ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿದ್ದು ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಸಭೆ, ಸಮಾರಂಭಗಳು ಹಾಗೂ ಹಬ್ಬಗಳ ಆಚರಣೆಗೆ ಸರ್ಕಾರ ನಿಯಮಗಳನ್ನು ರೂಪಿಸಿದೆ. ಮಂಗಳವಾರದಿಂದ ರಂಜಾನ್ ಆಚರಣೆ ಆರಂಭವಾಗುತ್ತಿದ್ದು, ರಂಜಾನ್‌ಗೆ ವಿವಿಧ ನಿರ್ಬಂಧಗಳನ್ನು ವಿಧಿಸಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಮಸೀದಿಗಳನ್ನು ತೆರೆಯುವಂತಿಲ್ಲ. ಇಫ್ತಾರ್ ಕೂಟ ನಡೆಸುವಂತಿಲ್ಲ, ಸಾಮೂಹಿಕ ನಮಾಜ್‌ಗೂ ಮುನ್ನ ಐದು ನಿಮಿಷ ಮಸೀದಿ ತೆರೆಯಲು ಅನುಮತಿ ನೀಡಲಾಗಿದೆ.
ರಂಜಾನ್ ಉಪವಾಸ ಬಿಡುವಾಗ ಮಸೀದಿಗೆ ಆಹಾರ ಪದಾರ್ಥಗಳನ್ನು ತರುವಂತಿಲ್ಲ. ಉಪವಾಸವನ್ನು ಮನೆಯಲ್ಲಿಯೇ ಬಿಟ್ಟು ಮಸೀದಿಗೆ ಬರಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಕನಿಷ್ಠ ಎರಡು ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯುಪಿಎಗಿಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಮುಂದು!
ನಮಾಜ್‌ಗೆ ಐದು ನಿಮಿಷಗಳ ಮೊದಲು ಮಸೀದಿ ತೆರೆಯಬೇಕು. ಮಸೀದಿಗೆ ಬರುವಾಗ ಸರತಿ ಸಾಲಿನಲ್ಲಿ ಬರಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ನಮಾಜ್ ಬಳಿಕ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ನಮಾಜ್ ಮಾಡಲು ಸ್ವಂತ ಚಾದರ್ ತರಬೇಕು.
ಅಗತ್ಯವಿದ್ದರೆ ನಮಾಜ್‌ನ ಸಮಯದಲ್ಲಿ ಮೂರು ಪಾಳಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಮಧ್ಯಾಹ್ನ 12.45-1.15ರ ವರೆಗೆ, ಮಧ್ಯಾಹ್ನ 1.30 ರಿಂದ 2 ರ ವರೆಗೆ ಮತ್ತು 2.30 ಯಿಂದ 3 ಗಂಟೆಯವರೆಗೆ ನಮಾಜ್ ಮಾಡಬಹುದು.
ಅಲ್ಲದೆ 60 ವರ್ಷ ಮೇಲ್ಪಟ್ಟವರು ಮತ್ತು ಮಕ್ಕಳು ಮಸೀದಿಗೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಇಫ್ತಾರ್ ಕೂಟಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು, ದೈಹಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್ ಮಾಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ


