ ಮದುವೆ ನೋಡಿ ಅಂತ ಅಮ್ಯಾಲೆ ಗೊತ್ತಾಯ್ತು. ಕುವೆಂಪು ಮಂತ್ರ ಮಾಂಗಲ್ಯದಿಂದ ಪುರೋಹಿತರ ಹಿತ ತಪ್ಪಿಸೋದರ ಜೊತೆಗೆ, ರೈತರು ಮದುವೆ ಕಾರಣಕ್ಕೆ ಸಾಲ ಸೂಲ ಮಾಡಿಕೊಂಡು ಹಾಳಾಗಬಾರದು ಅನ್ನದಾಗಿತ್ತು.

ನಿನಗ್ಗಿನ್ನೊಂದು ವಿಷಯ ಗೊತ್ತ? ಇತ್ತೀಚಿನ ರೈತರ ಆತ್ಮಹತ್ಯೆಲಿ ಬಹುತೇಕ ಸಾವುಗೆ ಮಗಳ ಮದಿವಿಗೆ ಕೊಟ್ಟ ವರದಕ್ಷಿಣೆ, ಬೀಗರೂಟ, ಕಲ್ಯಾಣಮಂಟಪ ಬಾಡಿಗೆಗೆ ತೆಗೆದುಕೊಂಡ ಸಾಲ ಕಾರಣ ಆಗಿರತದೆ. ನಿನಿಗೆ ಬರೊ ಐದು ಲಕ್ಷ ರೂಪಾಯಿ ಆದಾಯಕ್ಕೆ ಹದಿನೈದು ಲಕ್ಷ ಯಂಗೆ ಸಾಲ ಮಾಡ್ತಿ. ಇದನ್ಯಲ್ಲ ಮಾತಾಡತಿದ್ದ ರಾಮಣ್ಣ ಮಂತ್ರಮಾಂಗಲ್ಯ ಮಾಡಿ ಅಂತ ಹೇಳತಿದ್ದ. ಆದ್ರೆ ಜನ ಮಂತ್ರಮಾಂಗಲ್ಯದ ಹೆಸರಲ್ಲಿ ಮಾಡತಿದ್ದ ಡಂಬಾರ ಕಂಡು ಹೇಸಿಗಂಡು ಅಂತ ಮದುವೀಗೆ ಹೋಯ್ತಿರಲಿಲ್ಲ.

ಮಂಡ್ಯಕ್ಕೆ ಬಂದಮ್ಯಾಲೆ ಅವುನ ಬಳಗ ದೊಡ್ಡದಾಯ್ತು. ಆದ್ರು ಯಲ್ರು ಅವುನನ್ನ ಹುಡಿಕ್ಕಂಡೋಗೋರೆ ವರುತು ಅವುನು ಯಾವ ರಾಜಕಾರಣಿ ಅಧಿಕಾರಿಗಳನ್ನ ಭೇಟಿಯಾಗ್ತಿರಲಿಲ. ಒಂದು ಸತಿ ಮಂಡ್ಯಕ್ಕೆ ಜಿಲ್ಲಾಧಿಕಾರಿಗಳಾಗಿದ್ದ ಚಿರಂಜೀವಿ ಸಿಂಗ್ ರಾಮಣ್ಣನ ಜತೆ ಮಾತಾಡಬೇಕು ಅಂತ ಕರಿಸಿದ್ರು; ಯಾಕಪ್ಪ ಅಂದ್ರೆ, ಈ ಮಂಡ್ಯದಲ್ಲಿ ದಿನಬೆಳಗಾದ್ರೆ ಒಂದಲ್ಲಾ ಒಂದು ಚಳವಳಿ ನ್ಯಡಿತವೆ, ಹುಡುಗ್ರು ಕಾಲೇಜು ಬುಟ್ಟು ರಸ್ತೆಗೆ ಬರ್ತಾರೆ; ಇದನ್ನ ನಿಲ್ಲಿಸಬೆಕಾದ್ರೆ ಏನು ಮಾಡಬೇಕು ಅಂತ ರಾಮಣ್ಣನ ಕರದು ಮಾತಾಡಿಸಿದ್ರಂತೆ. ಆಗವುನ ಕೆ.ವಿ. ಶಂಕರೇಗೌಡ್ರ ಕಡೆ ಕೈ ತೋರಿಸಿ ಬಂದಿದ್ದ.

