Homeಎಚ್.ಎಸ್.ದೊರೆಸ್ವಾಮಿಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರು.

- Advertisement -
- Advertisement -

ಕೆಲವು ಮೌಲ್ಯಗಳಿಗಾಗಿ ಅಂಬೇಡ್ಕರ್, ಮಹಾತ್ಮಾ ಗಾಂಧಿ ಮುಂತಾದ ಮಹಾನಾಯಕರನ್ನು ದೇಶದ ಜನ ಗೌರವಿಸುತ್ತಾರೆ. ಆದರೆ ನಮ್ಮ ಆಧುನಿಕ ಲೇಖಕರು, ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ವಿರೋಧಿಗಳು ಎಂಬಂತೆ ಬಿಂಬಿಸಲು ಪಣತೊಟ್ಟಿದ್ದಾರೆ. ತಮ್ಮ ಜೀವಿತ ಕಾಲದಲ್ಲಿ ಈ ಮಹನೀಯರು ತುಂಬ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಗೌರವ ಸಲ್ಲಿಸಬೇಕೆ ಹೊರತು ಅವರನ್ನು ಕಡು ವಿರೋಧಿಗಳು ಎಂದು ಬಿಂಬಿಸಿ ಜನರ ಮನಸ್ಸಿನಲ್ಲಿ ವಿಷ ತುಂಬುವುದು ಶ್ರೇಯಸ್ಕರವಲ್ಲ. ಆ ಮಹನೀಯರಲ್ಲಿದ್ದ ವೈಚಾರಿಕ ವ್ಯತ್ಯಾಸವನ್ನು ನಾವು ಪರಿಗಣಿಸುವುದು ಸರಿ ಆದರೆ ಅವರನ್ನು ಕಡುವೈರಿಗಳು ಎಂಬಂತೆ ಚಿತ್ರಿಸುವುದು ಇತಿಹಾಸಕ್ಕೆ ಅಪಮಾನ ಮಾಡಿದಂತೆ.

ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಆಲನ್ ಆಕ್ಟೇವಿಯನ್ ಹ್ಯೂಮ್ ಎಂಬ ಇಂಗ್ಲಿಷರು. ಅವರು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು. ನಾವು ಬ್ರಿಟನ್‍ನಲ್ಲಿ ಇಷ್ಟೊಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಭಾರತೀಯರಿಗೂ ಆ ಸ್ವಾತಂತ್ರ್ಯ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಷ್ಟ್ರೀಯ ಕಾಂಗ್ರೆಸ್ಸನ್ನು ಅವರು ಸ್ಥಾಪಿಸಿದರು. ಅಂದಿನ ಭಾರತದ ಮಹಾದಿಗ್ಗಜರಾದ ದಾದಾಭಾಯ್ ನವರೋಜಿ, ಫಿರೊಜ್‍ಷಾ ಮೆಹ್ತಾ ಮುಂತಾದವರು ರಾಷ್ಟ್ರೀಯ ಕಾಂಗ್ರೆಸ್‍ಗೆ ಸೇರ್ಪಡೆಯಾದರು. ಅವರೆಲ್ಲ ಕ್ಲಾಸ್ ಲೀಡರ್‌ಗಳು. ಈ ಭಾರತೀಯ ದಿಗ್ಗಜಗಳ ಬಗೆಗೆ ಬ್ರಿಟಿಷ್ ಆಡಳಿತಗಾರರಿಗೆ ಬಹಳ ಗೌರವ ಇತ್ತು.

