Homeಮುಖಪುಟಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ...

ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು ಅದನ್ನ ವಾಪಸ್ಸು ಕಳಿಸಿದನಂತೆ..

- Advertisement -
- Advertisement -

ಕಾಲ ಸರದು ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ದೇವೇಗೌಡ್ರು ಪಿ.ಡಬ್ಲೂ.ಡಿ ಮಿನಿಸ್ಟರಾದರು. ವಿಷ್ ಮಾಡಣ ಅಂತ ಹೋಗಿದ್ದೆ. “ಡಾಕ್ಟರ್, ಮರತ್ರ” ಅಂದೆ. “ಬನ್ನಿ ಡಾಕ್ಟರೆ, ಅದ್ಯೆಲ್ಲ ಏನು ಬಿಡಿ” ಅಂದ್ರು ಗೌಡ್ರು. ಆಗ ಅವ್ರು ಯಲ್ಲ ಇಷ್ಟ ಪಡೋ ರಾಜಕಾರಣಿಯಾಗಿದ್ರು. ಜನತಾಪಕ್ಷದ ಘಟಾನುಘಟಿ ನಾಯಕರಿಂದ ಹಿಡಿದು ಚಂದ್ರಶೇಖರವರಿಗೆ ಎಲ್ರೂ ಮೆಚ್ಚೊ ರಾಜಕಾರಣಿಯಾಗಿದ್ರು. ಆದ್ರೆ ಕ್ರಮೇಣ ಪುತ್ರವ್ಯಾಮೋಹ ಕುಟುಂಬ ವ್ಯಾಮೋಹಕ್ಕೆ ತುತ್ತಾಗಿ ಸಮರ್ಥ ಜನತಾದಳ ಪಕ್ಷನ ನಾಶಮಾಡಿಬಿಟ್ರು. ಅವುರಂಗೆ ಮಾಡದೆಯಿದ್ರೆ ಇಲ್ಲೊಂದು ಸಮರ್ಥವಾದ ಪ್ರಾದೇಶಿಕ ಪಕ್ಷ ಇರದು. ಅವರು ನಮ್ಮಣ್ಣನ ಕಂಡ್ರೆ ದ್ವೇಷ ಕಾರೋರು. ನಾನು ಕೃಷ್ಣಪ್ಪನ ತಮ್ಮನಾದ್ರು ದೇವೇಗೌಡ್ರ ಅಭಿಮಾನಿಯಾಗಿದ್ದೆ. ಅದನ್ನ ಗೌಡ್ರು ಗ್ರಹಿಸಲಿಲ್ಲ. ರಾಜಕಾರಣದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ದ್ವೇಷ ಹುಟ್ಟಾಕಬಾರ್ದು. ನಾನು ಗಮನಿಸಿದಂಗೆ ಇವರುಗಳಲ್ಲಿ ಸಿದ್ಧಾಂತಗಳೇ ಯಿಲ್ಲ. ಬರೀ ದ್ವೇಷದ ರಾಜಕಾರಣನೇ ತುಂಬ್ಯದೆ. ಆಗ ಎಲ್ಲಂದ್ರಲ್ಲಿ ಬೇರೆಬೇರೆ ಪಾರ್ಟಿಯವರು ಕುತಗಂಡು ಕಾರ್ಡ್ಸ್ ಆಡದನ್ನ ನೋಡಿದ್ದೆ. ಈಗ ಅಂತ ವಾತಾವರಣನೇ ಯಿಲ್ಲ. ಶಾಸಕರ ದಿನಾಚರಣೆನೆ ನಿಂತುಹೋಗ್ಯದೆ. ಲೀಡ್ರುಗಳ ಮಾಡೋ ಭಾಷಣ ಬದ್ಲಾಗ್ಯದೆ. ಯಲ್ಲ ಒಂದೇ ತರ ಮಾತಾಡ್ತ ಅವುರೆ. ತಮ್ಮ ಸೇಡಿನ ಮಾತು ಕಾರ್ಯಕರ್ತರ ಮೇಲೆ ಏನು ಪರಿಣಾಮ ಮಾಡ್ತದೆ ಅನ್ನೋ ಜವಾಬ್ದಾರಿನೇ ಯಿಲ್ಲ.

