HomeಅಂಕಣಗಳುKarnataka against SIRಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: SIR ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರು, ತಜ್ಞರ ಕಳವಳ

ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯ: SIR ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತರು, ತಜ್ಞರ ಕಳವಳ

- Advertisement -
- Advertisement -

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗದೊಳಗೆ ದಾಖಲಾಗಿರುವ ಭಿನ್ನಾಭಿಪ್ರಾಯಗಳು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ದಿ ಇಂಡಿಯನ್ ಎಕ್ಸ್‌ಪ್ರೆಸ್  ನಡೆಸಿದ ತನಿಖಾ ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬಿರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಷಿ ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ಕೆಲವು ನಿರ್ಧಾರಗಳು ಮತ್ತು ಆದೇಶಗಳ ಕುರಿತು ಲಿಖಿತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಅರಿವಿಗೆ ಬಾರದ ರೀತಿಯಲ್ಲಿ ಅಥವಾ ತಮ್ಮ ಶಿಫಾರಸುಗಳಿಗೆ ವಿರುದ್ಧವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ಅವರ ಆಕ್ಷೇಪಗಳಲ್ಲಿದೆ.

ಈ ಆಕ್ಷೇಪಗಳು ಹೊಸ ಮತದಾರರ ನೋಂದಣಿ, ಮತದಾರರ ಹೆಸರುಗಳ ಸೇರ್ಪಡೆ-ಅಳಿಸುವಿಕೆ, ಹೆಸರು ಮರುಸ್ಥಾಪನೆ, ಫಾರ್ಮ್‌ ನಂ.6ರಲ್ಲಿನ ಬದಲಾವಣೆ ಹಾಗೂ ಮತದಾರರ ಪಟ್ಟಿಯ ದತ್ತಾಂಶವನ್ನು ನಿರ್ವಹಿಸುವ ಸಾಫ್ಟ್‌ವೇರ್ ವ್ಯವಸ್ಥೆಯ ಕೇಂದ್ರೀಕರಣ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿವೆ. ಕೆಲವು ಕ್ರಮಗಳನ್ನು ಇಬ್ಬರು ಆಯುಕ್ತರು “ಅನಧಿಕೃತ” ಮತ್ತು “ಕಾನೂನುಬಾಹಿರ” ಎಂದು ತಮ್ಮ ಆಕ್ಷೇಪಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ಹೇಳಿದೆ.

“ಚುನಾವಣಾ ಆಯೋಗವೆಂದರೆ ಕೇವಲ ಅಧ್ಯಕ್ಷರಲ್ಲ”

ಮಾಜಿ ಮುಖ್ಯ ಚುನಾವಣಾ ಆಯುಕ್ತ (CEC) ಎಸ್.ವೈ. ಖುರೇಷಿ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್  ಪತ್ರಿಕೆಯಲ್ಲಿ ಬರೆದಿರುವ ವಿಶೇಷ ಲೇಖನದಲ್ಲಿ ಆಯೋಗದ ಸಾಂವಿಧಾನಿಕ ಸ್ವರೂಪವನ್ನು ನೆನಪಿಸಿ, ಆಡಳಿತ ವೈಖರಿಯನ್ನು ಕಟುವಾಗಿ ವಿಮರ್ಶಿಸಿದ್ದಾರೆ.

“ಚುನಾವಣಾ ಆಯೋಗವು ಮೂವರು ಸದಸ್ಯರಿರುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯೇ ಹೊರತು, ಅದು ಕೇವಲ ಅದರ ಮುಖ್ಯಸ್ಥರ (ಅಧ್ಯಕ್ಷರ) ಮತ್ತೊಂದು ಹೆಸರಲ್ಲ. ಆಯೋಗದ ಪ್ರತಿಯೊಂದು ನಿರ್ಧಾರವೂ ಸಾಧ್ಯವಾದಷ್ಟು ಒಮ್ಮತದಿಂದ ನಡೆಯಬೇಕು. ಆಯುಕ್ತರ ನಡುವೆ ಭಿನ್ನಾಭಿಪ್ರಾಯವಿದ್ದರೆ ಕಾನೂನಿನಲ್ಲಿ ನಿಗದಿಪಡಿಸಿರುವ ಬಹುಮತದ ಪ್ರಕ್ರಿಯೆ ಅನ್ವಯಿಸುತ್ತದೆ. ಇತರ ಆಯುಕ್ತರ ಅರಿವಿಲ್ಲದೆ ಅಥವಾ ಬಹುಮತದ ಒಪ್ಪಿಗೆಯಿಲ್ಲದೆ ಕೈಗೊಳ್ಳುವ ಏಕಪಕ್ಷೀಯ ನಿರ್ಧಾರಗಳ ಕಾನೂನುಬದ್ಧತೆಯ ಕುರಿತು ಗಂಭೀರ ಪ್ರಶ್ನೆಗಳು ಏಳುತ್ತವೆ” ಎಂದು ಖುರೇಷಿ ಎಚ್ಚರಿಸಿದ್ದಾರೆ.

