ಮಧ್ಯಪ್ರದೇಶದ ಭೂಪಾಲ್ ಇಕ್ಬಾಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳಿಗೆ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಭೋಪಾಲ್‌ನ ತಲೈ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 ರ ಅಡಿಯಲ್ಲಿ ಗುರುವಾರ ಎಫ್‌ಐಆರ್ ದಾಖಲಿಸಲಾಗಿದೆ.
ಧರ್ಮ ಸಂಸ್ಕೃತ ಸಮಿತಿಯ ಪದಾಧಿಕಾರಿ ದೀಪಕ್ ರಘುವಂಶಿ ಅವರ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಸೂದ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಹಿಂದೂವಾದಿ ಎಂದು ಕರೆದಿದ್ದು, ಫ್ರೆಂಚ್ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಶಾಸಕರು ಫ್ರಾನ್ಸ್ ಅಧ್ಯಕ್ಷರ ಪ್ರತಿಮೆ ಮತ್ತು ಆ ದೇಶದ ಧ್ವಜವನ್ನು ಸುಟ್ಟುಹಾಕಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಫ್ರಾನ್ಸ್ ಚರ್ಚ್ ದಾಳಿ: ಲಕ್ಷಾಂತರ ಜನರನ್ನು ಕೊಲ್ಲುವ ಹಕ್ಕು ಮುಸ್ಲಿಮರಿಗಿದೆ; ಮಲೇಷ್ಯಾ ಮಾಜಿ ಪ್ರಧಾನಿ!
ಐಜಿ (ಭೋಪಾಲ್ ಶ್ರೇಣಿ) ಉಪೇಂದ್ರ ಜೈನ್ ಎಎನ್‌ಐ ಜೊತೆ ಮಾತನಾಡಿ, “ಕಾಂಗ್ರೆಸ್ ಶಾಸಕ ಮಸೂದ್ ಮತ್ತು ಇತರ ಆರು ಜನರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಘಾಸಿಯುಮಡುಮಾಡಿದ ಕಾರಣ ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ” ಎಂದು ಹೇಳಿದರು.
ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ಒಬ್ಬ ಶಿಕ್ಷಕನನ್ನು ಮೂಲಭೂತವಾದಿಯೊಬ್ಬ ಶಿರಚ್ಚೇದ ಮಾಡಿದ ನಂತರ ನಗರದಲ್ಲಿ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಚರ್ಚ್ ಮೇಲೆ ಮುಸ್ಲಿಂ ಮೂಲಭೂತವಾದಿಯೊಬ್ಬ ದಾಳಿ ಮಾಡಿದ್ದನು. ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಹಲವರನ್ನು ಇರಿದಿದ್ದ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಫ್ರಾನ್ಸ್ ಚರ್ಚ್ ದಾಳಿಯಲ್ಲಿ 3 ಸಾವು: ’ಅಲ್ಲಾಹು ಅಕ್ಬರ್’ ಎನ್ನುತ್ತಾ ಮಹಿಳೆಯ ಶಿರಚ್ಚೇದ!


