Homeಚಳವಳಿಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಸರ್ಕಾರದ ಅಜೆಂಡಾ ಸ್ಪಷ್ಟವಾಗಿದೆ, ರೈತ ಚಳವಳಿಗೆ ಸ್ಪಷ್ಟ ಅಜೆಂಡಾ ಬೇಕಿದೆ: ಚುಕ್ಕಿ ನಂಜುಂಡಸ್ವಾಮಿ

ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸುವುದರ ಬಗ್ಗೆ.

- Advertisement -
- Advertisement -

ರೈತ ಕುಲವನ್ನು ಒಕ್ಕಲೆಬ್ಬಿಸಿ ಕೃಷಿ ಕ್ಷೇತ್ರವನ್ನು ಇಡಿಯಾಗಿ ಕಾರ್ಪೋರೆಟ್ ಕಂಪೆನಿಗಳಿಗೆ ಮಾರಲು ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಇದೇನೂ ಹೊಸ ಬೆಳವಣಿಗೆಯಲ್ಲ. 1995ರಲ್ಲಿ ಭಾರತ ಸರ್ಕಾರ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದಲೇ ಈ ದೇಶದ ರೈತರ ಲೂಟಿ ಶುರುವಾಯ್ತು. ಅದಾದ ನಂತರ ಭಾರತ ಕಂಡ ರೈತರ ಆತ್ಮಹತ್ಯೆಯ ಸಂಖ್ಯೆ ಬಹುಶಃ ಪ್ರಪಂಚದ ಬೇರೆ ಯಾವ ದೇಶಗಳೂ ಕಾಣಲಿಲಿಲ್ಲ. ಭಾರತದ ರೈತರ ಆತ್ಮಹತ್ಯೆಗೂ ಭಾರತ ಅಪ್ಪಿಕೊಂಡ ಉದಾರೀಕರಣದ ನೀತಿಗೂ ನೇರ ಸಂಬಂಧವಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

ಈ ಅಭಿಪ್ರಾಯವನ್ನು ಖಾತ್ರಿಪಡಿಸುವ ವರದಿಯೊಂದಿದೆ. Indian Council for Research on International Economic Relations (ICRIER) ಮತ್ತು OECD 2018ರಲ್ಲಿ ಹಮ್ಮಿಕೊಂಡಿದ್ದ ಎರಡು ವರ್ಷಗಳ ದೀರ್ಘ ಅಧ್ಯಯನದಲ್ಲಿ ಹೊರಬಂದ ಪ್ರಮುಖ ಅಂಶವೆಂದರೆ 2000-01 ರಿಂದ 2016-17 ನಡುವಿನ ವರ್ಷಗಳ ಲೆಕ್ಕ ತೆಗೆದುಕೊಂಡಾಗ ಭಾರತದ Producer Support Estimate(PSE) “ಉತ್ಪಾದಕ ಬೆಂಬಲ ಅಂದಾಜಿ”ನ ಮೊತ್ತ (ತೆರಿಗೆದಾರರು ಮತ್ತು ಗ್ರಾಹಕರು ರೈತರಿಗೆ ಹಣದ ರೂಪದಲ್ಲಿ ಕೊಡುವ ಬೆಂಬಲ. ಸಬ್ಸಿಡಿಗಳು ಇದರ ಅಡಿಯಲ್ಲಿ ಬರುತ್ತವೆ) ಮೊತ್ತ ಒಟ್ಟು ಕೃಷಿಕರಿಗೆ ಪಾವತಿಯಾದ ಸರಾಸರಿ ಮೊತ್ತಕ್ಕಿಂತ 14% ಕಡಿಮೆ ಇದೆ. ಇದರ ವಾರ್ಷಿಕ ಮೊತ್ತ 2.65 ಟ್ರಿಲಿಯನ್ ಅಂದರೆ ಹದಿನೇಳು ವರ್ಷಗಳಿಗೆ 45 ಟ್ರಿಲಿಯನ್ ರೂಪಾಯಿಗಳು. ಇದು ಭಾರತದ ರೈತರ ಮೇಲೆ ವಿಧಿಸಿದ ಪರೋಕ್ಷವಾದ ತೆರಿಗೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ಕರೆಯುತ್ತಾರೆ. ಇದನ್ನು ನೇರವಾಗಿ ಹೇಳುವುದಾದರೆ ಇದು ಭಾರತದ ರೈತರ ಲೂಟಿ. ಈ ಲೂಟಿ ನಡೆದಿರುವುದು ಅನೇಕ ಹೆಸರುಗಳಲ್ಲಿ. ನಿರ್ಬಂಧಿತ ಮಾರುಕಟ್ಟೆ, ವಾಣಿಜ್ಯ ನೀತಿಗಳು ಅಥವಾ ಗ್ರಾಹಕರ ಪರ ವಾಲಿರುವ ಮಾರುಕಟ್ಟೆ. ಅದೇನೇ ಇರಲಿ. ಜಗತ್ತಿನ ಯಾವ ದೇಶವೂ ಅನ್ನದಾತರನ್ನು ಇಷ್ಟು ಅಮಾನವೀಯವಾಗಿ ಲೂಟಿ ಮಾಡಿಲ್ಲ. ವಾಸ್ತವ ಹೀಗಿರುವಾಗ ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿ ಏನಿದೆ?

