Homeಕರ್ನಾಟಕಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು.

- Advertisement -
- Advertisement -

ಮೈಸೂರು ಹುಲಿ ಟಿಪ್ಪುವಿನ ಮದುವೆಗೆ ಮುಂಚೆ ತಂದೆ ಹೈದರ್ ಅಲಿ, ಮಗನೇ ನನ್ನದೆಲ್ಲವೂ ನಿನ್ನದೇ ಆದರೂ ನಿನ್ನ ಮದುವೆಯ ಸಂದರ್ಭದಲ್ಲಿ ನಿನ್ನ ಖುಷಿಯನ್ನು ಇಮ್ಮಡಿಗೊಳಿಸಲು ನಿನಗೇನಾದರೂ ಕೊಡಬೇಕೆಂದಿದ್ದೇನೆ ಎಂದು ಟಿಪ್ಪುವಿನಲ್ಲಿ ಕೇಳಿದರು. ಅದಕ್ಕೆ ಟಿಪ್ಪು ನೀವು ಈಗಾಗಲೇ ಬಹಳಷ್ಟನ್ನು ಕೊಟ್ಟಿದ್ದೀರಿ, ನನಗೆ ಇನ್ನೇನು ಬೇಡ ಎಂದಾಗ ಅಪ್ಪ ಹೈದರ್ ಪಟ್ಟು ಬಿಡದೇ ಒತ್ತಾಯಿಸಿದರು.

ತಂದೆಯ ಒತ್ತಾಯಕ್ಕೆ ಮಣಿದ ಟಿಪ್ಪು, ಹಾಗಾದರೆ ನನಗೊಂದು ಗ್ರಂಥ ಭಂಡಾರ ನಿರ್ಮಿಸಿ ಕೊಡಿ ಎಂದರು. ಅನಕ್ಷರಸ್ಥರಾಗಿದ್ದ ಹೈದರ್ ಅಲಿಗೆ ಸೋಜಿಗವೆನಿಸಿತ್ತು. ಅವರಿಗೆ ಲೆಕ್ಕ ಮಾತ್ರ ಗೊತ್ತಿತ್ತು. ಲೆಕ್ಕ ಬರೆದಿಡುವ ಪುಸ್ತಕಗಳ ಮಹತ್ವ ಮಾತ್ರ ತಿಳಿದಿತ್ತು. ಅದರಲ್ಲೂ ಬರಬೇಕಾಗಿದ್ದ ತೆರಿಗೆಗಳ ವಿವರಗಳಿದ್ದ ಪುಸ್ತಕಗಳ ಪ್ರಾಶಸ್ತ್ಯ ಮಾತ್ರ ತಿಳಿದಿತ್ತು. ಖುರಾನ್, ಗೀತಾ, ತಾಲ್ಮಡ್, ಬೈಬಲ್, ಗುರು ಗ್ರಂಥ್ ಸಾಹಿಬ್ ಮುಂತಾದ ಪವಿತ್ರ ಗ್ರಂಥಗಳನ್ನು ಓದುತ್ತಿದ್ದವರನ್ನು ಹೈದರ್ ಅಲಿ ಗೌರವಿಸುತ್ತಿದ್ದರು. ಅಂತಹ ಪುಸ್ತಕಗಳು ಮನುಷ್ಯ ಕೆಡುಕು ಮಾಡುವುದರಿಂದ ದೂರವಿರಿಸುತ್ತದೆಂದು ಹೈದರ್ ನಂಬಿದ್ದರು.

ಟಿಪ್ಪುವಿನ ಗುರುಗಳಾದ ಮೌಲವಿ ಉಬೇದುಲ್ಲಾ ಮತ್ತು ಗೋವರ್ಧನ ಪಂಡಿತರು ಟಿಪ್ಪುವಿಗೆ ಸಾಕಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಹೋಗಿದ್ದರು. ಟಿಪ್ಪುವಿನ ದೊಡ್ಡ ಅಭ್ಯಾಸದ ಕೋಣೆಯ ತುಂಬಾ ಪುಸ್ತಕಗಳೇ ತುಂಬಿದ್ದವು. ಟಿಪ್ಪು ಇನ್ನೂ ಪುಸ್ತಕಗಳು ಬೇಕೆನ್ನುವುದಾದರೆ ಹೈದರ್ ಬೇಡವೆನ್ನಲಾರರು.
ಹೈದರ್ ರಾಜ್ಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಟಿಪ್ಪುವಿಗೆ ಕೊಡಲು ಪ್ರಧಾನಿ ಪೂರ್ಣಯ್ಯನಿಗೆ ಆಜ್ಞೆ ಮಾಡಿದರು. ಟಿಪ್ಪು ತನ್ನ ಮನಸ್ಸಿನಲ್ಲಿರುವ ದೊಡ್ಡ ಯೋಜನೆಯನ್ನು ಹೇಳಿದರು.