ಈ ರಾಜಕಾರಣ ದಾರಿ ತಪ್ಪಿದ ಕಾಲದಲ್ಲಿ ಲಂಕೇಶ್ ಪತ್ರಿಕೆ ತಗದ್ರು. ಆಗ ನಮಗೊಂದು ದನಿ ಸಿಕ್ಕಿದಂಗಾಗಿತ್ತು. ಲಂಕೇಶ್‌ನ ವಾರವಾರ ಕಾಯ್ತಿದ್ದೋ. ಅದರಲ್ಲಿ ನಮ್ಮ ರಾಮಣ್ಣನ ಕತೆನೂ ಬಂದಿದ್ದೊ. ಲಂಕೇಶ್ ನಮ್ಮ ಮೇಷ್ಟ್ರಾಗಿದ್ದುದ್ದು ಅಲ್ದೇ ಪರಿಚಯನೂ ಇದ್ದಿದ್ರಿಂದ ರಾಮಣ್ಣನೂ ನಾನು ಲಂಕೇಶ್ ಆಫೀಸಿಗೋದೊ. ನಮ್ಮನ್ನ ನೋಡಿದೇಟಿಗೆ ಖುಷಿಯಾಗಿ ಬನ್ನಿ ಬನ್ನಿ ಅಂದರು. ನಾವು ಹೋಗಿ ಕೂತಗತ್ತಿದ್ದಂಗೆ ಕಾಫಿ ತರೋಕೇಳಿ ಸಿಗರೇಟಚ್ಚಿಗಂಡ್ರು. ಯಾವಾಗ್ಲೋ ಒಂದು ಸಿಗರೇಟ್ ಸೇದೋ ರಾಮಣ್ಣನೂ ಒಂದ್ ಸಿಗರೇಟ್ ಹಚ್ಚಿದ. ಲಂಕೇಶ್ ಹೊಗೆ ನಾನ್ಯಾಕ್ ಕುಡಿಬೇಕು ಅಂತ ಹಚ್ಚಿದನೇನೋ. “ಈ ರಾಮಣ್ಣನ ಕತೆ ಕಳುಸು ಅಂದ್ರೆ ಅದ್ಯಾವುದೋ ಕಕ್ಕಸ್ ಮ್ಯಾಲೆ ಬರದ ಕತೆ ಕಳುಸ್ತಾನೆ. ಅವ ಹಾಕಕ್ಕಾದತೆ” ಅಂದ್ರು. ರಾಮಣ್ಣ ನಗಾಡಿದ. ಲಂಕೇಶ್ ಏನೇ ಇದ್ರು ಎದುರಿಗೆ ಹೇಳಿಬುಡೋರು. ಅದವುರ ಜಾಯಮಾನ. ಕತೆ ಅಥವಾ ಲೇಖನ ಚನ್ನಾಗಿದೇ ಚನ್ನಾಗಿಲ್ಲ ಅನ್ನದ ಎದುರಿಗೇ ಹೇಳತಿದ್ರು. ರಾಮಣ್ಣನದೊಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ. ರಾಮಣ್ಣನಿಗೆ ಸಿಟ್ಟು ಬಂದು ಅದ ವಾಪಸ್ಸು ಕಳಿಸಿದನಂತೆ. ನನ್ನ ಕತಿಗೆ ಇಷ್ಟು ಕಡಿಮ ಬ್ಯಲೆ ಕಟ್ಟಿದ್ರಲ್ಲ ಅಂತ ಇವನ ಸಿಟ್ಟು. ಆದ್ರೆ ರಾಮಣ್ಣ ಸಂಬಳ ತಗೊಳೊ ಡಾಕ್ಟರು. ಉದಯೋನ್ಮುಖ ಲೇಖಕರಿಗೆ ಜಾಸ್ತಿ ಸಂಭಾವನೆ ಕಳಿಸ್ತಿದ್ಧ ಲಂಕೇಶ್, ರಾಮಣ್ಣನಿಗೆ ಕಡಿಮೆ ಕಳಿಸಿದ್ರಿಂದ ಅಮ್ಯಾಲೆ ಕತೆ ಕಳ್ಸದ್ನೆ ಬುಟ್ಟುಬುಟ್ಟ. ಇದು ಆಮ್ಯಾಲಿನ ಕತೆ, ಆದ್ರೆ ಈ ಕ್ಷಣ ನಮ್ಮ ಸಮಂಧ ಚನ್ನಾಗಿತ್ತು. ಆದ್ರಿಂದ “ನಡಿರಿ ಜಾರ್ಜ್ ಮನೆಗೋಗಣ” ಅಂತ ಎದ್ರು. “ನೀವೋಗಿ ಸಾರ್ ನಾವು ಬರಲ್ಲ” ಅಂದೆ. ಅದಕವ್ರು, “ಕರದಿಲ್ಲ ಅಂತ ಬರದಿಲ್ಲವ. ನಮ್ಮ ಇಂಡಿಯನ್ ಕಲ್ಚರಲ್ಲಿ ಯಾರೂ ಒಬ್ಬರೇ ಹೋಗಲ್ಲ. ಯರಡು ಮೂರು ಜನನಾದ್ರು ಹೋಯ್ತರೆ. ಅದೇನಪರಾಧ ಅಲ್ಲ. ಸುಮ್ಮನೆ ಬನ್ನಿ ಹೋಗೋಣ” ಅಂತ ಹೊರಟೇಬುಟ್ರು. ನಾವಿಲ್ಲ ಅನ್ನಕ್ಗಾದೆ ಹಿಂಬಾಲಿಸಿದೊ. ಅಲ್ಲಿಗೋದ್ರೆ ಜಾರ್ಜ್ ಫರ್ನಾಂಡಿಸ್ ಭಾಳ ಖುಷಿಯಾಗಿ ಓಡಾಡ್ತಾ ಹಂದಿ ಮಾಂಸದ ಕರಿ, ಬ್ರೆಡ್ ಸಪ್ಲೈ ಮಾಡಿದ್ರು. ನಾನು ತಿನ್ನಲಿಲ್ಲ. ಲಂಕೇಶ್‌ಗೇನು ಅಂದ್ರೆ ಜೊತೆಲಿದ್ದೋರ್ಯಲ್ಲ ಕುಡಿಬೇಕು ತಿನ್ನಬೇಕು. ಅದ್ಕೆ ಅವುರು “ಕಮಲಾಕ್ಷ ಉಣ್ಣಲಿಲ್ಲ, ನಡಿರಿ ಪ್ರೆಸ್ ಕ್ಲಬ್ಬಿಗೋಗನ ಅಂತ ಹೊರಟ್ರು. ಸರಿ ಅಲ್ಲಿಗೂ ಹೋದೊ. ಆಲನಳ್ಳಿ ಕೃಷ್ಣನ ವಿಷ್ಯ ತಗಂಡು ಒಬ್ಬರಾದ ಮ್ಯಾಲೆ ಒಬ್ಬರು ನಗಿಸಿದ್ರು. ಅವುನು ಮಾಡಿದ್ದ ಜಮೀನು ಅದರ ಕತೆನ್ಯಲ್ಲ ಹೇಳಿದ ಮ್ಯಾಲೆ, “ಅಲ್ಲೋ ರಾಮಣ್ಣ ಆಲನಳ್ಳಿ ಎಂ.ಪಿಗೆ ನಿಂತಗತನಂತೆ. ಏನಾಗ್ಯದಯ್ಯ ಅವುನಿಗೆ” ಅಂದ್ರು. “ಸುಮ್ಮನಂಗಂತನೆ ಕಂಡ್ರಿ. ಅದವುನ ಕಡಿಂದ ಹಬ್ಬೊ ಸುದ್ದಿನೆ ವರತು ಕಾಂಗ್ರೆಸ್ ಅಥವಾ ಜನತಾ ಪಕ್ಷದಿಂದ ಯಾರಾರ ಬಾಯಿ ಬುಟ್ಟವರ. ಅವುನಾಸೆ ಒಂದೊಂದಲ್ಲ. ಯಾವುದೂ ಆಗದಿಲ್ಲ ಬುಡಿ” ಅಂದ ರಾಮಣ್ಣ. ಅಲ್ಲೊಂದು ನೆನಪಲ್ಲುಳಿಯೋ ಪಾರ್ಟಿಯಾಯ್ತು. ಲಂಕೇಶ್ ಜಾರ್ಜ್ ವಿಷಯ ಬರಿತ “ನಮ್ಮ ಫರ್ನಾಂಡಿಸ್ ಒಬ್ಬ ಡ್ರೈವರ್ ಮನೆಲೂ ಕುಡಿತ ಮಾತನಾಡೊ ಸರಳ ವ್ಯಕ್ತಿ” ಅಂತ ಟಿಪ್ಪಣಿ ಹಾಕಿದ್ರು. ಮುಂದೆ ಫರ್ನಾಂಡಿಸ್ ಲಂಕೇಶ್ ವಿರೋಧಿಸುತ್ತಿದ್ದ ಬಿ.ಜೆ.ಪಿಗೋಗಿ ರಕ್ಷಣಾ ಸಚಿವರಾದ್ರು. ಎಮರ್ಜೆನ್ಸಿಲಿ ತನ್ನನ್ನು ಕೊಲ್ಲಕ್ಕೆ ಅಂತ ಸಂಚುಮಾಡಿದ ಕಾಂಗ್ರೆಸ್‌ಗಿಂತ ಬಿ.ಜೆ.ಪಿನೆ ವಾಸಿ ಅಂತ ತೀರ್ಮಾನ ತಗಂಡ್ರು. ಆ ನಂತರ ಮೆಮೋರಿ ಕಳಕಂಡು ಹೆಚ್ಚುಕಮ್ಮಿ ಹನ್ನೆರಡೊರ್ಷ ಮಲಗಿದ್ರಲ್ಲಯ್ಯಾ. ಅದಮಾತ್ರ ನ್ಯನಿಸಿಗಳಕ್ಕಾಗದಿಲ್ಲ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

