ಪ್ರಸ್ತುತ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮೇಲೆ ನಡೆಸಿರುವ ವಾಗ್ದಾಳಿಗೆ, ಟಿಎಂಸಿ ಸಂಸದ ಡೆರೆಕ್ ಒಬ್ರಿಯೆನ್ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಏಳು ಸುಳ್ಳುಗಳ ತುಣುಕುಗಳನ್ನು ಒಟ್ಟುಗೂಡಿಸಿ ಭಾಷಣ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಆಡಳಿತಾರೂಢ ತೃಣಮೂಲದ ಮೇಲೆ ಆಗಾಗ್ಗೆ ಸುಳ್ಳು ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರ ಮಾತುಗಳನ್ನು ಫ್ಯಾಕ್ಟ್ ಚೆಕ್ ಮಾಡಿ ದಾಳಿ ನಡೆಸುತ್ತಿರುವ ಡೆರೆಕ್ ಒಬ್ರಿಯೆನ್, ಅಮಿತ್ ಶಾ ಭಾಷಣದಲ್ಲಿನ 7 ಸುಳ್ಳುಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ, ಬಿಜೆಪಿ ನಾಯಕರನ್ನು ಪ್ರವಾಸಿ ಗುಂಪು ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ಬಾರಿಯ ಬಂಗಾಳ ಪ್ರವಾಸದಲ್ಲಿಯೂ ಮಮತಾ ಬ್ಯಾನರ್ಜಿ, ಅಮಿತ್ ಶಾ ಅವರನ್ನು ಹೊರಗಿನವರು ಎಂದು ಬಣ್ಣಿಸಿದ್ದರು. ಇದನ್ನು ಒಬ್ರಿಯೆನ್ ಕೂಡಾ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಯುಪಿ ಪೊಲೀಸರ ಅಟ್ಟಹಾಸ: ಮಹಿಳಾ ಸಂಸದೆಯನ್ನು ದೂಡಿ, ಡೆರೆಕ್ ಒಬ್ರಿಯೆನ್‌ರನ್ನು ನೆಲಕ್ಕೆ ಬೀಳಿಸಿದ ಪುರುಷ ಪೊಲೀಸರು
#FactCheck of the speech made in Bengal by the henchman of the “tourist gang”.
7 pieces of concocted, false info in one speech. Actually, by his standards, quite low! pic.twitter.com/MgvktqcFt3
— Derek O'Brien | ডেরেক ও'ব্রায়েন (@derekobrienmp) December 20, 2020
7 ಸುಳ್ಳುಗಳಿಗೆ ಉತ್ತರ ನೀಡಿರುವ ಡೆರೆಕ್ ಒಬ್ರಿಯೆನ್, “ಪ್ರವಾಸಿ ಗ್ಯಾಂಗ್” ನ ಸಹಾಯಕರೊಬ್ಬರು ಬಂಗಾಳದಲ್ಲಿ ಮಾಡಿದ ಭಾಷಣದ ಫ್ಯಾಕ್ಟ್‌ಚೆಕ್ ಎಂದು ಹೇಳಿದ್ದಾರೆ. ಜೊತೆಗೆ ಒಂದು ಭಾಷಣದಲ್ಲಿ 7 ಸುಳ್ಳುಗಳ ತುಣುಕುಗಳನ್ನು ಕೂಡಿಸಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರೆದು, ಅಮಿತ್ ಶಾ ಅವರ ಮಾನದಂಡಗಳಿಗೆ ಈ ಸುಳ್ಳುಗಳು ಕಡಿಮೆಯಾಗಿವೆ ಎಂದು ವ್ಯಂಗ್ಯವಾಡಿದ್ದಾರೆ. ಏಳು ಸುಳ್ಳುಗಳ ತುಣುಕನ್ನು ಒಂದುಗೂಡಿಸಿ ಭಾಷಣ ಮಾಡಿದ್ದಾರೆ ಎಂದು ಆಧಾರ ಸಮೇತ ಟೀಕಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!
ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದನ್ನು ಟೀಕಿಸಿದ್ದ ಅಮಿತ್ ಶಾ, ಮತ್ತೊಂದು ಪಕ್ಷಕ್ಕಾಗಿ ಕಾಂಗ್ರೆಸ್ ಅನ್ನು ತೊರೆದಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡೆರೆಕ್ ಒಬ್ರಿಯೆನ್, ಮಮತಾ ಬ್ಯಾನರ್ಜಿ ಬೇರೆ ಪಕ್ಷ ಸೇರಲು ಕಾಂಗ್ರೆಸ್ ಅನ್ನು ತೊರೆಯಲಿಲ್ಲ. ಆಕೆಯೇ ಹೊಸ ಪಕ್ಷವನ್ನು 1998 ರಲ್ಲಿ ಸ್ಥಾಪಿಸಿದರು ಎಂದು ತಿರುಗೇಟು ನೀಡಿದ್ದಾರೆ.
ರ್‍ಯಾಲಿಯಲ್ಲಿ ಅಮಿತ್ ಶಾ ಮಾಡಿದ ಎಲ್ಲಾ ಆರೋಪಗಳನ್ನು ಸುಳ್ಳು ಎಂದಿರುವ ಸಂಸದ ಡೆರೆಕ್ ಒಬ್ರಿಯೆನ್, ಪ್ರತಿಯೊಂದಕ್ಕೂ ಉತ್ತರ ನೀಡಿದ್ದಾರೆ.
ಅಮಿತ್ ಶಾ, ಸಿಎಂ ಮಮತಾ ಬ್ಯಾನರ್ಜಿ ಮೇಲೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಂತಹ ಆರೋಪಗಳನ್ನು ಮಾಡಿದ್ದಾರೆ. ಈ ಕಾರಣದಿಂದ ಅನೇಕ ಟಿಎಂಸಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಮಿತ್ ಶಾ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಐವರು ಶಾಸಕರು ಸೇರಿದಂತೆ ಒಂಬತ್ತು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಟಿಎಂಸಿ ಪ್ರಭಾವಿ ಮುಖಂಡ ಮತ್ತು ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿದಂತೆ, 2018 ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದರು. ಬರ್ಧಮಾನ್ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್ ಮಂಡಲ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಬಂಗಾಳವನ್ನು’ಗಲಭೆ ಪೀಡಿತ ಗುಜರಾತ್’ ಮಾಡಲು ಎಂದಿಗೂ ಬಿಡುವುದಿಲ್ಲ- ಮಮತಾ ಬ್ಯಾನರ್ಜಿ


