Homeಕರ್ನಾಟಕಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಕಲ್ಯಾಣದ ಕನಸಿನ ‘ಕೂಡಲಸಂಗಮ’ ದೃಶ್ಯರೂಪಕ: ನಿರಂತರದ ವಿಭಿನ್ನ ರಂಗ ಪ್ರಯೋಗ

ಬಸವಣ್ಣನವರ ವಚನಗಳಿಗೆ ಸಿ.ಅಶ್ವತ್ ವಿಶಿಷ್ಟ ಶೈಲಿಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದಕ್ಕೆ ನಿರಂತರ ರಂಗತಂಡ 'ಕೂಡಲಸಂಗಮ' ದೃಶ್ಯರೂಪಕವನ್ನು ಕಟ್ಟಿ, ಬಸವಣ್ಣನ ಕನಸಿನ ಕಲ್ಯಾಣವನ್ನು ಕಣ್ಣಮುಂದೆ ತೆರೆದಿಡುವ ಪ್ರಯತ್ನ ಮಾಡಿದೆ.

- Advertisement -
- Advertisement -

ಕೆಲವರದ್ದು ದೇಶಕಾಲಗಳನ್ನು ಮೀರಿದ ವ್ಯಕ್ತಿತ್ವ. ಅಂತಹವರಲ್ಲಿ ಕರ್ನಾಟಕದ ಬಸವಣ್ಣನವರೂ ಒಬ್ಬರು. ಸಾಹಿತ್ಯವನ್ನು ಸಶಕ್ತವಾಗಿ ಬಳಸಿ ಸಾಮಾಜಿಕ ಪರಿವರ್ತನೆ ತರಲು ಪ್ರಯತ್ನಿಸಿ, ‘ವಚನ ಕ್ರಾಂತಿ, ವಚನ ಚಳುವಳಿ’ಯನ್ನು ಆರಂಭಿಸಿದ್ದು ಬಸವಣ್ಣನವರ ಕಾಲಘಟ್ಟದಲ್ಲಿ. ಕರ್ನಾಟಕದಲ್ಲಿ ಘಟಿಸಿದ ಈ ವಿನೂತನ ಚಳವಳಿ ಜಗತ್ತಿನಲ್ಲಿಯೇ ಮೊಟ್ಟಮೊದಲನೆಯದ್ದು. ಅನುಭವ ಮಂಟಪ ಅಥವಾ ಮಹಾಮನೆಯನ್ನು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಎನ್ನಲಾಗುತ್ತದೆ. ಆದರೆ ಇಂತಹ ವೈಶಿಷ್ಟಪೂರ್ಣ ಆದರ್ಶ ಎಷ್ಟು ಬೇಗ ಪ್ರವರ್ಧಮಾನಕ್ಕೆ ಬಂತೋ ಅಷ್ಟೇ ಬೇಗ ಹಳ್ಳಹಿಡಿಯಿತು.

ನಿರಂತರ ಫೌಂಡೇಶನ್ ಅಭಿನಯಿಸಿರುವ “ಕೂಡಲಸಂಗಮ” ದೃಶ್ಯರೂಪಕ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಬಸವಣ್ಣ ಮಾಡಿಸಿದ ಮೊದಲ ವರ್ಣಸಂಕರವನ್ನು ತಡೆದುಕೊಳ್ಳಲಾಗದ ಅಂದಿನ ಸನಾತನವಾದಿಗಳು ಬಿಜ್ಜಳನ ಆಸ್ಥಾನದಿಂದ ಬಸವಣ್ಣನವರನ್ನು ಹೊರಗೋಡಿಸಿ, ಕೊಂದು, ಅವರು ಐಕ್ಯವಾದರು ಎಂಬ ಸುಳ್ಳನ್ನು ಹಬ್ಬಿಸಿದರು. ನಂತರ ಹರಳಯ್ಯ ಮಧುವರಸರ ಕಣ್ಣು ಕೀಳಿಸಿ, ಎಳೆಹೂಟೆ ಎಳೆಸಿ, ಶೂಲಕ್ಕೇರಿಸಿ ಕೊಂದರು. ಅಂದಿನಿಂದ ಬಸವಣ್ಣನ ಆಶಯ, ಆದರ್ಶ ತಳಹಿಡಿಯಲು ಆರಂಭಿಸಿತ್ತು. ಯಾವ ಜಾತಿಯೂ ಇಲ್ಲ ಎಂದಿದ್ದ ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗುವಂತೆ ಮಾಡಲು ವೈದಿಕರ ಕೈವಾಡಕ್ಕೆ ಸಾಧ್ಯವಾಗಿತ್ತು. ಪರ್ಯಾಯ ವ್ಯವಸ್ಥೆ ಕಟ್ಟಲು ಮುಂದಾಗಿದ್ದ ಬಸವಣ್ಣ ಮತ್ತು ಅವನ ಕನಸಿನ ಕಲ್ಯಾಣವನ್ನು ಇದೇ ಅನಿಷ್ಟ ವ್ಯವಸ್ಥೆಯ ಭಾಗವನ್ನಾಗಿಸಲಾಯಿತು.

