Homeಮುಖಪುಟಯುಪಿ: ಸರ್ಕಾರಿ ಕಾಲೇಜೊಂದರಲ್ಲಿ ಬುರ್ಕಾ ನಿಷೇಧ; ವಿವಾದದ ವಾಸ್ತವವೇನು?

ಯುಪಿ: ಸರ್ಕಾರಿ ಕಾಲೇಜೊಂದರಲ್ಲಿ ಬುರ್ಕಾ ನಿಷೇಧ; ವಿವಾದದ ವಾಸ್ತವವೇನು?

ಪ್ರತಿಭಟನಾಕಾರರು ಕಾಲೇಜು ವಿದ್ಯಾರ್ಥಿಗಳಲ್ಲ. ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ವಿರೋಧವಿಲ್ಲ: ಪ್ರಾಂಶುಪಾಲ

- Advertisement -
- Advertisement -

ಬುರ್ಕಾ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದಂತೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಸರ್ಕಾರಿ ಕಾಲೇಜಿನಲ್ಲಿ ಜಾರಿಗೊಳಿಸಿದ ಸಮವಸ್ತ್ರ ನೀತಿಯು ವಿವಾದಕ್ಕೆ ಗುರಿಯಾಗಿದೆ.

ಸಮಾಜವಾದಿ ಪಕ್ಷದ ಯುವ ಘಟಕವು ಪ್ರತಿಭಟನೆ ನಡೆಸಿದ್ದು, ಬುರ್ಖಾ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದರೆ, ಮತ್ತೊಂದೆಡೆ ಹಿಂದೂ ಕಾಲೇಜಿನ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾ “ಹೊರಗಿನವರ ಪ್ರವೇಶವನ್ನು ತಡೆಯಲು ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ” ಎಂದಿದ್ದಾರೆ.

ಹುಡುಗರಿಗೆ ಬಿಳಿ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್, ಹುಡುಗಿಯರಿಗೆ ಬೂದು ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮವನ್ನು ಸಮವಸ್ತ್ರವಾಗಿ ಅಳವಡಿಸಲಾಗಿದೆ. ಈ ನಿಯಮವು ಯಾವಾಗಲೂ ಜಾರಿಯಲ್ಲಿರುತ್ತದೆ. ಕೆಲವು ಹೊರಗಿನವರು ಅಧ್ಯಾಪಕರೊಬ್ಬರ ಮೇಲೆ ದಾಳಿ ಮಾಡಿದ ನಂತರ, ಕಾಲೇಜು ಅಧಿಕಾರಿಗಳು ಸಮವಸ್ತ್ರ ನಿಯಮವನ್ನು ಜಾರಿಗೊಳಿಸಿದರು. ಕಳೆದ ಅಕ್ಟೋಬರ್ 15ರಂದು ನಿಯಮ ಜಾರಿಯಾದರೂ ಈ ವರ್ಷದ ಜನವರಿ 1 ರಿಂದ ಮಾತ್ರ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಕಾಲೇಜು ಹೇಳಿಕೊಂಡಿದೆ.

ಸಮಾಜವಾದಿ ಪಕ್ಷದ ಯುವ ಘಟಕದ ನೇತೃತ್ವದಲ್ಲಿ ಜನವರಿ ಮೊದಲ ವಾರದಲ್ಲಿ ಕಾಲೇಜು ಗೇಟ್‌ಗಳ ಹೊರಗೆ ಧರಣಿ ಆರಂಭಿಸಿದ ವಿದ್ಯಾರ್ಥಿಗಳು, “ಪ್ರವೇಶದ್ವಾರದಲ್ಲಿ ತಮ್ಮ ಬುರ್ಖಾವನ್ನು ತೆಗೆಯಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸೂಚಿಸಲಾಗುತ್ತಿದೆ.  ಹೀಗಾದಾಗ ತರಗತಿಗಳಿಗೆ ಹಾಜರಾಗಲು ಕಷ್ಟವಾಗುತ್ತದೆ” ಎಂದು ದೂರಿದ್ದಾರೆ. ಆದರೆ ಕಾಲೇಜಿನ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

“ಪ್ರವೇಶದ್ವಾರದ ಬಳಿ ಇರುವ ಕೊಠಡಿಯನ್ನು ಯಾವಾಗಲೂ ಈ ಉದ್ದೇಶಕ್ಕಾಗಿ ನಿಗದಿಪಡಿಸಲಾಗಿದೆ” ಎಂದು ಕಾಲೇಜು ಹೇಳಿಕೊಂಡಿದೆ. ಜನವರಿಯಲ್ಲಿ ವಿವಾದ ಉಂಟಾದ ಬಳಿಕ ಈ ಕೊಠಡಿಗೆ ‘ಬದಲಾವಣೆ ಕೊಠಡಿ’ ಎಂದು ಹೆಸರಿಡಲಾಗಿದೆ.

