Homeಕರ್ನಾಟಕಕಾಂಗ್ರೆಸ್ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ-ಎಚ್.ಡಿ ಕುಮಾರಸ್ವಾಮಿ

ಕಾಂಗ್ರೆಸ್ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ-ಎಚ್.ಡಿ ಕುಮಾರಸ್ವಾಮಿ

ಕಾಂಗ್ರೆಸ್‌ ಪಕ್ಷದ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ.ಆದ್ದರಿಂದಲೇ ಕಾಂಗ್ರೆಸ್ ನಾಯಕರು ಹಸಿರು ಟವಲ್ ಹಾಕಿಕೊಂಡು ಬೀದಿಗೆ ಬಂದಿದ್ದಾರೆ- ಎಚ್.ಡಿ ಕುಮಾರಸ್ವಾಮಿ

- Advertisement -
- Advertisement -

ಭೂಸುಧಾರಣಾ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಹಲವು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಕಾಂಗ್ರೆಸ್‌ ಪಕ್ಷದ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ.ಆದ್ದರಿಂದಲೇ ಕಾಂಗ್ರೆಸ್ ನಾಯಕರು ಹಸಿರು ಟವಲ್ ಹಾಕಿಕೊಂಡು ಬೀದಿಗೆ ಬಂದಿದ್ದಾರೆ ಎಂದಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ನಿನ್ನೆ ರೈತರು ನಡೆಸಿದ ಭಾರತ್ ಬಂದ್ ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದ ಕಾಂಗ್ರೆಸ್ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಎಲ್ಲೂ ವ್ಯಾಲ್ಯೂ ಇಲ್ಲ. ಅದರ ಚಿಹ್ನೆಯ ಟವೆಲ್‌ಗೂ ಈಗ ವ್ಯಾಲ್ಯೂ ಇಲ್ಲ. ಹೀಗಾಗಿ ಕಾಂಗ್ರೆಸ್ ಶಾಲು ಬಿಟ್ಟು ಹಸಿರು ಶಾಲು ಹಾಕಿಕೊಂಡು ಬಂದಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು. ಜೊತೆಗೆ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಪರ ಮತ ಚಲಾಯಿಸಿದ್ದ ಜೆಡಿಎಸ್​​ ಪಕ್ಷದ ನಡೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಭೂ ಸುಧಾರಣೆ ತಿದ್ದುಪಡಿ ಅಂಗೀಕಾರ: ಜೆಡಿಎಸ್ ನಡೆಯನ್ನು ಸಮರ್ಥಿಸಿದ ಕುಮಾರಸ್ವಾಮಿ- ಸರಣಿ ಟ್ವೀಟ್

ಕೋಲಾರದಲ್ಲಿ ಇಂದು ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ’ರೈತರಿಗೆ ಜೆಡಿಎಸ್ ಯಾವುದೇ ದ್ರೋಹ ಮಾಡುವುದಿಲ್ಲ.  ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೆ. ಆಗ ಯಾವ ರೈತ ಮುಖಂಡರು ಅನುಕೂಲವಾಗಿದೆ ಎಂದು ಹೇಳಲಿಲ್ಲ. ಭೂ ಸುಧಾರಣಾ ಕಾಯ್ದೆಯಲ್ಲಿ ಕೆಲವು ಮಾರಕ ಅಂಶಗಳನ್ನ ತೆಗೆಯಲಾಗಿದೆ.  ಭೂಸುಧಾರಣಾ ಕಾಯ್ದೆ ಬಗ್ಗೆ ರೈತ ಮುಖಂಡರು ತಿಳಿದುಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.

“ಪ್ರಾರಂಭಿಕ ಹಂತದಲ್ಲೇ ನಾವು ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಧೇಯಕವನ್ನು ವಿರೋಧ ಮಾಡಿದ್ದೇವು. ಆಗ ಕಾಯ್ದೆಯಲ್ಲಿದ್ದ ಮಾರಕ ಅಂಶಗಳ ಬಗ್ಗೆ ಸಲಹೆ ನೀಡಿದ್ದೆ. ಆದ್ದರಂತೆ ಕೆಲ ಬದಲಾವಣೆ ಮಾಡಿದ್ದಾರೆ. ಆದ್ದರಿಂದಲೇ ನಾವು ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಿದ್ದೇವೆ’ ಎಂದರು.

ಈ ಕುರಿತು ಕುಮಾರಸ್ವಾಮಿ ಬೆಳಗ್ಗೆ ಕೂಡ ಸರಣಿ ಟ್ವೀಟ್ ಮಾಡಿದ್ದರು. “ವಿರೋಧಕ್ಕೆ ಮಾತ್ರ ವಿರೋಧ ಪಕ್ಷವಲ್ಲ. ತನ್ನ ಜವಾಬ್ದಾರಿಗಳನ್ನು ಅದು ರಚನಾತ್ಮಕವಾಗಿ ನಿರ್ವಹಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜೆಡಿಎಸ್‌ ರೈತರ ಹಿತ ಕಾಯುತ್ತ ಆ ಕೆಲಸ ಮಾಡಿದೆ. ಕಾಯ್ದೆ ವಿಚಾರವಾಗಿ ನ್ಯಾಯ ಕಾಂಗ್ರೆಸ್‌ ಕಡೆಯೂ ಇರಲಿಲ್ಲ, ಬಿಜೆಪಿ ಕೆಡೆಯೂ ಇರಲಿಲ್ಲ. ಕಾಯ್ದೆ ಸಮತೋಲನಗೊಳ್ಳುವಂತೆ ಜೆಡಿಎಸ್‌ ಮಾಡಿದೆ” ಎಂದು ತಮ್ಮ ಪಕ್ಷವನ್ನು ಸಮರ್ಥನೆ ಮಾಡಿಕೊಂಡಿದ್ದರು.


ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ – ಬಿಜೆಪಿ ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read