ನನಿಗೆ ಅವಾಗವಾಗ ರಾಮಣ್ಣನ್ನ ನೋಡಿ ಮಾತಾಡಿಸಬೇಕು ಅನ್ಸದು. ಯಲ್ಲಾತಕಿಂತ ಅವುನ ಕೈಲಿ ಬೈಸಿಗಳದು ಅಂದ್ರೆ ಭಾಳ ಇಷ್ಟ. ಅವುನು ನನ್ನನ್ನ ಏಕವಚನದಲ್ಲಿ ಬೈತಿದ್ದಂಗೆ ಬೇರೆ ಯಾರ್‍ನಾದ್ರು ಬೋದಿದ್ದು ನನಿಗೊತ್ತಿಲ್ಲ. ಒಂಥರ ಒಡಹುಟ್ಟಿದ ಭಾವ ನಮ್ಮದು. ಅನ್ನಕಂಡ್ರೂ ಒಡಹುಟ್ಟಿದೋರು ಯೆಲ್ಲಿ ಚನ್ನಾಗಿತರೆ? ದಾಯಾದಿ ಕಲಹ ನಮ್ಮ ರಕ್ತದಲ್ಲೇ, ಮಹಾಭಾರತದ ಕಾಲದಿಂದ್ಲೂ ಬಂದದೆ. ಆದ್ರೆ ರಾಮಣ್ಣನ ನೋಡಬೇಕು ಮಾತಾಡಿಸಬೇಕು ಅಂತ ನನಿಗನ್ನಿಸಿದೇಟಿಗೆ ಹೋಗಿಬುಡತಿದ್ದೆ. ಇನ್ನೊಂದು ವಿಷಯ, ಅವುನ್ಯಾವತ್ತು ನನ್ನ ಕರದೋನಲ್ಲ. ಫೋನು ಮಾಡಿದವನಲ್ಲ, ಕಾಗದ ಹಾಕಿದೋನಲ್ಲ. ನೋಡಿದ ಕೂಡ್ಳೆ “ಬಾಲ” ಅಂತಿದ್ದ. ಅದರಲ್ಲಿ ಯಲ್ಲ ಭಾವನೂ ತುಂಬಿತ್ತು. ಯಾರ ತೀಟಿಗೆ ಬಂದನೋ ಅನ್ನಂಗೂ ಇರ್ತಿದ್ದ. ಅಪರೂಪಕ್ಕೋದ್ರೆ “ಈಟು ದಿನ ಎಲ್ಲೋಗಿದ್ಲ” ಅನ್ನನು. ಇಂತ ರಾಮಣ್ಣ ಮಂಡ್ಯಕ್ಕೆ ಬಂದು ಸೆಟ್ಳಾದ. ಅದುವರಿಗೂ ಹೆಚ್ಚುಕಮ್ಮಿ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡಿದ್ದ; ಆದ್ರೀಗ ಜಿಲ್ಲಾಕೇಂದ್ರಕ್ಕೆ ಬಂದ. ಸಾಮಾನ್ಯವಾಗಿ ಜಿಲ್ಲಾ ಕೇಂದ್ರಕ್ಕೆ ಬಂದ ಯಾವುದೇ ಅಧಿಕಾರಿ ಬದ್ಲಾಯ್ತನೆ. ಅದು ಮನೋವ್ಯಾಪಾರದಲ್ಲಿ ನಡೆಯೋ ಬದಲಾವಣೆಯಾದ್ರಿಂದ ಒಟ್ಟು ನಡವಳಿಕೆನೆ ಬದಲಾಯ್ತದೆ. ಆದ್ರೆ ನಮ್ಮ ರಾಮಣ್ಣ ಮಂಡ್ಯ ಜಿಲ್ಲೆ ಉಪ ಆರೊಗ್ಯಾಧಿಕಾರಿಯಾದ್ರು ಏನೂ ಬದಲಾಗಿರಲಿಲ್ಲ. ಅವುನು ಯಾವತ್ತು ಡಾಕ್ಟರ ಸವಲತ್ತಿಗಾಗಿ ಹಾತೊರದೋನಲ್ಲ. ಆಸ್ಪತ್ರೆಗೆ ಬರೊ ರೋಗಿಗಳಿಗೆ ಬೇಕಾದಂತ ಸವಲತ್ತಿರಬೇಕು ಅಂತ ಹೋರಾಡಿದೊನು. ಅವುನಿಗೆ ಯಲ್ಲಾ ಅನುಭವನೂ ಹರದನಹಳ್ಳಿ ತಂದುಕೊಟ್ಟಿತ್ತು. ಯಾವುದಾದ್ರು ಕೊರತೆಗಳು ತಪ್ಪುಗಳು ಕಂಡ್ರೆ ಕೂಗಾಡದಕಿಂತ, ಸದ್ದಿಲ್ಲದೆ ಅದನ್ನ ಸರಿಮಾಡತಿದ್ದ. ಇದು ಅವುನು ಗಾಂಧೀಜಿ ಓದಿ ಕಂಡಿದ್ರಿಂದ ಬಂದ ಗುಣ ಅನ್ನಕಂಡಿದ್ದಿನಿ. ಅವನ ಓದು ಕೂಡ ವಿಸ್ತಾರವಾಗೆ ಇತ್ತು. ಅವುನು ಕುವೆಂಪುನ ಓದಿಕೊಂಡು ತನ್ನ ಬದುಕಿಗೂ ಅಳವಡಿಸಿಕೊಂಡಿದ್ದ. ಒಂದು ಸತಿ ಯಾರೋ ಗೆಳೆಯರ ಜೊತೆ ಹೋಗಿ ಕುವೆಂಪು ನೋಡಿಬಂದು ವಾರಗಟ್ಲೆ ಮಾತಾಡಿದ್ದ. “ನೀನು ಹೋಗ್ಲ ನೋಡಿಕಂಡು ಬಾ” ಅಂದ. “ಅರೆ ಕುವೆಂಪು ನೋಡಕೆ ಹೋಗಬೇಕಾದ್ರೆ ಏನಾರ ಒಂದೀಟು ಒದಿಕಂಡೋಗಿ, ಪ್ರಶ್ನೆಕೇಳಿ ಮಾತಾಡಿಸಂಗಿರಬೇಕು. ಹಿಮಾಲಯದೆದ್ರಿಗೆ ನಿಂತಗಂಡು ಏನು ಮಾತಾಡೀ” ಅಂದಿದ್ದೆ. ಯಾರ ಜ್ವತೆಲಾರ ಹೋಗಿ ನೋಡಿಕೊಂಡು ಬಾಲ ಅಂದನೆ ವರತೂ, ನಾನು ಕರಕಂಡೋಯ್ತಿನಿ ಅನ್ಲಿಲ್ಲ. ಅವುನು ಬರಹಗಾರ ಆದ್ರಿಂದ ದೊಡ್ಡ ದೊಡ್ಡ ಲೇಖಕರ ಭೇಟಿ ಮಾಡನು. ತಾನು ಬರದ ಕತೆಗಳ ದೆಸಿಂದ ಮೆಟ್ಟಿಗೆ ಮಾತುಬರುವು. ನಾವೇನಂತ ಹೋಗಿ ಭೇಟಿಯಾಗನ? ಬೆಸಗರಹಳ್ಳಿ ರಾಮಣ್ಣನಂತ ಗೆಳೆಯ ನಮ್ಮ ಜೊತೆ ಇರದೆ ನಮ್ಮ ಪುಣ್ಯ ಅನ್ನಂಗಿದ್ದೊ. ಅವುನು ನಮ್ಯಲ್ಲಾರಿಗೂ ಅಣ್ಣನಂಗಿದ್ದ.

ನಾನು ಬೆಂಗಳೂರಲ್ಲಿ ಕಾರ್ಪೊರೇಷನ್ ಹೆಲ್ತಾಫೀಸರ್ ಆಗಿದ್ದೆ. ಜನಾಂಗದ ಲೀಡ್ರುಗಳ ಮತ್ತೆ ಆಧಿಕಾರಿಗಳ ಪರಿಚಯ ಚನ್ನಾಗಿದ್ದರಿಂದ ಒಕ್ಕಲಿಗ ಸಂಘದ ಚುನಾವಣೆಗೆ ಸ್ಪರ್ಧೆ ಮಾಡೋ ಯೋಚನೆ ಬಂತು. ಇಂತ ಅಲೋಚನೆಗಳು ಬೆನ್ನತ್ತದು ಜಾಸ್ತಿ. ಆಗಿನ ಲೆಕ್ಕಾಚಾರಗಳೇ ಯತ್ತ ಮುಂದಾಗಿ ನೋಡಿದ್ರು ನಮ್ಮ ಗೆಲವನ್ನೋ ತೋರತವೆ. ಆದ್ರಿಂದ ಜನಾಂಗದಲ್ಲಿ ಹೆಸರು ಮಾಡಿದ್ದ ವೈದ್ಯ ರಾಮಣ್ಣನ ಮಾತಾಡಿಸಿ ಅವುನ ಬೆಂಬಲನೂ ತಗಂಡ್ರೆ ಯಂಗೆ ಅನ್ನಸ್ತು. ಆ ಕೂಡ್ಳೆ ಬೆಂಗಳೂರಿಂದ ಮಂಡ್ಯಕ್ಕೆ ಬಂದೆ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-14; “ಕಾವೇರಿಗೆ ಕ್ಯರೆ ಕಟ್ಟಿ ರೈತರ ಗದ್ದಿಗೆ ನೀರು ಹರಿಯಂಗೆ ಮಾಡಿದ್ದ. ರೇಷ್ಮೆಹುಳ ತಂದುಕೊಟ್ಟಿದ್ದ”