ಸ್ವಾತಂತ್ರ್ಯೋತ್ತರ ಭಾರತ ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ದೇಶದ ಗಡಿ ಕಾದು ದೇಶವನ್ನು ರಕ್ಷಿಸಿದ ಯೋಧರ ಹಾಗೇ ದೇಶದ ಆಹಾರದ ಬುಟ್ಟಿಯನ್ನು ತುಂಬಿಸಿದ್ದು ಈ ದೇಶದ ಮಣ್ಣಿನ ಮಕ್ಕಳು. ಗಡಿ ಕಾಯುತ್ತಿದ್ದ ಸೈನಿಕರು ತಮ್ಮ ಜೀವವನ್ನೇ ಒತ್ತೆ ಇಟ್ಟರೆ ಇಲ್ಲಿ ರೈತರು ತಮ್ಮ ಪೂರ್ವಜರು ಕಾಪಾಡಿಕೊಂಡು ಬಂದಿದ್ದ ಮಣ್ಣು, ಬೀಜ ಮತ್ತು ಕೃಷಿ ಜ್ಞಾನವನ್ನೇ ಒತ್ತೆ ಇಟ್ಟರು. ಹಸಿರು ಕ್ರಾಂತಿಯ ಹೆಸರಿನಲ್ಲಿ ನಡೆದದ್ದೂ ಕೂಡ ಮಣ್ಣಿನ ಲೂಟಿ, ಬೀಜದ ಲೂಟಿ ಮತ್ತು ಸಾಂಪ್ರದಾಯಿಕ ಜ್ಞಾನದ ಲೂಟಿ. ಹಸಿರು ಕ್ರಾಂತಿ ನಡೆದ ಅರವತ್ತು ವರ್ಷಗಳ ನಂತರ ಮಣ್ಣಿನಲ್ಲಿದ್ದ ಸಾವಯವ ಇಂಗಾಲ ಇಲ್ಲದಂತಾಗಿದೆ. ಸೂಕ್ಷ್ಮಾಣುಜೀವಿಗಳು ಸತ್ತುಹೋಗಿವೆ. ಮಣ್ಣು ಬರಡಾಗಿದೆ. ಸಹಜವಾಗಿಯೆ ಇಳುವರಿ ಕಡಿಮೆಯಾಗಿದೆ.