ಅಲ್ಲದೆ, ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಕೈಗೊಂಡ ನಿರ್ಧಾರಗಳ ಪಟ್ಟಿಯನ್ನು ಬಹಿರಂಗಪಡಿಸಿ, ಅವುಗಳಲ್ಲಿ ಎಷ್ಟು ಒಮ್ಮತದಿಂದ ಹಾಗೂ ಎಷ್ಟು ಬಹುಮತದಿಂದ ಆಗಿವೆ ಎಂಬುದನ್ನು ಸಾರ್ವಜನಿಕಗೊಳಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ನಮ್ಮ ಕಾಲದಲ್ಲಿ ನಿರ್ಧಾರಗಳು ಒಮ್ಮತದಿಂದ ಆಗುತ್ತಿದ್ದವು”

ಮತ್ತೋರ್ವ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಒ.ಪಿ. ರಾವತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಆಯೋಗದ ಒಳಗೆ ಹೊರಬಂದಿರುವ ಭಿನ್ನಾಭಿಪ್ರಾಯಗಳು ಅತ್ಯಂತ ಆತಂಕಕಾರಿ ಎಂದಿದ್ದಾರೆ.

“ಚುನಾವಣಾ ಆಯೋಗದ ಒಳಗೆ ನಡೆದಿರುವ ಬೆಳವಣಿಗೆಗಳು ಮತ್ತು ಭಿನ್ನಾಭಿಪ್ರಾಯಗಳು ‘ಅತ್ಯಂತ ಗಂಭೀರ ಹಾಗೂ ದುರದೃಷ್ಟಕರ’. ನಮ್ಮ ಅಧಿಕಾರಾವಧಿಯಲ್ಲಿ ಆಯೋಗದ ಪ್ರತಿಯೊಂದು ಪ್ರಮುಖ ನಿರ್ಧಾರವೂ ಸಮಾಲೋಚನೆ ಮತ್ತು ಒಮ್ಮತದ ಮೂಲಕವೇ ನಡೆಯುತ್ತಿತ್ತು. ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತರದೆ ಮತದಾರರ ನೋಂದಣಿಗೆ ಬಳಸುವ ಫಾರ್ಮ್‌ ನಂ. 6ರಲ್ಲಿ ಮಾಡಲಾದ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ” ಎಂದು ರಾವತ್ ಕಿಡಿಕಾರಿದ್ದಾರೆ.

“ಇದು ನಾಗರಿಕರ ಹಕ್ಕಿನ ಉಲ್ಲಂಘನೆ, ಗಂಭೀರ ರಾಷ್ಟ್ರೀಯ ಬಿಕ್ಕಟ್ಟು”

ಪ್ರಸಿದ್ಧ ರಾಜಕೀಯ ವಿಜ್ಞಾನಿ ಹಾಗೂ ವಿಶ್ಲೇಷಕ ಸುಹಾಸ್ ಪಾಲ್ಶಿಕರ್ ಅವರು ಪ್ರಸ್ತುತ ಸ್ಥಿತಿಯನ್ನು ಆಡಳಿತಾತ್ಮಕ ದುರಂತ ಎಂದು ಬಣ್ಣಿಸಿದ್ದಾರೆ.