ರಾಮಣ್ಣ ನಡುಮನೇಲಿ ಬರಿ ಚೆಡ್ಡಿಲಿ ಆಂಜನೇಯನಂಗೆ ಕುಂತಿದ್ದ. ಸುತ್ತಮುತ್ತ ಪುಸ್ತಕ ಬಿದ್ದಿದ್ದೊ. ಮೈಯಲ್ಲ ರೋಮ. ಒಂಥರ ಕಾಣಿಸ್ದ. ನನ್ನೋಡಿದೇಟಿಗೆ ಮಾಮೂಲಿಯಂಗೆ “ಬಾಲ” ಅಂದ. ಹೋಗಿ ಕುತಗಂಡು “ಯಂಗದಪ್ಪ ಮಂಡೇವುದಾಸುಪತ್ರೆ” ಅಂದೆ. “ಈಟು ದಿನ ಯಲ್ಲನೂ ಸರಿಮಾಡದೆ ಆಯ್ತು ಕಲ. ಮಂಡ್ಯದ್ದು ದೊಡ್ಡಾಸುಪತ್ರೆ ಕಲ. ನಾನು ವಬ್ನೆ ಇಲ್ಲಿ ಅನಸ್ತಿಸಿಯಾ ಡಾಕ್ಟರು ಕಲ. ಭಾಳ ಆಪರೇಷನ್ ಬತ್ತವೆ. ಮದ್ಲಿನಂಗೆ ಬಿಡುವೇ ಯಿಲ್ಲ. ಜ್ಯೂನಿಯರ್‌ಗಳು ನಮ್ಮನ್ನ ಗಮನಿಸೋದ್ರಿಂದ ನಾವು ಜವಾಬ್ದಾರಿಯಾಗಿ ನ್ಯಡಕೊಬೇಕು” ಅಂತ ಗಂಭೀರವಾಗಿ ಮಾತಾಡಿದ. ರಾಮಣ್ಣ ಓದುವಾಗ ಈತರ ಜವಾಬ್ದಾರಿಯಿಂದ ಮಾತಾಡಿದ್ದ ನೋಡಿರಲಿಲ್ಲ. ಒಂಥರಾ ಉಡಾಫೆಲಿದ್ದ. ಆದ್ರೀಗ ಜವಾಬ್ದಾರಿವಂತನಾಗಿದ್ದ. ಅವನ ವೈಯಕ್ತಿಕ ಜವಾಬ್ದಾರಿನ್ಯಲ್ಲ ಬುಟ್ಟು ಬರೀ ಆಸುಪತ್ರೆ ರೋಗಿಗಳು ಸಹೋದ್ಯೋಗಿಗಳು ಅನ್ನಂಗಾಗಿದ್ದ. ಅಂತ ಟೈಮಲ್ಲಿ ನಾನು ಒಕ್ಕಲಿಗರ ಚುನಾವಣೆಗೆ ನಿಲ್ಲೊ ವಿಷಯ ತಗಿಯದು ಭಾಳ ಕಷ್ಟವಾಗಿ, ಕಡಿಗೆ, ಒಕ್ಕಲಿಗರ ಸಂಘದ ಚುನಾವಣೆಗೆ ನಿಲ್ತಾಯಿದ್ದಿನಿ ಅಂದೆ. “ನೀನ್ಯಾಕೆ ನಿಲ್ತಿಲಾ? ಸಂಘದ ಚುನಾವಣೆಲಿ ಗೆದ್ದು ಕಾಸು ಗೀಸು ಮಾಡೋರು ನಿಂತಗತ್ತರೆ ಬುಡ್ಳ” ಅಂದ. ನನಿಗೇನು ಕಾಸು ಮಾಡಬೇಕು ಅನ್ನದಿಲ್ಲ. ಅದರಗತ್ಯನೂ ಇಲ್ಲ. ಸಂಘದ ಸದಸ್ಯಾದೋನು ಯಂಗಿರಬೇಕು? ಅವುನ ಜವಾಬ್ದಾರಿಗಳೇನು? ಅನ್ನದ ತೋರಬೇಕು ಅಂತ ಇದ್ದಿನಿ” ಅಂದೆ.

“ಯಲ್ಲ ಅಂಗನ್ನಕಂಡು ಹೋದೋರೆಯ. ಇವತ್ತೇನಾಗ್ಯವುರ್ಲ” ಅಂದ.

“ಅವುರ ವಿಷಯ ಬುಡು. ಅವುರ ಜೊತಿಗೆ ನನ್ಯಾಕೆ ಸೇರಸ್ತಿ” ಅಂದೆ.

