Homeಕರೋನಾ ತಲ್ಲಣಅಗತ್ಯವಿರುವವರಿಗೆ ಕೊರೊನಾ ಲಸಿಕೆ: ಕೇಂದ್ರದ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

ಅಗತ್ಯವಿರುವವರಿಗೆ ಕೊರೊನಾ ಲಸಿಕೆ: ಕೇಂದ್ರದ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

- Advertisement -
- Advertisement -

ಕೊರೊನಾ ಲಸಿಕೆ ಎಲ್ಲಾ ವಯಸ್ಸಿನ ಜನರಿಗೆ ಮುಕ್ತವಾಗಿರಬೇಕು, ಪ್ರತಿಯೊಬ್ಬ ಭಾರತೀಯನು ಸುರಕ್ಷಿತ ಜೀವನಕ್ಕೆ ಅರ್ಹನಾಗಿರುತ್ತಾನೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ‌ಎಲ್ಲರಿಗೂ ಲಸಿಕೆ ಲಭ್ಯವಿರುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.

“ಅಗತ್ಯಗಳು ಮತ್ತು ಬಯಕೆಗಳು ಎಂಬ ಚರ್ಚೆ ಹಾಸ್ಯಾಸ್ಪದವಾಗಿದೆ. ಪ್ರತಿಯೊಬ್ಬ ಭಾರತೀಯನು ಸುರಕ್ಷಿತ ಜೀವನಕ್ಕೆ ಅರ್ಹನಾಗಿದ್ದಾನೆ” ಎಂದು 50 ವರ್ಷದ ರಾಹುಲ್ ಗಾಂಧಿ #CovidVaccine ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಒಂದೇ ದಿನದಲ್ಲಿ 1.07 ಲಕ್ಷ ಕೊರೊನಾ ಪ್ರಕರಣ ದಾಖಲು

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ, “ಲಸಿಕೆಯನ್ನು ಬಯಸುವವರಿಗೆ ನೀಡುವುದು ಇದರ ಉದ್ದೇಶವಲ್ಲ, ಆದರೆ ಅಗತ್ಯವಿರುವವರಿಗೆ ನೀಡಲಾಗುತ್ತದೆ. ಲಸಿಕೆಗಳ ಸೀಮಿತ ಪೂರೈಕೆಯಿಂದಾಗಿ ಕೆಲವು ಗುಂಪುಗಳಿಗೆ ಆದ್ಯತೆ ನೀಡಲಾಗಿದೆ” ಎಂದಿದ್ದರು.

“ನಾವು ಕೆಲವು ಗುಂಪುಗಳಿಗೆ ಇತರರಿಗಿಂತ ಏಕೆ ಆದ್ಯತೆ ನೀಡಿದ್ದೇವೆ? ಎಂದರೆ, ಜುಲೈವರೆಗೆ ನಡೆಯಲಿರುವ  ವ್ಯಾಕ್ಸಿನೇಷನ್‌ನಲ್ಲಿ ಲಸಿಕೆಗಳು ಸೀಮಿತವಾಗಿವೆ” ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಹಿಂದೆ ತಮ್ಮ ಟ್ವೀಟ್‌ಗಳ ಮೂಲಕ ಪ್ರತಿಯೊಬ್ಬರೂ ಮಾಸ್ಕ್‌ಗಳನ್ನು ಧರಿಸಿ ಮತ್ತು ಸೋಂಕುಗಳು ಹೆಚ್ಚಾಗುತ್ತಿದ್ದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕೆಂದು ಒತ್ತಾಯಿಸಿದ್ದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೊಪೆ “20 ರಿಂದ 40 ವರ್ಷದೊಳಗಿನ ಜನರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು ಎಂದು ನಾವು ಕೇಂದ್ರವನ್ನು ಒತ್ತಾಯಿಸಿದ್ದೇವೆ” ಎಂದಿದ್ದಾರೆ. ಆದರೂ ಮೊದಲು ಅತ್ಯಂತ ದುರ್ಬಲರಿಗೆ ಲಸಿಕೆ ಹಾಕುವ ಅಗತ್ಯವನ್ನು ಕೇಂದ್ರ ಸರ್ಕಾರ ಒತ್ತಿಹೇಳಿದೆ.

ದೇಶದಲ್ಲೇ ಅತ್ಯಂತ ಹೆಚ್ಚು ಕೊರೊನಾ ಸೋಂಕಿರುವ ರಾಜ್ಯವಾದ ಮಹಾರಾಷ್ಟ್ರದ ಹಲವಾರು ವ್ಯಾಕ್ಸಿನೇಷನ್ ಕೇಂದ್ರಗಳು ಲಸಿಕೆಗಳ ಕೊರತೆಯನ್ನು ಅನುಭವಿಸುತ್ತಿವೆ. ಲಸಿಕೆಯ ಕೊರತೆಯಿಂದಾಗಿ ಜನರನ್ನು ಹಿಂತಿರುಗುವಂತೆ ಹೇಳಲಾಗುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.


ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...