“ಚುನಾವಣಾ ಆಯೋಗದ ಒಳಗೆ ನಡೆದಿರುವ ಬೆಳವಣಿಗೆಗಳು ಮೂಲಭೂತ ನಿರ್ಧಾರ ಕೈಗೊಳ್ಳುವ ತತ್ವಗಳನ್ನೇ ಬುಡಮೇಲು ಮಾಡುತ್ತಿದ್ದು, ಇದು ನಾಗರಿಕರ ಮತದಾನದ ಹಕ್ಕನ್ನು ಉಲ್ಲಂಘಿಸುವ ಗಂಭೀರ ‘ರಾಷ್ಟ್ರೀಯ ಬಿಕ್ಕಟ್ಟು’ (National Crisis). ಮೂವರು ಆಯುಕ್ತರಲ್ಲಿ ಇಬ್ಬರು ಆಯುಕ್ತರ ವಿರೋಧದ ನಡುವೆಯೂ ಹೊರಡಿಸಲಾದ ಯಾವುದೇ ಆದೇಶಗಳನ್ನು ಅಸಿಂಧು ಅಥವಾ ನಿಷ್ಪ್ರಯೋಜಕ ಎಂದು ಪರಿಗಣಿಸಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತೀಯ ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದೆ. ಪ್ರಸ್ತುತ ಕಾನೂನಿನ ಪ್ರಕಾರ, ಆಯೋಗದ ವ್ಯವಹಾರಗಳನ್ನು ಸಾಧ್ಯವಾದಷ್ಟು ಒಮ್ಮತದಿಂದ ನಡೆಸಬೇಕು. ಆಯುಕ್ತರ ನಡುವೆ ಯಾವುದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ, ಆ ವಿಷಯವನ್ನು ಬಹುಮತದ ಅಭಿಪ್ರಾಯದ ಆಧಾರದ ಮೇಲೆ ನಿರ್ಧರಿಸಬೇಕು ಎಂದು 2023ರ Chief Election Commissioner and Other Election Commissioners (Appointment, Conditions of Service and Term of Office) Actನ ಸೆಕ್ಷನ್ 18ರಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ದಾಖಲಿಸಿರುವ ಆಕ್ಷೇಪಗಳು ಚುನಾವಣಾ ಆಯೋಗದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ಪಾರದರ್ಶಕತೆ ಮತ್ತು SIRನ ಅನುಷ್ಠಾನದ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪುನಃ ಅಗ್ರಸ್ಥಾನ ಪಡೆದ ಗೌತಮ್ ಅದಾನಿ; ಶೇ. 13 ರಷ್ಟು ಸಂಪತ್ತು ಹೆಚ್ಚಳ

ಎಂ3ಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ರ ಪ್ರಕಾರ, ಭಾರತದ ಬಿಲಿಯನೇರ್‌ಗಳ ಸಂಖ್ಯೆಯು ದಾಖಲೆಯ 391 ಕ್ಕೆ ತಲುಪಿದ್ದು, ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿರುವ ಗೌತಮ್ ಅದಾನಿ ಮತ್ತು ಅವರ ಕುಟುಂಬವು...

ಚಲಿಸುವ ರೈಲಿನಲ್ಲಿ ಹಲ್ಲೆ ನಡೆಸಿ ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಒತ್ತಾಯ: ಮುಸ್ಲಿಂ ಯುವಕನ ಆರೋಪ

ಮುಂಬೈಯಿಂದ ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮುಸ್ಲಿಂ ಯುವಕನೊಬ್ಬ ಆರೋಪಿಸಿದ್ದಾನೆ. ದಾಳಿಕೋರರು ತನ್ನ ಶರ್ಟ್ ಹರಿದು, ಥಳಿಸಿ, ಬಲವಂತವಾಗಿ "ಜೈ ಶ್ರೀ ರಾಮ್" ಎಂದು ಜಪಿಸುವಂತೆ...

ಫಾರ್ಮ್ 6 ರಲ್ಲಿನ ಬದಲಾವಣೆಗಳು ಕಾನೂನುಬಾಹಿರ; ಆಯೋಗದೊಳಗಿನ ಭಿನ್ನಾಭಿಪ್ರಾಯ ಗಂಭೀರ: ಮಾಜಿ ಸಿಇಸಿ ಓ.ಪಿ. ರಾವತ್

"ಶಾಸನಬದ್ಧ ಮತದಾರರ ನೋಂದಣಿ ಫಾರ್ಮ್ ನಂ 6 ರಲ್ಲಿ ಮಾಡಲಾದ ಬದಲಾವಣೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕಾನೂನುಬಾಹಿರ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್ ತಿಳಿಸಿದ್ದಾರೆ. "ಚುನಾವಣಾ ಆಯೋಗದೊಳಗಿನ...