ನನಿಗೊಂಚೂರು ಬೇಜಾರಾಗಿತ್ತು. ಒಕ್ಕಲಿಗರ ಸಂಘದ ಚುನಾವಣೆಗೆ ನಿಲ್ಲೋರ ಜ್ವತಿಗೆ ನನ್ನನ್ನೂ ಸೇರಿಸಿ ರಾಮಣ್ಣ ಮಾತಾಡಿದ್ದ. ಅದಕ್ಕೊಂದು ಕಾರಣ ಅಂದ್ರೆ ಅವುನು ಕಾಲೇಜಿನ ದಿನಗಳಿಂದ ಚುನಾವಣೆ ರಾಜಕಾರಣಕ್ಕೆ ಆಸಕ್ತಿ ತೋರಿದೋನಲ್ಲ. ಚುನಾವಣೆಲಿ ಗೆದ್ದೋರ ಜೊತೆ ಗುರುತಿಸಿಕೊಂಡೋನಲ್ಲ. ನಮ್ಮಣ್ಣಾರು ರಾಮಕೃಷ್ಣ ಹೆಗೆಡೆ ಸರಕಾರದಲ್ಲಿ ಮಂತ್ರಿಯಾದಾಗ ಅವುರತ್ರಕೆ ಹೋದೋನಲ್ಲ. ಅವುರೆ ಒಂದು ಸತಿಯ “ಯಾಕೆ ಡಾಕ್ಟರೆ ನಮ್ಮ ಕಂಡ್ರೆ ಬೇಜಾರೆ” ಅಂದಾಗ, “ಇಲ್ಲ ಸಾರ್ ಪವರಲ್ಲಿ ಇದ್ದೋರತ್ರ ನಮ್ಮಂತವರು ಸುಳಿಬಾರ್ದು” ಅಂದಿದ್ದ. ಅಂಗಾಗಿ ಅವುನ ಜೊತೆಯಿದ್ದ ಗೆಳೆಯರೂ ಚುನಾವಣೆ ರಾಜಕಾರಣಕ್ಕೆ ಹೋಗಬಾರ್ದು ಅಂತ ಭಾವಿಸಿದ್ನೇನೊ. ನಾನು ಒಕ್ಕಲಿಗರ ಸಂಘದ ಚುನಾವಣೆಗೆ ನಿಲ್ಲದು ಅವುನಿಗಿಷ್ಟ ಇರಲಿಲ್ಲ. ಅದಕ್ಕಿಂತ ಅವುನಲ್ಲಿ ಸುಳದಿರೊ ಅನುಮಾನಕ್ಕೆ ಕಾರಣ ವರ್ಗಾವಣೆ ಖರ್ಚಿಗೆ ಗೆಳೆಯರು ರಾಮಣ್ಣನತ್ರ ಯರಡು ಸಾವುರ ಈಸಿ ನನಿಗೆ ಕೊಟ್ರಲ್ಲ; ಅದೇನಾರ ಇವುನ ಮನಸಲ್ಲಿ ನಿಂತುಬುಟ್ಟದ ಅನ್ನಸ್ತು. ಬಹುಶಃ ಅದೇ ಇರಬಹುದು. ಅವತ್ತು ನಾನು ಯರಡು ಸಾವಿರ ಈಸಗಳದೇಯಿದ್ರೆ ಇವತ್ತಿವುನು ಇಂತ ಮಾತಾಡತಿರಲಿಲ್ಲ ಅನ್ನಸ್ತು. ಸರಿ, ರಾಮಣ್ಣ ಹಿಂಗಂದನಲ್ಲ ಅಂತ ನಾನು ಹಿಂದೆ ಸರಕಳಕ್ಕೋಗಲಿಲ್ಲ. ನಿಂತೆ, ಸೋತೆ. ಒಕ್ಕಲಿಗರ ಸಂಘನೂ ಬದಲಾಗಿ ಅಲ್ಲಿ ಚುನಾವಣೆಗೆ ನಿಲ್ಲೋರು ಬದ್ಲಾಗಿರದು ನನಿಗ್ಗೊತ್ತಾಗಲಿಲ್ಲ. ಓಟಾಕೊ ಜನಗಳಿಗೆ ನಾವು ಒಂಥರ ಗೊಡ್ಡಸಗಳಿಂದ್ದಂಗೆ. ಯಾತಕೂ ಪ್ರಯೋಜನ ಇಲ್ದೋರು. ಅಭ್ಯರ್ಥಿ ಕೆಟ್ಟಂಗೂ ಅವುನ ಸುತ್ತ ಜನ ಜಾಸ್ತಿ. ಕುಡಿಸಿ, ತಿನ್ನಿಸಿ ಕೈಗೆ ಕಾಸು ಕೊಡದ ನಮ್ಮೊಂಥೋರ ಗೆಲ್ಲಿಸ್ಯರೇ, “ನಿನಿಗ್ಯಾಕ್ಲ ಚುನಾವಣೆ” ಅಂದ ರಾಮಣ್ಣನ ಮಾತು ನಿಜಾಯ್ತು. ಇದೊಂದು ವಿಷಯದಲ್ಲಿ ನನ್ನ ಅವುನ ಭಿನ್ನಾಭಿಪ್ರಾಯದ ಮನಸು ಹಂಗೇ ಮುಂದುವರಿತು.

ರಾಮಣ್ಣ ಮಂಡ್ಯಕ್ಕೆ ಬಂದ ಮ್ಯಾಲೆ ಮೊದಲಿನ ಅಂದಾದುಂದಿ ಖರ್ಚಿಗೆ ಕಡಿವಾಣ ಬಿದ್ದಿತು. ರವಿಕಾಂತ, ಅಣ್ಣಾದೊರೆ, ಪೂರ್ಣಿಮ ಬೆಳದಿದ್ರು. ಅವರ ಪೀಜು, ಪುಸ್ತಕ ಇತ್ಯಾದಿ ಖರ್ಚು ಎದುರಾಗಿದ್ದೊ. ದುಡ್ಡು ಮುಖ್ಯ ಆಗಿತ್ತು. ಆದ್ರಿಂದ ಕಷ್ಟಪಡ್ತಾಯಿದ್ದ. ಮೊದಲ ಬಾರಿಗೆ ಅವನಿಗೆ ದುಡ್ಡಿನ ಸಮಸ್ಯೆ ಎದುರಾಯ್ತು. ಈ ನಡುವೆ ಮೈಸೂರು ಬೆಂಗಳೂರಿಗೆ ಓಡಾಡೊ ಬಂಡಾಯ ಸಾಹಿತಿಗಳು ಮಂಡ್ಯದಲ್ಲಿ ಇಳುದು ರಾಮಣ್ಣನ್ನ ಮಾತಾಡಿಸಿ ಹೋಯ್ತಿದ್ರು. ಇವುನು ಬಂಡಾಯದೊನೆ ಅಲವೆ. ಅವುರಿಗ್ಯಲ್ಲ ಅಣ್ಣಾಗಿದ್ದ. ಆದ್ರು ತನ್ನ ಹಣಕಾಸಿನ ತೊಂದ್ರೆನ ಯಾವತ್ತೂ ತೋರಿಸಿಕೊಂಡೋನಲ್ಲ.

ಅವುನು ಜಿಲ್ಲಾ ಉಪ ಆರೋಗ್ಯಾಧಿಕಾರಿಯಾಗಿದ್ರೂ ಸಿಬ್ಬಂದಿಗಳ ಜೊತೆ ಸಲುಗೆಯಿಂದ್ಲೇ ಇದ್ದ. ಸಮಾಜವಾದಿ ಅಲವೆ. ಸ್ಥಾನ-ಮಾನ ಅವನಿಗೆ ಮುಖ್ಯವಾಗಲೇ ಯಿಲ್ಲ. ಯಲ್ಲ ಅಧಿಕಾರಿಗಳ ಜೊತೆಲೂ ಬೆರಿಯೋನು. ಅವುನ ಇನ್ನೊಂದು ದೊಡ್ಡಗುಣ ಅಂದ್ರೆ, ಅವುನಷ್ಟೇ ಕತೆಗಾರ ಆಗ್ದೆ, ಬರಿಯೋ ಶಕ್ತಿಯಿದ್ದ ಯಲ್ಲರ್ನು ಬರಿಯಕ್ಕೆ ಪುಸಲಾಯಿಸೋನು. ಡಾ. ರಜಿನಿ ಲೇಖಕಿಯಾದದ್ದು ರಾಮಣ್ಣನಿಂದ್ಲೆ ಅನ್ನಬಹುದು. ಅವುನ ಕೈಕೆಳಗಿದ್ದ ವೈದ್ಯರು ಏನಾದ್ರು ವಳ್ಳೆ ಡಾಕ್ಟರಾಗಿದ್ರೆ ಅದಕೆ ರಾಮಣ್ಣನೇ ಕಾರಣ. ಅವುರೇನಾದ್ರು ಪುಸ್ತಕದ ಪ್ರೇಮಿಗಳಾಗಿದ್ರೆ ಅಥವ ಲೇಖಕರಾಗಿದ್ರೆ ಅದಕ್ಕೆ ರಾಮಣ್ಣನೇ ಪ್ರೇರಣೆ. ಕುವೆಂಪು ಕಾಲದಲ್ಲಿ ಭಾಳ ಜನ ಲೇಖಕರು ಬಂದ್ರು. ಕೆಲವರಂತೂ ಕುವೆಂಪು ತರನೇ ಕವುನ ಬರಿಯೋರು. ಕುವೆಂಪು ಯಾರಿಗೂ ಬರಿಯೋದಕ್ಕೆ ಹೇಳಿದೋರಲ್ಲ. ಆದ್ರೆ ಅವರ ಬರವಣಿಗೆ, ಬದುಕೆ ಹಲವಾರು ಜನನ ತಯಾರು ಮಾಡ್ತು. ನಮ್ಮ ರಾಮಣ್ಣನೂ ಅಂಗೆ. ಸುಮಾರು ಜನನ ಬರಿಯಂಗೆ ಮಾಡಿದ. ವಳ್ಳೆ ವೈದ್ಯರಾಗಂಗೂ ಮಾಡಿದ.