ರಾಮಣ್ಣನಿಗೆ ಮೊದಲ ಶಾಕ್ ಕೊಟ್ಟ ಸಾವು ಆಲನಳ್ಳಿದು. ಅವುಗ್ಯಲ್ಲಾರಿಗೂ ಅವನು ತುಂಟ ಹುಡುಗನಂತೆ ಕಂಡಿದ್ದ. ರಾಮಣ್ಣನಿಗಂತೂ ಅತ್ಮೀಯ ಜೀವ. ಕೃಷ್ಣ ಬರಿಯದನ್ಯಲ್ಲ ಬರದು ಬೇರೆ ಏನ್ನೋ ಹುಡಿಕ್ಕಂಡು ತಿರಗಂಗಾಗಿದ್ದ. ಬರವಣಿಗೇಲಿ ಮಾಡಿದ ಹೆಸರ್‌ನ ರಾಜಕಾರಣಕ್ಕೆ ಬಳಸಿಗಂಡು ಎಂಎಲ್ಲೆನೋ ಎಂಎಲ್ಸಿನೋ ಆಯ್ತಿನಿ ಅಂತಿದ್ದ. ಆದ್ರೆ ಮಾಡೋರ್ಯಾರು ರಾಜಕಾರಣಕ್ಕೆ ಬೇಕಾದ ತಾಳ್ಮೆನೆ ಇರಲಿಲ್ಲ. ಜಗಳಗಂಟ. ಆದ್ರು ಕನಸ ಹೊತ್ತಗಂಡ ತಿರಿಗನು. ಆಟೈಮಲ್ಲಿ ’ಸುಟ್ಟ ತಿಕದ ದೇವರು’ ಅಂತ ಲಂಕೇಶ್ ಪತ್ರಿಕೆಲಿ ಕಥೆ ಬರೆದಿದ್ದ, ಓದಿದ್ದೆ. ‘ಅರಗಿನ ಅರಮನೆ’ ಅಂತ ಕಾದಂಬರಿ ಶುರುಮಾಡಿದ್ದ. ಅದು ಅರ್ಧಕ್ಕೆ ನಿಂತೋಯ್ತು. ಪಾಪ ಸಾಯೋ ವಯಸಲ್ಲ. ಅರ್ಧಕ್ಕೆ ವಂಟೋದ. ನಮ್ಮ ರಾಮಣ್ಣ ಆಗ ಭಾರಿ ಘಾಸಿಯಾಗಿದ್ದ. ಜೊತೆಲಿ ಹುಟ್ಟಿದೋನೆ ತೀರಿಕಂಡ ಅನ್ನೋಂಗಾಗಿದ್ದ. ಆ ದುಃಖ ಮರಿಯಕ್ಕೆ ಆಲನಳ್ಳಿ ಮಗ ಪ್ರದ್ಯುಮ್ನ ಅಪ್ಪನ ಹೆಸರುಳಿಸೋ ಕತೆಗಾರಾಯ್ತನೆ ಅಂತಿದ್ದ. ಅಂಗಾದತೆ ಯಲ್ಲ. ಸಾವು ನ್ಯನಪಾಯ್ತವೆ, ಅಂಗೆ ಕೃಷ್ಣನ ಸಾವು ನ್ಯನಪಾಯ್ತು.

