ಕೊರೊನಾ: ಬೆಂಗಳೂರು ವಿವಿ 15 ದಿನ ರಜೆ; ಸಾರಿಗೆ ಮುಷ್ಕರ ಹಿನ್ನಲೆ ಪರೀಕ್ಷೆ ಮುಂದೂಡಿಕೆ | Naanu gauri

ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ (ಜ್ಞಾನಭಾರತಿ)ವು 15 ದಿನಗಳ ಕಾಲ ರಜೆ ಘೋಷಣೆ ಮಾಡಿದೆ. ಈ ರಜೆಯು ಯುಜಿ ಮತ್ತು ಪಿಜಿ ಕಾಲೇಜುಗಳಿಗೂ ಅನ್ವಯವಾಗತ್ತದೆ ಎಂದು ವಿಶ್ವವಿದ್ಯಾಲಯ ರಿಜಿಸ್ಟ್ರಾರ್‌ ಜ್ಯೋತಿ ಅವರು ಮಂಗಳವಾರ ಹೇಳಿದ್ದಾರೆ.

ಏಪ್ರಿಲ್ 20 ರವರೆಗೂ ವಿಶ್ವ ವಿದ್ಯಾಲಯವು ರಜೆ ಘೋಷಿಸಿದ್ದು ಭೌತಿಕ ತರಗತಿಗಳು, ಹಾಸ್ಟೆಲ್ ಬಂದ್ ಆಗಿರಲಿದೆ. ಬಾಕಿ ಉಳಿದ ತರಗತಿಗಳನ್ನು ಆನ್‌ಲೈನ್ ಮೂಲಕ ಪಾಠ ಮಾಡುವಂತೆ ವಿವಿ ಸೂಚನೆ ನೀಡಿದೆ. ಆದರೆ ಪ್ರಾಯೋಗಿಕ ತರಗತಿಗಳು ಎಂದಿನಂತೆ ನಡೆಯಲಿದ್ದು, ನಿಗದಿಯಾಗಿದ್ದ ಪರೀಕ್ಷೆಗಳು ಕೂಡಾ ನಡೆಯಲಿವೆ.

ಆದರೆ ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಿಎ, ಬಿಎಸ್ಸಿ ಐದನೇ ಸೆಮಿಸ್ಟರ್‌, ದೂರ ಶಿಕ್ಷಣ ಪರೀಕ್ಷಗಳು, ಸ್ನಾತಕೋತ್ತರ ಡಿಪ್ಲೊಮೊ-ಗ್ರಾಮೀಣ ಅಭಿವೃದ್ದಿ ಪರೀಕ್ಷೆಯನ್ನು ಮಾತ್ರ ವಿವಿ ಮುಂದೂಡಿದೆ.

ಇಷ್ಟೇ ಅಲ್ಲದೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಎಪ್ರಿಲ್ 7 ರಂದು ಜರುಗಬೇಕಾಗಿದ್ದ ಎಲ್ಲ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯವು ಮುಂದೂಡಿದೆ. ಬಸ್ ವ್ಯತ್ಯಯದ ಕುರಿತು ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿದೆ.

ಇದನ್ನೂ ಓದಿ: ಟಿಎಂಸಿ ಮಹಿಳಾ ಅಭ್ಯರ್ಥಿಯನ್ನು ಅಟ್ಟಿಸಿಕೊಂಡು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

ರಜೆಯು ಏಪ್ರಿಲ್ 20 ರವರೆಗೂ ಇರಲಿದ್ದು, ಈ ಸಮಯದಲ್ಲಿ ಭೌತಿಕ ತರಗತಿಗಳು, ಹಾಸ್ಟೆಲ್‌ಗಳು ಮುಚ್ಚಲ್ಪಟ್ಟಿರುತ್ತವೆ. ಬಾಕಿ ಉಳಿದ ತರಗತಿಗಳನ್ನು ಆನ್‌‌ಲೈನ್ ಮೂಲಕ ಪಾಠ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಪ್ರಾಯೋಗಿಕ ತರಗತಿಗಳು ಎಂದಿನಂತೆ ನಡೆಯಲಿದ್ದು, ಜೊತೆಗೆ ಮುಷ್ಕರ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ನಾಳಿನ ಒಂದು ದಿನದ ಪರೀಕ್ಷೆಗಳನ್ನು ಬಿಟ್ಟು ಉಳಿದಂತೆ ನಿಗದಿಯಾಗಿರುವ ಎಲ್ಲಾ ಪರೀಕ್ಷೆಗಳು ಕೂಡಾ ನಡೆಯಲಿವೆ.