ಇದನ್ನೂ ಓದಿ: ’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’!: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ


ಭಾರತದ ಬೆನ್ನೆಲುಬು ಎಂದು ಕರೆಯಲ್ಪಡುವ ಕೃಷಿ ಕ್ಷೇತ್ರದ ಪರಿಸ್ಥಿತಿ ಹೀಗಿರುವಾಗ ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ಬರೀ ಘೋಷಣೆಗೆ ಸೀಮಿತವಾಗಿರುವ ಎಂಎಸ್‍ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವ ಎಲ್ಲಾ ಇಪ್ಪತ್ಮೂರು ಬೆಳೆಗಳಿಗೂ ಅದು ಶಾಸನಬದ್ಧವಾಗಿ ಅನ್ವಯವಾಗುವಂತೆ ಸುಗ್ರೀವಾಜ್ಞೆ ಹೊರಡಿಸಬೇಕಿತ್ತು. ಘೋಷಿಸುವುದೇ ಅಲ್ಲ ಅದನ್ನು ಸರ್ಕಾರ ಖರೀದಿ ಮಾಡಲು ಎಪಿಎಂಸಿಯಲ್ಲಿ ಇದ್ದಂತಹ ಲೋಪದೋಷಗಳನ್ನು ಸರಿಪಡಿಸಿ ವ್ಯವಸ್ಥೆಯನ್ನು ರೂಪಿಸುವ ಸುಗ್ರೀವಾಜ್ಞೆ ತರಬೇಕಾಗಿತ್ತು. ಆದರೆ ಸೋರುತ್ತಿರುವ ಮಾಳಿಗೆಯ ರಂಧ್ರಗಳನ್ನು ಮುಚ್ಚದೆ ಮಾಳಿಗೆಯನ್ನೇ ತೆಗೆದು ಹಾಕಿ ರೈತರಿಗೆ ಯಾರಿಗೆ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇವೆ ಎನ್ನುವುದು ರೈತರಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಅಥವಾ ರೈತರನ್ನು ಲೂಟಿ ಮಾಡಲು ಕಾರ್ಪೋರೆಟ್ ಕಂಪೆನಿಗಳಿಗೆ ಕೊಟ್ಟಿರುವ ಸ್ವಾತಂತ್ರ್ಯವೋ ಎನ್ನುವುದು ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಿರೋಧಿಸುತ್ತಿರುವ ರೈತರಿಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿದೆ.

ಇಷ್ಟೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಚಳವಳಿಗಳತ್ತ ತಿರುಗಿಯೂ ನೋಡುತ್ತಿಲ್ಲ. ಸರ್ಕಾರದ ಅಜೆಂಡಾ ಬಹಳ ಸ್ಪಷ್ಟವಾಗಿದೆ. ರೈತರ ಸರ್ವನಾಶಕ್ಕೆ ಪಣ ತೊಟ್ಟು ನಿಂತಿರುವ ಸರ್ಕಾರದ ವಿರುದ್ಧ ಕೇವಲ ಪ್ರತಿಭಟನೆಗಳನ್ನು ಹಮ್ಮಿಕೊಂಡರಷ್ಟೇ ಸಾಲದು ಎನಿಸುತ್ತದೆ.