ಮಂಡ್ಯಕ್ಕೆ ಬಂದ ಮ್ಯಾಲೆ ಅವುನು ಕುವೆಂಪು ಮಂತ್ರ ಮಾಂಗಲ್ಯದಂಗೆ ರವಿಕಾಂತೇಗೌಡನ ಮದುವೆ ಮಾಡಿದ. ಆದ್ರೆ ನನ್ನನ್ನ ಮದುವಿಗೆ ಕರೆಯದ ಮರತ. ಇದೇನು ಮರವೊ ಮನಸ್ತಾಪವೊ ಅಂತ ನನಿಗ್ಗೊತ್ತಾಗದೆ ವದ್ದಾಡಿದೆ. ಸಾಮಾನ್ಯವಾಗಿ ಮದುವೆ ಟೇಮಲ್ಲಿ ನಮ್ಮ ಆಪ್ತರನ್ನೇ ಮರತಬುಡ್ತಿವಿ. ಅಂಗೇನೂ ಆಗಿರಬೌದು ಅನ್ನಕಂಡೆ ಕೇಳನ ಅಂದ್ರೆ, “ಕರಿಬೇಕ್ಲ ನಿನ್ನ ವೀಳ್ಯಕೊಟ್ಟು” ಅಂದು ಬುಟ್ರೆ. ಅದಕ್ಕಿಂತ ಕುವೆಂಪುನೆ ಮಂತ್ರ ಮಾಂಗಲ್ಯ ಮದುವೆ ನ್ಯಡಿಯದೇ ಆದ್ರೆ ಇಷ್ಟೇ ಜನಿರಬೇಕು ಅಂತ ಹೇಳ್ಯವ್ರೆ; ಅಷ್ಟು ಜನದ ಮ್ಯಾಲೆ ರಾಮಣ್ಣ ನನ್ನ ಹೊರಗಿಟ್ಟಿರಬಹುದು ಅನ್ನಕಂಡು ಸುಮ್ಮನಾದೆ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು…

ರಾಮಣ್ಣ ಕತೆಗಾರನಾಗಿ ಹೆಸರು ಮಾಡಿದ್ದು, ಅವುನ್ನ ಶಿಫಾರಸ್ಸು ಮಾಡುವಾಗ ಆ ವಿಷಯನ್ಯಲ್ಲ ಅರಸುಗೆ ಲೆಟರ್ ಬರೆದು ನಮೂದಿಸಿದ್ದ ಕಾರಣಕ್ಕೆ ಅವುನಿಗೊಂದು ಸೈಟ್ ಕೊಡೋ ವಿಷಯದಲ್ಲಿ ಪತ್ರ ಬಂದಿತ್ತು. ರಾಮಣ್ಣ ಅದನ್ನ ತಗಳಕ್ಕೆ ಮನಸ್ಸು ಮಾಡಲಿಲ್ಲ. ರಾಜಕಾರಣದಲ್ಲಿ ಅವುನು ಮೆಚ್ಚಿದ್ದು ಶಾಂತವೇರಿ ಗೋಪಾಲಗೌಡರನ್ನ. ಅವರ ವಿಷಯ ಆಗಾಗ ಹೇಳೋನು. ಅವರ ಬಗ್ಗೆ ಒಂದು ಲೇಖನನೂ ಬರೆದಿದ್ದ. ಅವುರಿಗೆ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ರು ಒಂದು ಸೈಟ್ ಮಂಜೂರು ಮಾಡಿದ್ರಂತೆ. ಗೋಪಾಲಗೌಡ್ರು, ’ಆ ಸೈಟ್ ಅಲಾಟ್ ಅರ್ಜಿ ಮೇಲೆ ತಾವು ನನಿಗೆ ಸೈಟ್ ಅಲಾಟ್ ಮಾಡಿರೋದು ಸಂತೋಷದ ವಿಷಯ, ಆದ್ರೆ ಕರ್ನಾಟಕದಲ್ಲಿರೋ ವಸತಿಹೀನರಿಗೆಲ್ಲಾ ಹಂಚಿದ ಮೇಲೆ ನನಿಗೆ ಅಲಾಟ್ ಮಾಡಿ’ ಅಂತ ಬರಿದು ಕಳಿಸಿದ್ರಂತೆ. ಇದ ಮೆಚ್ಚಿಗಂಡು ಮಾತಾಡತಿದ್ದ ರಾಮಣ್ಣ ಅರಸುರಿಂದ ಸೈಟ್ ಪಡಕಳದು ನಿಜವೆ. ಸುಮ್ಮನಾದ ಅತ್ತಗೆ. ಆದ್ರೆ ರಾಮಣ್ಣನೆಂಡ್ತಿ ರಾಜಮ್ಮ ವಡವೆ ಮಾರಿ ಊರಿನ ಜಮೀನು ಮಾರಿದ ದುಡ್ಡಲ್ಲಿ ಯಂಗೋ ಮಂಡ್ಯದಲ್ಲೊಂದು ಮನೆ ತಗಂಡಾಗ, ಅದಕೆ ರಾಮಣ್ಣ ’ನೆಲದೊಡಲು’ ಅಂತ ಹೆಸರು ಮಡಗಿದ! ಅಂತೊ ಅವುನಿಗೊಂದು ಸೂರಾಯ್ತು. ಒಂದು ಮನೆಕಟ್ಟೊ ಮನಸು ಅವುನಿಗಿರಲೇಯಿಲ್ಲ. ನಾಕು ಜನಕೆ ಬೇಕಾಗಬೇಕು ಅನ್ನದೇ ಅವುನ ಮನಸಲ್ಲಿದ್ದುದ್ದು.

ಅವುನು ಮಂಡ್ಯದಲ್ಲೇ ಇದ್ದಾಗ ಚದುರಂಗದ ಅಧ್ಯಕ್ಷತೆಲಿ ಸಾಹಿತ್ಯ ಸಮ್ಮೇಳನ ನ್ಯಡಿತು. ಅವುನಿಗೆ ಚದುರಂಗರು ಅಂದ್ರೆ ಭಾಳ ಇಷ್ಟ. ಅವುರು ಅಂತ ದೊಡ್ಡ ವ್ಯಕ್ತಿನೆ. ಅವರ ದೊಡ್ಡತನಕ್ಕೆ, ಬರವಣಿಗೆಗೆ ಮಾರು ಹೋಗಿದ್ದ. ಕರ್ನಾಟಕದ ಮೂಲೆಮೂಲೆಯಿಂದ ಭಾರಿ ಜನ ಬಂದಿದ್ರು.