ಬುಧವಾರ (ಏಪ್ರಿಲ್ 07) ಸಾರಿಗೆ ನೌಕರರು ಮುಷ್ಕರ ಹೂಡಲು ಸಜ್ಜಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಸಂಘರ್ಷಕ್ಕೆ ಮುಂದಾಗಿದ್ದಾರೆ. ಆದರೆ ಸರ್ಕಾರ ಮಾತ್ರ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರ ಹೊರತಾಗಿಯೂ ನೌಕರರು ಮುಷ್ಕರ ನಡೆಸಿದರೆ ಸರ್ಕಾರ ‘ಎಸ್ಮಾ’ ಜಾರಿಗೆ ಮುಂದಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಿಜೆಪಿ ಎಷ್ಟು ದಲಿತರನ್ನು ಸಿಎಂ ಮಾಡಿದೆ, ಎಷ್ಟು ದಲಿತ ಮಂತ್ರಿಗಳನ್ನು ಹೊಂದಿದೆ? ಕಾಂಗ್ರೆಸ್ ಪ್ರಶ್ನೆ

ಮುಷ್ಕರಕ್ಕೆ ಮುಂದಾಗಿರುವ ಸಾರಿಗೆ ನೌಕರರು ಪ್ರಮುಖವಾಗಿ, ‘ಆರನೇ ವೇತನ ಆಯೋಗದ ವರದಿ’ ಜಾರಿಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸರ್ಕಾರವು ಆರನೇ ವೇತನ ಜಾರಿ ಬದಲು ಸಾರಿಗೆ ನೌಕರರಿಗೆ 8% ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ ಇದನ್ನು ನೌಕರರು ನಿರಾಕರಿಸಿದ್ದು, “ತಮಗೆ ವೇತನ ಹೆಚ್ಚಳ ಬೇಕಾಗಿಲ್ಲ. ಆರನೇ ವೇತನ ಆಯೋಗ ಜಾರಿಯೇ ಆಗಬೇಕು. ಅದಕ್ಕಾಗಿ ಬುಧವಾರ ಮುಷ್ಕರ ನಡೆಸಿಯೇ ತೀರುತ್ತೇವೆ” ಎಂದು ಹೇಳಿದ್ದಾರೆ.

ನೌಕರರ ಮುಷ್ಕರ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಇದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಸಾರಿಗೆ ಇಲಾಖೆ ಎಸಿಎಸ್ ಅಂಜುಮ್ ಪರ್ವೇಜ್, KSRTC ಎಂಡಿ ಶಿವಯೋಗಿ ಕಳಸದ್, ಬಿಎಂಟಿಸಿ ಎಂಡಿ ಶಿಖಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ ಸೇರಿ ಹಲವರು ಪಾಲ್ಗೊಂಡಿದ್ದರು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ನೌಕರರು ಮುಷ್ಕರ ಹೂಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ವೇತನ ಹೆಚ್ಚಳದ ಭರವಸೆಗಳನ್ನು ನೀಡಿದರೂ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿಚಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಭೆಯಲ್ಲಿ ಸೂಚಿಸಿದರೆಂಬ ಮಾಹಿತಿಯಿದೆ.

ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಸಾರಿಗೆ ನೌಕರರ ಮುಷ್ಕರದ ಬಗ್ಗೆ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದೇನು? ವಿಡಿಯೋ ನೋಡಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here