ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಸಲುವಾಗಿ ಪಂಜಾಬ್ ಸರ್ಕಾರ ಸರ್ಕಾರಿ ಉದ್ಯೋಗಗಳಲ್ಲಿ 33% ಮೀಸಲಾತಿಯನ್ನು ಘೋಷಿಸಿದೆ. ಇದು ಪಂಜಾಬ್ ರಾಜ್ಯ ನಾಗರಿಕ ಸೇವೆಗಳ ನೇರನೇಮಕಾತಿಗೆ ಅನ್ವಯಿಸುತ್ತದೆ.
ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಧ್ಯಕ್ಷತೆಯ ರಾಜ್ಯ ಸಚಿವ ಸಂಪುಟ ಸಭೆಯು, ಪಂಜಾಬ್ ನಾಗರಿಕ ಸೇವೆ ನಿಯಮಗಳು-2020ಕ್ಕೆ ಅನುಮೋದನೆ ನೀಡಿತು. ಇದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ನಿಗಮಗಳಿಗೆ ಸಂಬಂಧಿಸಿದ ಎ, ಬಿ, ಸಿ ಮತ್ತು ಡಿ ಗ್ರೂಪ್‌ಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ
ಇದರ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದು, “ಇಂದು ಪಂಜಾಬ್ ಮಹಿಳೆಯರಿಗೆ ಒಂದು ಐತಿಹಾಸಿಕ ದಿನವಾಗಿದೆ. ಏಕೆಂದರೆ ನಮ್ಮ ಸಚಿವ ಸಂಪುಟ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನಿಡುವ ಪ್ರಸ್ತಾವವನ್ನು ಅನುಮೋದಿಸಿದೆ. ನಮ್ಮ ಹೆಣ್ಣುಮಕ್ಕಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಮತ್ತು ಹೆಚ್ಚು ಸಮಾನತೆಯ ಸಮಾಜವನ್ನು ರಚಿಸಲು ಇದು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಬರೆದುಕೊಂಡಿದ್ದಾರೆ.
Today is a historic day for the women of Punjab as our Council of Ministers has approved 33% reservation for women in Government jobs. I am sure this will go a long way in further empowering our daughters and help in creating a more equitable society.
— Capt.Amarinder Singh (@capt_amarinder) October 14, 2020
ಇದನ್ನೂ ಓದಿ: ಮಹಿಳಾ ಮೀಸಲಾತಿಯ ಸುತ್ತ….
ಬಿಹಾರದ ನಂತರ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಎರಡನೇ ರಾಜ್ಯ ಪಂಜಾಬ್. ನ್ಯಾಯಾಲಯದ ಪ್ರಕರಣಗಳು ಮತ್ತು ಕಾನೂನು ವಿಷಯಗಳನ್ನು ಸಮಯೋಚಿತವಾಗಿ ಪರಿಣಾಮಕಾರಿಯಾಗಿ ಮುಂದುವರಿಸಲು, ಗುಮಾಸ್ತ (ಕಾನೂನು) ಕೇಡರ್ ರಚನೆಗಾಗಿ 1976 ರ ಪಂಜಾಬ್ ಸಿವಿಲ್ ಸೆಕ್ರೆಟರಿಯಟ್ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿತು. ಸಾಮಾನ್ಯ ಗುಮಾಸ್ತ ಕೇಡರ್‌ನಿಂದ 100 ಹುದ್ದೆಗಳನ್ನು ತೆಗೆದುಕೊಂಡು ಆರ್ಥಿಕ ಪರಿಣಾಮಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ಮಾಡಲಾಗುತ್ತದೆ.
ಇದನ್ನೂ ಓದಿ: ಶೋಷಿತರಿಗೆ ಮೀಸಲಾತಿ ಯಾಕೆ ಬೇಕಿದೆ? : ವಿಕಾಸ್ ಆರ್ ಮೌರ್ಯ