ಟಿಪ್ಪು ಸುಲ್ತಾನ್, ನಾನು ಎಲ್ಲಾ ಸಂಸ್ಕೃತಿಗಳ, ಎಲ್ಲಾ ರಾಷ್ಟ್ರಗಳ ಪುಸ್ತಕಗಳನ್ನು ಸಂಗ್ರಹಿಸಬೇಕೆಂದಿದ್ದೇನೆ ಎಂದು ತಂದೆಯ ಬಳಿ ಹೇಳಿದ್ದರು. ಆಗ ನಿನ್ನ ಕುರಿತೂ ಮುಂದೊಂದು ದಿನ ಜನರು ಓದಬಹುದು ಎಂದು ಹೈದರ್ ಭವಿಷ್ಯ ನುಡಿದಿದ್ದರು. ಜೊತೆಗೆ ಬೇರೆ ದೇಶಗಳ ಪುಸ್ತಕಗಳು ಬೇರೆ ಭಾಷೆಯಲ್ಲಿರುತ್ತವಲ್ಲವೇ ಎಂದು ಹೈದರ್ ಪ್ರಶ್ನಿಸಿದರು. ಅವುಗಳನ್ನು ಭಾಷಾಂತರ ಮಾಡಿಸಬೇಕು ಎಂದು ಟಿಪ್ಪು ಹೇಳಿದರು.

ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ವಿಧಾನ ಪರಿಷತ್‌ ಬಿಜೆಪಿ ಸದಸ್ಯ

ಟಿಪ್ಪುವಿಗೆ ಪರ್ಷಿಯನ್ ಭಾಷೆ ತುಂಬಾ ಚೆನ್ನಾಗಿ ಗೊತ್ತಿತ್ತು. ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಟಿಪ್ಪು ಅಭ್ಯಾಸ ಮಾಡಿದ್ದರಾದರೂ ಅವುಗಳ ಮೇಲೆ ಹಿಡಿತ ಸಾಧಿಸಲಾಗಿರಲಿಲ್ಲ. ಟಿಪ್ಪುವಿಗೆ ಕನ್ನಡ, ಹಿಂದಿ ಮತ್ತು ಉರ್ದುವಲ್ಲದೇ ಅಲ್ಪ ಸ್ವಲ್ಪ ಮಲಯಾಳಂ ಮತ್ತು ತಮಿಳು ಗೊತ್ತಿತ್ತು.

ದಿವಾನ್ ಪೂರ್ಣಯ್ಯನವರ ಉಸ್ತುವಾರಿಯಲ್ಲಿ ಹೈದರ್ ಅಲಿಯ ಆಜ್ಞೆ ಮೇರೆಗೆ ಟಿಪ್ಪುವಿಗಾಗಿ ಸ್ಥಾಪಿಸಿದ ಗ್ರಂಥಾಲಯಕ್ಕೆ ನೂರುಲ್ ಅಮೀನ್ ಎಂಬವನನ್ನು ಮುಖ್ಯ ಗ್ರಂಥಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವರ ಸಹಾಯಕ ಗ್ರಂಥಾಧಿಕಾರಿಗಳು, ಪುಸ್ತಕ ಪಟ್ಟಿ ತಯಾರಕರು, ಸಂಶೋಧನಾ ಸಹಾಯಕರು, ಪರಿಶೀಲಕರು ಮುಂತಾದ ಹುದ್ದೆಗಳಿಗೆ ದೇಶ ವಿದೇಶಗಳ ವಿಷಯ ತಜ್ಞರನ್ನು ನೇಮಿಸಲಾಗಿತ್ತು. ಫ್ರೆಂಚ್, ಜರ್ಮನ್, ಇಂಗ್ಲಿಷ್, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅನುವಾದಕರನ್ನೂ ನೇಮಿಸಲಾಗಿತ್ತು.