ಇವರು ಮೆಮೊರಂಡಂಗಳನ್ನು ತಯಾರು ಮಾಡಿ ಕಾಲ ಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ಕಳುಹಿಸಿಕೊಡುತ್ತಿದ್ದರು. ಆ ಮೆಮೊರಂಡಂಗಳಲ್ಲಿ ಭಾರತೀಯರಿಗೆ ಸರ್ಕಾರದಲ್ಲಿ ಕೆಲಸಗಳನ್ನು ಕೊಡಬೇಕು, ಬ್ರಿಟಿಷ್ ಮಿಲಿಟರಿಯಲ್ಲಿ ಭಾರತೀಯರಿಗೆ ಹುದ್ದೆಗಳನ್ನು ನೀಡಬೇಕು ಎನ್ನುವಂತಹ ಹತ್ತಾರು ಮನವಿಗಳನ್ನು ಸಲ್ಲಿಸುವ ಮೂಲಕ ಈ ಎಲ್ಲ ಸವಲತ್ತುಗಳನ್ನು ಭಾರತೀಯರೂ ಪಡೆಯುವಂತೆ ಮಾಡಿದರು. ಮುಂದೆ ಅಂಬೇಡ್ಕರರು ವಿದ್ಯಾವಂತರಾದ ಮೇಲೆ ಅವರೂ ಕೂಡ ಶೂದ್ರರು, ಅಸ್ಪೃಶ್ಯರು, ಆದಿವಾಸಿಗಳು, ದಲಿತರಿಗೆ ಆಡಳಿತದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸುವ ಮೂಲಕ ಹಿಂದುಳಿದ ಜನಾಂಗದವರ ಮತ್ತು ಅಸ್ಪೃಶ್ಯರ ಹಕ್ಕು ಬಾಧ್ಯತೆಗಳನ್ನು ಪಡೆಯುವ ಅನೇಕ ಪ್ರಯತ್ನಗಳನ್ನು ಮಾಡಿದರು. ಕಾಂಗ್ರೆಸ್ ನಾಯಕರು ಭಾರತೀಯರೆಲ್ಲರ ಸಲುವಾಗಿ ಬೇಡಿಕೆಗಳನ್ನಿಟ್ಟರೆ ಅಂಬೇಡ್ಕರರು ಹಿಂದುಳಿದವರ, ದಲಿತರ ಪರವಾಗಿ ದನಿ ಎತ್ತುತ್ತಿದ್ದರು.

ಆ ನಂತರ ಗಾಂಧೀಜಿ ಭಾರತದ ರಾಜಕೀಯಕ್ಕೆ ಇಳಿದರು. ಅವರು 1916ರಲ್ಲೇ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದರಾದರೂ ಕಾಂಗ್ರೆಸ್ಸಿನಲ್ಲಿ ಕ್ರಿಯಾಶೀಲರಾದದ್ದು 1920ರ ನಂತರ.

ಗಾಂಧೀಜಿ ಭಾರತಕ್ಕೆ ಹಿಂದಿರುಗಿದ ಕೂಡಲೇ ಅವರು ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರನ್ನು ಸಂದರ್ಶಿಸಿ ತಾವು ಭಾರತ ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಇಂಗಿತವನ್ನು ತಮ್ಮ ಗುರುಗಳಲ್ಲಿ ನಿವೇದಿಸಿದರು. ಆಗ ಗೋಖಲೆಯವರು ‘ಕಾಂಗ್ರೆಸ್ಸಿನ ಚುಕ್ಕಾಣಿ ಹಿಡಿಯುವ ಮೊದಲು ಯಾರ ಸೇವೆ ಮಾಡಲು ನೀನು ನಿರ್ಧರಿಸಿದ್ದೀಯಾ ಆ ಜನರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಬಾ. ಅದಕ್ಕಾಗಿ ಭಾರತವನ್ನೆಲ್ಲ ಒಂದು ಸಾರಿ ಸುತ್ತಿ ಬಾ’ ಎಂದರು. ಗಾಂಧೀಜಿ ಒಂದು ವರ್ಷ ಕಾಲ ಭಾರತವನ್ನು ಸುತ್ತಿಹಾಕಿದ್ದರಿಂದ ಅವರಿಗೆ ಭಾರತೀಯರನ್ನು ಬಡತನ ಕಿತ್ತು ತಿನ್ನುತ್ತಿದ್ದುರ ಅನುಭವವಾಯಿತು. ಬಡವರ ಸೇವೆಗೆ ತನ್ನ ಇಡೀ ಜೀವನವನ್ನು ಮುಡುಪಾಗಿಡುವುದಾಗಿ ನಿರ್ಧರಿಸಿದರು. ಸ್ವಾತಂತ್ರ್ಯದ ಗುರಿಯಾದರೂ. ಬಡತನವನ್ನು ನೀಗುವುದೇ ಆಗಿತ್ತು.

ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಗುರಿ ‘ಡೊಮಿನಿಯನ್ ಸ್ಟೇಟಸ್’ ಆಗಿತ್ತು. ಇಂಗ್ಲಿಷರ ಆಡಳಿತದಲ್ಲೇ ಇದ್ದುಕೊಂಡು ಡೊಮಿನಿಯನ್ ಸ್ಟೇಟಸ್ ಅನುಭವಿಸುವ ವಿಚಾರ ಕಾಂಗ್ರೆಸ್ಸಿನದಾಗಿತ್ತು. ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಧಿಕಾರಕ್ಕೆ ಬಂದಮೇಲೂ ಭಾರತದ ಗುರಿ ಡೊಮಿನಿಯನ್ ಸ್ಟೇಟಸ್ ಪಡೆಯುವುದೇ ಆಗಿತ್ತು.

ಸುಭಾಷ್‍ಚಂದ್ರ ಬೋಸರು ಐಎಎಸ್‍ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರೂ ಅವರು ಬ್ರಿಟಿಷರ ಅಧೀನದಲ್ಲಿ ಕೆಲಸ ಮಾಡಲು ಇಚ್ಛಿಸದೆ ಭಾರತಕ್ಕೆ ಹಿಂದಿರುಗಿದರು. ಕಾಂಗ್ರೆಸ್ಸಿನ ಸದಸ್ಯರಾದರು. ಸೈಮನ್ ಕಮಿಷನ್ ಭಾರತ ಪ್ರವಾಸ ಮಾಡಿದಾಗ ಬಂಗಾಳದಲ್ಲಿ ‘ಸೈಮನ್ ಗೋ ಬ್ಯಾಕ್’ ಚಳುವಳಿ ಆರಂಭಿಸಿದರು. ದೊಡ್ಡ ಯುವ ಪಡೆ ಕಟ್ಟಿ ಸೈಮನ್ ಕಮಿಷನ್ ಕಲ್ಕತ್ತೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶನ ನಡೆಸಿ ಸೆರೆಮನೆಗೆ ಹೋದರು. ಅದೇ ವರ್ಷ ಮದ್ರಾಸಿನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಸುಭಾಷ್ ಹೋದರು. ಸಮ್ಮೇಳನದಲ್ಲಿ ಗಾಂಧಿಜಿ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ಡೊಮಿನಿಯನ್ ಸ್ಟೇಟಸ್ ಎಂಬ ನಿರ್ಣಯವನ್ನು ಮಂಡಿಸಿದರು. ಸುಭಾಷ್‍ಚಂದ್ರ ಬೋಸ್ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ ‘ಪೂರ್ಣ ಸ್ವರಾಜ್ಯ’ ಎಂಬ ತಿದ್ದುಪಡಿಯನ್ನು ತಂದರು. ಕೆಲವೇ ಮತಗಳ ಅಂತರದಲ್ಲಿ ಗಾಂಧಿಯವರು ಮಂಡಿಸಿದ ನಿರ್ಣಯ ಅಂಗೀಕಾರವಾಯಿತು. ಆದರೆ ಗಾಂಧಿಜಿಗೆ ಅದರಿಂದ ಅರಿವಾಗಿ ಮುಂದಿನ ಅಧಿವೇಶನದಲ್ಲೇ ‘ಪೂರ್ಣ ಸ್ವರಾಜ್ಯ ರಾಷ್ಟ್ರೀಯ ಕಾಂಗ್ರೆಸ್ಸಿನ ಗುರಿ’ ಎಂಬ ನಿರ್ಣಯವನ್ನು ಮಂಡಿಸಿ ಅದಕ್ಕೆ ಮನ್ನಣೆ ಪಡೆದರು. ಇದು ಇತಿಹಾಸ.

