Homeಕರೋನಾ ತಲ್ಲಣನಿರುದ್ಯೋಗಿಗಳ ಬೆನ್ನಿಗೆ ನಿಂತ ನಟ ಸೋನು ಸೂದ್: ಇ-ಆಟೋ ಹಂಚಲು ನಿರ್ಧಾರ

ನಿರುದ್ಯೋಗಿಗಳ ಬೆನ್ನಿಗೆ ನಿಂತ ನಟ ಸೋನು ಸೂದ್: ಇ-ಆಟೋ ಹಂಚಲು ನಿರ್ಧಾರ

’ಜನರ ಬೇಡಿಕೆಗಳನ್ನು ಈಡೇರಿಸುವುದಕ್ಕಿಂತಲೂ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಹೆಚ್ಚು ಮುಖ್ಯ ಎಂದು ನಾನು ನಂಬುತ್ತೇನೆ’

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣ ಮಾಡಲು ಏಕಾಏಕಿ ಲಾಕ್‌ಡೌನ್ ಘೋಷಿಸಿದ್ದ ಕೇಂದ್ರ ಸರ್ಕಾರದ ಕ್ರಮದಿಂದ ನಿರ್ಗತಿಕರಾದ ಲಕ್ಷಾಂತರ ಜನರ ಪಾಲಿಗೆ ಆಪತ್ಬಾಂದವರಾಗಿದ್ದು ನಟ ಸೋನು ಸೂದ್. ಈಗ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದ್ದು, ನಿರುದ್ಯೋಗಿಗಳಿಗೆ ಇ-ಆಟೋಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

ಖುದ್ ಕಮಾವೋ ಘರ್​ ಚಲಾವೋ (ನೀವೇ ಗಳಿಸಿ ಮನೆ ನಡೆಸಿ) ಎಂಬ ಹೆಸರಿನಲ್ಲಿ ಹೊಸದೊಂದು ಯೋಜನೆ ಆರಂಭಿಸಲು ಮುಂದಾಗಿರುವ ಸೋನು ಸೂದ್, ಲಾಕ್​ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾದವರಿಗೆ ಎಲೆಕ್ಟ್ರಾನಿಕ್ ಆಟೋಗಳನ್ನ ನೀಡಲು ಮುಂದಾಗಿದ್ದಾರೆ.

ಇ- ಆಟೋಗಳ ಮೂಲಕ ನಿರುದ್ಯೋಗಿಗಳು ಸ್ವ ಉದ್ಯೋಗಿಗಳಾಗಲಿದ್ದು ತಮ್ಮ ಮನೆ ನಡೆಸಲು ತಾವೇ ದುಡಿಯಬಹುದು. ಈ ಮೂಲಕ ಅವರಿಗೆ ಸಹಾಯವಾಗಲಿದೆ ಎಂದು ಈ ಯೋಜನೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!

View this post on Instagram

 

“ಕಳೆದ ಕೆಲವು ತಿಂಗಳುಗಳಿಂದ ನಾನು ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ಅದು ಅವರಿಗಾಗಿ ಮುಂದುವರಿಯಲು ನನಗೆ ಪ್ರೇರಣೆ ನೀಡಿದೆ. ಆದ್ದರಿಂದ, ನಾನು ’ಖುದ್ ಕಮಾವೋ ಘರ್ ಚಾಲಾವೋ’ ಯೋಜನೆ ಆರಂಭಿಸಿದ್ದೇನೆ ಎಂದು 47 ವರ್ಷದ ನಟ ಹೇಳಿದ್ದಾರೆ.

“ಜನರ ಬೇಡಿಕೆಗಳನ್ನು ಈಡೇರಿಸುವುದಕ್ಕಿಂತಲೂ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಹೆಚ್ಚು ಮುಖ್ಯ ಎಂದು ನಾನು ನಂಬುತ್ತೇನೆ. ಈ ಯೋಜನೆ ಅವರನ್ನು ಸ್ವಾವಲಂಬಿಗಳಾಗಿ ಮಾಡುವ ಮೂಲಕ ಮತ್ತೆ ತಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸೋನು ಸೂದ್ ನಮ್ಮ ಪಾಲಿಗೆ ದೇವರಿದ್ದಂತೆ: ಟ್ರಾಕ್ಟರ್ ಉಡುಗೊರೆ ಪಡೆದ ರೈತನ ಕೃತಜ್ಞತೆ

ಈ ವರ್ಷದ ಆರಂಭದಲ್ಲಿ, ಸೋನು ಸೂದ್ ಅವರು ಪ್ರವಾಸಿ ರೋಜ್​ಗಾರ್ ಆ್ಯಪ್ ಬಿಡುಗಡೆ ಮಾಡಿದ್ದರು. ಇದರಿಂದ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಹೊಡೆತದಿಂದ ಕೆಲಸ ಕಳೆದುಕೊಂಡವರಲ್ಲಿ 50,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿತು. ಪ್ರವಾಸಿ ರೋಜ್​ಗಾರ್ ಆ್ಯಪ್, ಅನೇಕ ಕಂಪನಿಗಳೊಂದಿಗೆ ಸಂಪರ್ಕದಲ್ಲಿದ್ದು,ಕಂಪನಿಗಳಲ್ಲಿ ಖಾಲಿ ಇರುವ ಕೆಲಸದ ಬಗ್ಗೆ ಮಾಹಿತಿ ನೀಡುತ್ತದೆ.

ಲಾಕ್‌ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾಗಿದ್ದ ವಲಸೆ ಕಾರ್ಮಿಕರಿಗೆ ನಟ ಸೋನುಸೂದ್ ಆಹಾರ ವಿತರಿಸಿದ್ದರು. ಬಸ್‌ಗಳು, ರೈಲುಗಳು ಮತ್ತು ಚಾರ್ಟರ್ಡ್ ವಿಮಾನಗಳ ಮೂಲಕ ಕಾರ್ಮಿಕರನ್ನು ತಮ್ಮ ತಮ್ಮ ಗ್ರಾಮಗಳಿಗೆ ತಲುಪಿಸಿದ್ದರು. ಇಷ್ಟೇ ಅಲ್ಲದೆ ಉತ್ತಮ ಜೀವನೋಪಾಯಕ್ಕಾಗಿ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ನಿಸ್ವಾರ್ಥವಾಗಿ ಸಹಾಯ ಮಾಡಿದ್ದಕ್ಕಾಗಿ ನಟ ಸೋನು ಸೂದ್ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.


ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...