“ನಾನು ಈ ಪ್ರತಿಭಟನೆಯನ್ನು ಬೆಂಬಲಿಸುವುದಿಲ್ಲ. ಬುರ್ಖಾ ಹಾಕಿಕೊಂಡು ಬರುವ ಹುಡುಗಿಯರಿಗೆ ಕಾಲೇಜು ಆಡಳಿತ ಮಂಡಳಿ ಜಾಗ ನೀಡಿದೆ. ಬುರ್ಖಾ ಹಾಕದೆ ಬರಬೇಕೆಂದು ಅವರೇನು ಹೇಳುತ್ತಿಲ್ಲ. ಬುರ್ಖಾ ತೆಗೆದು ಕಾಲೇಜಿನೊಳಗೆ ಬರುಲು ಹೇಳುತ್ತಿದ್ದಾರೆ. ಅವರು ಹಿಜಾಬ್ ಮೇಲೆ ನಿರ್ಬಂಧಗಳನ್ನು ಹಾಕಿಲ್ಲ” ಎಂದು ಮೊದಲ ವರ್ಷದ ಎಂ.ಕಾಂ ವಿದ್ಯಾರ್ಥಿ ಇಕ್ರಾ ಅವರು ‘ನ್ಯೂಸ್‌ಲಾಂಡ್ರಿ’ ಜಾಲತಾಣಕ್ಕೆ ತಿಳಿಸಿದ್ದಾರೆ.

“ಕಾಲೇಜಿಗೆ ಪ್ರವೇಶ ಪಡೆಯುವ ಸಮಯದಲ್ಲೇ ಈ ಸಮವಸ್ತ್ರಕ್ಕೆ ಒಪ್ಪಿಗೆ ನೀಡುವ ನಿಬಂಧನೆಗೆ ಸಹಿ ಹಾಕಲಾಗಿರುತ್ತದೆ. ವಿದ್ಯಾರ್ಥಿನಿಯವರು ಮತ್ತು ಪೋಷಕರಿಗೆ ಸಮಸ್ಯೆಯಾಗಿಲ್ಲ. ಇದು ಹೊರನವರ ಪ್ರಶ್ನೆಯಷ್ಟೇ” ಎಂದು ಮಾಹಿತಿ ನೀಡಿದ್ದಾರೆ.

ಮತ್ತೊಬ್ಬ ವಿದ್ಯಾರ್ಥಿನಿ ಅಟೂಫಾ ಪ್ರತಿಕ್ರಿಯಿಸಿದ್ದು, “ಪ್ರತಿಭಟನಾಕಾರರು ಹೊರಗಿನವರು. ತಮ್ಮ ಗುರುತನ್ನು ಮುಚ್ಚಿಕೊಳ್ಳಲು ಬುರ್ಖಾವನ್ನು ಧರಿಸಿದ್ದಾರೆ” ಎಂದು ಆರೋಪಿಸಿದ್ದಾರೆ. ಆದರೆ ಬುರ್ಖಾ ಧರಿಸಿದ್ದ ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ‘ನ್ಯೂಸ್‌ಲಾಂಡ್ರಿ’ ತಿಳಿಸಿದೆ.

