Homeಮುಖಪುಟಸಂದರ್ಶನ - ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಸಂದರ್ಶನ – ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

`ವಿಶೇಷ ಪ್ಯಾಕೇಜ್‍ಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ'

- Advertisement -
- Advertisement -
| ಸಂದರ್ಶನ :ಪತ್ರಿಕಾ ತಂಡ |
ರೈತಸಂಘದ ಏಳು-ಬೀಳುಗಳು, ಇಂದಿನ ದಿನಗಳಲ್ಲಿ ರೈತಸಂಘದ ಮುಂದಿರುವ ಸವಾಲು, ಅದನ್ನು ಎದುರಿಸಲು ಯಾವ ರೀತಿ ತಯಾರಿಯಿದೆ ಇತ್ಯಾದಿ ಪ್ರಶ್ನೆಗಳನ್ನು ರೈತಸಂಘದ (ಪುಟ್ಟಣ್ಣಯ್ಯ ಬಣ) ಹಾಲಿ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರನ್ನು ಕೇಳುವುದಿತ್ತು. ಆದರೆ, ಅವರು ಬರ-ನೆರೆ ಪೀಡಿತ ಕರ್ನಾಟಕಕ್ಕೆ ಪರಿಹಾರ ಕೇಳಲು ದೊಡ್ಡ ಅಧಿವೇಶನದ ತಯಾರಿಯಲ್ಲಿದ್ದರು. ಸಹಜವಾಗಿ ಪ್ರಶ್ನೆಗಳು ಅದರ ಸುತ್ತಲೇ ಸುತ್ತಿದವು. ವಿವಿಧ ರೈತ ನಾಯಕರೆಲ್ಲರನ್ನೂ ಸಂದರ್ಶಿಸಿ ಮೇಲಿನ ಪ್ರಶ್ನೆಗಳನ್ನು ‘ಪತ್ರಿಕೆ’ಯ ಓದುಗರಿಗಾಗಿ ಕೇಳುವ ಯೋಜನೆಯನ್ನು ನಂತರದ ದಿನಗಳಿಗೆ ಇಟ್ಟುಕೊಂಡು, ನೆರೆ ಪರಿಹಾರದ ಕುರಿತ ಅವರ ಆಂದೋಲನದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಯಿತು
ಕರ್ನಾಟಕವನ್ನು ಕಾಡಿರುವ ಈ ವರ್ಷದ ಪ್ರವಾಹವನ್ನು ಸರ್ಕಾರ ಯಾವ ರೀತಿ ನಿಭಾಯಿಸಿದೆ?

ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಸರ್ಕಾರದ ಅಂಕಿ ಅಂಶದ ಪ್ರಕಾರದ 22 ಜಿಲ್ಲೆಗಳಲ್ಲಿ 103 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿವೆ. ಸರ್ಕಾರದ ವತಿಯಿಂದ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆಯೇ ಹೊರತು ಬೀದಿಗೆ ಬಿದ್ದಿರುವ ಜನರ ಜೀವನ ಸರಿಪಡಿಸುವುದಕ್ಕೆ ಯಾವ ಆಲೋಚನೆಯನ್ನೂ ಹೊಂದಿಲ್ಲ. ಇನ್ನು ಕೇಂದ್ರ ಸರ್ಕಾರವಂತೂ ಕರ್ನಾಟಕವನ್ನು ಸಂಪೂರ್ಣವನ್ನು ಮರೆತಿರುವಂತಿದೆ. ನೆಪ ಮಾತ್ರಕ್ಕೆ ಬಂದು ಕಣ್ಣೊರೆಸುವ ಕೆಲಸವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿಹೋಗಿದ್ದಾರೆ. ಓಡಿಸ್ಸಾದಲ್ಲಿ ಪ್ರವಾಹವಾದಾಗ ಚುನಾವಣೆ ಪ್ರಚಾರವನ್ನು ಬದಿಗೊತ್ತಿ ವೈಮಾನಿಕ ಸಮೀಕ್ಷೆ ಮಾಡಿ ಅಲ್ಲಿಯ ಮುಖ್ಯಮಂತ್ರಿಯನ್ನು ಕೂಡಲೇ ಭೇಟಿಮಾಡಿ ಅವರಿಗೆ ನೆರವು ಕೊಡುತ್ತೇವೆ ಎಂದು ಅಲ್ಲಿಯ ಜನರಿಗೆ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದರು. ಆದರೆ ಕರ್ನಾಟಕದಲ್ಲಿ ನೆರೆ ಬಂದು ಎರಡು ತಿಂಗಳು ಕಳೆದಿವೆ. ಚಂದ್ರಯಾನ ನೋಡುವುದಕ್ಕೆ ಬೆಂಗಳೂರಿಗೆ ಬಂದ ಪ್ರಧಾನಿಗೆ ನೆರೆ ಸಂತ್ರಸ್ತರ ನೆನಪಾಗಲಿಲ್ಲ. ವಿದೇಶಕ್ಕೆ ಹೋಗುವುದಕ್ಕೆ ಬೇಕಾದಷ್ಟು ಸಮಯವಿರುವ ಪ್ರಧಾನಿ ರೈತಾಪಿ ವರ್ಗದ ಬಗ್ಗೆ ಕಿಂಚಿತ್ತು ತಲೆ ಕೆಡಿಸ್ಕೊಂಡಿಲ್ಲಾ. ಒಂದು ಕಡೆ ಪಂಚೆ, ಇನ್ನೊಂದು ಕಡೆ ಇನ್ನೊಂತರ ಡ್ರೆಸ್ ಹಾಕ್ಕೊಂಡು ಓಡಾಡ್ತಾಯಿದ್ದಾರೆ.

