ಕೊರೊನಾ ಸೋಂಕಿತ ರೋಗಿಯೊಬ್ಬರು ಹಲವಾರು ಆಸ್ಪತ್ರೆಗಳನ್ನುಅಲೆದು ಎಲ್ಲಿಯೂ ಬೆಡ್ ಸಿಕ್ಕಿಲ್ಲ ಎಂದು ಆರೋಪಿಸಿ, ಮಹಾರಾಷ್ಟ್ರದ ನಾಸಿಕ್‌ನ ಮಹಾನಗರ ಪಾಲಿಕೆಯ ಹೊರಗೆ ಆಕ್ಸಿಜನ್ ಮಾಸ್ಕ್‌ನೊಂದಿಗೆ ಪ್ರತಿಭಟನೆಗೆ ಕುಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ರೋಗಿಯು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
38 ವರ್ಷದ ಬಾಬಾಸಾಹೇಬ್ ಕೋಲ್ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಚಿಕಿತ್ಸೆಗೆ ಯಾವ ಆಸ್ಪತ್ರೆಯೂ ಸ್ಪಂದಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆಯ ಹೊರಗೆ ನಿನ್ನೆ ಸಂಜೆ ಸಿಲಿಂಡರ್‌ಗೆ ಸಂಪರ್ಕ ಹೊಂದಿದ ಆಕ್ಸಿಜನ್ ಮಾಸ್ಕ್‌ನೊಂದಿಗೆ ಪ್ರತಿಭಟನೆ ನಡೆಸಿದ್ದರು.
ಸರಿ ಸುಮಾರು ಒಂದು ಗಂಟೆ ಪ್ರತಿಭಟನೆ ನಡೆಸಿದ ನಂತರ, ಮಹಾನಗರ ಪಾಲಿಕೆಯ ಆಂಬ್ಯುಲೆನ್ಸ್ ಅವರನ್ನು ಪುರಸಭೆಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ
ಮೃತ ವ್ಯಕ್ತಿಯ ಕುಟುಂಬದ ಪ್ರಕಾರ, ಮಧ್ಯರಾತ್ರಿಯಲ್ಲಿ ಅವರ ಆಕ್ಸಿಜನ್ ಲೆವೆಲ್ ಮಟ್ಟವು ಶೇಕಡಾ 40 ಕ್ಕೆ ತಲುಪಿತ್ತು. ಸಾಮಾನ್ಯವಾಗಿ ಆಕ್ಸಿಜನ್ ಲೆವೆಲ್ ಶೇಕಡಾ 95 ಅಥವಾ ಅದಕ್ಕಿಂತ ಹೆಚ್ಚಿನದಾಗಿರುತ್ತದೆ. ಆದರೆ, ರಾತ್ರಿ 1 ಗಂಟೆ ಸುಮಾರಿಗೆ ಬಾಬಾಸಾಹೇಬ್ ನಿಧನರಾದರು ಎಂದು ತಿಳಿಸಿದ್ದಾರೆ.
“ಎರಡು-ಮೂರು ದಿನಗಳ ಹಿಂದೆ ಅವರನ್ನು ಬೈಟ್ಕೊ (ಆಸ್ಪತ್ರೆ) ಗೆ ಕರೆದೊಯ್ಯಲಾಯಿತು. ಅಲ್ಲಿಂದ ಅವರು ಮತ್ತೊಂದು ಆಸ್ಪತ್ರೆಗೆ, ಅಲ್ಲಿಂದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೋದೆವು. ವೈದ್ಯಕೀಯ ಕಾಲೇಜಿನಲ್ಲಿ ಬೆಡ್ ಇಲ್ಲ ಎಂದು ಹೇಳಿದರು. ನಾವು ಬಹಳಷ್ಟು ಆಸ್ಪತ್ರೆಗಳಿಗೆ ಹೋಗಿದೆವು. ಯಾರೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಂತರ ನಾವು ಸಿವಿಲ್ ಆಸ್ಪತ್ರೆಗೆ ಹಿಂತಿರುಗಿ ಅವರಿಗೆ ಆಕ್ಸಿಜನ್ ಮಾಸ್ಕ್ ತೆಗೆದುಕೊಂಡೆವು. ಯಾವ ಆಸ್ಪತ್ರೆಯವರು ನಮ್ಮ ಮಾತನ್ನು ಕೇಳಲಿಲ್ಲ” ಎಂದು ಮೃತರ ಪತ್ನಿ ಸ್ಥಳೀಯ ಪತ್ರಕರ್ತರಿಗೆ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಕಟ್ಟಡದ ಬಳಿ ಪ್ರತಿಭಟನೆ ಮಾಡಲು ರೋಗಿಯನ್ನು ಯಾರು “ಪ್ರಚೋದಿಸಿದರು” ಎಂದು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ದೇಶದಲ್ಲಿ ಮಹಾರಾಷ್ಟ್ರವು ಅತಿಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿದ್ದು, ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ರಾಜ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ವ್ಯವಸ್ಥೆ ಕಡಿಮೆಯಾಗುವ ಸಂಭವವಿದೆ ಎಂದು ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ


