HomeಅಂಕಣಗಳುSIRದೆಹಲಿ ಪ್ರತಿಭಟನೆ: ‘ತಿರಂಗ ಹಾರಿಸಿದ್ದಕ್ಕೆ ಜೈಲಿಗೆ ಹೋಗಲೂ ಸಿದ್ಧ’: ಮೋದಿ ಸರ್ಕಾರದ ವಿರುದ್ಧ ಅಭಿಜೀತ್ ದೀಪ್ಕೆ...

ದೆಹಲಿ ಪ್ರತಿಭಟನೆ: ‘ತಿರಂಗ ಹಾರಿಸಿದ್ದಕ್ಕೆ ಜೈಲಿಗೆ ಹೋಗಲೂ ಸಿದ್ಧ’: ಮೋದಿ ಸರ್ಕಾರದ ವಿರುದ್ಧ ಅಭಿಜೀತ್ ದೀಪ್ಕೆ ತೀವ್ರ ವಾಗ್ದಾಳಿ

- Advertisement -
- Advertisement -

ನವದೆಹಲಿ: ರಾಷ್ಟ್ರಧ್ವಜ ಹಾರಿಸುವುದನ್ನೇ ಅಪರಾಧವೆಂದು ಪರಿಗಣಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಿರಂಗ ಹಾರಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾದರೂ ಸಿದ್ಧ ಎಂದು ಘೋಷಿಸಿದ್ದಾರೆ. ಶುಕ್ರವಾರ ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ನಡೆಯಲಿರುವ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೂ ಮುನ್ನ ದೆಹಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಮನೆಯ ಮೇಲೆ ನಿಗಾ ಇಡಲಾಗುತ್ತಿದ್ದು, ನಂಬರ್ ಪ್ಲೇಟ್‌ಗಳಿಲ್ಲದ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ ಎಂದು ಆರೋಪಿಸಿರುವ ಅವರು, ಇಂತಹ ಕ್ರಮಗಳಿಗೆ ತಾವು ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗುರುವಾರ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, ರಾಷ್ಟ್ರಧ್ವಜ ಹಾರಿಸುವುದಕ್ಕಾಗಿ ನಾಗರಿಕರನ್ನು ಜೈಲಿಗೆ ಕಳುಹಿಸುವ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಕೇತ ಎಂದು ಕಿಡಿಕಾರಿದರು. ಶುಕ್ರವಾರ ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್‌ಗೆ ತೆರಳಿ ರಾಷ್ಟ್ರಧ್ವಜ ಹಾರಿಸುವುದಾಗಿ ಘೋಷಿಸಿದ ಅವರು, ಅದನ್ನು ಅಪರಾಧವೆಂದು ಪರಿಗಣಿಸಿದರೆ ಅಂತಹ ಕ್ರಮ ಕೈಗೊಳ್ಳುವವರೇ ದೇಶದ್ರೋಹಿಗಳು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

“ನಾಳೆ ನಾವು ಶಾಂತಿಯುತವಾಗಿ ಸೆಂಟ್ರಲ್ ಪಾರ್ಕ್‌ಗೆ ಹೋಗಿ ತಿರಂಗ ಹಾರಿಸುತ್ತೇವೆ. ಈ ದೇಶದ ನಾಗರಿಕರಾಗಿ ನಾವು ರಾಷ್ಟ್ರಧ್ವಜ ಹಾರಿಸುವುದನ್ನು ನೀವು ಅಪರಾಧವೆಂದು ಪರಿಗಣಿಸಿದರೆ, ನೀವೇ ದೊಡ್ಡ ದೇಶದ್ರೋಹಿಗಳು. ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ನಾವು ಜೈಲಿಗೆ ಹೋಗಬೇಕಾದರೆ ಅದಕ್ಕೂ ಸಿದ್ಧರಿದ್ದೇವೆ” ಎಂದು ದೀಪ್ಕೆ ಹೇಳಿದ್ದಾರೆ.

ಶುಕ್ರವಾರ ಮತ್ತು ಶನಿವಾರ ‘ಆಡಳಿತಾತ್ಮಕ ಕಾರಣಗಳಿಗಾಗಿ’ ಸೆಂಟ್ರಲ್ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮುಚ್ಚುವುದಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ, ಆಯ್ದ ಗುಂಪಿನ ಜನರಿಗೆ ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸಲು ಮತ್ತು ರಾಷ್ಟ್ರಗೀತೆ ಹಾಡಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆದರೆ, ಪ್ರತಿಭಟನೆಗೆ ನಿರ್ಬಂಧ ವಿಧಿಸುವ ಕ್ರಮವನ್ನು ದೀಪ್ಕೆ ಪ್ರಶ್ನಿಸಿದ್ದಾರೆ. “ನಾವು ನಾಳೆ ದೇಶದ 100 ಸ್ಥಳಗಳಲ್ಲಿ ತಿರಂಗ ಹಾರಿಸುತ್ತೇವೆ ಎಂದು ಹೇಳಿದರೆ, ನೀವು ಆ ನೂರು ಸ್ಥಳಗಳನ್ನೂ ಮುಚ್ಚುತ್ತೀರಾ? ನರೇಂದ್ರ ಮೋದಿಯವರ ರ‍್ಯಾಲಿಗೆ ಹೋಗಿ ಯಾರಾದರೂ ತಿರಂಗ ಹಾರಿಸಿದರೆ ಪೊಲೀಸರು ಆ ರ‍್ಯಾಲಿಯನ್ನೇ ರದ್ದುಪಡಿಸುತ್ತಾರೆಯೇ? ಇದೆಂಥ ತಮಾಷೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಚುನಾವಣಾ ಅಕ್ರಮಗಳ ಆರೋಪಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಸಿಜೆಪಿ ಸಾರ್ವಜನಿಕರಿಗೆ ಮತ್ತು ತನ್ನ ಬೆಂಬಲಿಗರಿಗೆ ಕರೆ ನೀಡಿದೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುವ ಈ ಹೋರಾಟದಲ್ಲಿ ರಾಷ್ಟ್ರಧ್ವಜ ಹಾರಿಸುವುದಕ್ಕೆ ಅಡ್ಡಿಪಡಿಸುವುದರ ವಿರುದ್ಧವೂ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

“ನೀವು ತಿರಂಗ ಹಾರಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿ. ಹಾಗೆ ಮಾಡಿದರೆ ನೀವೇ ದೇಶದ್ರೋಹಿಗಳು. ಈವರೆಗೆ ಯಾವ ಪ್ರಧಾನಿಯೂ, ಯಾವ ಸರ್ಕಾರವೂ ಇಂತಹ ಕೆಲಸ ಮಾಡಿಲ್ಲ” ಎಂದು ದೀಪ್ಕೆ ಹೇಳಿದ್ದಾರೆ.

ಅಕ್ಟೋಬರ್ 13ರಂದು ದೆಹಲಿಯ ಜಂತರ್ ಮಂತರ್‌ಗೆ ರಾಷ್ಟ್ರಧ್ವಜ ಹಿಡಿದು ಪ್ರವೇಶಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಗಾದ ತಮ್ಮ ಪಕ್ಷದ ಸಹೋದ್ಯೋಗಿಗಳಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ. ರಾಷ್ಟ್ರಧ್ವಜ ಹಿಡಿದು ಪ್ರತಿಭಟಿಸಲು ಮುಂದಾದವರನ್ನೇ ಬಂಧಿಸುವ ಮೂಲಕ ನಾಗರಿಕರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

“ಭಾರತದ ಪ್ರಧಾನಿಗೆ ತಿರಂಗದ ಮೇಲೆ ಇಷ್ಟೊಂದು ದ್ವೇಷವೇಕೆ? ತಿರಂಗವನ್ನು ದ್ವೇಷಿಸುವವರು ಪ್ರಧಾನಿಯಾಗಿ ಮುಂದುವರಿಯಲು ಅರ್ಹರೇ?” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.

ತಮ್ಮ ಮನೆಯ ಹೊರಗಿರುವ ಭದ್ರತಾ ಸಿಬ್ಬಂದಿಯಿಂದ ಗುಪ್ತಚರ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಆರೋಪಿಸಿರುವ ಅವರು, ನಂಬರ್ ಪ್ಲೇಟ್‌ಗಳಿಲ್ಲದ ವಾಹನಗಳು ತಮ್ಮನ್ನು ಹಿಂಬಾಲಿಸುತ್ತಿವೆ ಎಂದೂ ಹೇಳಿದ್ದಾರೆ. ದೆಹಲಿ ಪೊಲೀಸರು ಗುರುವಾರ ರಾತ್ರಿ ಅಥವಾ ಶುಕ್ರವಾರ ಬೆಳಿಗ್ಗೆ ತಮ್ಮನ್ನು ಬಂಧಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರೂ, ಇಂತಹ ಕ್ರಮಗಳಿಂದ ತಮ್ಮ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ನರೇಂದ್ರ ಮೋದಿಯವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ದೆಹಲಿ ಪೊಲೀಸರು ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ನನ್ನನ್ನು ಬಂಧಿಸಬಹುದು. ಆದರೆ ನಾವು ಹೆದರುವುದಿಲ್ಲ” ಎಂದು ದೀಪ್ಕೆ ಘೋಷಿಸಿದ್ದಾರೆ.

ತಮ್ಮ ಹೋರಾಟದ ಉದ್ದೇಶ ಸರ್ಕಾರವನ್ನು ಬದಲಿಸುವುದಲ್ಲ, ಬದಲಿಗೆ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಸ್ವತಂತ್ರ ಮತ್ತು ಪಕ್ಷಪಾತರಹಿತ ರೀತಿಯಲ್ಲಿ ಬದಲಿಸಿ, ಹೊಸ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎನ್ನುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ಇತರ ಆಯುಕ್ತರ ಅಭಿಪ್ರಾಯಗಳಿಗೂ ಗ್ಯಾನೇಶ್ ಕುಮಾರ್ ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ಇಂತಹ ಪ್ರಶ್ನೆಗಳನ್ನು ಎತ್ತುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ. ಅದನ್ನು ಅಧಿಕೃತವಾಗಿ ಘೋಷಿಸಿದರೆ ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂಬ ಭಯದಿಂದ ನರೇಂದ್ರ ಮೋದಿ ಸರ್ಕಾರ ಹಿಂದೆ ಸರಿಯುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ರಾಷ್ಟ್ರಧ್ವಜ ಹಾರಿಸುವ ಹಕ್ಕು, ಶಾಂತಿಯುತ ಪ್ರತಿಭಟನೆ ಮತ್ತು ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಕೇಂದ್ರವಾಗಿಟ್ಟುಕೊಂಡು ಸಿಜೆಪಿ ನಡೆಸುತ್ತಿರುವ ಹೋರಾಟ ಈಗ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಸೆಂಟ್ರಲ್ ಪಾರ್ಕ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವುದು ಮತ್ತು ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿರುವ ಸಿಜೆಪಿ ನಡುವಿನ ಈ ಬಿಕ್ಕಟ್ಟಿನ ನಡುವೆ, ಬಂಧನದ ಸಾಧ್ಯತೆಯಿದ್ದರೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ದೀಪ್ಕೆ ಅವರ ಘೋಷಣೆ ಗಮನ ಸೆಳೆದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿಯ ತಿರಂಗಾ ಮೆರವಣಿಗೆ: ಸೆಂಟ್ರಲ್ ಪಾರ್ಕ್ ಮುಚ್ಚುವಿಕೆ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಮುಚ್ಚುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಕಾಕ್ರೋಚ್ ಜನತಾ ಪಾರ್ಟಿ...

ದೆಹಲಿ ಬಿಟ್ಟು ರಿಲಯನ್ಸ್ ರಿಫೈನರಿ ಇರುವ ಜಾಮ್‌ನಗರಕ್ಕೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಭೇಟಿ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರ ಮುಂಬರುವ ಭಾರತ ಭೇಟಿ ಹಾಗೂ ವಿದೇಶಾಂಗ ಸಚಿವಾಲಯದ ನಿರ್ಧಾರಗಳ ಕುರಿತು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ...

“ಅಮೆರಿಕ-ಪಾಕಿಸ್ತಾನ್ ಯುದ್ಧವಾದರೆ ನಾವು ಪಾಕ್ ಪರ ನಿಲ್ಲುತ್ತೇವೆ”: ರಾಜಸ್ಥಾನ ಬಿಜೆಪಿ ಅಧ್ಯಕ್ಷರಿಂದ ವಿವಾದಾತ್ಮಕ ಹೇಳಿಕೆ!

"ಒಂದು ವೇಳೆ ಇಂದು ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಹೊರೆಯ ದೇಶವಾಗಿರುವುದರಿಂದ ನಾವು ಅದರ ಜೊತೆ ಇರುತ್ತೇವೆ" ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ...

ಗ್ಯಾನೇಶ್ ಕುಮಾರ್ ರಕ್ಷಣೆಗಾಗಿ ದೆಹಲಿಯನ್ನೇ ಭಾರತ-ಪಾಕ್ ಗಡಿಯನ್ನಾಗಿ ಪರಿವರ್ತಿಸಿದ ಮೋದಿ: ಅಭಿಜೀತ್ ದಿಪ್ಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ನಡೆದಿರುವ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಚರ್ಚಿಸಲು ವಿದ್ಯಾರ್ಥಿ ಸಂಘಟನೆಗಳು,...