“ನೀನು ಹೋಗಿದ್ದ?”

“ನಾನು ನಮ್ಮೂರಿಂದ ರಂಗದ ಕುಣತ ತಗೊಂಡೋಗಿದ್ದೆ ಕಣಣ್ಣ. ಒಂಚೂರು ತಡಾದಕ್ಕೆ ಮಾನೇಗೌಡ್ರು ಜೋರು ಮಾಡಿದ್ರು. ನಾನು ಜೋರು ಮಾಡಿದೆ. ಯಾಕಂದ್ರೆ ರಾತ್ರ್ಯಲ್ಲ ತಾಲೀಮು ಮಾಡಿ ಬೆಳಗಿನ ಜಾವಕೆ ಎದ್ದು ಬರೋವಟತ್ಲೆ ಮ್ಯರವಣಿಗೆ ಸುರುವಾಗಿತ್ತು. ಅದ್ಕೆ ತಡಾಯ್ತು ನಾನೇನು ಮಾಡ್ಳಪ್ಪ. ಅದ್ಕೆ ನಾನು ಜೋರು ಮಾಡಿದ್ದೆ. ಆ ಸಮ್ಮೇಳನದ ಒಂದು ವಿಶೇಷ ಅಂದ್ರೆ ಯಾವ ಸಾಹಿತ್ಯ ಸಮ್ಮೇಳನಕ್ಕೂ ಹೋಗದೆಯಿದ್ದ ತೇಜಸ್ವಿ ಬಂದು ನಿಂತಿದ್ರು. ಇಡೀ ದಿನದ ಗೋಷ್ಠಿಗಳನ್ನ ಕೇಳಿ ಕಡಿಗೆ ನಿರ್ಣಯ ಓದಿದಾಗ, ಅಲ್ರೀ ಕನ್ನಡಕ್ಕೆ ಏನೇನಾಗಬೇಕು ಅಂತ ಒಂದು ಮುವತ್ತು ವರುಷದ ಹಿಂದೆ ಓದಿದ್ದ ನಿರ್ಣಯವನ್ನೇ ಇನ್ನೂ ಓತ್ತಾಯಿದ್ದಿರಿ ಅಂದ್ರೇ, ಅವು ಜಾರಿಯಾಗಿಲ್ಲ ಅಂತ ತಾನೆ. ಇದವುಮಾನ ಅಲವೇನ್ರೀ? ಅಂದುಬುಟ್ಟು ಹೋಗಿದ್ರು” ಕಣಣ್ಣ.

ಆ ಸಮ್ಮೇಳನದಲ್ಲಿ ರಾಮಣ್ಣಂದೂ ಒಂದು ಗೋಷ್ಠಿಯಿತ್ತು. ಚದುರಂಗದ ಅಧ್ಯಕ್ಷತೆಲಿ ಮಾತಾಡಕ್ಕೆ ಅವುನಿಗೆ ಭಾಳ ಖುಷಿಯಾಗಿತ್ತು. ಅದು ಮುಗದೇಟಿಗೆ ಓಡಿಬಂದು ನಮಿಗ್ಯಲ್ಲ ಪಾರ್ಟಿಕೊಡೋನಿದ್ದ; ಅವುನ ಫ್ರೆಂಡ್ಸಲ್ದೆ ಅದಾಗತಾನೇ ಸಿನಿಮಾ ನಿರ್ದೇಶಕ ಆಗಿದ್ದ ನಮ್ಮ ನಾಗ್ತಳ್ಳಿ ಚಂದ್ರಶೇಖರನೂ ಬಂದಿದ್ದ. ಅದೊಂದು ವಳ್ಳೆ ಪಾರ್ಟಿ. ನಮ್ಮೊಂಥೊರಿಗೆ ಪಾರ್ಟಿಗಳು ಚನ್ನಾಗದ್ಯಾವಾಗ ಅಂದ್ರೆ, ಸಾಹಿತ್ಯ ಬುಟ್ಟು ಅವುರಿವುರ ಸುದ್ದಿ ಮಾತಾಡಿದಾಗ. ಅವತ್ತು ಅಂಗೆ ಆಯ್ತು. ರಾಜಕಾರಣ, ರೈತಚಳವಳಿ ತಗಂಡು ಮಾತಾಡಿದ್ರು. ನಮ್ಮ ಯಲ್ಲ ಅವುತಾರನೂ ಮುಗುದು ಒಂದು ನಿಲುಗಡೆಗೆ ಬಂದ ಕಾಲ ಅದು. ಮನಸು ಮಾಗಿದ್ದೊ. ರಾಮಣ್ಣನ ಕಥಾ ಕಣಜ ಖಾಲಿಯಾಗಿತ್ತು.

