ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಸಿಪಿಐ (ಎಂ) ನೇತೃತ್ವದ ಎಡಪಕ್ಷಗಳ ಒಕ್ಕೂಟ ಮತ ಎಣಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮುನ್ನಡೆ ಕಾಯ್ದುಕೊಂಡಿದೆ.
ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವೆಂದೆ ಪರಿಗಣಿಸಲಾಗಿದೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಎರಡನೇ ಸ್ಥಾನದಲ್ಲಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಎರಡು ಮುನ್ಸಿಪಲ್‌ಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ.
ಕೇರಳದ 941 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು 6 ನಿಗಮಗಳ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಎಡಪಕ್ಷಗಳ ಒಕ್ಕೂಟಕ್ಕೆ ಮುನ್ನಡೆ
941 ಗ್ರಾಮಪಂಚಾಯಿತಿಗಳು
LDF – 514
UDF - 377
NDA – 22
ಇತರರು – 28
86 ಮುನ್ಸಿಪಲ್‌ಗಳಲ್ಲಿ ಎಲ್‌ಡಿಎಫ್ 45, ಯುಡಿಎಫ್ 35, ಇತರರು 4 ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
152 ಬ್ಲಾಕ್‌ಗಳು
LDF- 109
UDF- 43
NAD- 00
ಇತರರು – 00
ಕೇರಳದ 152 ಬ್ಲಾಕ್‌ಗಳಲ್ಲಿ ಎಲ್‌ಡಿಎಫ್ 109, ಯುಡಿಎಫ್ 43 ರಲ್ಲಿ ಮುನ್ನಡೆಯಲಿದ್ದು ಬಿಜೆಪಿ ಯಾವುದೇ ಸ್ಥಾನದಲ್ಲೂ ಮುನ್ನಡೆ ಸಾಧಿಸಿಲ್ಲ.
14 ಜಿಲ್ಲಾ ಪಂಚಾಯಿತಿಗಳು
LDF- 10
UDF- 04
NAD- 00
ಇತರರು -00
14 ಜಿಲ್ಲಾ ಪಂಚಾಯಿತಿಗಳಲ್ಲಿ ಎಲ್‌ಡಿಎಫ್ 10, ಯುಡಿಎಫ್ 4 ರಲ್ಲಿ ಮುನ್ನಡೆಯಲಿದ್ದು ಬಿಜೆಪಿ ಯಾವುದೇ ಸ್ಥಾನದಲ್ಲೂ ಮುನ್ನಡೆ ಸಾಧಿಸಿಲ್ಲ.
86 ಪುರಸಭೆಗಳು
LDF- 35
UDF- 45
NAD- 02
ಇತರರು- 04
86 ಪುರಸಭೆಗಳಲ್ಲಿ ಯುಡಿಎಫ್ 45 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಆಡಳಿತರೂಢ ಎಲ್‌ಡಿಎಫ್ 35, ಇತರರು 4 ಹಾಗೂ ಬಿಜೆಪಿ 2ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ: ರಜನಿಯ ಹೊಸ ರಾಜಕೀಯ ಪಕ್ಷದ ಹೆಸರು ಮಕ್ಕಳ್ ಸೇವೈ ಕಚ್ಚಿ? ಚಿಹ್ನೆ ಆಟೋ ರಿಕ್ಷಾ?
6 ಕಾರ್ಪೊರೇಶನ್‌ಗಳು
LDF- 04
UDF- 02
NAD- 00
6 ಕಾರ್ಪೊರೇಶನ್‌ಗಳ ಪೈಕಿ ಎಲ್‌ಡಿಎಫ್ 4, ಯುಡಿಎಫ್ 2ರಲ್ಲಿ ಮುನ್ನಡೆಯಲ್ಲಿದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಶೂನ್ಯ ಸಂಪಾದನೆ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದಗಳು ಕೇರಳ, ಎಲ್‌ಡಿಎಫ್‌ನಲ್ಲಿ ನಂಬಿಕೆ ಇರಿಸಿದಕ್ಕಾಗಿ ಧನ್ಯವಾದ ಎಂದಿದ್ದಾರೆ.
Thank you Kerala. Thank you for reposing faith in LDF. We are humbled by the trust and the confidence of the people of Kerala. This is a victory for secularism and inclusive development. My warm greetings to all the elected representatives. pic.twitter.com/KGnAb6Xj4f
— Pinarayi Vijayan (@vijayanpinarayi) December 16, 2020
” ಧನ್ಯವಾದಗಳು ಕೇರಳ. ಎಲ್‌ಡಿಎಫ್‌ನಲ್ಲಿ ನಂಬಿಕೆಯನ್ನು ಮತ್ತೆ ಇರಿಸಿದ್ದಕ್ಕಾಗಿ ಧನ್ಯವಾದಗಳು. ಕೇರಳದ ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ನಾವು ವಿನಮ್ರರಾಗಿದ್ದೇವೆ. ಇದು ಜಾತ್ಯತೀತತೆ ಮತ್ತು ಅಂತರ್ಗತ ಅಭಿವೃದ್ಧಿಯ ವಿಜಯವಾಗಿದೆ. ಚುನಾಯಿತ ಎಲ್ಲ ಪ್ರತಿನಿಧಿಗಳಿಗೆ ನನ್ನ ಆತ್ಮೀಯ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಳ್ಳರ ಪಕ್ಷ, ಅವರಿಗಿಂತ ದೊಡ್ಡ ಕಳ್ಳರು ಎಲ್ಲೂ ಇಲ್ಲ- ಮಮತಾ ಬ್ಯಾನರ್ಜಿ ವಾಗ್ದಾಳಿ