“ಈಗ ಯಾವುದೇ ವಿವಾದವಿಲ್ಲ” ಎಂದು ಕಾಲೇಜಿನ ಮುಖ್ಯ ಅಧಿಕಾರಿ ಎಪಿ ಸಿಂಗ್ ಹೇಳಿದ್ದಾರೆ. “ವಿದ್ಯಾರ್ಥಿಗಳು ತಮ್ಮ ಬುರ್ಖಾವನ್ನು ಪ್ರವೇಶದ್ವಾರದಲ್ಲಿಯೇ ತೆಗೆಯುವಂತೆ ಹೇಳುವುದರ ಬಗ್ಗೆ ತಪ್ಪು ತಿಳಿವಳಿಕೆ ರವಾನೆಯಾಗಿದೆ. ಈ ಸುದ್ದಿ ಎಲ್ಲೆಡೆ ಪ್ರಸಾರವಾಗಿದೆ. ಇದಕ್ಕಾಗಿ ಬುರ್ಕಾ ತೆಗೆಯುವುದಕ್ಕಾಗಿಯೇ ಕೊಠಡಿಯನ್ನು ನೀಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಸುಮಾರು ಆರು ತಿಂಗಳ ಹಿಂದೆ ಪ್ರೊಫೆಸರ್ ಎ.ಯು.ಖಾನ್ ಅವರ ಮೇಲೆ ಕಾಲೇಜಿನ ಪ್ರವೇಶದ್ವಾರದಲ್ಲಿ ಹೊರಗಿನ ವ್ಯಕ್ತಿಗಳು  ಹಲ್ಲೆ ನಡೆಸಿದ ನಂತರ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಾಲೇಜು ನಿರ್ಧರಿಸಿತು” ಎಂದು ವಿವರಿಸಿದ್ದಾರೆ.

“ನಮಗೆ ಬುರ್ಖಾದಿಂದ ಯಾವುದೇ ಸಮಸ್ಯೆ ಇಲ್ಲ. ವಿದ್ಯಾರ್ಥಿನಿಯರು ಕಾಲೇಜಿಗೆ ಅದನ್ನು ಧರಿಸಿ, ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ತೆಗೆದಿಟ್ಟು ತಮ್ಮ ಡ್ರೆಸ್‌ನಲ್ಲಿ ಪ್ರವೇಶಿಸಿದರೆ ಯಾರಿಗೆ ತೊಂದರೆ? ಜನವರಿ 1 ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೊರಗಿನಿಂದ ಬಂದ ಕೆಲವು ಯುವಕರು ಇದರ ವಿರುದ್ಧ ಪ್ರತಿಭಟಿಸಿದ್ದಾರೆ. ಫೋಟೋಗಳನ್ನು ಕ್ಲಿಕ್ ಮಾಡಿ, ಅದನ್ನು ರಾಜಕೀಯಗೊಳಿಸಿದ್ದಾರೆ. ಸಮವಸ್ತ್ರವು ಹುಡುಗಿಯರು ಮತ್ತು ಹುಡುಗರಿಬ್ಬರಿಗೂ ಅನ್ವಯವಾಗುತ್ತದೆ” ಎಂದಿದ್ದಾರೆ.

ಕಾಲೇಜು ಪ್ರಾಂಶುಪಾಲ ಮತ್ತು ಪ್ರಾಧ್ಯಾಪಕ ಸತ್ಯವ್ರತ್ ಸಿಂಗ್ ರಾವತ್ ಅವರು ಪ್ರತಿಕ್ರಿಯಿಸಿ, “ಸಮವಸ್ತ್ರವು ನೀತಿ ಸಂಹಿತೆಯ ಭಾಗವಾಗಿದೆ. ಪ್ರವೇಶದ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಈ ಕುರಿತು ಸಹಿ ಹಾಕಿರುತ್ತಾರೆ. ಕಾಲೇಜಿನಲ್ಲಿ 12,000 ವಿದ್ಯಾರ್ಥಿಗಳಿದ್ದಾರೆ. ಹೆಚ್ಚುತ್ತಿರುವ ಗೂಂಡಾಗಿರಿ ಮತ್ತು ಹೊರಗಿನವರ ಉಪಟಳವನ್ನು ತಡೆಯಲು ಕ್ರಮ ಜರುಗಿಸಲಾಗಿದೆ” ಎಂದು ಹೇಳಿದ್ದಾರೆ.

“ಪ್ರತಿಭಟನಕಾರರು ಕಾಲೇಜು ವಿದ್ಯಾರ್ಥಿಗಳಲ್ಲ. ನಮಗೆ ಯಾರೊಂದಿಗೂ ಸಮಸ್ಯೆ ಇಲ್ಲ, ಅವರು ಸ್ಕಾರ್ಫ್ ಅಥವಾ ಹಿಜಾಬ್‌ ಧರಿಸಬಹುದು. ಆದರೆ ಸಮವಸ್ತ್ರ ಕಡ್ಡಾಯವಾಗಿದೆ. ಬದಲಾಯಿಸುವ ಕೋಣೆಯಲ್ಲಿ ಬುರ್ಖಾವನ್ನು ತೆಗೆಯಬೇಕು. ಅಂತಿಮವಾಗಿ, ಸಮವಸ್ತ್ರವನ್ನು ಧರಿಸಲು ಇಷ್ಟಪಡದವರೊಂದಿಗೆ ತಕರಾರುಗಳಿವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕ್ರಮವು ಕಾನೂನುಬದ್ಧವಾಗಿದೆಯೇ?