ರಾಮಣ್ಣನಿಗೆ ಮೂರು ಮಕ್ಕಳು. ರವಿಕಾಂತನೆ ಹಿರಿಯೋನು. ಬಹಳ ಉತ್ಸಾಹಿ ತರುಣ. ಅವುನಾಗ್ಲೆ ಮುಂಚೂಣಿಗೆ ಬಂದಿದ್ದ. ಒಂದು ಸತಿ ಲಂಕೇಶ್ ಮಂಡ್ಯಕ್ಕೆ ಸಭೆ ಮಾಡಕ್ಕೆ ಬಂದಾಗ ಅವುರ್ನೆ ಹೆದರಿಸಿದ್ದನಂತೆ! ಅವನು ನನಿಗೆ ನಾಗಮಂಗಲದಲ್ಲೇ ಗೊತ್ತಿದ್ದ. ಆಗಿನ್ನು ಸಣ್ಣುಡುಗ. ಮಂಡ್ಯಕ್ಕೆ ಬಂದ ಮ್ಯಾಲೆ ಇಂಜಿನಿಯರ್ ಕಾಲೇಜ್ ಸೇರಿಕಂಡ. ಅಲ್ಲಿ ಹೆಚ್.ಎಲ್. ಕೇಶವಮೂರ್ತಿ ಇದ್ರು. ಅವುರು ಬರಿ ಪಾಠಹೇಳೊ ಮೇಷ್ಟ್ರಷ್ಟೇ ಅಲ್ಲ. ಯಲ್ಲ ಚಳವಳಿಲೂ ಇದ್ರು. ಕಾವೇರಿ ಚಳವಳಿ, ಭಾಷಾ ಚಳವಳಿ, ರೈತ ಚಳವಳಿಲೂ ಇದ್ರು. ಅವುರ ಜೊತೆ ಇದ್ದ ಸ್ಟೂಡೆಂಟ್ಸು ಅಂಗೆ ಇದ್ರು. ಆಗಿನ ಹುಡುಗ್ರು ಓದಿನ ಜೊತಿಗೆ ಚಳವಳಿಲೂ ಇರತಿದ್ರು. ನಮ್ಮ ಹೆಚ್.ಎಲ್.ಕೆ ಬ್ರದರ್ ಸೋಮರಾಜು ಮಗ ಪೂರ್ಣಚಂದ್ರ ಬಾಬು ಇವುರ್‍ಯಲ್ಲ ರವಿ ಗೆಳೆಯರಾಗಿದ್ರು. ಸೋಮರಾಜು ಮಾದೇಗೌಡ್ರು ಜೊತೆ ಯಣ್ಣೆ ಹೊಡೆಯೋರು. ನಾವ್ಯಲ್ಲ ಸಿಟಿ ಕ್ಲಬ್ಬಲ್ಲಿ ಸೇರತಿದ್ದೊ. ಸೋಮರಾಜು ಮನೆಗೆ ರವಿ ಬತ್ತಿದ್ದ. ಅವುನಾಗ್ಲೆ ಅಪ್ಪನ ಪ್ರತಿನಿಧಿಯಾಗಿ ಯಲ್ಲಕಡೆ ಕಾಣಿಸಿಗಳನು. ಆದ್ರೆ ಅಣ್ಣಾದೊರೆ ಪಟಾಲು ಬೇರೆ. ಅವುರೊಂದಿಷ್ಟು ವಿಲಾಸಿ ಹುಡುಗ್ರು ಸೇರಿಕಂಡು ದಾರಿತಪ್ಪಿದ್ದೊ. ರಾಮಣ್ಣನಿಗೆ ಅಣ್ಣಾದೊರೆ ಮೇಲೆ ಹೆಚ್ಚು ಪ್ರೀತಿ. ಯಾಕಂದ್ರೆ ತಾಯಿಗರಳಿನವನು ಅವುನು. ಯಾವ ಮಗ ದುರ್ಬಲವಾಗಿರತನೆ, ಬದುಕಕ್ಕೆ ಬರಲ್ವೊ ಅಂಥವನ ಪರ ಇರೋತರ ರಾಮಣ್ಣ ಅಣ್ಣಾದೊರೆ ಬಗ್ಗೆ ಭಾಳ ಕಾಳಜಿ ವಹಿಸಿದ್ದ. ಬಹಳ ಸುಂದರವಾದುಡುಗ ಅವುನು. ರಾಮಣ್ಣ ದ್ರಾವಿಡ ಚಳವಳಿ ಅಭಿಮಾನಿ. ಅದರಲ್ಲೂ ಅಣ್ಣಾದೊರೈ ಅಭಿಮಾನಿ. ಅವುರ ಮೇಗಲ ಅಭಿಮಾನದ ಕಾರಣಕ್ಕೆ ಮಗನಿಗೆ ಅಣ್ಣಾದೊರೆ ಅಂತ ಹೆಸರಿಡೋ ಮಟ್ಟಕೋಗಿದ್ದ. ಭಾವುಕ ಅವುನು. ಅವುನ ಮಕ್ಕಳ ಮೇಲೆ ಯಾವ ನಿರ್ಬಂಧನೂ ಹೇರಿದೋನಲ್ಲ. ಆದ್ರಿಂದ ಮಗ ಅವುನ ದಾರಿಲಿ ದೂರಹೋಗಿದ್ದ. ತಂದೆ ಮಗನ್ನ ಹುಡುಕಂಗಾಗಿತ್ತು. ಬಹುಶಃ ಇಲ್ಲಿಂದ್ಲೆ ರಾಮಣ್ಣನ ದುಃಖದ ದಿನಗಳು ಆರಂಭ ಆದೋ ಅನ್ಸುತ್ತೆ. ವೈದ್ಯನಾಗಿದ್ರು ಆರೋಗ್ಯ ಕೆಡಿಸಿಗಂಡಿದ್ದ. ನಾನು ಕೇಳಿದಂಗೆ ಅವನ ವೃತ್ತಿ ನಿಷ್ಟೆಲಿ ತನ್ನ ಆರೋಗ್ಯದ ಕಡೆ ಗಮನ ಹರಿಸಲಿಲ್ಲ. ಮೈ ಕೈ ನೋವು ತಡಿಯಕ್ಕಾಗದೆ ‘Brufen’ ಮಾತ್ರೆ ತಗತಿದ್ನಂತೆ. ಆ ಮಾತ್ರೆ ಜಾಸ್ತಿಯಾದ್ರೆ ಕಿಡ್ನಿಗೆ ತೊಂದ್ರೆಯಾಯ್ತದೆ. ಇದು ಗೊತ್ತಿದ್ರೂ ನುಂಗಿದ ಅಂದ್ರೆ ಏನ್ಹೇಳನ. ಅಂತೂ ಕಿಡ್ನಿ ಹೋಯ್ತು. ರಾಜಮ್ಮನೇ ತನ್ನ ಕಿಡ್ನಿ ಕೊಟ್ಟು ಗಂಡನ್ನ ಉಳಿಸಿಗಳಕ್ಕೆ ನೋಡಿದ್ರು. ಆಗಲಿಲ್ಲ. ಅವುಂದು ಸಾಯೋವಯಸಲ್ಲ. ಈಗಾಗ್ಲೆ ನೋಡು ಅವುನೋಗಿ ಇಪ್ಪತ್ತೇಳು ವರ್ಷದ ಮೇಲಾಯ್ತು. ಕಿಡ್ನಿ ಹೋಗದೆಯಿದ್ರೆ ಇನ್ನೂ ಇರನು. ಅವುನಂಥೊನು ಇರಬೇಕಾಗಿತ್ತು.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

