125 ಅಡಿ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮತ್ತು ಸ್ಮಾರಕ ಉದ್ಯಾನದ ಸ್ಥಾಪನೆ ಕುರಿತು ಮಂಗಳವಾರ ಸ್ವರಾಜ್ ಮೈದಾನದಲ್ಲಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಅಂಬೇಡ್ಕರ್ ಪ್ರತಿಮೆ ನಿರ್ಮಾಣದಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದ್ದು, ಸ್ಮಾರಕದ ಉದ್ಯಾನವನದಲ್ಲಿ ಭೂದೃಶ್ಯದ ವಾತಾವರಣವು ಆಹ್ಲಾದಕರವಾಗಿರಬೇಕು ಎಂದು ಅವರು ಹೇಳಿದರು.
“ಸ್ಮಾರಕ ಉದ್ಯಾನವನದಲ್ಲಿ ಗ್ರಂಥಾಲಯ, ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿ ಸ್ಥಾಪಿಸುವುದರ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯನ್ನು ಪ್ರದರ್ಶಿಸಬೇಕು. ಜೊತೆಗೆ ಉದ್ಯಾನವನದಲ್ಲಿ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಪ್ರದರ್ಶಿಸಲು ಮತ್ತು ರಸ್ತೆಯನ್ನು ಅಗಲಗೊಳಿಸಲು ಹಾಗೂ ಕಾಲ್ನಡಿಗೆಯ ದಾರಿಯನ್ನು ಆಕರ್ಷಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸೂಚಿಸಿದರು” ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಹೊಸ ತಲೆಮಾರು ಅಂಬೇಡ್ಕರ್–ಗಾಂಧಿ ಸಮನ್ವಯದ ಬಗ್ಗೆ ಚಿಂತಿಸಲಿ: ದೊರೆಸ್ವಾಮಿ
ಪವರ್‌ಪಾಯಿಂಟ್ ಪ್ರಸ್ತುತಿಯಲ್ಲಿ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ಮತ್ತು ಸ್ಮಾರಕ ಉದ್ಯಾನವನದ ಎರಡು ಯೋಜನೆಗಳನ್ನು ತೋರಿಸಿದರು. ಜೊತೆಗೆ, ಅಂಬೇಡ್ಕರ್ ದೀಕ್ಷಾ ಭೂಮಿ (ನಾಗ್ಪುರ), ಚೈತ್ಯ ಭೂಮಿ (ಮುಂಬೈ), ಅಂಬೇಡ್ಕರ್ ಸ್ಮಾರಕ (ಲಖನ್ಪುರ್) ಮತ್ತು ಪ್ರೇರಣಾ ಸ್ಥಳ್ (ನೋಯ್ಡಾ) ಸೇರಿದಂತೆ ದೇಶಾದ್ಯಂತ ಇರುವ ಅಂಬೇಡ್ಕರ್ ಸ್ಮಾರಕಗಳನ್ನು ತೋರಿಸಿದರು. ಈ ಪ್ರಸ್ತುತಿ ಗ್ಯಾಲರಿ ಮತ್ತು ಸಭಾಂಗಣದ ವಿನ್ಯಾಸದ ಮೇಲೆ ಕೇಂದ್ರೀಕರಿಸಿದೆ.
ಸ್ವರಾಜ್ ಮೈದಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯ ಕಾಮಗಾರಿ ಪೂರ್ಣಗೊಳ್ಳಲು 14 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೈಗಾರಿಕಾ ಸಚಿವ ಮೆಕಪತಿ ಗೌತಮ್ ರೆಡ್ಡಿ, ಮುಖ್ಯ ಕಾರ್ಯದರ್ಶಿ ನಿಲಾಮ್ ಸಾಹ್ನಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಕಿಪೀಡಿಯಾದಲ್ಲಿ ಕನ್ನಡಿಗರು ಅತಿ ಹೆಚ್ಚು ಹುಡುಕಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ!



Good work…YS JAGAN