Photo Courtesy: DailyO

ರಾಷ್ಟ್ರೀಯ ಕಾಂಗ್ರೆಸ್ ಪಟ್ಟಾಗಿ ದೇಶದ ಸ್ವಾತಂತ್ರ್ಯಕ್ಕೆ 100 ವರ್ಷಕ್ಕೂ ಮೇಲ್ಪಟ್ಟು ಹೋರಾಡಿತು. ಅಂಬೇಡ್ಕರರೂ ಅವಿಚ್ಛಿನ್ನವಾಗಿ ತಮ್ಮ ಜೀವಮಾನಪರ್ಯಂತ ಹಿಂದುಳಿದವರ, ಅಸ್ಪೃಶ್ಯರ, ಅರಣ್ಯವಾಸಿಗಳ ಸಂಘಟನೆ ಕೆಲಸದಲ್ಲಿ ತೊಡಗಿದ್ದರಿಂದ ಈಗ ದಲಿತರ ಸಂಘಟನೆ ಬಲಗೊಳ್ಳುತ್ತಿದೆ. ದಲಿತರಲ್ಲಿ ಜಾಗೃತಿ ಮೂಡಿದೆ.

ಕಾಂಗ್ರೆಸ್ ಅತಿ ದೀರ್ಘಕಾಲ ಭಾರತ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ. ಕಾಂಗ್ರೆಸ್ ಒಂದೇ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಸ್ಥೆ ಎಂಬುದನ್ನು ಕಾಂಗ್ರೆಸ್ ಎಂದೂ ಹೇಳಿಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಹಿಂದು- ಮುಸ್ಲಿಂ ರಾಜರಾಣಿಗಳು, ಮುಸ್ಲಿಮ್ ಮತದ ರಾಜರಾದ ಹೈದರ್ ಟಿಪ್ಪುಗಳು, ಭಾರತೀಯ ಸೈನಿಕರು, ಐಎನ್‍ಎ, ದಲಿತರು, ಬೇಡರು ಎಲ್ಲರೂ ಕೈಜೋಡಿಸಿದ್ದಾರೆ.

ನಮ್ಮ ಈ ತಲೆಮಾರಿನವರು ಗಾಂಧಿ ಏನು ಮಾಡಿದರು? ಅಂಬೇಡ್ಕರ್ ಏನು ಮಾಡಿದರು ಎಂದು ಪ್ರಶ್ನಿಸುವುದನ್ನು ನಿಲ್ಲಿಸಬೇಕು. ಗಾಂಧಿ ಅಂಬೇಡ್ಕರರ ಚಾರಿತ್ರ್ಯವಧೆ ಮಾಡುವ ಕೆಲಸ ಮಾಡಬಾರದು. ಹೀಗೆ ನಾವು ಕಿತ್ತಾಡುವುದರಿಂದ ಮೋದಿ ಅವರಿಗೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಾವು ಅವಕಾಶ ಮಾಡಿಕೊಟ್ಟಂತಾಗುತ್ತದೆ. ನೆಹರು ಅವರ ಮೇಲೆ ಸರ್ದಾರ್ ಪಟೇಲರನ್ನು ಎತ್ತಿ ಕಟ್ಟುವ ಮಟ್ಟಕ್ಕೆ ಅವರು ಹೋಗುತ್ತಾರೆ ಎಂಬ ಎಚ್ಚರಿಕೆ ನಮ್ಮ ಎಲ್ಲ ಸಂಘಟನೆಗಳಿಗೆ ಇರಲಿ ಎಂದು ನಾನು ಆಶಿಸುತ್ತೇನೆ.


ಇದನ್ನೂ ಓದಿ: ಅಂಬೇಡ್ಕರ್‌ರವರ ಆರ್ಥಿಕ ಚಿಂತನೆಗಳು ದಾರಿಯಾಗಲಿ – ಎಚ್. ಎಸ್ ದೊರೆಸ್ವಾಮಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...