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲೇ ಗ್ರಂಥ ಭಂಡಾರಗಳಿಗೆ ಹೋಗಿ ಓದಲು ಬಾಲಕ-ಬಾಲಕಿಯರಿಗೆ ಪ್ರೋತ್ಸಾಹ ನೀಡಬೇಕೆಂದು ಟಿಪ್ಪು ಆದೇಶಿಸಿದ್ದರು.
ಟಿಪ್ಪುವಿನ ಗ್ರಂಥಾಲಯದಲ್ಲಿ ಖಗೋಳ ಶಾಸ್ತ್ರ, ವೈದ್ಯಶಾಸ್ತ್ರ, ಕಲೆ, ತತ್ವಶಾಸ್ತ್ರ, ತಸವ್ವುಫ್ (ಸೂಫಿ ತತ್ವಜ್ಞಾನದ ಗ್ರಂಥಗಳು), ಆಧ್ಯಾತ, ಕಾನೂನು, ಖುರ್‌ಆನ್ ವ್ಯಾಖ್ಯಾನ ಗ್ರಂಥಗಳೆಲ್ಲಾ ಇದ್ದವು. ಕನ್ನಡ, ಉರ್ದು, ಪರ್ಶ್ಯನ್, ಫ್ರೆಂಚ್, ತುರ್ಕಿ, ದಖನಿ ಜರ್ಮನ್, ಇಂಗ್ಲೀಷ್, ಸಂಸ್ಕೃತ, ಅರಬಿಕ್ ಹೀಗೆ ಜಗತ್ತಿನ ಹಲವು ಭಾಷೆಗಳ ಗ್ರಂಥಗಳು ಗ್ರಂಥಾಲಯದಲ್ಲಿದ್ದವು.

ಟಿಪ್ಪು ತನ್ನ ಹದಿನೇಳು ವರ್ಷಗಳ ಆಡಳಿತಾವಧಿಯಲ್ಲಿ ನಲ್ವತ್ತೈದು ಗ್ರಂಥಗಳನ್ನು ಬರೆಸಿದ್ದರು. ಉರ್ದು, ತುರ್ಕಿ, ಪರ್ಶ್ಯನ್, ಅರೆಬಿಕ್, ದಖನಿ ಭಾಷೆಗಳ ನೂರ ತೊಂಬತ್ತು ಹಸ್ತಪ್ರತಿಗಳಿದ್ದವು. ಇತರೆಲ್ಲಾ ಭಾಷೆಗಳ ಎರಡು ಸಾವಿರಕ್ಕೂ ಮಿಕ್ಕಿದ ಗ್ರಂಥಗಳು ಟಿಪ್ಪುವಿನ ಗ್ರಂಥಾಲಯದಲ್ಲಿದ್ದವು.

ಟಿಪ್ಪುವಿನ ಗ್ರಂಥ ಭಂಡಾರಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಲು ವಿದ್ವಾಂಸರ ಸಲಹೆಗಳನ್ನು ಆಗಾಗ ಕೇಳಲಾಗುತ್ತಿತ್ತು. ಅಂತಹ ವಿದ್ವಾಂಸರಲ್ಲಿ ಬಹುಮುಖ ಪ್ರತಿಭೆಯ ಫ್ರೆಂಚ್ ವಿದ್ವಾಂಸ ಫಿಯರಿ ಕೆರನ್ ಡ ಬ್ಯೂಮಾರ್ಕೆಸ್ ಕೂಡಾ ಒಬ್ಬನಾಗಿದ್ದ. ಆತ ಸುಪ್ರಸಿದ್ಧ ಬಾರ್ಬರ್ ಆಫ್ ಸೆವಿಲೆ ಹಾಗೂ ಫಿಗಾರೋ ಎಂಬ ಗ್ರಂಥಗಳನ್ನು ಬರೆದಿದ್ದ. ಆತ ಫ್ರೆಂಚ್ ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರಗಳ ಕುರಿತ ಶ್ರೇಷ್ಠ ಪುಸ್ತಕಗಳು ಟಿಪ್ಪುವಿನ ಗ್ರಂಥ ಭಂಡಾರ ಸೇರಲು ಕಾರಣಕರ್ತನಾಗಿದ್ದ.