ಅಂದಿನಿಂದ ಬಸವಣ್ಣ ಕಾಣೆಯಾಗಿದ್ದಾನೆ. ಕಾಣೆಯಾಗಿರುವ ಬಸವಣ್ಣನನ್ನು ಇಂದಿಗೂ ನಾನಾ ರೂಪಗಳಲ್ಲಿ ಕಂಡುಕೊಳ್ಳುತ್ತಿರುವ ಅನೇಕರು, ಅವನ ಆಶಯದ ಕಾಯಕ ಮತ್ತು ಭಕ್ತಿಯ ಅನುಭವಮಂಟಪವನ್ನು ಸಾಕಾರಗೊಳಿಸಲು ನಮ್ಮ ನಡುವೆಯೇ ಪ್ರಯತ್ನಿಸುತ್ತಿದ್ದಾರೆ. ಈ ಸಾಲಿಗೆ ಸೇರುವ ನಿರಂತರ ರಂಗತಂಡದ ಕೆಲಸ ಕೂಡ ಬಹಳ ಮಹತ್ವದ್ದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪತ್ರಕರ್ತರಿಗೆ ಕಿರುಕುಳ: ಮೋದಿಗೆ ಪತ್ರ ಬರೆದ ಅಂತರಾಷ್ಟ್ರೀಯ ಪತ್ರಿಕಾ ಸಂಘಗಳು!

ಮೈಸೂರಿನ ಪ್ರಖ್ಯಾತ ಹವ್ಯಾಸಿ ತಂಡ ‘ನಿರಂತರ ಫೌಂಡೇಶನ್, ಮೈಸೂರು’ ಹೆಸರಿಗೆ ಮಾತ್ರ ಹವ್ಯಾಸಿ ತಂಡವಾಗಿದ್ದು, ತನ್ನ ಚಟುವಟಿಕೆಗಳಲ್ಲಿ ಸಂಪೂರ್ಣ ವೃತ್ತಿಪರತೆಯನ್ನು ಕಂಡುಕೊಂಡಿದೆ. ಸಮಾಜ ಮತ್ತು ಯುವಮನಸ್ಸುಗಳೊಟ್ಟಿಗೆ ಮುಖಾಮುಖಿಯಾಗಲು ರಂಗಭೂಮಿಯನ್ನು ಸಾಧನವಾಗಿಸಿಕೊಂಡು ಕಳೆದ 30 ವರ್ಷಗಳಿಂದ ಕನ್ನಡ ರಂಗಭೂಮಿಗೆ ಕೊಡುಗೆ ನೀಡುತ್ತಾ, ಪ್ರಸ್ತುತ ಸಮಾಜದ ವಿದ್ಯಮಾನಗಳು ಮತ್ತು ತಲ್ಲಣಗಳನ್ನೂ ಸಂವೇದನಾಶೀಲತೆಯಿಂದ ಜನರಿಗೆ ತಲುಪಿಸುತ್ತಾ ಬಂದಿದೆ.

ಈ ನಿಟ್ಟಿನಲ್ಲಿ ನೂರಾರು ನಾಟಕಗಳು, ಜಾಥಗಳು, ಸಾಕ್ಷ್ಯಚಿತ್ರಗಳು, ಕಾವ್ಯಕಮ್ಮಟಗಳು, ಓದು, ಚರ್ಚೆ, ಹೋರಾಟ ಮುಂತಾದವುಗಳಲ್ಲಿ ಕ್ರಿಯಾತ್ಮಕವಾಗಿ ಈ ತಂಡ ತೊಡಗಿಸಿಕೊಂಡಿದೆ. ಇಷ್ಟೇ ಅಲ್ಲದೇ, ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಜರಂಗ’ ಎನ್ನುವ ಒಂದು ತಿಂಗಳ ಉಚಿತ ರಂಗತರಬೇತಿ ಶಿಬಿರವನ್ನು ನಡೆಸುತ್ತಿದೆ. ಜೊತೆಗೆ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ಮುಖಾಮುಖಿಯ ಭಾಗವಾಗಿ ರಾಷ್ಟ್ರ ಮತ್ತು ರಾಜ್ಯಮಟ್ಟದ 5 ದಿನಗಳ ‘ನಿರಂತರ ರಂಗ ಉತ್ಸವ’ವನ್ನು ಹಮ್ಮಿಕೊಂಡುಬರುತ್ತಿದೆ.

ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?

ಇಂತಹ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯುಳ್ಳ ಚಿಂತನೆಯನ್ನು ಪಸರಿಸುವ ಸಲುವಾಗಿ ನಿರಂತರ ಹತ್ತಾರು ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದರ ಭಾಗವಾಗಿಯೇ ಕಳೆದ 13 ವರ್ಷಗಳ ಹಿಂದೆ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ಎನ್ನುವ ದೃಶ್ಯರೂಪಕ ಹುಟ್ಟಿಕೊಂಡಿತು.

ಬಸವಣ್ಣನವರ ವಚನಗಳಿಗೆ ಡಾ. ಸಿ.ಅಶ್ವಥ್ ಮಾಂತ್ರಿಕ ಸ್ಪರ್ಶ ನೀಡಿ, ಜನಪದ ಶೈಲಿಯಲ್ಲಿ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿದರು. ನಿರಂತರದ ಪ್ರಸಾದ್ ಕುಂದೂರು ಮತ್ತು ಎಂ.ಎಂ.ಸುಗುಣ ಸೇರಿ ಈ ವಚನಗಳಿಗೆ ದೃಶ್ಯ ಮತ್ತು ನೃತ್ಯವನ್ನು ಹದವಾಗಿ ಬೆರೆಸಿದ ಪರಿಣಾಮ 13 ವರ್ಷಗಳ ನಂತರ ಇಂದಿಗೂ ಜನಪ್ರಿಯ ಪ್ರದರ್ಶನವಾಗಿಯೇ ಉಳಿದುಕೊಂಡಿದೆ. ಇದುವರೆಗೂ ಸುಮಾರು 110ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಈ ದೃಶ್ಯರೂಪಕ ದೆಹಲಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ದೃಶ್ಯರೂಪಕದಲ್ಲಿ, ಕಳೆದುಹೋಗಿರುವ 12ನೇ ಶತಮಾನದ ಬಸವಣ್ಣನನ್ನು ಶರಣರು ಹುಡುಕುತ್ತಾ ಸಾಗುತ್ತಾರೆ. ಇವರಿಗೆ ಎದುರಾಗುವ ಬಸವಣ್ಣನ ಅಂಕಿತ ಮತ್ತು ಆದರ್ಶವಾದ ‘ಕೂಡಲಸಂಗಮದೇವ’ನೂ ಬಸವಣ್ಣನನ್ನೇ ಹುಡುಕುತ್ತಿರುವುದನ್ನು ಕಂಡು ಪರಸ್ಪರ ಚಕಿತರಾಗುತ್ತಾರೆ. ಶರಣರು ಮತ್ತು ಕೂಡಲಸಂಗಮದೇವರು ಒಟ್ಟಿಗೆ ಸೇರಿ ಬಸವಣ್ಣನನ್ನು ಹುಡುಕುತ್ತಾ ಹೋಗುವ ದಾರಿಯಲ್ಲಿ, ನಮ್ಮ ಸಮಾಜದ ನೀಚ, ಅನಿಷ್ಠ, ಅನಾಚಾರ, ಡಾಂಭಿಕತೆ, ಶೋಷಣೆಗಳು ದೃಶ್ಯವಾಗಿ ಕಟ್ಟಿಕೊಳ್ಳುತ್ತದೆ. ಇದನ್ನು ಪ್ರಸಾದ್ ಕುಂದೂರು ತಮ್ಮ ತೀಕ್ಷ್ಣವಾದ ಸಾಹಿತ್ಯ ಮತ್ತು ಸಂಭಾಷಣೆಯ ಮೂಲಕ ಮತ್ತಷ್ಟು ಪ್ರಖರಗೊಳಿಸಿದ್ದಾರೆ.

ಇದನ್ನೂ ಓದಿ: ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ವಚನಗಳಿಗೆ ಭಾರತದ ಜನಪದ, ಬುಡಕಟ್ಟು ಸಂಗೀತ ಶೈಲಿಯನ್ನು ಅಳವಡಿಸಿ ಅಶ್ವಥ್ ಅವರು ವಿಶಿಷ್ಟವಾದ ಸಂಗೀತ ಪ್ರಯೋಗವನ್ನು ಮಾಡಿದ್ದಾರೆ. ಇವೆರಡಕ್ಕೂ ಹೊಂದುವಂತೆ ಕಂಸಾಳೆ, ಬುಡಕಟ್ಟು ನೃತ್ಯ, ಗುಜರಾತ್‍ನ ದಾಂಡಿಯಾ ನೃತ್ಯ, ಕೋಲಾಟ ಮುಂತಾದ ಭಾರತೀಯ ಜನಪದ ಶೈಲಿಗಳ ನೃತ್ಯವನ್ನು ಸಂಯೋಜಿಸಿ ವಚನಗಳಿಗೆ ಹೊಸ ರೂಪಕವನ್ನು ಎಂ.ಎಂ.ಸುಗುಣ ಕಟ್ಟಿಕೊಟ್ಟಿದ್ದಾರೆ. ಸುಮಾರು 1 ಗಂಟೆ 15 ನಿಮಿಷದ ಈ ಪ್ರದರ್ಶನ ವಿನೂತನ ವಸ್ತ್ರಾಲಂಕಾರ, ಬೆಳಕು, ಸಂಗೀತ, ನೃತ್ಯ, ದೃಶ್ಯ ಮತ್ತು ಸಂಭಾಷಣೆಗಳೊಂದಿಗೆ ನೋಡುಗರನ್ನು ಏಕಾಗ್ರಾಚಿತ್ತರನ್ನಾಗಿ ಮಾಡಿ ಮೂಕವಿಸ್ಮಿತರನ್ನಾಗಿಸುವ ಜೊತೆಗೆ ಅವರೊಳಗೆ ಒಂದು ಸಣ್ಣ ಸಂವೇದನೆಯನ್ನು ಚಿಗುರಿಸುತ್ತದೆ.

ಹೀಗೆ, ಕಳೆದು ಹೋಗಿರುವ ಬಸವಣ್ಣನನ್ನು ನಿರಂತರ ತಂಡ ಇಂದಿಗೂ ಹುಡುಕುತ್ತಾ ಬಸವಣ್ಣನವರ ಆದರ್ಶದ ಸಮಾಜದ ಕನಸು ಕಾಣುತ್ತಾ ಸಾಗುತ್ತಿದೆ. ‘ಮಾನವತೆಯ ಏಕತೆಗಾಗಿ’ ನಿರಂತರ ಕೈಗೊಂಡ ಈ ಕೂಡಲಸಂಗಮ ಪಯಣ, ಇಂದಿನ ಸಮಾಜಕ್ಕೆ ಬಸವಣ್ಣ ಮತ್ತು ಆ ಕಾಲಘಟ್ಟದ ಸಾಮಾಜಿಕ ಪರಿವರ್ತನೆಯ ಮಹತ್ವವನ್ನು ತಿಳಿಸುವ ಸಲುವಾಗಿ ಆರಂಭಗೊಂಡು ಆಧುನಿಕ ರಂಗಭೂಮಿಯ ಅನ್ವಯಿಕತೆಯ ಪ್ರಯೋಗವಾಗಿ ಇಂದಿಗೂ ಮುಂದುವರಿಯುತ್ತಲೇ ಇದೆ.


ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...