ಒಂದು ಸತಿ ಲಂಕೇಶ್ ನಮ್ಮ ಕೇಶವ ಮೂರ್ತಿ ಮನಿಗೆ ಬಂದಿದ್ರು. ಅದೇನು ವಿಶೇಷ ಅಲ್ಲ. ಮೈಸೂರಿಗೋಗುವಾಗ ಬಂದು ಹೋಗರು. ಆಗ ನಾನೂ ಹೋಗಿದ್ದೆ. ಊಟ ಮಾಡಿ ಹೊಂಟ ನಂತರ ಲಂಕೇಶ್ ಕಾರಿನ ಗೇರಾಕಿದ್ದ ನೋಡಿ “ಇದೇನ್ ಸಾರ್ ಹಿಂಗ್ ಗೇರಾಕಿದ್ರಿ, ಆ ತರ ಹಾಕಿದ್ರೆ ಗೇರೇರದಿಲ್ಲ” ಅಂದೆ. ಇನ್ನೋಂದ್ ಸತಿ ಹೆಚ್.ಎಲ್.ಕೆ, ಕೆ.ಎಂ. ಶ್ರೀನಿವಾಸ ಗೌಡ ನಮ್ಮ ಮನೆ ಟೆರೇಸ್ ಮ್ಯಾಲೆ ಸೇರಿದ್ದೋ. ಲಂಕೇಶ್ ಬರಿತಿದ್ದ ಚುಟುಕು ಕವನಕ್ಕೆ ನೀಲು ಅಂತ ಹೆಸರಾಯ್ಕಂಡು, ಅವಳು ಮಂಡ್ಯದೋಳು ಅನ್ನೋ ಸೂಚನೆ ಕೊಟ್ಟಿದ್ರು. ಆಗ ಮಂಡ್ಯಕ್ಕೆ ತುಂಬಾ ಬರೋರು. ಆದ್ರಿಂದ ನೀಲು ಮತ್ತೆ ಲಂಕೆಶ್ ಬಗ್ಗೆ ಕತೆ ಕಟ್ಟಿ ಮಾತಾಡೋರು.

