Homeಮುಖಪುಟಅಫ್ತಾಬ್-ಶ್ರದ್ಧಾ 2019ರಿಂದಲೂ ಜೊತೆಯಲ್ಲಿದ್ದರು; ಮುಂಬೈ ತೊರೆದು ದೆಹಲಿಗೆ ಹೋದರು: ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ...

ಅಫ್ತಾಬ್-ಶ್ರದ್ಧಾ 2019ರಿಂದಲೂ ಜೊತೆಯಲ್ಲಿದ್ದರು; ಮುಂಬೈ ತೊರೆದು ದೆಹಲಿಗೆ ಹೋದರು: ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…

- Advertisement -
- Advertisement -

27 ವರ್ಷದ ಶ್ರದ್ಧಾ ವಾಕರ್ ಮೃತ ದುರ್ದೈವಿ. ದೆಹಲಿಯ ಚತ್ತರ್‌ಪುರದಲ್ಲಿ ಗೆಳೆಯ ಅಫ್ತಾಬ್ ಪೂನವಾಲಾ (28) ಜೊತೆ ವಾಸಿಸಲೆಂದು ಮುಂಬೈನ ವಸಾಯ್‌ನಲ್ಲಿರುವ ತನ್ನ ಮನೆಯನ್ನು ತೊರೆದಿದ್ದಳಾಕೆ. ಶ್ರದ್ಧಾ ಆತನಲ್ಲಿ ಮದುವೆಯಾಗುವಂತೆ ಕೇಳುತ್ತಿದ್ದಳು. ಆದರೆ ಆತ ಒಪ್ಪಲಿಲ್ಲ. ಆಕೆ ತನ್ನ ಜೀವವನ್ನೇ ಕಳೆದುಕೊಂಡಳು.- ಸದ್ಯಕ್ಕೆ ದೆಹಲಿ ಪೊಲೀಸರು ಹೇಳುತ್ತಿರುವುದಿಷ್ಟು.

2019ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಬಂಬಲ್ (Bumbl) ಮೂಲಕ, ವಸಾಯ್‌ನಲ್ಲಿ ವಾಸಿಸುತ್ತಿದ್ದ ಅಫ್ತಾಬ್‌ನನ್ನು ಶ್ರದ್ಧಾ ಭೇಟಿಯಾಗಿದ್ದರು. ಶ್ರದ್ಧಾ ಕುಟುಂಬವು ಈ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ಆಕೆ ಅಫ್ತಾಬ್‌ನೊಂದಿಗೆ ವಾಸಿಸಲೆಂದು ತನ್ನ ಕುಟುಂಬವನ್ನು ತೊರೆದಳು. ಮೊದಲು ಮುಂಬೈನಲ್ಲಿ ವಾಸವಿದ್ದರು. ನಂತರ ಮೇ 2022ರಿಂದ ದೆಹಲಿಯಲ್ಲಿ ವಾಸವಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“2019ರಲ್ಲಿ ಶ್ರದ್ಧಾ-ಅಫ್ತಾಬ್ ಜೊತೆಯಲ್ಲಿ ವಾಸಿಸಲು ಆರಂಭಿಸಿದ್ದರು” ಎಂದು ಶ್ರದ್ಧಾ ಸಂಪರ್ಕದಲ್ಲಿದ್ದ ಆಕೆಯ ಸ್ನೇಹಿತ ಲಕ್ಷ್ಮಣ್ ನಾಡಾರ್ ಹೇಳುತ್ತಾರೆ. “ಶ್ರದ್ಧಾ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಅವಳ ತಾಯಿ ವಿರೋಧಿಸಿದರು. ಆದ್ದರಿಂದ ಆಕೆ ಮನೆ ಬಿಟ್ಟಿದ್ದಳು”.

ಶ್ರದ್ಧಾ ಮನೆಯಿಂದ ಹೊರಬಂದ ನಂತರ ಇಡೀ ಕುಟುಂಬದಲ್ಲಿ ಆಕೆಯ ತಾಯಿ ಮಾತ್ರ ಶ್ರದ್ಧಾ ಜೊತೆಯಲ್ಲಿ ಸಂಪರ್ಕದಲ್ಲಿದ್ದರು ಎನ್ನುತ್ತಾರೆ ಲಕ್ಷ್ಮಣ್. ಶ್ರದ್ಧಾ ಅವರ ತಾಯಿ 2020ರಲ್ಲಿ ನಿಧನರಾದರು. ಶ್ರದ್ಧಾ ಅವರ ಕುಟುಂಬದೊಂದಿಗಿನ ಏಕೈಕ ಸಂಪರ್ಕ ಲಕ್ಷ್ಮಣ್ ಮಾತ್ರ ಆಗಿದ್ದರು. ಆಕೆ ದೆಹಲಿಗೆ ತೆರಳಿ, ಸಂಪರ್ಕ ಕಡಿತವಾಗುವವರೆಗೂ ಲಕ್ಷ್ಮಣ್ ಮಾತನಾಡಿದ್ದಳು. ಶ್ರದ್ಧಾ ಅವರ ತಂದೆ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಮಗಳ ಮೇಲೆ ನಿಗಾ ಇಟ್ಟಿದ್ದರು.

 

View this post on Instagram

 

A post shared by Shraddha (@thatshortrebel)

 

View this post on Instagram

 

A post shared by Shraddha (@thatshortrebel)

ಶ್ರದ್ಧಾ ಅವರ ತಂದೆ ತಾಯಿ ನಾಲ್ಕು ವರ್ಷಗಳ ಹಿಂದೆ ಬೇರೆಯಾಗಿದ್ದರು. ಆಕೆ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. 2018ರಲ್ಲಿ ಆಕೆ ವಸೈನಲ್ಲಿನ ಕಾಲ್ ಸೆಂಟರ್‌ನಲ್ಲಿ ಉದ್ಯೋಗ ಆರಂಭಿಸಿದ್ದಳು.

ಶ್ರದ್ಧಾಳನ್ನು ಮಾತನಾಡಿಸಲು ಲಕ್ಷ್ಮಣ್ ಪ್ರಯತ್ನಿಸುತ್ತಲೇ ಇದ್ದರು. ಅವರು ಜೂನ್ ಮತ್ತು ಜುಲೈನಲ್ಲಿ ಸಾಕಷ್ಟು ಸಲ ಆಕೆಗೆ ಕರೆ ಮಾಡಿದರು. ಆದರೆ ಆಕೆಯ ಮೊಬೈಲ್‌ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಲಕ್ಷ್ಮಣ್ ಕಳುಹಿಸಿದ ಸಂದೇಶಗಳಿಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಶ್ರದ್ಧಾ ಅವರ ಸಹೋದರ ಶ್ರೀಜಯ್ ವಾಕರ್ ಅವರಿಗೆ ಸೆಪ್ಟೆಂಬರ್ 14ರಂದು ಕರೆ ಮಾಡಿದ ಲಕ್ಷ್ಮಣ್, ಎರಡು ತಿಂಗಳಿನಿಂದ ಶ್ರದ್ಧಾ ಅವರ ಫೋನ್ ಆಫ್ ಆಗಿದೆ ಎಂದು ತಿಳಿಸಿದ್ದರು. ಶ್ರೀಜಯ್ ತನ್ನ ತಂದೆ ವಿಕಾಸ್ ವಾಕರ್‌ಗೆ ಮಾಹಿತಿ ನೀಡಿದ್ದು, ಅವರು ಮಹಾರಾಷ್ಟ್ರದ ಮಾಣಿಕ್‌ಪುರದಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.

ಕೆಲವು ದಿನಗಳ ನಂತರ, ವಿಕಾಸ್‌ ವಾಕರ್‌ ಅವರಿಗೆ ಮಾಣಿಕ್‌ಪುರ ಪೊಲೀಸರು ಪ್ರತಿಕ್ರಿಯಿಸಿ, “ದೆಹಲಿಯ ಛತ್ತರ್‌ಪುರದಲ್ಲಿ ನಿಮ್ಮ ಮಗಳು ಆಕೆಯ ಗೆಳೆಯ ಅಫ್ತಾಬ್‌ನೊಂದಿಗೆ ವಾಸಿಸುತ್ತಿದ್ದಳು” ಎಂದು ಮಾಹಿತಿ ನೀಡಿದರು. ವಿಕಾಸ್ ನವೆಂಬರ್ 8ರಂದು ಶ್ರದ್ಧಾ ಅವರ ಫ್ಲಾಟ್‌ಗೆ ಬಂದರು. ಆದರೆ ಅದು ಲಾಕ್ ಆಗಿತ್ತು. ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಮಗಳ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.

ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಕಾಸ್, “ಅಫ್ತಾಬ್ ಶ್ರದ್ಧಾಳನ್ನು ಥಳಿಸುತ್ತಿದ್ದನು. ಆಕೆ ಸಂಬಂಧ ಚೆನ್ನಾಗಿರಲಿಲ್ಲ ಎಂದು ಶ್ರದ್ಧಾಳ ಸ್ನೇಹಿತರಾದ ಶಿವಾನಿ ಮತ್ತು ಲಕ್ಷ್ಮಣ್ ಹೇಳುತ್ತಾರೆ. ಹಾಗಾಗಿ ನನ್ನ ಮಗಳ ನಾಪತ್ತೆಯಲ್ಲಿ ಅಫ್ತಾಬ್ ಪೂನವಾಲಾ ಕೈವಾಡವಿದೆ ಎಂದು ನನಗೆ ಖಚಿತವಾಗಿದೆ” ಎಂದು ತಿಳಿಸಿದ್ದರು.

ತನ್ನ ತಾಯಿಯ ಮರಣದ ಒಂದು ತಿಂಗಳ ನಂತರ ಶ್ರದ್ಧಾ ನನ್ನನ್ನು ಭೇಟಿ ಮಾಡಿದ್ದಳು. ಅಫ್ತಾಬ್ ಆಗಾಗ್ಗೆ ಹೊಡೆಯುತ್ತಿರುತ್ತಾನೆ ಎಂದು ತಿಳಿಸಿದ್ದಳು ಎಂದು ವಿಕಾಸ್ ದೂರಿನಲ್ಲಿ ವಿವರಿಸಿದ್ದಾರೆ. “ಅಫ್ತಾಬ್‌ನನ್ನು ಬಿಟ್ಟು ಮನೆಗೆ ಹಿಂತಿರುಗುವಂತೆ ಆಕೆಗೆ ಸಲಹೆ ನೀಡಿದ್ದೆ. ಆದರೆ ಅಫ್ತಾಬ್ ಮರುದಿನ ಅವಳಲ್ಲಿ ಕ್ಷಮೆಯಾಚಿಸಿದ್ದನು. ಮತ್ತು ಶ್ರದ್ಧಾ ಅವನೊಂದಿಗೆ ಹಿಂತಿರುಗಿದ್ದಳು” ಎಂದಿದ್ದಾರೆ.

ವಿಕಾಸ್ ಅವರ ದೂರಿನ ಮೇರೆಗೆ ಮೆಹ್ರೌಲಿ ಪೊಲೀಸರು ಅಫ್ತಾಬ್‌ನನ್ನು ಪತ್ತೆಹಚ್ಚಿ ಬಂಧಿಸಿದರು. “ಜಗಳವಾಡಿಕೊಂಡು ಶ್ರದ್ಧಾ ದೂರವಾದಳು. ಆಕೆ ಎಲ್ಲಿಗೆ ಹೋಗಿದ್ದಾಳೆಂದು ನನಗೆ ಗೊತ್ತಿಲ್ಲ ಎಂದು ಆತ ಆರಂಭದಲ್ಲಿ ಹೇಳುತ್ತಿದ್ದ” ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಂಕಿತ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಪೊಲೀಸರು ಆತನನ್ನು ಕಟ್ಟುನಿಟ್ಟಾಗಿ ವಿಚಾರಣೆಗೆ ಒಳಪಡಿಸಿದಾಗ, “ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು, ಆದರೆ ಆತನಿಗೆ ಇದು ಇಷ್ಟವಿರಲಿಲ್ಲ. ಈ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು. ಮೇ 18ರ ಸಂಜೆ, ಅವರು ಮತ್ತೆ ಜಗಳವಾಡಿದರು. ಅಫ್ತಾಬ್ ನಿಯಂತ್ರಣ ಕಳೆದುಕೊಂಡು ಆಕೆಯ ಕತ್ತು ಹಿಸುಕಿದನು” ಎಂದು ತಿಳಿದುಬಂದಿದೆ.

ತಾನು ಸಿಕ್ಕಿಬೀಳಬಹುದೆಂದು ಗಾಬರಿಗೊಂಡ ಅಫ್ತಾಬ್, ಶ್ರದ್ಧಾಳ ದೇಹವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದನು, ನಿರ್ದಿಷ್ಟ ಉದ್ದೇಶಕ್ಕಾಗಿ ಖರೀದಿಸಿದ ಫ್ರಿಜ್‌ನಲ್ಲಿ ಸಂಗ್ರಹಿಸಿದನು. ನಂತರ 18 ದಿನಗಳ ಕಾಲ, ಆತ ಪ್ರತಿ ರಾತ್ರಿ ದೇಹದ ಸಣ್ಣ ತುಂಡುಗಳನ್ನು ತೆಗೆದು ಮೆಹ್ರಾಲಿ ಅರಣ್ಯದಲ್ಲಿ ಎಸೆಯುತ್ತಿದ್ದನು. ಫ್ಲಾಟ್‌ಗೆ ಹಿಂತಿರುಗಿ ಅಗರಬತ್ತಿಗಳನ್ನು ಹಚ್ಚಿಡುತ್ತಿದ್ದನು. ಶವದ ದುರ್ನಾತವನ್ನು ಮರೆಮಾಡಲು ಏರ್ ಫ್ರೆಶ್ನರ್ ಮತ್ತು ಸುಗಂಧ ದ್ರವ್ಯಗಳನ್ನು ಸಿಂಪಡಿಸುತ್ತಿದ್ದನು.

ಇದನ್ನೂ ಓದಿರಿ: ಅಫ್ತಾಬ್- ಶ್ರದ್ಧಾ ಪ್ರಕರಣ: ಕತ್ತರಿಸಿ ಕಾಡಿಗೆ ಎಸೆದಿದ್ದ ದೇಹದ ಬಿಡಿಭಾಗಗಳಿಗೆ ಹುಡುಕಾಟ

ಛತ್ತರ್‌ಪುರದಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ಅವರ ನೆರೆಹೊರೆಯವರು ಮಾಧ್ಯಮಗಳೊಂದಿಗೆ ನೇರವಾಗಿ ಮಾತನಾಡಲು ನಿರಾಕರಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಹೆಸರು ಹೇಳಲಿಚ್ಛಿಸದೆ ಪ್ರತಿಕ್ರಿಯಿಸಿದ್ದಾರೆ. “ನಾವು ಅಫ್ತಾಬ್ ಅನ್ನು ಮಾತ್ರ ನೋಡಿದ್ದೆವು. ಎಂದಿಗೂ ಶ್ರದ್ಧಾಳನ್ನು ನೋಡಿಲ್ಲ” ಎಂದು ಹಲವರು ಹೇಳಿಕೆ ನೀಡಿದ್ದಾರೆ. ಮೇ 15ರಂದು ಈ ಜೋಡಿಯು ತಮ್ಮ ಫ್ಲಾಟ್‌ಗೆ ತೆರಳಿತ್ತು. ಮೂರು ದಿನಗಳ ನಂತರ ಶ್ರದ್ಧಾಳನ್ನು ಕೊಲೆ ಮಾಡಲಾಗಿತ್ತು.

ಅಫ್ತಾಬ್ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡ ನಂತರ, ಪೊಲೀಸರು ಶ್ರದ್ಧಾಳ ಶವದ ತುಂಡುಗಳನ್ನು ಪತ್ತೆ ಮಾಡಲು ಮೆಹ್ರೌಲಿ ಅರಣ್ಯಕ್ಕೆ ಆರೋಪಿಯನ್ನು ಕರೆದೊಯ್ದರು. ಅವರು ಇಲ್ಲಿಯವರೆಗೆ 13 ತುಣುಕುಗಳನ್ನು ವಶಕ್ಕೆ ಪಡೆದಿದ್ದಾರೆ. ಅವು ಹೆಚ್ಚಿನದಾಗಿ ಮೂಳೆಗಳಾಗಿವೆ. ಆದರೆ ಇನ್ನೂ ವಿಧಿವಿಜ್ಞಾನ ತಪಾಸಣೆಗೆ ಒಳಪಡಿಸಿಲ್ಲ.

“ಈ ಇಬ್ಬರ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ ಈ ಕೊಲೆ ಸಂಭವಿಸಿದೆ ಎಂದು ತೋರುತ್ತದೆ, ಈಗಲೇ ಈ ಬಗ್ಗೆ ಹೆಚ್ಚು ಹೇಳುವುದು ಸರಿಯಲ್ಲ” ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವರದಿ ಕೃಪೆ: ನ್ಯೂಸ್ ಲಾಂಡ್ರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...