ಕೊರೊನಾ ಸೋಂಕಿನ ನಡುವೆಯೂ ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ, ಇಂಜಿನಿಯರಿಂಗ್, ಹಾಗೂ ಡಿಪ್ಲೋಮೋ ವಿಭಾಗದ ತರಗತಿಗಳು ಆರಂಭವಾಗಲಿವೆ. ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕಾಲೇಜು ತೆರೆಯುವ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಜ್ಞರು, ಸಚಿವರು ಮತ್ತು ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ರಾಜ್ಯದಲ್ಲಿ ನವೆಂಬರ್ 17ರಿಂದ ಡಿಗ್ರಿ ಕಾಲೇಜುಗಳನ್ನು ಹೈಬ್ರಿಡ್ ಮಾದರಿಯಲ್ಲಿ ತೆರೆಯಲು ಒಪ್ಪಿಗೆ ಸೂಚಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
?
Colleges in Karnataka will reopen for classes from November 17.This decision is an outcome of a review meeting held under the leadership of CM @BSYBJP. Reopening of all Graduate, PG, Diploma & Engineering Colleges was discussed with all concerned departments' officials.
1/3 pic.twitter.com/hdbSHcmGZY
— Dr. Ashwathnarayan C. N. (@drashwathcn) October 23, 2020
ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಇರಲಿದೆ. ಕಾಲೇಜು ಪ್ರವೇಶಿಸಲು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು. ಪ್ರತಿ ಕಾಲೇಜುಗಳಲ್ಲೂ ನಿರ್ವಹಣೆಗೆ ಕಾರ್ಯಪಡೆ ಇರುತ್ತದೆ. ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳೂ ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ
ಕೊರೊನಾ ಹಿನ್ನೆಲೆಯಲ್ಲಿ ಹೈ ಬ್ರೀಡ್ ಶಿಕ್ಷಣಕ್ಕೆ ಸರ್ಕಾರ ಯೋಜನೆ ಮಾಡಿದೆ. ಅಂದರೆ ವಿದ್ಯಾರ್ಥಿಗಳು ಆನ್‌ಲೈನ್ ಹಾಗೂ ಆಫ್ಲೈನ್ ಎರಡು ವಿಧಾನದಲ್ಲೂ ತರಗತಿಗೆ ಹಾಜರಾಗಬಹುದು ಎಂಬ ಆಯ್ಕೆ ನೀಡಿದ್ದಾರೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಯುಜಿಸಿ ಮಾರ್ಗಸೂಚಿಗಳನ್ನು ಅನುಸರಿಸಿ, ಆನ್‌ಲೈನ್ ತರಗತಿಗಳು ಈಗಾಗಲೇ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿವೆ. ನವೆಂಬರ್‌ನಲ್ಲಿ ಕಾಲೇಜು ಪುನರಾರಂಭಿಸುವ ನಿರ್ಧಾರವನ್ನು ಆಯಾ ಸಂದರ್ಭಗಳ ಆಧಾರದ ಮೇಲೆ ರಾಜ್ಯಗಳಿಗೆ ಬಿಡಲಾಗಿತ್ತು.
ರಾಜ್ಯದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಈಗ 1 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಗುರುವಾರ ತನಕ ಸತತ ಎಂಟನೇ ದಿನವೂ ಹೊಸ ಪ್ರಕರಣಗಳಿಗಿಂತ ಕೊರೊನಾ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ ಹೆಚ್ಚಾಗಿದೆ.


