Homeಮುಖಪುಟನನ್ನ ಬಂಧನದಲ್ಲಿ ಬಿಜೆಪಿಯ ಪಿತೂರಿಯಿದೆ ಎಂದ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ

ನನ್ನ ಬಂಧನದಲ್ಲಿ ಬಿಜೆಪಿಯ ಪಿತೂರಿಯಿದೆ ಎಂದ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ

ಕೋಲ್ಕತ್ತಾ ಪೊಲೀಸರು ಮತ್ತು ಆಡಳಿತಾರೂಢ ಟಿಎಂಸಿ ಪಮೇಲಾ ಗೋಸ್ವಾಮಿ ಅವರಿಗೆ "ಬ್ರೈನ್ ವಾಶ್" ಮಾಡಿದ್ದಾರೆ- ರಾಕೇಶ್ ಸಿಂಗ್

- Advertisement -
- Advertisement -

ಕೊಕೇನ್ ಹೊಂದಿದ್ದ ಆರೋಪದ ಮೇಲೆ ಬಂಧಿತರಾಗಿರುವ ಬಂಗಾಳದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ರಾಕೇಶ್ ಸಿಂಗ್ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಮೇಲಾ ಗೋಸ್ವಾಮಿ ಪರ್ಸ್‌ ಮತ್ತು ಅವರು ಇದ್ದ ಕಾರಿನ ಸೀಟಿನಲ್ಲಿ ಕೆಲವು ಲಕ್ಷ ಮೌಲ್ಯದ ಕೊಕೇನ್ ಸಿಕ್ಕಿದ್ದಕ್ಕಾಗಿ ಕೊಲ್ಕತ್ತಾ ಪೊಲೀಸರು ಶುಕ್ರವಾರ (ಫೆ.19) ಬಂಧಿಸಿದ್ದಾರೆ. ಕಾರಿನಲ್ಲಿದ್ದ ಅವರ ಸ್ನೇಹಿತ ಮತ್ತು ಯುವ ಮೋರ್ಚಾದ ಸಹೋದ್ಯೋಗಿ ಪ್ರಬೀರ್ ಕುಮಾರ್ ಡೇ ಮತ್ತು ಭದ್ರತಾ ಸಿಬ್ಬಂದಿ ಸೋಮನಾಥ್ ಚಟರ್ಜಿಯನ್ನು ಕೂಡ ಬಂಧಿಸಲಾಗಿದೆ.

“ನಾನು ಸಿಐಡಿ ತನಿಖೆಯನ್ನು ಬಯಸುತ್ತೇನೆ. ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ರಾಕೇಶ್ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಬಂಧಿಸಿ. ಇದು ಅವರದ್ದೇ ಪಿಯೂರಿ. ಅವರ ವಿರುದ್ಧ ನನ್ನ ಬಳಿ ಎಲ್ಲ ಪುರಾವೆಗಳಿವೆ” ಎಂದು  ಪಮೇಲಾ ಗೋಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಮಾದಕವಸ್ತು ಮಾರಾಟ ಆರೋಪದಡಿ ಬಿಜೆಪಿ ನಾಯಕಿಯ ಬಂಧನವಾಗಿದ್ದು ಹೇಗೆ?

ಇದಕ್ಕೆ ಪ್ರತಿಕ್ರಿಯಿಸಿರುವ ರಾಕೇಶ್ ಸಿಂಗ್, ’ಕೋಲ್ಕತ್ತಾ ಪೊಲೀಸರು ಮತ್ತು ಆಡಳಿತಾರೂಢ ಟಿಎಂಸಿ ಪಮೇಲಾ ಗೋಸ್ವಾಮಿ ಅವರಿಗೆ “ಬ್ರೈನ್ ವಾಶ್” ಮಾಡಿದ್ದಾರೆ. ನಾನು ಕಳೆದ ಒಂದು ವರ್ಷದಿಂದ ಅವರೊಂದಿಗೆ ಯಾವುದೇ ಸಂಪರ್ಕದಲ್ಲಿಲ್ಲ. ಯಾವುದೇ ಏಜೆನ್ಸಿಯ ತನಿಖೆಯನ್ನು ಎದುರಿಸಲು ತಾನು ಸಿದ್ಧ. ನಾನು ಭಾಗಿಯಾಗಿದ್ದರೆ, ನನ್ನನ್ನು ಅಥವಾ ಕೈಲಾಶ್ ವಿಜಯವರ್ಗಿಯಾ ಅಥವಾ ಅಮಿತ್ ಶಾ ಅವರನ್ನು ತನಿಖೆಗೆ ಕರೆಯಬಹುದು’ ಎಂದು ಹೇಳಿದ್ದಾರೆ ಎಂದು ಪಿಟಿಐ ಉಲ್ಲೇಖಿಸಿದೆ.

“ಕೋಲ್ಕತ್ತಾ ಪೊಲೀಸರು ತೃಣಮೂಲ ಕಾಂಗ್ರೆಸ್ ಸೂಚನೆಗಳನ್ನು ಪಾಲಿಸುವ ಸಾಧ್ಯತೆಯಿದೆ. ಅವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಇವು ಆಧಾರರಹಿತ ಆರೋಪ ಮತ್ತು ಯಾವುದೇ ಸವಾಲನ್ನು ಎದುರಿಸಲು ನಾನು ಸಿದ್ಧ” ಎಂದು ಹೇಳಿದ್ದಾರೆ.

ಕೈಲಾಶ್ ವಿಜಯವರ್ಗಿಯಾ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ಈ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಆದ್ದರಿಂದ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪಮೇಲಾ ಗೋಸ್ವಾಮಿ ತಂದೆ ನೀಡಿದ ದೂರಿನ ನಂತರ ಆಕೆ ಮತ್ತು ಆಕೆಯ ಸ್ನೇಹಿತ ಪ್ರಬೀರ್ ಕುಮಾರ್‌ ಡೇ ಇಬ್ಬರ ಮೇಲೂ ಕಣ್ಣಿಡಲಾಗಿತ್ತು ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ. ಪ್ರಬೀರ್ ಪಮೇಲಾರನ್ನು ಮಾದಕ ವ್ಯಸನಿಯನ್ನಾಗಿ ಮಾಡಿದ್ದಾನೆ ಎಂದು ನಗರ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಕೌಶಿಕ್ ಗೋಸ್ವಾಮಿ ಆರೋಪಿಸಿದ್ದರು. ಸದ್ಯ ಆರೋಪಿಗಳನ್ನು ಫೆ.25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪಮೇಲಾ ಗೋಸ್ವಾಮಿ ಅವರು 2019 ರಲ್ಲಿ ಬಿಜೆಪಿಗೆ ಸೇರುವ ಮೊದಲು ಏರ್ ಹೊಸ್ಟೆಸ್, ಮಾಡೆಲ್ ಮತ್ತು ಟಿವಿ ಧಾರಾವಾಹಿ ನಟಿಯಾಗಿ ಕೆಲಸ ಮಾಡಿದ್ದಾರೆಂದು ಹೇಳಲಾಗಿದೆ. ನಂತರ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹೂಗ್ಲಿ ಜಿಲ್ಲೆಯ ಯುವ ಮೋರ್ಚಾ ವೀಕ್ಷಕರಾಗಿ ನೇಮಿಸಲಾಯಿತು.


ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್‌ಪಂಚ್‌ ಆದ ಕಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...