Homeಕರೋನಾ ತಲ್ಲಣಮೊದಲ ಬಾರಿಗೆ ಒಂದೇ ದಿನದಲ್ಲಿ 1.07 ಲಕ್ಷ ಕೊರೊನಾ ಪ್ರಕರಣ ದಾಖಲು

ಮೊದಲ ಬಾರಿಗೆ ಒಂದೇ ದಿನದಲ್ಲಿ 1.07 ಲಕ್ಷ ಕೊರೊನಾ ಪ್ರಕರಣ ದಾಖಲು

- Advertisement -
- Advertisement -

ಕೊರೊನಾ ಎರಡನೆ ಅಲೆ ದೇಶದಾದ್ಯಂತ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಮುಂದಿನ ನಾಲ್ಕು ವಾರಗಳು “ಬಹಳ ನಿರ್ಣಾಯಕ” ಎಂದು ಈಗಾಗಲೆ ಎಚ್ಚರಿಸಿದೆ. ಮಂಗಳವಾರ 1.07 ಲಕ್ಷ ಜನರು ಕೊರೊನಾ ಸೋಂಕಿಗೆ ಒಳಗಾಗುವುದರ ಮೂಲಕ ಒಂದೇ ದಿನದಲ್ಲಿ ದೇಶವು ಅತೀ ಹೆಚ್ಚು ಪ್ರಕರಣ ದಾಖಲಿಸಿದೆ.

ಕೊರೊನಾ ಕಳೆದ ವರ್ಷಕ್ಕಿಂತ ವೇಗವಾಗಿ ಹರಡುತ್ತಿದೆ ಎಂದು ಕೇಂದ್ರವು ಎಚ್ಚರಿಸಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್, ರೋಗವನ್ನು ಎದುರಿಸಲು ಮಾಸ್ಕ್‌ ಧರಿಸುವಂತಹ ಕ್ರಮಗಳಿಗೆ ಜನರು ‘ತಿಲಾಂಜಲಿ’ ನೀಡಿದ್ದಾರೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

ದೇಶದಾದ್ಯಂತ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆಯಾದರೂ, ಅದೂ ಎಲ್ಲಾ ವಯೋಮಾನದವರಿಗೆ ನೀಡುವ ಕ್ರಮವನ್ನು ಸರ್ಕಾರ ಇನ್ನೂ ಕೈಗೊಂಡಿಲ್ಲ. ಪ್ರಸ್ತುತ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅನುಮತಿ ಇದೆ.

ಇದನ್ನೂ ಓದಿ: ಕೊರೊನಾ: ಬೆಂಗಳೂರು ವಿವಿ 15 ದಿನ ರಜೆ; ಸಾರಿಗೆ ಮುಷ್ಕರ ಹಿನ್ನಲೆ ಪರೀಕ್ಷೆ ಮುಂದೂಡಿಕೆ

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಘೋಷಿಸಿದ ದೈನಂದಿನ ಸಂಖ್ಯೆಗಳ ಪ್ರಕಾರ, ಮಂಗಳವಾರ ವರದಿಯಾದ ಹೊಸ ಪ್ರಕರಣಗಳ ಪ್ರಮಾಣವು 1.07 ಲಕ್ಷಗಳನ್ನು ದಾಟಿದೆ. ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಇದು ಎರಡನೇ ಬಾರಿಗೆ 1 ಲಕ್ಷಕ್ಕಿಂತಲೂ ಹೆಚ್ಚಿನ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಪ್ರಕರಣಗಳಲ್ಲಿ ತೀವ್ರ ಏರಿಕೆಯೊಂದಿಗೆ ದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ವೈರಸ್‌ಗೆ ತುತ್ತಾಗಿದೆ ಎಂದು ಎನ್‌ಐಟಿಐ ಆಯೋಗ್ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್ ಹೇಳಿದ್ದಾರೆ.

“ಎರಡನೇ ತರಂಗವನ್ನು ನಿಯಂತ್ರಿಸಲು ಜನರ ಭಾಗವಹಿಸುವಿಕೆ ಅತ್ಯಗತ್ಯ. ಮುಂದಿನ ನಾಲ್ಕು ವಾರಗಳು ಬಹಳ ನಿರ್ಣಾಯಕವಾಗಲಿವೆ. ಇಡೀ ದೇಶವು ಒಗ್ಗೂಡಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಮಾಡಬೇಕಾಗಿದೆ. ಸಾಂಕ್ರಾಮಿಕದ ತೀವ್ರತೆಯು ಹೆಚ್ಚಾಗಿದೆ ಮತ್ತು ಇದು ಕಳೆದ ಬಾರಿಗಿಂತ ವೇಗವಾಗಿ ಹರಡುತ್ತಿದೆ. ಕೆಲವು ರಾಜ್ಯಗಳ ಸ್ಥಿತಿ ತೀರಾ ಕೆಟ್ಟದಾಗಿದೆ” ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಇದುವರೆಗೂ 1.27 ಕೋಟಿ ಕೊರೊನಾ ಸೋಂಕು ವರದಿಯಾಗಿದ್ದು, 1.17 ಕೋಟಿ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದಾಗಿ ದೇಶದಲ್ಲಿ 1.66 ಲಕ್ಷ ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯು ತಿಳಿಸಿದೆ.

ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...