Homeಮುಖಪುಟಟಿಎಂಸಿ ಮಹಿಳಾ ಅಭ್ಯರ್ಥಿಯನ್ನು ಅಟ್ಟಿಸಿಕೊಂಡು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಟಿಎಂಸಿ ಮಹಿಳಾ ಅಭ್ಯರ್ಥಿಯನ್ನು ಅಟ್ಟಿಸಿಕೊಂಡು ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರು

- Advertisement -
- Advertisement -

ಪಶ್ಚಿಮ ಬಂಗಾಳದ ಅರಂಬಾಗ್‌ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ಮೊಂಡಾಲ್ ಅವರನ್ನು ಬಿಜೆಪಿ ಕಾರ್ಯಕರ್ತರು ಮತದಾನ ಕೇಂದ್ರದ ಬಳಿಯಿಂದ ಅಟ್ಟಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ. ಸುಜಾತಾ ಮೊಂಡಾಲ್ ಅವರನ್ನು ಜನರ ಗುಂಪು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಜಾತಾ ಮೊಂಡಾಲ್ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯ ತಲೆಗೆ ತೀವ್ರತರದ ಗಾಯಗಳಾಗಿವೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಹೇಳಿದೆ.

ಇದನ್ನೂ ಓದಿ: ಅಸ್ಸಾಂ: ಇದ್ದದ್ದು 90 ಮತಗಳು, ಚಲಾವಣೆಯಾಗಿದ್ದು 181, ಪ್ರಕರಣದಲ್ಲಿ 6 ಅಧಿಕಾರಿಗಳ ಅಮಾನತು

ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಹೂಗ್ಲಿ ಜಿಲ್ಲೆಯ ಅರಂಬಾಗ್‌ ಕ್ಷೇತ್ರದಲ್ಲೂ ಇಂದು ಮತದಾನ ನಡೆಯುತ್ತಿದೆ. ಸುಜಾತಾ ಅವರು ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿಯಾಗಿದ್ದಾರೆ. ಅವರು ಇತ್ತೀಚೆಗೆ ಟಿಎಂಸಿಗೆ ಸೇರ್ಪಡೆಯಾಗಿದ್ದರು.

ತನ್ನ ಮೇಲಿನ ಹಲ್ಲೆಗೆ ಬಿಜೆಪಿ ಕಾರಣ ಎಂದು ಸುಜಾತಾ ಮೊಂಡಾಲ್ ಹೇಳಿದ್ದು, “ನನ್ನ ತಲೆಗೆ ಲಾಠಿಯಿಂದ ಹೊಡೆಯಲಾಗಿದೆ. ಹಲ್ಲೆಗೆ ಬಿಜೆಪಿ ಕಾರಣ, ಜನರು ಹಲ್ಲೆ ನಡೆಸುವಾಗ ಸಿಆರ್‌ಪಿಎಫ್‌ ಸಿಬ್ಬಂದಿಗಳು ಮೂಕ ಪ್ರೇಕ್ಷಕರಾಗಿದ್ದರು” ಎಂದು ಆರೋಪಿಸಿದ್ದಾರೆ.

 

“ಮಹಲ್ಲಾಪಾರದಲ್ಲಿ ಬಿಜೆಪಿಯ ಗೂಂಡಾಗಳು ಟಿಎಂಸಿ ಅಭ್ಯರ್ಥಿ ಸುಜಾತಾ ಮೊಂಡಾಲ್‌ ಅವರ ಮೇಲೆ ದಾಳಿ ಮಾಡಿದ್ದಾರೆ. ಅವರ ವೈಯಕ್ತಿಕ ಭದ್ರತಾ ಅಧಿಕಾರಿಯ ತಲೆಗೂ ಗಾಯಗಳಾಗಿವೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ. ಹಲ್ಲೆಯ ಸಂದರ್ಭ ಸಿಆರ್‌ಪಿಎಫ್ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು” ಟಿಎಂಸಿ ಮುಖಂಡ ಡೆರೆಕ್ ಒಬ್ರಿಯೆನ್‌ ಆರೋಪಿಸಿದ್ದಾರೆ.


 

ಇದನ್ನೂ ಓದಿ: ANI ಪತ್ರಕರ್ತನನ್ನು ಕೆಟ್ಟ ಪದ ಬಳಸಿ ನಿಂದಿಸಿದ ಯುಪಿ ಸಿಎಂ ಆದಿತ್ಯನಾಥ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...