ಬ್ಯೂಮಾರ್ಕೆಸ್ ಸೂಚಿಸಿದ ಪುಸ್ತಕಗಳಲ್ಲಿ ಟಿಪ್ಪುವಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಗ್ರಂಥ ಥಾಮಸ್ ಜೆಪರ್ಸನ್ ಬರೆದಿದ್ದ ಅಮೆರಿಕಾ ಸ್ವಾತಂತ್ರ್ಯ ಘೋಷಣೆ. ಅದು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತ ಶ್ರೇಷ್ಠ ಕೃತಿಯಾಗಿತ್ತು. ಟಿಪ್ಪು ಅದನ್ನು ಆಗಾಗ ಓದುತ್ತಿದ್ದರು. ಅದು ಟಿಪ್ಪುವಿನ ಮನ ಕಲಕಿತ್ತು. ಅದು ಬ್ರಿಟಿಷರ ವಿರುದ್ಧದ ಅವರ ಹೋರಾಟದ ಕೆಚ್ಚನ್ನು ಇಮ್ಮಡಿಗೊಳಿಸಿತ್ತು.

ಇದನ್ನೂ ಓದಿ:ಟಿಪ್ಪು ಈ ದೇಶದ ಇತಿಹಾಸದ ಭಾಗ, ಪಠ್ಯದಿಂದ ಕೈಬಿಡುವುದು ಸರಿಯಲ್ಲ: ಡಿಕೆಶಿ

ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಪುಸ್ತಕದ ಒಂದು ಅಂಶವು ಟಿಪ್ಪುವಿನ ವ್ಯಕ್ತಿತ್ವದ ಮೇಲೆಯೂ ಅಪಾರ ಪ್ರಭಾವ ಬೀರಿದ್ದನ್ನು ನಾವು ಟಿಪ್ಪುವಿನ ಮಾನವ ಹಕ್ಕುಗಳ ಪರ ಮತ್ತು ಮತೀಯ ಸೌಹಾರ್ದತೆಯ ಕಾನೂನಿನಲ್ಲಿ ಕಾಣಲು ಸಾಧ್ಯ.

ಟಿಪ್ಪುವಿನ ಮೇಲೆ ಅಪಾರ ಪ್ರಭಾವ ಬೀರಿದ ಥಾಮಸ್ ಜೆಫರ್ಸನ್ ಅವರ ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಗ್ರಂಥದ ಆ ಪ್ಯಾರಾ ಇಂತಿದೆ. “ನಾವು ಈ ಸ್ವಯಂ ವೇದ್ಯ ಸತ್ಯಗಳನ್ನು ಎತ್ತಿ ಹಿಡಿಯುತ್ತೇವೆ. ಎಲ್ಲಾ ಮಾನವರು ಸಮಾನರಾಗಿಯೇ ಸೃಷ್ಟಿಯಾದವರು. ಅವರ ಸೃಷ್ಟಿಕರ್ತ ಅವರಿಗೆ ಅವರಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಕೊಟ್ಟಿದ್ದಾನೆ. ಆ ಹಕ್ಕುಗಳಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಗಳೂ ಸೇರಿವೆ. ಈ ಹಕ್ಕುಗಳ ರಕ್ಷಣೆಗಾಗಿ ಪ್ರಜೆಗಳು ಸರ್ಕಾರವನ್ನು ರಚಿಸಿಕೊಳ್ಳುತ್ತಾರೆ. ಸರ್ಕಾರಗಳಿಗೆ ನ್ಯಾಯಬದ್ಧ ಅಧಿಕಾರ ದೊರಕುವುದು ಅವುಗಳ ಪ್ರಜೆಗಳ ಒಪ್ಪಿಗೆಯಿಂದಾಗಿದೆ. ಯಾವ ಸರ್ಕಾರವಾದರೂ ಈ ಉದ್ದೇಶಗಳಿಗೆ ಭಂಗ ತಂದರೆ ಆ ಸರ್ಕಾರವನ್ನು ಮಾರ್ಪಡಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆ ಪ್ರಜೆಗಳಿಗೆ ಇದೆ. ಹಾಗೂ ತಮ್ಮ ಸುರಕ್ಷತೆ ಮತ್ತು ಸಂತೋಷಗಳನ್ನು ಕಾಪಾಡಬಹುದಾದಂತಹ ಸಿದ್ಧಾಂತಗಳ ತಳಹದಿಯ ಮೇಲೆ ಅಧಿಕಾರ ಬಳಸಿ ಕಾರ್ಯನಿರ್ವಹಿಸುವಂತಹ ಹೊಸ ಸರ್ಕಾರವನ್ನು ಅವರು ಸ್ಥಾಪಿಸಿಕೊಳ್ಳಬಹುದು”.