“ಅದ ನಾನು ಕೇಳಿದ್ದೆ ಕಣಣ್ಣ. ಶಶಿಕುಮಾರ ಅನ್ನೋ ರಾಜಕಾರಣಿ “ನಿಮ್ಮ ಲಂಕೇಶ ನೀಲು ಅಂತ ದಲಿತರ ಹೆಣ್ಣಮಗಳ ಇಟ್ಟಗಂಡವುನೆ, ಮಂಡ್ಯದೋಳು. ಅವುಳೇನೋ ಕವನ ಪವನ ಬರಿತಳಂತೆ. ಒಂದಿನ ದಲಿತರಿಂದ್ಲೇ ಏಟು ಬೀಳ್ತವೆ ನೋಡು ಅಂತ ಹೆದರಿಸಿದ್ದ ಕಣಣ್ಣ”. ಅಂತ ಗಾಸಿಪ್ಪು ಕೇಳಕ್ಕೆ ಲಂಕೇಶ್‌ಗಿಷ್ಟ. ಗಾಸಿಪ್ ಹಬ್ಬಿಸದು ಎಂಜಾಯ್ ಮಾಡದು. ಈ ನೀಲು ಬಗ್ಗೆ ಅಂಗೆ ಮಾಡಿದ್ರು. ಕ್ರಮೇಣ ಜನಕ್ಕೆ ನೀಲು ಅಂದ್ರೆ ಲಂಕೇಶ್ ಅನ್ನದು ಗೊತ್ತಾಯ್ತು. ರಾಮಣ್ಣ ಲಂಕೇಶರ ಸಾಹಿತ್ಯ ಮೆಚ್ಚಿಗಂಡಿದ್ದ. ಆದ್ರೆ ವ್ಯಕ್ತಿತ್ವ ಒಪ್ಪಿಗಂಡಿರಲಿಲ್ಲ. ‘ಅವುನೊಂಥರ ಪ್ಯೂಡಲ್ ಗುಣದೋನು’ ಅಂತಿದ್ದ.

ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

ಕ್ರಮೇಣ ಲಂಕೇಶಿಂದ್ಲೂ ರಾಮಣ್ಣ ದೂರಾದ. ಕೆಲ ಹುಡುಗ್ರು ಲಂಕೇಶ್ ಪತ್ರಿಕೆ ಬಿಟ್ಟು ಈ ವಾರ ಅಂತ ಪತ್ರಿಕೆ ತಗುದ್ರು. ಅದರ ಚಂದಾ ಮಾಡಿಸದ್ರಿಂದ ಹಿಡಿದು, ಅದನ್ನು ಲಂಕೇಶ್ ಪತ್ರಿಕೆ ಎದುರಿಗೆ ನಿಲ್ಸಕ್ಕೆ ನೋಡಿದ. ಅಟೋತ್ತಿಗೆ ರವಿಕಾಂತೇ ಗೌಡನು ಬ್ಯಳದು ಲೇಖನ ಬರಿಯಂಗಾಗಿದ್ದ. ಈ ವಾರಗೆ ಅವುನೂ ಬರಿತಿದ್ದ. ಆದ್ರು ಅದು ಒಂದು ದನಿಯಾಗದೆ ಸ್ವರಗೋಯ್ತು. ರಾಮಣ್ಣನೂ ಸುಮ್ಮನಾದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...