ಉಳಿದಿರುವ ದೇಶವನ್ನು ಮಾರಲು ಮತ್ತೊಮ್ಮೆ ಲಾಕ್‌ಡೌನ್ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಲಾಕ್‌ಡೌನ್‌ನಿಂದ ಈ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿದೆ ಎಂದಿರುವ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜೊತೆಗೆ ಸಭೆ ನಡೆಸಲು ಮುಂದಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಕೊರೊನಾ ಸಕ್ರಿಯ ಪ್ರಕರಣಗಳು ಹೆಚ್ಚಿರುವ ಕಡೆಗಳಲ್ಲಿ ಕಠಿಣ ಕ್ರಮ ಜಾರಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿಯೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಪ್ರಚಾರಕ್ಕಾಗಿ ರಾಕೇಶ್ ಟಿಕಾಯತ್ ಮೇಲೆ ದಾಳಿ ನಡೆಸಿದ್ದೆವು: ತಪ್ಪೊಪ್ಪಿಕೊಂಡ ಎಬಿವಿಪಿ ಮುಖಂಡ
बचा हुआ देश बेचने के लिए पुनः लोकडाउन की तैयारी है।आंदोलन लोकडाउन से समाप्त नही होगा।
चाहे कोरोना आये या इससे भी बड़ा कुछ ओर आये।#FarmersProtest @OfficialBKU @AHindinews @BBCHindi @PTI_News @GaonConnection @AmarUjalaNews @news24tvchannel @QuintHindi pic.twitter.com/9iCCGqM85e— Rakesh Tikait (@RakeshTikaitBKU) April 6, 2021
“ಉಳಿದಿರುವ ದೇಶವನ್ನು ಮಾರಾಟ ಮಾಡಲು ಲಾಕ್‌ಡೌನ್ ತಯಾರಿ ನಡೆಯುತ್ತಿದೆ. ಆದರೆ, ಈ ಲಾಕ್‌ಡೌನ್‌ನಿಂದ ಆಂದೋಲನ ನಿಲ್ಲುವುದಿಲ್ಲ. ಕೊರೊನಾ ಸಾಂಕ್ರಾಮಿಕ ಬರಲಿ ಅಥವಾ ಅದಕ್ಕಿಂತ ದೊಡ್ಡದ್ದೇನಾದರೂ ಬರಲಿ. ರೈತ ಹೋರಾಟ ನಿಲ್ಲದು” ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಟ್ವೀಟ್ ಮಾಡಿದ್ದಾರೆ.
ಕಳೆದ ವಾರ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ರಾಜಸ್ಥಾನದಲ್ಲಿ ಅಲ್ವಾರ್‌ನಲ್ಲಿ ಎಬಿವಿಪಿ ಸದಸ್ಯರು ದಾಳಿ ನಡೆಸಿದ್ದರು. ಬಿಟ್ಟಿ ಪ್ರಚಾರ ಪಡೆಯಲು ದಾಳಿ ನಡೆಸಿದ್ದಾಗಿ ತಪ್ಪೊಪ್ಪಿಗೆ ನೀಡಿದ್ದರು. ಆದರೆ, ಹಲ್ಲೆ ನಡೆಸಲು ಯತ್ನಿಸಿದ ವಿದ್ಯಾರ್ಥಿಗಳಿಗೆ ಯಾವ ಶಿಕ್ಷೆಯನ್ನೂ ವಿಧಿಸಬಾರದೆಂದು, ವಿದ್ಯಾರ್ಥಿಗಳು ಅವರವರ ವಿದ್ಯಾಭ್ಯಾಸಕ್ಕೆ ಮರಳಬೇಕೆಂದು ರಾಕೇಶ್ ಟಿಕಾಯತ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಸುಗ್ಗಿಗೆ ಹೊರಟ ಟ್ಯ್ರಾಲಿಗಳು, ನಿರ್ಮಾಣಗೊಂಡ ಹುಲ್ಲಿನ ಗುಡಿಸಲುಗಳು