ಉತ್ತರ ಪ್ರದೇಶದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, “ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಅಧಿಕಾರವು ಪ್ರಾಂಶುಪಾಲರಿಗೆ ಇರುತ್ತದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಎಂ.ಕಾಮ್ ವಿದ್ಯಾರ್ಥಿನಿ ಮೆಹಕ್ ಅನ್ಸಾರಿ ಮಾತನಾಡಿ, “ಬಟ್ಟೆ ಬದಲಾಯಿಸುವ ಕೊಠಡಿ ಇದ್ದಾಗ ಬುರ್ಖಾ ತೆಗೆದರೆ ಏನು ತೊಂದರೆ? ರಸ್ತೆಯಲ್ಲಿ ಬುರ್ಖಾ ತೆಗೆಯುವಂತಾಗಿದೆ ಎಂಬುದು ಸುಳ್ಳು” ಎಂದು ಹೇಳಿದ್ದಾರೆ.

ಮತ್ತೋರ್ವ ವಿದ್ಯಾರ್ಥಿ ಮಧು ಮನ್ಶಾ ಮಾತನಾಡಿ, “ಈ ಹಿಂದೆ ಗುರುತಿನ ಚೀಟಿ ತಪಾಸಣೆ ಇಲ್ಲದ ಕಾರಣ ಯಾರಾದರೂ ಕಾಲೇಜಿಗೆ ಪ್ರವೇಶಿಸುತ್ತಿದ್ದರು. ಆದರೆ ಈಗ ಗುರುತಿನ ಚೀಟಿಯನ್ನೂ ಪರಿಶೀಲಿಸಲಾಗಿದೆ. ಈಗ ಗುರುತಿನ ಚೀಟಿ ಮತ್ತು ಸಮವಸ್ತ್ರ ಹೊಂದಿರುವವರು ಮಾತ್ರ ಪ್ರವೇಶಿಸಬಹುದು” ಎಂದಿದ್ದಾರೆ.

ಕಾಲೇಜಿನಲ್ಲಿ ಡಿಫೆನ್ಸ್‌ ಸ್ಟಡೀಸ್ ಕಲಿಸುವ ಪ್ರೊಫೆಸರ್ ಆನಂದ್ ಕುಮಾರ್, “ಮಾಧ್ಯಮದ ಒಂದು ವಿಭಾಗವು ದಾರಿ ತಪ್ಪಿಸುವ ವರದಿ ಮಾಡುತ್ತಿದೆ. ಹಿಜಾಬ್ ಅನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ. ಆದರೆ ಅವರಿಗೆ ಹಿಜಾಬ್ ಮತ್ತು ಬುರ್ಖಾ ನಡುವಿನ ವ್ಯತ್ಯಾಸ ತಿಳಿದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊತ್ವಾಲಿ ಎಸ್‌ಎಚ್‌ಒ ವಿಪ್ಲವ್ ಶರ್ಮಾ ಮಾತನಾಡಿ, “ಕಾಲೇಜಿನಲ್ಲಿ ಡ್ರೆಸ್ ಕೋಡ್ ಬಹಳ ಹಿಂದಿನಿಂದಲೂ ಇದೆ. ಅಂತಹದ್ದೇನೂ ಇಲ್ಲದಿರುವಾಗ ಬುರ್ಖಾ ಸಮಸ್ಯೆ ಎಂದು ಮಾಧ್ಯಮಗಳು ತಪ್ಪುದಾರಿಗೆಳೆಯುವ ಸುದ್ದಿಗಳನ್ನು ನೀಡುತ್ತಿವೆ” ಎಂದು ಟೀಕಿಸಿದ್ದಾರೆ.

ವರದಿ ಕೃಪೆ: ನ್ಯೂಸ್‌ ಲಾಂಡ್ರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...