ದೇಶದ ರೈತರ ಪಾಲಿಗೆ, ಕೃಷಿ ಕಾರ್ಮಿಕರ ಪಾಲಿಗೆ, ಮಹಿಳಾ ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಘೋಷಣೆ ಕೂಗಿದರಷ್ಟೇ ಸಾಲದು. ಅದು ವಾಸ್ತವ ಎಂಬ ಸತ್ಯವನ್ನು ಆಳವಾಗಿ ಅರ್ಥ ಮಾಡಿಕೊಳ್ಳಲೇಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಭಾರತದ ರೈತ ಚಳವಳಿಗಳು ತಮ್ಮ ಅಜೆಂಡಾದ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಈಗ ಇದೆ. ಈ ಗ್ರಹಿಕೆ ನಮ್ಮಲ್ಲಿ ಆಳವಾಗಿ ಬೇರೂರಿದಾಗ ಮಾತ್ರ ನಮ್ಮ ಎದುರಿರುವ ಸವಾಲುಗಳಿಗೆ ಶಾಶ್ವತವಾದ ಉತ್ತರ ಹುಡುಕಲು ಸಾಧ್ಯ. ಆಗ ಸಂಘರ್ಷವಷ್ಟೇ ಸಾಲದು, ಅದರ ಜೊತೆಗೆ ನೇರ ಕಾರ್ಯಕ್ರಮಗಳ ಮೂಲಕ ಕ್ರಿಯಾತ್ಮಕ ನಿರ್ಮಾಣ ಕೆಲಸಕ್ಕೂ ಕೈಹಾಕಬೇಕು ಅನ್ನುವ ಅಭಿಪ್ರಾಯಕ್ಕೆ ಬರಬಹುದು.


ಇದನ್ನೂ ಓದಿ: ಸಂದರ್ಶನ – ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ


ಭಾರತದ ರೈತ ಚಳವಳಿಗಳು ಈಗಲಾದರೂ ಆಲೋಚಿಸಬೇಕಾದ್ದು ತಮ್ಮದೇ ಆದ ಉತ್ಪಾದನಾ ವ್ಯವಸ್ಥೆ, ಮೌಲ್ಯವರ್ಧನೆ ವ್ಯವಸ್ಥೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪನೆ ಮಾಡುವುದರ ಬಗ್ಗೆ. ಈ ಬಗ್ಗೆ ಅಗತ್ಯವಾದ ತರಬೇತಿಗಳನ್ನು ರೈತಮಕ್ಕಳಿಗೆ ಕೊಡಿಸುವುದರ ಬಗ್ಗೆ ಸಮಗ್ರವಾಗಿ ಚಿಂತಿಸಿ ಮತ್ತು ಅನುಷ್ಠಾನಗೊಳಿಸಿ ಇದರ ಮೂಲಕ ದೇಶವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ನಿರುದ್ಯೋಗಕ್ಕೂ ಉತ್ತರ ಕಂಡುಕೊಳ್ಳಬೇಕಾಗಿದೆ.

ನಮ್ಮದೇ ಆದ ಪರ್ಯಾಯ ವ್ಯವಸ್ಥೆಗಳನ್ನು ಕಟ್ಟಿಕೊಳ್ಳುವುದರ ಮೂಲಕ ಸರ್ಕಾರಿ ವ್ಯವಸ್ಥಗಳಿಗೆ ಬದಲಿಯಾದ ಮತ್ತು ರೈತಸ್ನೇಹಿಯಾದ ವ್ಯವಸ್ಥೆಯ ಧ್ವಜಾರೋಹಣ ಮಾಡಬೇಕಾಗಿದೆ. ಇಡೀ ಭಾರತದ ರೈತ ಚಳವಳಿಯ ಒಂದು ಭಾಗ ಈ ಕೆಲಸವನ್ನು ಗಂಭೀರವಾಗಿ ಮಾಡಲೇಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕಾರ್ಪೋರೇಟ್ ಕಂಪೆನಿಗಳ ಕೂಲಿಗಳಾಗುವುದರಲ್ಲಿ ಸಂಶಯವೇ ಇಲ್ಲ.

ಇದನ್ನು ರೈತ ಸಂಘಟನೆಗಳು ಕೈಗೆತ್ತಿಕೊಂಡು ಕರೆಕೊಟ್ಟರೆ ಸಾಕು, ಇದರ ಜೊತೆಗೆ ಕೆಲಸ ಮಾಡಲು ಮನಸ್ಸಿರುವ ಅನೇಕ ನಗರವಾಸಿ ತಂತ್ರಜ್ಞರು ಕೈಜೋಡಿಸುವ ಸಾಧ್ಯತೆ ಇದೆ. ಇದೇನೂ ಬಹಳ ಕಷ್ಟದ ಕೆಲಸವಲ್ಲ.


