ಪಂಚರಾಜ್ಯ ಚುನಾವಣೆಯಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಚುನಾವಣೆ ಈ ಶನಿವಾರದಿಂದ ಪ್ರಾರಂಭವಾಗುತ್ತದೆ. ಬಂಗಾಳ ಚುನಾವಣೆಯಲ್ಲಿ ಜಯಗಳಿಸಲು ರಾಜಕೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಅಪರಾಧಿಗಳು, ಗೂಂಡಾಗಳನ್ನು ನೇಮಿಸಿಕೊಳ್ಳುತ್ತಿರುವ ಆರೋಪವನ್ನು ಟಿಎಂಸಿ ಮಾಡಿದೆ.
ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ “ಅಪರಾಧಿಗಳು ಮತ್ತು ಸಮಾಜ ಘಾತುಕರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದಿ ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒಬ್ರಿಯೆನ್ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ದೂರಿದ್ದಾರೆ.
ಸುಧೀರ್ಘ ಎಂಟು ಹಂತಗಳಲ್ಲಿ ನಡೆಯಲಿರುವ ಬಂಗಾಳ ಚುನಾವಣೆಯಲ್ಲಿ ಹೆಚ್ಚು ಹೈ-ವೋಲ್ಟೇಜ್ ಕ್ಷೇತ್ರ ಎಂದು ನಂದಿಗ್ರಾಮವನ್ನು ಪರಿಗಣಿಸಲಾಗಿದೆ. ಇಲ್ಲಿ ಆಢಳಿತರೂಡ ಟಿಎಂಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ ಸುವೇಂದು ಅಧಿಕಾರಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.
ಇದನ್ನೂ ಓದಿ: ನನ್ನನ್ನು ಕೊಲ್ಲಲು ಬಿಜೆಪಿ ಪಿತೂರಿ ನಡೆಸುತ್ತಿದೆಯೇ? – ಮಮತಾ ಬ್ಯಾನರ್ಜಿ ವಾಗ್ದಾಳಿ
ಡೆರೆಕ್ ಓಬ್ರಿಯೆನ್ ಅವರು ನಂದಿಗ್ರಾಮದಲ್ಲ ತೊಂದರೆಯುಂಟು ಮಾಡಲು ಆಶ್ರಯ ಪಡೆದಿರುವ ಶಂಕಿತ ಆರೋಪಿಗಳ ವಿಳಾಸಗಳನ್ನು ಪಟ್ಟಿ ಮಾಡಿದ್ದಾರೆ. ಇವರನ್ನು ತಕ್ಷಣವೇ ಹಿಡಿದು ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
’ಕೆಲವು “30-40 ಹುಡುಗರು” ಡಿಸೆಂಬರ್‌ನಿಂದ ಕಾಲಿಪಾಡ ಶೀ ಅವರ ಮನೆಯಲ್ಲಿ ಉಳಿದು ಕೊಂಡು ಮೋಟಾರ್‌ಸೈಕಲ್‌ಗಳಲ್ಲಿ ಗ್ರಾಮದಲ್ಲಿ ಸಂಚರಿಸುತ್ತಿದ್ದಾರೆ. ಸುವೇಂದು ಅಧಿಕಾರಿ ಆ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು’ ಎಂದು ತೃಣಮೂಲ ನಾಯಕ ಆರೋಪಿಸಿದ್ದಾರೆ.
ಸುಮಾರು 50 ಜನರು ಒಬ್ಬ ಮೇಘನಾಥ್ ಪಾಲ್ ಅವರ ಮನೆಯಲ್ಲಿ ತಂಗಿದ್ದಾರೆ. ಅವರಲ್ಲಿ ಸುವೇಂದು ಅಧಿಕಾರಿಯ ಚುನಾವಣಾ ಏಜೆಂಟ್ ಕೂಡ ಇದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಮತ ನೀಡಿದರೆ ‘ಜೈ ಸಿಯಾ ರಾಂ’ ಎನ್ನಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
ತಲಾ 20-30 ಜನರಿಗೆ ಆಶ್ರಯ ನೀಡುವ ಇನ್ನೂ ಎರಡು ಮನೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದರೂ ಕೂಡ ಅವರು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ತೃಣಮೂಲ ರಾಜ್ಯಸಭಾ ಸದಸ್ಯ ತಿಳಿಸಿದ್ದಾರೆ.
ಕಳೆದ ವಾರ, ನಂದಿಗ್ರಾಮದಲ್ಲಿ ತಮ್ಮ ರ್‍ಯಾಲಿಯ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದನ್ನೂ ಓದಿ: ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರನ್ನು ‘ದುರ್ಯೋಧನ, ದುಶ್ಯಾಶನ’ ಎಂದ ಮಮತಾ