1,200 ಕೋಟಿ ರೂ. ಪರಿಹಾರ ಘೋಷಿಸಿದ್ದಾರಲ್ವಾ?

ಇದು ಬರಿ ಭಿಕ್ಷೆ ಅಂತ ಹೇಳ್ತಿವಿ. ಇದನ್ನು ರಾಜ್ಯ ಸರ್ಕಾರವೇ ಪ್ರತಿಭಟಿಸಬೇಕಿತ್ತು. 25 ಜನ ಎಂ.ಪಿ.ಗಳು ಬಿಜೆಪಿ ಪಕ್ಷದಿಂದ ನಮ್ಮ ರಾಜ್ಯದಲ್ಲಿ ಗೆದ್ದಿದ್ದಾರೆ. ಅವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಬೇಕಾಗಿತ್ತು. ಕರ್ನಾಟಕದಿಂದ 3+1 ಜನ ಮಂತ್ರಿಗಳಿದ್ದಾರೆ. ಅವರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದು ಸಂಪೂರ್ಣವಾಗಿ ಭಿಕ್ಷೆ ರೂಪದಲ್ಲಿದೆ. ಎನ್‍ಡಿಆರ್‍ಎಫ್ ಮಾನದಂಡವೇ ಅವೈಜ್ಞಾನಿಕವಾದದ್ದು, ಅದನ್ನು ಈಗ ಅಳವಡಿಸಿಕೊಳ್ಳಲು ಆಗುವುದಿಲ್ಲ. ಅದರ ಮೂಲ ಮಾನದಂಡವನ್ನೇ ಬದಲಾಯಿಸಬೇಕು. ವಾಸ್ತವದ ನೆಲೆಗಟ್ಟಿನಲ್ಲಿ ನಿಜವಾದ ನಷ್ಟವನ್ನು ತುಂಬಿಕೊಡುವಂತದ್ದು ಮತ್ತು ನಾಶವಾಗಿರುವ ಬದುಕನ್ನು ಪುನಃ ಕಟ್ಟಿಕೊಡುವಂತಹÀ ದೂರದೃಷ್ಟಿ ಇರುವ ಮಾನದಂಡ ರಚನೆಯಾಗಬೇಕು.

ಸರ್ ಇವತ್ತು ಬರಿ ಗ್ರಾಮಿಣ ಭಾಗದ್ದಲ್ಲ, ಇಡೀ ದೇಶದ ಆರ್ಥಿಕತೆಯೇ ಬಿಕ್ಕಟ್ಟಿನಲ್ಲಿದೆ. ಜಿಡಿಪಿ ಕುಸಿದಿದೆ. ಸರ್ಕಾರ ಇನ್ನಷ್ಟು ಕೈಗಾರಿಕೆಗಳಿಗೆ ಒತ್ತು ಕೊಟ್ಟರೆ ಜಿಡಿಪಿನ ಹೆಚ್ಚಿಸುವುದಕ್ಕೆ ಸಾಧ್ಯ ಎನ್ನಲಾಗುತ್ತಿದೆ ಇದರ ಬಗ್ಗೆ ಹೇಳಿ:

ಜಿಡಿಪಿ ಲೆಕ್ಕಾಚಾರದ ಮಾನದಂಡವೇ ಒಪ್ಪುವಂತದ್ದಲ್ಲ. ಹಿಂದೆ ಕೈಗಾರಿಕೆಗೆ ಕಾರ್ಪೊರೆಟ್ ನೀತಿಯಿಂದ ಪ್ರಾಮುಖ್ಯತೆ ಕೊಟ್ಟಾಗಿದೆ. ಅದರಿಂದ ಏನು ಬದಲಾವಣೆ ಆಗಿಲ್ಲ. ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ, ನಿರುದ್ಯೋಗ ಜಾಸ್ತಿಯಾಗುತ್ತಿದೆ. ಇದು ದೇಶದ ಆರ್ಥಿಕ ಕುಸಿತಕ್ಕೂ ಕಾರಣವಾಗಿದೆ. ನಾವು ಮೂಲಭೂತವಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಭಾರತ ದೇಶ ಗ್ರಾಮೀಣ ಭಾಗದಿಂದ ಕೂಡಿದ್ದು ಮತ್ತು ಕೃಷಿಗೆ ಪೂರಕವಾಗಿ ಇರುವಂಥದ್ದು ಎಂದು. ಯಾವಾಗಲೂ ಉದ್ಯಮಗಳು ಒಂದಲ್ಲಾ ಒಂದು ರೀತಿಯಲ್ಲಿ ಕೃಷಿ ಉತ್ಪನ್ನದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಹೋಟಲ್, ಅಂಗಡಿಗಳು, ಕಾರ್ಖಾನೆಗಳು, ಆಟೋ-ಮೊಬೈಲ್ ರಂಗ ಕೂಡ ಕೃಷಿ ವಲಯದ ಬೇಡಿಕೆಯಿಂದಲೇ ಬೆಳೆಯುವುದು. ಆದರೆ ಇಲ್ಲಿ ಕೃಷಿ ಮತ್ತು ಗ್ರಾಮೀಣ ಆದಾಯವೇ ಮರೆಯಾಗುತ್ತಿದೆ. ಗ್ರಾಮೀಣ ಜನಕ್ಕೆ ಆದಾಯ ಹೆಚ್ಚಾಗಿದ್ದರೆ ಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ. ಕೊಳ್ಳುವ ಶಕ್ತಿ ಇದ್ದಾಗಲೇ ಬೇರೆ ಉದ್ಯಮ ಬೆಳೆಯುವುದಕ್ಕೆ ಸಾಧ್ಯ. ಈಗ ನಾವು ಅಂಗಡಿಗೆ ಹೋಗಿ ವ್ಯಾಪಾರ ಮಾಡಿದರೆ ಅಂಗಡಿಯವನಿಗೆ ವ್ಯಾಪಾರವಾಗುತ್ತದೆ. ಒಂದು ಕಾರ್-ಬೈಕ್ ತಗೋಬೇಕು ಎಂದರೂ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು. ನಮ್ಮ ಆಟೊಮೊಬೈಲ್ ಉದ್ದಿಮೆಗಳಾಗಿರಬಹುದು, ಬೇರೆ ಉದ್ಯಮಗಳಾಗಿರಬಹುದು ಅವುಗಳ ಆರ್ಥಿಕ ಸ್ಥಿತಿ ಬೆಳೆಯಬೇಕಾದರೆ ಸಾಮಾನ್ಯ ಜನರ ಆರ್ಥಿಕತೆ ಗಟ್ಟಿಯಿದ್ದಾಗ ಮಾತ್ರ ಸಾಧ್ಯ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಆರ್ಥಿಕ ಕುಸಿತವಾದರೆ ಎಲ್ಲಾ ರಂಗದಲ್ಲೂ ಆರ್ಥಿಕ ಕುಸಿತವಾಗುತ್ತದೆ. ಅದಕ್ಕೆ ಭಾರತದ ಪರಿಸ್ಥಿತಿ ಹೀಗಾಗಿದೆ.

ಒಂದು ಲಕ್ಷ ಕೋಟಿ ಪ್ಯಾಕೇಜ್ ಕೇಳುತ್ತಿದ್ದೀರಲ್ಲಾ. ಸಮಾವೇಶದ ನಂತರದಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಇದಕ್ಕೆ ಸ್ಪಂದಿಸದಿದ್ದರೆ, ಆಗ ಮುಂದಿನ ಕಾರ್ಯಕ್ರಮ ಏನು?

ಒಟ್ಟು ಇವತ್ತು ನಾವು ಕರ್ನಾಟಕದ ಸಮಗ್ರ ಸಂಕಷ್ಟಗಳನ್ನ ಚರ್ಚೆ ಮಾಡುವುದಕ್ಕೆ ಬಂದಿದ್ದೇವೆ. ಹಕ್ಕೊತ್ತಾಯ ಮಾಡುತ್ತೇವೆ. ರಾಜ್ಯ, ಕೇಂದ್ರ ಸರ್ಕಾರಗಳು ನಮಗೆ ಸ್ಪಂದಿಸದಿದ್ದರೆ ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಇನ್ನೂ ಮುಂದುವರೆದ ಹೋರಾಟ ಇದ್ದೇ ಇರುತ್ತದೆ. ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕು, ಎಚ್ಚರಿಕೆ ಕೊಡಬೇಕು. ಕರ್ನಾಟಕದಿಂದ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಸದಾನಂದ ಗೌಡರು, ಸುರೇಶ ಅಂಗಡಿ ಮತ್ತು ಜೋಷಿಯವರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ಅವರು ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಹಕ್ಕೊತ್ತಾಯಗಳನ್ನು ಜಾರಿಗೆ ತರಬೇಕೆಂದು ಕೇಂದ್ರದಲ್ಲಿ ಒತ್ತಾಯಿಸಬೇಕು. ಅಧಿಕಾರದಲ್ಲಿರುವ ಪಕ್ಷದಿಂದ ಗೆದ್ದಿರುವ 25 ಸಂಸದರಿಗೆ ಪ್ರಧಾನಿಯನ್ನು ಭೇಟಿಯಾಗುವಷ್ಟು ತಾಕತ್ತಿಲ್ಲ. ಅವರು ಎಂ.ಪಿ.ಗಳು ಅನ್ನಿಸಿಕೊಳ್ಳೋಕೆ ನಾಲಾಯಕ್ಕು. ಅದರಿಂದ 25 ಸಂಸದರ ಮನೆ ಮುಂದೆಯೂ ನಾವು ಹೋಗುತ್ತೆವೆ. ಇನ್ನು ಮೂರು ಜನ ಎಂ.ಪಿಗಳು, ರಾಜ್ಯಸಭೆಯ ಸದಸ್ಯರ ಮನೆ ಮುಂದೆಯೂ ಹೋಗುತ್ತೇವೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರಿಗೂ ಪ್ರಶ್ನೆ ಮಾಡುವ ಮೂಲಕ ನಮ್ಮ ಹಕ್ಕೊತ್ತಾಯಗಳ ಚರ್ಚೆ ಮಾಡಬೇಕು. ಸರ್ಕಾರದ ಧೋರಣೆಯನ್ನು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಿ, ಪ್ರತಿಯೊಂದು ಕುಟುಂಬಕ್ಕೂ ತಿಳಿಸುವಂತಹ ಕೆಲಸ ಮಾಡುತ್ತೇವೆ.

ಎಷ್ಟು ಕೋಟಿ ಪರಿಹಾರ ಬೇಕು, ಯಾವ ರೀತಿಯ ಕೆಲಸಗಳಾಬೇಕು?

19 ವರ್ಷದ ಕರ್ನಾಟಕದ ಇತಿಹಾಸದಲ್ಲಿ 14 ವರ್ಷಗಳ ಕಾಲ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಬರವನ್ನು ಅನುಭವಿಸಿವೆ. ಕೆಲವು ಜಿಲ್ಲೆಗಳು ಖಾಯಂ ಬರ ಪೀಡಿತ ಪ್ರದೇಶಗಳಾಗಿವೆ. 14 ವರ್ಷಗಳ ಬರ ಮತ್ತು 3 ವರ್ಷಗಳ ನೆರೆಯಿಂದಾಗಿ ದುಡಿಯುವಂತಹ ಜನರ ಬದುಕು ಬರಡಾಗಿದೆ. ಆದ್ದರಿಂದ ಕರ್ನಾಟಕದ ಇವತ್ತಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಕನಿಷ್ಟ ಒಂದು ಲಕ್ಷ ಕೋಟಿ ಕೋಡಬೇಕು. ಅಷ್ಟು ಕೊಟ್ಟರೆ ಸಂತ್ರಸ್ತರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ವ್ಯವಸಾಯಕ್ಕೆ ಉತ್ತೇಜನ ನೀಡುವಂತ ಕೆಲಸ ಮಾಡಬಹುದು.

ಇವೆಲ್ಲವೂ ತಕ್ಷಣದ ಕ್ರಮಗಳು. ಆದರೆ, ಶಾಶ್ವತ ಪರಿಹಾರದ ಕ್ರಮಗಳು ಯಾವ್ಯಾವಿವೆ?

ಕೃಷಿ ಪೂರ್ತಿ ಸಂಕಷ್ಟದಲ್ಲಿದೆ. ಕೃಷಿಗೆ ವಿಮುಖರಾಗಿ ಜನ ಹೋಗುತ್ತಿದ್ದಾರೆ. ಎಲ್ಲಿ ಕೃಷಿ ಕ್ಷೇತ್ರ ಕುಸಿಯುತ್ತದೆಯೋ ಅಲ್ಲಿ ನಿರುದ್ಯೋಗದ ಸಮಸ್ಯೆ ತಾನಾಗಿಯೇ ಉದ್ಭವಿಸುತ್ತದೆ. ಆಹಾರ ಸಮಸ್ಯೆ ಶುರುವಾಗುತ್ತದೆ. ಎಲ್ಲಾ ರೀತಿಯ ಇಂಡಸ್ಟ್ರಿಗಳು ಮತ್ತು ಇತರ ಸೆಕ್ಟರ್‍ಗಳ ಮೇಲೆ ಕೃಷಿ ಸಂಕಷ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕೃಷಿಗೆ ಒತ್ತು ಕೊಡುವಂತಹ ಹತ್ತು ವರ್ಷದ ಯೋಜನೆಬೇಕು. ಕೃಷಿಯನ್ನು ಸಂಘಟಿಸಿ ಪರಿಹಾರ ರೂಪಿಸುವ ಕೆಲಸ ಆಗಬೇಕು. ಮಾರುಕಟ್ಟೆ ನೀತಿ ಬದಲಾಗಬೇಕು. ಕನಿಷ್ಟ ವೈಜ್ಞಾನಿಕ ಬೆಲೆ ನಿಗದಿಯಾದರೆ, ಘನತೆಯುಳ್ಳ ಬದುಕಿಗೆ ಬೇಕಾದ ಆದಾಯ ದೊರೆಯುತ್ತದೆ ಎನ್ನುವ ಆತ್ಮವಿಶ್ವಾಸ ತುಂಬಿ ಕೃಷಿಯನ್ನು ಉಳಿಸಬಹುದು. ಗ್ರಾಹಕ ಮತ್ತು ಉತ್ಪಾದಕರ ನಡುವೆ ನೇರ ಸಂಪರ್ಕವಿರಬೇಕು. ಮಧ್ಯವರ್ತಿಗಳ ಹಾವಳಿ ಹೋಗಬೇಕು. ಮೌಲ್ಯಾಧಾರಿತ ಕೃಷಿ ಉತ್ಪನ್ನವಿರುವ ನಮ್ಮ ಮಾರುಕಟ್ಟೆ ಇರಬೇಕು. ಇವು ಶಾಶ್ವತ ಪರಿಹಾರ ಕ್ರಮಗಳು. ರೈತಸಂಘದ ಮುಖ್ಯ ಹೋರಾಟ ಅದಕ್ಕೇನೇ.

ಶಾಶ್ವತವಾಗಿ ಬರ ಇಲ್ಲದಿರುವುದಕ್ಕೆ ನಿಮ್ಮ ಸಂಘದಿಂದ ಏನು ಕಾರ್ಯಕ್ರಮಗಳನ್ನು ಯೋಜಿಸಿದ್ದೀರಿ?