ಸಹಪಾಠಿಗಳ ಜಾತಿ, ಪ್ರವೇಶದ ವರ್ಗ, ರ‍್ಯಾಂಕ್ ಕೇಳಬೇಡಿ: ದರ್ಶನ್, ಸಾಹಿಲ್ ಸಾವುಗಳ ಬೆನ್ನಲ್ಲೇ ತಾರತಮ್ಯ ವಿರೋಧಿ ನಿಯಮ ನೆನಪಿಸಿದ ಐಐಟಿ ಬಾಂಬೆ

ಮುಂಬೈ: ಸಹಪಾಠಿಗಳ ಜಾತಿ, ಪ್ರವೇಶದ ವರ್ಗ ಅಥವಾ ಪ್ರವೇಶ ಪರೀಕ್ಷೆಯ ರ‍್ಯಾಂಕ್‌ಗಳ ಬಗ್ಗೆ ಪ್ರಶ್ನಿಸುವುದು ತಾರತಮ್ಯಕ್ಕೆ ಕಾರಣವಾಗಬಹುದು. ಇಂತಹ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ ತನ್ನ ವಿದ್ಯಾರ್ಥಿಗಳಿಗೆ...

ಲೈಂಗಿಕ ಕಿರುಕುಳದ ಆರೋಪ ಮಾಡಿದ ಪತ್ರಕರ್ತೆಯ ವಿರುದ್ಧ ಜಾತಿ ನಿಂದನೆ ಪ್ರಕರಣ: ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವಾಗ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿವೇಕ್ ಭಗತ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ ಮಹಿಳಾ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ...

ಸಿಇಸಿ ವಿರೋಧಿ ಪ್ರತಿಭಟನೆ: ಮೆಟ್ರೋ ನಿರ್ಬಂಧ, ಇಂಟರ್ನೆಟ್ ಸ್ಥಗಿತ ಪ್ರಕರಣ: ಸುಪ್ರೀಂ ಕೋರ್ಟ್ ಗೆ ಬೇಷರತ್ ಕ್ಷಮೆಯಾಚಿಸಿದ ಕೇಂದ್ರ ಕಾರ್ಯದರ್ಶಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೆಟ್ರೋ ಮತ್ತು ರೈಲು ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಹಾಗೂ ಇಂಟರ್ನೆಟ್...

‘ಯಾರೂ ನಮ್ಮನ್ನು ಬೆದರಿಸಿ ಮಣಿಸಲು ಸಾಧ್ಯವಿಲ್ಲ’: ವಿಪಕ್ಷಗಳ ಸುಪ್ರೀಂ ಕೋರ್ಟ್ ಮಾರ್ಚ್ ಕುರಿತು ಸಿಜೆಐ ಹೇಳಿಕೆ

ನ್ಯಾಯಾಲಯ ಸಂಕೀರ್ಣಗಳ ಸಮೀಪ ಪ್ರತಿಭಟನೆಗಳು ಮತ್ತು ಮೆರವಣಿಗೆಗಳಿಗೆ ನಿಯಂತ್ರಕ ಚೌಕಟ್ಟೊಂದನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಇಂದು (ಅ.15) ನೋಟಿಸ್ ಜಾರಿ ಮಾಡಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್...

ದೆಹಲಿ ಪ್ರತಿಭಟನೆ ಹಾಗೂ ಜಂತರ್ ಮಂತರ್ ರದ್ದತಿ ವಿವಾದ: ಕೇಂದ್ರ ಸರ್ಕಾರ ಹಾಗೂ ಪೊಲೀಸರಿಗೆ ಸುಪ್ರೀಂ ನೋಟಿಸ್; ವಿಡಿಯೋ ಸಾಕ್ಷ್ಯ ಭದ್ರಪಡಿಸಲು ನಿರ್ದೇಶನ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ನಡೆಸಿದ್ದರೆನ್ನಲಾದ ಅತಿಯಾದ ಬಲಪ್ರಯೋಗ, ಸಾರ್ವಜನಿಕರ ಸಂಚಾರ ನಿರ್ಬಂಧ ಹಾಗೂ ಪ್ರಮುಖ ಪ್ರತಿಭಟನಾ ಸ್ಥಳವಾಗಿದ್ದ 'ಜಂತರ್ ಮಂತರ್' ಅನ್ನು ರದ್ದುಗೊಳಿಸಿದ (De-notification) ಕೇಂದ್ರ...

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ‘ಹಿಂದುಳಿದ ವರ್ಗದ’ ಮೀಸಲಾತಿ ಇಲ್ಲ : ಮದ್ರಾಸ್ ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಯು ತನ್ನ ಮತಾಂತರ ಪೂರ್ವದ ಜಾತಿ ಸ್ಥಿತಿಯ ಆಧಾರದ ಮೇಲೆ ಹಿಂದುಳಿದ ವರ್ಗದ (ಬಿಸಿ) ಮೀಸಲಾತಿಗೆ ಅರ್ಹನಲ್ಲ ಎಂದು ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್...