ಮಗಳು ಪೂರ್ಣಿಮನ ಕಂಡ್ರೆ ’ನನ್ನವ್ವಾ’ ಅನ್ನನು. ಅವುಳಲ್ಲಿ ಅವುರವ್ವನ ಕಾಣ್ತಿದ್ದ. ಮಕ್ಕಳ ಮಾತಾಡಿಸದ್ರಲ್ಲಿ ಅವುನ ಪ್ರೀತಿನೆ ಬ್ಯಾರೆ, ಅಣ್ಣಾದೊರೆ ಸಾವು ಅವುನನ್ನ ದುಃಖದಲ್ಲಿ ಮುಳುಗಿಸಿತ್ತು. ಮೂಲತಃ ಅವುನು ದುಃಖ ತಡಿಯೋಕಾಗದ ಭಾವುಕ. ಅದಕ್ಕೆ ಮಗನ್ಯನಿಸಿಗಂಡು ಮಕ್ಕಳತ್ತಂಗೆ ಅಳನು. ಅವನ ಬದುಕು ಅವುನಿಷ್ಟ ಪಟ್ಟಂಗೆ ನ್ಯಡಿದು. ಈ ನಾಡೇ ಅವನನ್ನ ಪ್ರೀತಿಮಾಡ್ತು. ಕತೆ ಮೆಚ್ಚಗಂಡಿತ್ತು. ಅಂತವುನಿಗೆ ನಿರಂತರವಾದ ಪುತ್ರಶೋಕ ಎದುರಾಯ್ತು. ರಾಮಣ್ಣನ ಸಾವು ಒಂಥರ ದುಃಖದ ಕೊನೆ ಅನ್ನಂಗೆ ಕಾಣ್ತದೆ. ಯಾವ ಕಡಿಂದ ನೋಡಿದ್ರು ರಾಮಣ್ಣಂದು ಸಾರ್ಥಕವಾದ ಬದುಕು. ಅವುನಿಗೆ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾದ ಸ್ಥಾನ ಅದೆ. ಅಂಗೆ ಆ ಸಮಾಜಕ್ಕೆ ಯರಡು ವಳ್ಳೆ ಮಕ್ಕಳ ಕೊಟ್ಟೋಗ್ಯವುನೆ. ನಾನು ಪರಿಚಯವಾದಾಗಿಂದ ಕಡೆವರಿಗೂ ಅವುನ ಜೊತೆಯಿದ್ದೆ. ಅವುನೆಲ್ಲಿಗೆ ಟ್ರಾನ್ಸ್‌ಫರ್ರಾದ ಅಲ್ಲಿಗ್ಯಲ್ಲ ಹೋಗಿದ್ದಿನಿ. ಒಂಥರ ಜ್ವತೆಲುಟ್ಟಿರೋರ ಸಮಂಧ ನಮ್ಮದು. ಗೆಳೆಯನಾಗಿದ್ರು ಅಣ್ಣನಂಗೆ ಮಾತಾಡಸೋನು. ಅವುನ ಮಕ್ಕಳು ರಾಮಣ್ಣನ ನೆನಪಿಗಾಗಿ ಮಾಡೊ ಸಭೆ, ಕಥಾಸ್ಪರ್ಧೆ ಅವನ ವ್ಯಕ್ತಿತ್ವಕ್ಕೆ ಯೋಗ್ಯವಾದ ಕಾರ್ಯಕ್ರಮಗಳು.

ಕುಟುಂಬದ ಜವಾಬ್ದಾರಿ ಏನಂದ್ರೆ ಈ ಸಮಾಜಕ್ಕೆ ಒಳ್ಳೆ ವ್ಯಕ್ತಿಗಳನ್ನ ರೂಪಿಸಿಕೊಡೋದು. ರವಿಕಾಂತೇಗೌಡ, ಪೂರ್ಣಿಮನ್ನ ನೋಡಿದ್ರೆ ನನಿಗೆ ರಾಮಣ್ಣನ ಬಗ್ಗೆ ಮೆಚ್ಚುಗೆಯಾಗುತ್ತೆ. ಅದ್ರಲ್ಲೂ ರಾಜಮ್ಮನೋರು ರಾಮಣ್ಣನ್ನ ಉಳಿಸಿಗಳಕ್ಕೆ ಮಾಡಿದ ತ್ಯಾಗ ಅದಲ್ಲಾ, ಅದ ನೋಡಿದ್ರೆ ಪುರಾಣದಲ್ಲಿ ಗಂಡನ್ನ ಉಳಿಸಿಗಳಕ್ಕೆ ಸತಿಸಾವಿತ್ರಿ ಹೋರಾಡಿದಳಲ್ಲ ಆ ನೆನಪಾಯ್ತದೆ. ರಾಮಣ್ಣನ ಪ್ರತಿಷ್ಠಾನ ವರುಷಕ್ಕೊಂದು ಸತಿ ನಮ್ಮನ್ಯಲ್ಲ ಒಂದು ಕಡೆ ಸೇರಸುತ್ತಲ್ಲ. ಅದು ನಿಜವಾಗಿ ರಾಮಣ್ಣನಿಗೆ ಕೊಡೊ ಗೌರವ. ಆ ಕ್ಯಲಸವ ಎಷ್ಟು ಹೊಗಳಿದ್ರೂ ಸಾಲ್ದು. ಇನ್ನೇನಪ್ಪ ಇಷ್ಟ ಸಾಕು ಅನ್ಸುತ್ತೆ.

ರಾಮಣ್ಣನ ಕಡೆಮಾತು

ಇದಿಷ್ಟು ನಮ್ಮ ರಾಮಣ್ಣನ ಕತೆ. ನನಿಗೆ ತಿಳಿದದ್ದನ್ಯಲ್ಲ ಹೇಳಿದ್ದಿನಪ್ಪ. ಅವುನು ನನಿಗೆ ಕಂಡಿದ್ದಿಷ್ಟು. ಅವುನು ನನಿಗಷ್ಟೇ ಒಡನಾಡಿಯಾಗಿರಲಿಲ್ಲ, ಬೇಕಾದೊಟು ಜನಿದ್ರು. ಅವುನಿಗೆ ರಾಜಕಾರಣಿಗಳು, ಸಾಹಿತಿಗಳು, ಸರಕಾರಿ ಕರ್ಮಚಾರಿಗಳು, ಸಹೋದ್ಯೋಗಿಗಳು ಇವುರಲ್ದೆ ಸಿಕವೇರಿ ಜನಗಳ ಗೆಳೆತನವೂ ಇತ್ತವುನಿಗೆ. ಇವುರಿಗ್ಯಲ್ಲ ಹ್ಯಂಗೆ ಕಂಡನೋ ಏನೊ, ಮಾತ್ರ ಯಾರ ಬಾಯಲ್ಲಿ ಕೇಳಿದ್ರು ರಾಮಣ್ಣ ವಳ್ಳೆ ಮನ್ಸ ಅನ್ನೊ ಮಾತು ಬತ್ತದೆ. ಇದಕಿಂತ ಇನ್ನೇನು ಬೇಕು ಮನುಸುನ ಬದುಕಿನಲ್ಲಿ? ಇದ ಬರಕಂಡೋಗಿ ಅದೇನು ಮಾಡಿಕತ್ತಿಯೊ ಮಾಡಿಕೊ. ಹೇಳಿದ್ರೆ ಇನ್ನ ಇದೆ ಅವುಂದು. ನನ್ನ ಜ್ಞಾಪಕಕ್ಕೆ ಬಂದಿದ್ದ ಹೇಳಿದ್ದಿನಿ.

“ಥ್ಯಾಂಕ್ಸ್ ಕಣಣ್ಣ ರಾಮಣ್ಣನ ಬಗ್ಗೆ ಇಲ್ಲಿಗಂಟ ಯಾರೂ ಬರಿದೇಯಿರದ್ದನ್ನ ಹೇಳಿದ್ದಿ. ರಾಮಣ್ಣನ ಮುಖಾಂತ್ರ ನೀನ್ಯಾರು ಅನ್ನದು ಗೊತ್ತಾಯ್ತು. ಥ್ಯಾಂಕ್ಸ್” (ಮುಗಿಯಿತು)

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...