ಏಪ್ರಿಲ್‌ನಲ್ಲಿ ನಡೆಯಲಿರುವ ನಾಸಾ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ 2021 ರಲ್ಲಿ ಭಾಗವಹಿಸಲು ಒಡಿಶಾದ 10 ಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡ ನವೋನ್‌ಮೇಶ್ ಪ್ರಸಾರ್ ಸ್ಟೂಡೆಂಟ್ಸ್ ಅಸ್ಟ್ರೋನಮಿ ಟೀಮ್ (NaPSAT) ಆಯ್ಕೆಯಾಗಿದೆ.
ಭುವನೇಶ್ವರ ಮೂಲದ ನವೋನ್‌ಮೇಶ್ ಪ್ರಸಾರ್ ಫೌಂಡೇಶನ್‌ನ ಬಾಹ್ಯಾಕಾಶ ಉತ್ಸಾಹಿಗಳ ತಂಡವೇ NaPSAT. ಈ ಉತ್ಸಾಹಿಗಳ ತಂಡ ಬಾಹ್ಯಾಕಾಶ ವ್ಯವಸ್ಥೆಗಳು, ರೋವರ್‌ಗಳು, ರಾಕೆಟ್‌ಗಳು, ಉಪಗ್ರಹಗಳು ಮತ್ತು ಖಗೋಳವಿಜ್ಞಾನದ ವಿನ್ಯಾಸಗಳ ಕುರಿತು ಪ್ರಾಜೆಕ್ಟ್ ಮಾಡಿ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ.
ಈ ಬಾರಿ ನಾಸಾದ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್‌ಗೆ ಭಾರತದಿಂದ ಶಾಲಾ ತಂಡವನ್ನು ಆಯ್ಕೆ ಮಾಡಿರುವುದು ಇದೆ ಮೊದಲು ಎಂದು ನವೋನ್‌ಮೇಶ್ ಪ್ರಸಾರ್ ಫೌಂಡೇಶನ್ ಸಂಸ್ಥಾಪಕ ಅನಿಲ್ ಪ್ರಧಾನ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ: ಮಕ್ಕಳಿಗಾಗಿ ಜಾಗೃತಿ ಗೇಮ್ ಅಭಿವೃದ್ಧಿಪಡಿಸಿದ ಮದ್ರಾಸ್ ಐಐಟಿ ವಿದ್ಯಾರ್ಥಿಗಳು!
Odisha: Navonmesh Prasar Student Astronomy Team (NaPSAT), comprising of 10 school students, has been selected to participate in the NASA Human Exploration Rover Challenge 2021 scheduled in April. NaPSAT is an initiative of Bhubaneswar-based Navonmesh Prasar Foundation. pic.twitter.com/bnWi492qRk
— ANI (@ANI) November 11, 2020
“ನಾಸಾ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್‌ನಲ್ಲಿ ಭಾಗವಹಿಸಲು ಭಾರತದಿಂದ ಶಾಲಾ ತಂಡವನ್ನು ಆಯ್ಕೆ ಮಾಡಿರುವುದು ಇದೆ ಮೊದಲು. ನಾವು ಕೊರೊನಾ ಸಮಯದಲ್ಲಿ ಈ ತಂಡವನ್ನು ರಚಿಸಿದ್ದೇವೆ. ಒಡಿಶಾದ 10 ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ, ನಂತರ ನಾಸಾದ ರೋವರ್ ಚಾಲೆಂಜ್‌ಗೆ ಅರ್ಜಿ ಸಲ್ಲಿಸಿದ್ದೇವೆ” ಎಂದು ಅನಿಲ್ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಜೊತೆಗೆ, “ಈ ತಂಡವು ಶಾಲಾ ವಿದ್ಯಾರ್ಥಿಗಳನ್ನು ಮತ್ತು ಐಟಿಐ ವಿದ್ಯಾರ್ಥಿಗಳನ್ನು ಹೊಂದಿದೆ. ಅವರು ಮಂಗಳ ಗ್ರಹದ ಮೇಲ್ಮೈಯಲ್ಲಿ ಚಲಿಸಬಲ್ಲ ರೋವರ್ ತಯಾರಿಸುತ್ತಿದ್ದಾರೆ ಮತ್ತು ಅದು ಮಾನವ-ಚಾಲಿತ ರೋವರ್ ಆಗಿರುತ್ತದೆ “ಎಂದು ಅನಿಲ್ ಪ್ರಧಾನ್ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ‘ಅಪೋಫಿಸ್’ ಧರೆಗೆ ಅಪ್ಪಳಿಸುವ ಮುನ್ನ ನಿಮ್ಮ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ!
’ನಮಗೆ ನಾಸಾದಿಂದ ಆಹ್ವಾನ ಬಂದಿದೆ ಮತ್ತು ಕಾರ್ಯಕ್ರಮ 2021ರ ಏಪ್ರಿಲ್‌ನಲ್ಲಿ ನಡೆಯಲಿದೆ. ನಾವು ರೋವರ್ ತಯಾರಿಸುತ್ತಿದ್ದೇವೆ ಮತ್ತು ಅದನ್ನು ನಾಸಾಗೆ ಕಳುಹಿಸುತ್ತೇವೆ. ನಾಸಾಗೆ ಹೋಗಿ ಇತರ ತಂಡಗಳೊಂದಿಗೆ ಸ್ಪರ್ಧಿಸುತ್ತೇವೆ. ಅದಕ್ಕಾಗಿ ನಾವು ಕೂಡ ಹಣವನ್ನು ಸಂಗ್ರಹಿಸುತ್ತಿದ್ದೇವೆ” ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
NaPSAT ತಂಡದ ಭಾಗವಾಗಿರುವ 9 ನೇ ತರಗತಿ ವಿದ್ಯಾರ್ಥಿ ತನ್ವಿ ಮಲ್ಲಿಕ್ ತಮ್ಮ ತಂಡ ನಾಸಾ ರೋವರ್ ಚಾಲೆಂಜ್‌ಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ನಾನು ನಾಪ್ಸಾಟ್ ಬಗ್ಗೆ ತಿಳಿದಿದ್ದೆ. ಈ ತಂಡವನ್ನು ಸೇರಲು ನಾನು ಪ್ರಯತ್ನಿಸಿದ್ದೆ. ಈಗ ನಾನು ಆಯ್ಕೆಯಾಗಿದ್ದೇನೆ. ನಾಸಾ ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ 2021ಕ್ಕೆ ನಮ್ಮನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಹೆಮ್ಮೆಯಿದೆ’ ಎಂದಿದ್ದಾರೆ.
’ನಾವು ನಾಸಾಗೆ ಆಯ್ಕೆಯಾದ ಒಡಿಶಾದ ಮೊದಲ ತಂಡ ಮತ್ತು ಭಾರತದಿಂದ ಮೊದಲ ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ. ನಾವು 2021 ಏಪ್ರಿಲ್‌ನಲ್ಲಿ ಅಮೆರಿಕಾದ ಅಲಬಾಮಾಕ್ಕೆ ಹೋಗುತ್ತಿದ್ದೇವೆ ಮತ್ತು ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತೇವೆ” ಎಂದು ತನ್ವಿ ಮಲ್ಲಿಕ್ ಹೇಳಿದ್ದಾರೆ.