ಕರ್ನಾಟಕ ಬರಮುಕ್ತ ಆಂದೋಲನದ ಕುರಿತ ಯೋಜನೆ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಶುರುವಾಗಿದೆ. ಕರ್ನಾಟಕವನ್ನು ಬರ ಮುಕ್ತವಾಗಿ ಮಾಡುವುದಕ್ಕೆ ನೀರನ್ನು ಭೂಮಿಯಲ್ಲಿ ಹೇಗೆ ಇಂಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತಷ್ಟು ನೀತಿಯಾಗಬೇಕು. ಹವಾಮಾನ ವೈಪರೀತ್ಯ ಉಂಟಾಗುತ್ತಿವೆ. ಹವಾಮಾನವನ್ನು ಸಮತೋಲನಕ್ಕೆ ತರಲು ಹಸಿರೀಕರಣ ಮಾಡಬೇಕು. ಎಲ್ಲ ಕಡೆ ಗಿಡಗಳನ್ನು ನೆಡಬೇಕು, ಯಾವ ಪ್ರದೇಶಕ್ಕೆ ಯಾವ ಗಿಡ ಸೂಕ್ತ ಮತ್ತು ಮುಂದಿನ ಪೀಳಿಗೆಗೆ ಲಾಭವಾಗುವಂತಹ ಗಿಡಗಳನ್ನು ನೆಡಬೇಕು. ಸಣ್ಣ ಪುಟ್ಟ ಕೆರೆಗಳನ್ನು ತುಂಬಿಸಬೇಕು. ಕಡಿಮೆ ನೀರಿದ್ದಾಗ ಯಾವ ರೀತಿಯ ಬೆಳೆ ಬೆಳೆಯಬೇಕು, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ವೈವಿಧ್ಯಮಯವಾದ ಕೃಷಿಯನ್ನು ಮಾಡಿ ರೈತ, ರೈತನಾಗಿ ಉಳಿದುಕೊಳ್ಳಬೇಕು. ಅದಕ್ಕೆ ಪೂರಕವಾಗಿ ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆಗೆ ಉತ್ತೇಜನ ಮಾಡುವುದರಿಂದ ಆರ್ಥಿಕವಾಗಿ ಲಾಭವಾಗುತ್ತದೆ.

ದೇಶದ ಆರ್ಥಿಕ ಬಿಕ್ಕಟ್ಟಿಗೂ ಕೂಡ ಕೃಷಿಯಿಂದ ಪರಿಹಾರ ಇದೆ ಅಂತ ಹೇಳಿದ್ರಿ, ಅದು ಹೇಗೆ?

ನಮ್ಮ ದೇಶ ಕೃಷಿಕರ ದೇಶ. ಸರ್ಕಾರದ ಅಂಕಿ ಅಂಶಗಳಲ್ಲೆ ಹೇಳಿರುವ ಪ್ರಕಾರ ಪಿ. ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಶೇ.63ರಷ್ಟು ಉದ್ಯೋಗ ಕೊಡುವುದು ಕೃಷಿಯಿಂದ ಎಂದು ಹೇಳಿದ್ದರು. ಸರ್ಕಾರಗಳು ಆಹಾರ ರಕ್ಷಣೆಗಾಗಿ ಕೃಷಿಗೆ ಒತ್ತು ಕೊಡಬೇಕು. ಹಾಗಾಗಿ ಕೃಷಿ ಪೂರಕವಾಗಿಯೇ ಯೋಜನೆಗಳನ್ನು ರೂಪಿಸಬೇಕು. ಆ ಮುಖಾಂತರ ಬೇರೆ ಸೆಕ್ಟರ್ ಬೆಳೆಯಬೇಕೇ ಹೊರತು ಬೇರೆ ಸೆಕ್ಟರ್‍ನಿಂದ ಕೃಷಿ ಬೆಳೆಯುತ್ತದೆ ಎಂದರೆ ಸಾದ್ಯವಿಲ್ಲ. ಒಟ್ಟು ಕೃಷಿ ಆಧಾರಿತ ಯೋಜನೆಗಳೇ ಆಗಬೇಕಾಗಿರುವಂತದ್ದು. ಇದರಲ್ಲೇ ಉದ್ಯೋಗ ಸೃಷ್ಟಿ ಮಾಡಬಹುದು. ಐಟಿಬಿಟಿಯವರಿಗೂ ಇದರಲ್ಲೇ ಉದ್ಯೋಗ ಸೃಷ್ಟಿ ಮಾಡಬಹುದು. ಹೆಚ್ಚಾಗಿ ಉದ್ಯೋಗ ದೊರೆಯುವುದು ಕೃಷಿಯಲ್ಲಿಯೇ.

ಇದಲ್ಲದೇ ದೇಶದ ಇಷ್ಟೊಂದು ಜನ ಕೃಷಿಯಲ್ಲಿದ್ದಾಗ ಉಳಿದ ವಸ್ತುಗಳಿಗೆ ಬೇಡಿಕೆ ಉಂಟಾಗುವುದು ಕೃಷಿ ಸದೃಢವಾದಾಗ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...