ಇದನ್ನೂ ಓದಿ: ರೈತರಿಂದ ನೇರ ಗ್ರಾಹಕರಿಗೆ ವಿಷಮುಕ್ತ ಆಹಾರೋತ್ಪನ್ನ ಮಾರಲು ಪಣ: ‘ನಮ್ದು ಬ್ರ್ಯಾಂಡ್’ ಆರಂಭ


ಇದರ ಪ್ರಯೋಗವಾಗಿಯೆ ನಮ್ದು ಎಂಬ ಬ್ರ್ಯಾಂಡ್‍ಅನ್ನು ಪ್ರಾರಂಭ ಮಾಡುವುದರ ಮೂಲಕ ಕ್ರಿಯಾತ್ಮಕ ಪ್ರತಿರೋಧವನ್ನು ಒಡ್ಡುವ ಕೆಲಸವನ್ನು ಈಗಾಗಲೇ ನಾವು ಪ್ರಾರಂಭ ಮಾಡಿದ್ದೇವೆ. ಇದು ರೈತರ ಹಿಡಿತದಲ್ಲಿರುವ ಮಾರುಕಟ್ಟೆ ವ್ಯವಸ್ಥೆ. ಇಲ್ಲಿ ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುತ್ತಾರೆ. ಉಪ ಉತ್ಪನ್ನಗಳನ್ನು ಮತ್ತು ಮೌಲ್ಯವರ್ಧನೆಗೊಳಿಸಿದ ವಸ್ತುಗಳನ್ನು ನೇರವಾಗಿ ರೈತರೇ ಮಾರಾಟ ಮಾಡುತ್ತಾರೆ.

ಇಡೀ ದೇಶದಾದ್ಯಂತ ಭುಗಿಲೆದ್ದಿರುವ ರೈತರ ಪ್ರತಿರೋಧ, ಕೇವಲ ಈ ಕಾನೂನುಗಳನ್ನು ವಿರೋಧಿಸುವುದಕ್ಕೆ ಸೀಮಿತವಾಗದೆ ಮುಂಬರಬಹುದಾದ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಬೇಕಾದ ಎಲ್ಲ ರೀತಿಯ ವೈಚಾರಿಕ, ಸೈದ್ಧಾಂತಿಕ ಮತ್ತು ಕ್ರಿಯಾತ್ಮಕ ಪ್ರತಿರೋಧಗಳಿಗೆ ಅವಕಾಶವಾಗಬೇಕು.
ರೈತ ಚಳವಳಿಗೆ ಜಯವಾಗಲಿ!


(ಚಿಕ್ಕಂದಿನಿಂದಲೂ ರೈತ ಚಳವಳಿಯ ಜೊತೆಗೇ ಬೆಳೆದ ಚುಕ್ಕಿ, ಈಗ ರೈತ ಚಳವಳಿಯ ರಾಜ್ಯ ನಾಯಕಿಯರಲ್ಲೊಬ್ಬರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಹಾಗೂ ತೃತೀಯ ದೇಶಗಳ ರೈತರನ್ನು ಪ್ರತಿನಿಧಿಸುವವರು. ಪ್ರಸ್ತುತ ಚಾಮರಾಜನಗರದ ಅಮೃತಭೂಮಿಯ ವಿಶಿಷ್ಟ ರೈತ ಪ್ರಯೋಗ ಶಾಲೆಯ ಮುಖ್ಯಸ್ಥರು.)


ಇದನ್ನೂ ಓದಿ: ರೈತ ಮಹಿಳಾ ದಿನ: ‘ರೈತ ಮಹಿಳೆ’ಯ ಅಸ್ತಿತ್ವ, ಅಸ್ಮಿತೆಗಾಗಿ ಹೋರಾಟ ನಡೆಸುತ್ತಿರುವ ‘ಮಕಾಮ್’
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...