ಹಾಗೆಯೇ ದೇಶ ವಿದೇಶಗಳ ಅತ್ಯಂತ ಮೌಲ್ಯಯುತ ಪುಸ್ತಕಗಳನ್ನು ಟಿಪ್ಪು ಸಂಗ್ರಹಿಸಿದ್ದರು. ಅವರು ಅದೆಂತಹ ಪುಸ್ತಕ ಪ್ರೇಮಿಯಾಗಿದ್ದರೆಂದರೆ ಇವೇ ನನ್ನ ಸಂಪತ್ತು. ಈ ಸಂಪತ್ತು ಬೆಳ್ಳಿ-ಬಂಗಾರಗಳಿಗಿಂತಲೂ ಮೌಲ್ಯಯುತವಾದವುಗಳು ಮತ್ತು ಹೆಚ್ಚು ಶಾಶ್ವತವಾದವುಗಳು. ಇವುಗಳನ್ನು ಯಾರೂ ಕದಿಯಲಾರರು ಮತ್ತು ನಾಶಪಡಿಸಲಾರರು ಎಂದು ಮೈಸೂರು ಹುಲಿ ಹೇಳುತ್ತಿದ್ದರು.

ಆದರೆ ಅವರ ಲೆಕ್ಕಾಚಾರ ತಪ್ಪಾಗಿತ್ತು. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಕೈ ವಶಪಡಿಸಿಕೊಂಡಾಗ ಮೊದಲು ದಾಳಿಗೀಡಾದವುಗಳಲ್ಲಿ ಟಿಪ್ಪುವಿನ ಗ್ರಂಥ ಭಂಡಾರವೂ ಒಂದಾಗಿತ್ತು. ಅವರು ಆ ಬಳಿಕ ಅಂದರೆ 1800ರಲ್ಲಿ ಟಿಪ್ಪುವಿನ ಗ್ರಂಥಾಲಯದಲ್ಲಿದ್ದ ಗ್ರಂಥಗಳನ್ನು ಕೊಲ್ಕತ್ತಾಗೆ ಸಾಗಿಸಿ, ಅಲ್ಲಿಂದ ಇಂಗ್ಲೆಂಡಿಗೆ ಕೊಂಡೊಯ್ದರು.

ಉರ್ದು ಭಾಷೆಯಲ್ಲಿ ಮೊಟ್ಟ ಮೊದಲು ಪತ್ರಿಕೆಯೊಂದನ್ನು ಹೊರತಂದವರು ಮೈಸೂರು ಹುಲಿ ಟಿಪ್ಪು ಸುಲ್ತಾನ್. ಅದೊಂದು ವಾರಪತ್ರಿಕೆಯಾಗಿತ್ತು. ಅದು ಟಿಪ್ಪುವಿನ ಸೇನಾ ಚಟುವಟಿಕೆಗಳ ಮುಖಾವಾಣಿಯಾಗಿತ್ತು. ಆ ವಾರಪತ್ರಿಕೆಯನ್ನು ಒಂದು ದೊಡ್ಡ ಹಾಳೆಯಲ್ಲಿ ಮುದ್ರಿಸಲಾಗುತ್ತಿತ್ತು. ಟಿಪ್ಪುವಿನ ಪತನದ ನಂತರ ಆ ಪತ್ರಿಕೆ ನಿಂತು ಹೋಯಿತು ಮತ್ತು ಬ್ರಿಟಿಷರು ಟಿಪ್ಪುವಿನ ಮುದ್ರಣಾಲಯವನ್ನು ನಾಶಪಡಿಸಿದರು.


ಇದನ್ನೂ ಓದಿ: ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...