Homeಮುಖಪುಟಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಎಡಪಕ್ಷಗಳ ಒಕ್ಕೂಟಕ್ಕೆ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಎಡಪಕ್ಷಗಳ ಒಕ್ಕೂಟಕ್ಕೆ ಮುನ್ನಡೆ

941 ಗ್ರಾಮ ಪಂಚಾಯಿತಿಗಳಲ್ಲಿ 493 ರಲ್ಲಿ ಎಲ್‌ಡಿಎಫ್ ಮತ್ತು 380 ರಲ್ಲಿ ಯುಡಿಎಫ್ ಮುನ್ನಡೆ ಸಾಧಿಸುತ್ತಿವೆ.

- Advertisement -
- Advertisement -

ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳಿಗೆ ಪೂರ್ವಭಾವಿ ಪರೀಕ್ಷೆಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಮತಎಣಿಕೆ ನಡೆಯುತ್ತಿದ್ದು, ಕೇರಳದ ಆಡಳಿತಾರೂಢ ಎಡ ಪಂಥೀಯ ಒಕ್ಕೂಟ(LDF) ಮುನ್ನಡೆ ಸಾಧಿಸುತ್ತಿದೆ.

ಕೇರಳದ 941 ಗ್ರಾಮ ಪಂಚಾಯಿತಿಗಳು, 152 ಬ್ಲಾಕ್ ಪಂಚಾಯಿತಿಗಳು, 14 ಜಿಲ್ಲಾ ಪಂಚಾಯಿತಿಗಳು, 86 ಪುರಸಭೆಗಳು ಮತ್ತು ಆರು ನಿಗಮಗಳ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಸಲಾಗುತ್ತಿದೆ.

941 ಗ್ರಾಮ ಪಂಚಾಯಿತಿಗಳಲ್ಲಿ 493 ರಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಒಕ್ಕೂಟ (ಎಲ್‌ಡಿಎಫ್) ಮತ್ತು 380 ರಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮುನ್ನಡೆ ಸಾಧಿಸುತ್ತಿವೆ. ಎನ್‌ಡಿಎ 23 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವೆಂದ ಕೇರಳ ಸಿಎಂ: ಚುನಾವಣಾ ಆಯೋಗದ ಮೆಟ್ಟಿಲೇರಿದ ವಿಪಕ್ಷಗಳು!

152 ಬ್ಲಾಕ್ ಪಂಚಾಯಿತಿಗಳ ಈವರೆಗಿನ ಎಣಿಕೆಯಲ್ಲಿ LDF 106 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿದ್ದರೆ, ಯುಡಿಎಫ್ 45 ಸ್ಥಾನಗಳಲ್ಲಿ ಮುನ್ನಡೆಯಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಇನ್ನೂ ಒಂದು ಖಾತೆ ತೆರೆದಿಲ್ಲ.

86 ಪುರಸಭೆಗಳಲ್ಲಿ ಎಲ್‌ಡಿಎಫ್ 39, ಯುಡಿಎಫ್ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿವೆ.

ಈ ಬಾರಿ, ಚುನಾವಣೆಯ ಪ್ರಚಾರದಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಹಲವರ ಮೇಲೆ ಯುಡಿಎಫ್ ಭ್ರಷ್ಟಾಚಾರದ ಆರೋಪಗಳನ್ನು ಮಾಡಿತ್ತು. ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಎಲ್‌ಡಿಎಫ್ ತನ್ನ ಅಭಿವೃದ್ಧಿ ಯೋಜನೆಗಳ ಸುತ್ತ ಪ್ರಚಾರ ಮಾಡಿತು.

2015 ರಲ್ಲಿ, ಎಲ್‌ಡಿಎಫ್ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿತ್ತು.14 ಜಿಲ್ಲಾ ಪಂಚಾಯಿತಿಗಳಲ್ಲಿ ವಿಪಕ್ಷ ಯುಡಿಎಫ್ ಮತ್ತು ಎಲ್‌ಡಿಎಫ್ ತಲಾ ಏಳು ಸ್ಥಾನಗಳನ್ನು ಹೊಂದಿದ್ದವು.


ಇದನ್ನೂ ಓದಿ: ’ರೈತರು ದೇಶದ ಜೀವನಾಡಿ, ರೈತರೊಂದಿಗೆ ಇಡೀ ದೇಶ ನಿಲ್ಲಬೇಕು’- ಪಿಣರಾಯಿ ವಿಜಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...