‘ಸಲ್ವಾರ್ ತೆಗೆಯಲು ಯತ್ನ, ಎದೆ ಒತ್ತುವುದು ಅತ್ಯಾಚಾರ ಯತ್ನವಲ್ಲವೇ?’: ಪಾಟ್ನಾ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಚಾಟಿ 

ನವದೆಹಲಿ: ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಮತ್ತು ಆಕೆಯ ಎದೆಯನ್ನು ಒತ್ತುವುದು ಸೇರಿದಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ...

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ; ಕೂಡಲೇ ಎಸ್‌ಐಆರ್ ನಿಲ್ಲಿಸಿ: ವಿಪಕ್ಷಗಳ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಗಂಭೀರ ಕಳವಳ ವ್ಯಕ್ತಪಡಿಸಿರುವುದು ದೊಡ್ಡ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್...

‘ಸಹೋದರಿಯರು, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧ’: ಮುಸ್ಲಿಂ ಮಹಿಳೆಯರ ವಿರುದ್ಧ ಮಧ್ಯಪ್ರದೇಶ ಬಿಜೆಪಿ ಶಾಸಕನ ಅತ್ಯಾಚಾರ ಬೆದರಿಕೆ

ಭೋಪಾಲ್: ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಕಾರ್ಯಕ್ರಮಗಳಿಗೆ ಮುಸ್ಲಿಂ ಯುವಕರು ಆಗಮಿಸುವುದನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ನೀಡಿರುವ ಹೇಳಿಕೆ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. “ಮುಸ್ಲಿಂ ಹುಡುಗರು ಮಾತ್ರ...

BWSSB ಗುತ್ತಿಗೆ ಪದ್ಧತಿ ರದ್ದತಿಗೆ ಆಗ್ರಹ: ಜಲಮಂಡಳಿ ಗುತ್ತಿಗೆ ಕಾರ್ಮಿಕರ ಸರಣಿ ಸಾವಿಗೆ ಆಕ್ರೋಶ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಅಹೋರಾತ್ರಿ ಸುಗಮವಾಗಿ ನಿರ್ವಹಿಸುವ BWSSB ಜಲಮಂಡಳಿಯ ಸಾವಿರಾರು ಗುತ್ತಿಗೆ ಕಾರ್ಮಿಕರು ತಮ್ಮ ಜೀವಭದ್ರತೆ ಹಾಗೂ ಮೂಲಭೂತ ಹಕ್ಕುಗಳಿಗಾಗಿ ಆಗ್ರಹಿಸಿ ಇಂದು (ಸೆಪ್ಟೆಂಬರ್ 23)...

ಕೋಲ್ಕತ್ತಾ: ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಉಪಾಸನಾ ಚೌಧರಿ ಮನೆ ಮೇಲೆ ಕಲ್ಲುತೂರಾಟ, ಮಾಜಿ ಶಾಸಕ ಹುಮಾಯೂನ್ ಕಬೀರ್ ಮೇಲೂ ಹಲ್ಲೆ!

ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮುಕುಂದಪುರದಲ್ಲಿ ಮಂಗಳವಾರ (ಸೆ. 22) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ನಡೆದಿದೆ. ಘಟನೆಯಲ್ಲಿ ಟಿಎಂಸಿ ಐಟಿ ಸೆಲ್ ಮುಖ್ಯಸ್ಥೆ ಹಾಗೂ ವಕ್ತಾರೆ...

SIR ಏಕಪಕ್ಷೀಯ ತೀರ್ಮಾನ ಖಂಡಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚುನಾವಣಾ ಆಯೋಗದ (ECI) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಸ್ವರೂಪದ ಬಿರುಕು ಮೂಡಿದೆ. ಎಸ್‌ಐಆರ್ (Special Intensive Revision – SIR / ವಿಶೇಷ...

‘ವಂದೇ ಮಾತರಂ’ ಹಾಡಲು ಬಾರದ ಬಿಜೆಪಿಗರಿಗೆ ಕೋರ್ಟ್ ಆದೇಶ ನೆಮ್ಮದಿ ತಂದಿದೆ: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ

'ವಂದೇ ಮಾತರಂ' ಹಾಡದಿದ್ದರೆ ಒಬ್ಬ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಸಂವಿಧಾನಾತ್ಮಕ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸ್ವಾಗತಿಸಿದ್ದಾರೆ. ಧಾರ್ಮಿಕ...