ಕೊರೊನಾ ಸಾಂಕ್ರಾಮಿಕದಲ್ಲಿ ಕೇಂದ್ರ ಸರ್ಕಾರ ಏಕಾಏಕಿ ಹೇರಿದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರ ನೆರವಿಗೆ ಧಾವಿಸಿದ ನಟ ಸೋನು ಸೂದ್ ಕಾರ್ಯಗಳಿಗೆ ಮೆಚ್ಚಿ ತೆಲಂಗಾಣದಲ್ಲಿ ದೇವಾಲಯ ನಿರ್ಮಿಸಲಾಗಿದೆ.
ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಗುರುತಿಸಿದ ತೆಲಂಗಾಣದ ಸಿದ್ದಿಪೇಟ್ನಲ್ಲಿರುವ ದುಬ್ಬಾ ತಾಂಡಾದ ಜನರು ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ನಟನಿಗೆ ಗೌರವಾರ್ಥವಾಗಿ ದೇವಾಲಯ ಕಟ್ಟಿದ್ದಾರೆ.
ದೇವಾಲಯದಲ್ಲಿ ಸೋನು ಸೂದ್ ವಿಗ್ರಹ ಮಾಡಿದ ಶಿಲ್ಪಿ ಮತ್ತು ಸ್ಥಳೀಯ ಜನರು, ವಿಗ್ರಹಕ್ಕೆ ಆರತಿ ಮಾಡಿ ಉದ್ಘಾಟಿಸಿದ್ದಾರೆ. ತಾಂಡಾದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡಿದ್ದಾರೆ.
ಇದನ್ನು ಓದಿ: ರೈತರು ನಡುಕ ಹುಟ್ಟಿಸುವ ಚಳಿಯಲ್ಲಿ ಕುಳಿತಿದ್ದಾರೆ; ಇನ್ನೆಷ್ಟು ದಿನ ಇದನ್ನು ನೋಡುತ್ತಿರಬೇಕು: ಸೋನು ಸೂದ್
Telangana: Locals of Dubba Tanda village in Siddipet have constructed a temple to recognize Actor Sonu Sood's philanthropic work.
A local says, "He helped so many people during the pandemic. It's a matter of great delight for us that we've constructed his temple." (20.12.2020) pic.twitter.com/XZoj6x55pq
— ANI (@ANI) December 20, 2020
ಕೊರೊನಾ ಸಾಂಕ್ರಾಮಿಕದ ಮಧ್ಯೆ ಸೂನು ಸೂದ್ ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಹೇಳಿದ್ದಾರೆ.
“ಅವರು ತಮ್ಮ ಒಳ್ಳೆಯ ಕೆಲಸಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದರಿಂದ, ನಾವು ಸೋನು ಸೂದ್‌ಗಾಗಿ ದೇವಾಲಯ ನಿರ್ಮಿಸಿದ್ದೇವೆ. ಅವರು ನಮಗೆ ದೇವರು” ಎಂದು ಸ್ಥಳೀಯರು ಹೇಳುತ್ತಾರೆ.
ಇದನ್ನೂ ಓದಿ: ನಿರುದ್ಯೋಗಿಗಳ ಬೆನ್ನಿಗೆ ನಿಂತ ನಟ ಸೋನು ಸೂದ್: ಇ-ಆಟೋ ಹಂಚಲು ನಿರ್ಧಾರ

ದೇವಾಲಯ ಕಟ್ಟಲು ಯೋಜನೆ ರೂಪಿಸಿದ್ದ ಗುಂಪಿನ ಭಾಗವಾಗಿದ್ದ ರಮೇಶ್ ಕುಮಾರ್ ಮಾತನಾಡಿ, ಸೋನು ಸೂದ್ ದೇಶದ 28 ರಾಜ್ಯಗಳ ಜನರಿಗೆ ಸಹಾಯ ಮಾಡಿದ್ದಾರೆ ಮತ್ತು ಅವರ ಮಾನವೀಯ ಕಾರ್ಯಗಳಿಗಾಗಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಆದ್ದರಿಂದ, ನಮ್ಮ ಹಳ್ಳಿಯ ಪರವಾಗಿ, ನಾವು ಅವರಿಗೆ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದ್ದೆವು. ದೇವರಂತೆ, ಸೋನು ಸೂದ್ ಅವರಿಗೂ ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ
ಲಾಕ್‌ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾಗಿದ್ದ ವಲಸೆ ಕಾರ್ಮಿಕರಿಗೆ ನಟ ಸೋನುಸೂದ್ ಆಹಾರ ವಿತರಿಸಿದ್ದರು. ಬಸ್‌ಗಳು, ರೈಲುಗಳು ಮತ್ತು ಚಾರ್ಟರ್ಡ್ ವಿಮಾನಗಳ ಮೂಲಕ ಕಾರ್ಮಿಕರನ್ನು ತಮ್ಮ ತಮ್ಮ ಗ್ರಾಮಗಳಿಗೆ ತಲುಪಿಸಿದ್ದರು. ಮತ್ತೆ ನಿರುದ್ಯೋಗಿಗಳಿಗೆ ಇ-ಆಟೋಗಳನ್ನು ಉಡುಗೊರೆಯಾಗಿ ನೀಡುವುದಾಗಿ ಇತ್ತಿಚೆಗಷ್ಟೆ ಘೋಷಿಸಿದ್ದಾರೆ.
ಇಷ್ಟೇ ಅಲ್ಲದೆ, ಉತ್ತಮ ಜೀವನೋಪಾಯಕ್ಕಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ನಿಸ್ವಾರ್ಥವಾಗಿ ಸಹಾಯ ಮಾಡಿದ್ದಕ್ಕಾಗಿ ನಟ ಸೋನು ಸೂದ್ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!


