ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿದ್ದು, ವಿಶ್ವದಲ್ಲೇ ಎರಡನೆ ಅತೀ ಹೆಚ್ಚು ಕೊರೊನಾ ಸೋಂಕಿತರಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. ಐದು ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ಹಾಗೂ ಧಾರ್ಮಿಕ ಹಬ್ಬಗಳು ಕೂಡಾ ಇದಕ್ಕೆ ಕಾರಣ ಎನ್ನಲಾಗಿದೆ. ಇದೀಗ ಉತ್ತರಾಖಂಡ್‌ ರಾಜ್ಯದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಕೂಡಾ ವಿವಾದದ ಕೇಂದ್ರ ಬಿಂದುವಾಗಿದೆ. ಮೇಳದಲ್ಲಿ ಸುಮಾರು 40 ಲಕ್ಷ ಜನ ಸೇರುತ್ತಾರೆ ಎನ್ನಲಾಗಿದೆ.

ಕೊರೊನಾ ಸಮಯದಲ್ಲಿ ಕುಂಭಮೇಳ ಆಚರಣೆಯ ಬಗ್ಗೆ ಹಲವಾರು ಜನರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಮಾತ್ರ ಅದನ್ನು ಗಣನೆಗೆ ತೆಗೆದುಕೊಳ್ಳದೆ ಆಚರಣೆಗೆ ಅನುಮತಿ ನೀಡಿತ್ತು. ಮೇಳದಲ್ಲಿ 40 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.

ಕುಂಭಮೇಳವನ್ನು ಉಲ್ಲೇಖಿಸಿ, ಖ್ಯಾತ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಕೇಂದ್ರದ ಜಾಣ ಕುರುಡು, ನೂರಾರು ಲಸಿಕಾ ಕೇಂದ್ರಗಳಿಗೆ ಬೀಗ

ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, “ಓಹ್, ತುಂಬಾ ಚೆನ್ನಾಗಿದೆ. ಓಹೋಹ್, ರುಚಿಯಾಗಿದೆ! ಇದು ನನ್ನ ಮಾತುಗಳಲ್ಲ. ಇದು ಇಂದಿನ ಕುಂಭಮೇಳದ ಜನಸಂದಣಿಯನ್ನು ನೋಡಿ ಕೊರೊನಾ ಆಡುತ್ತಿರುವ ಮಾತು. ಇದನ್ನು ಸರಿಪಡಿಸಲು ಎಷ್ಟು ಲಾಕ್‌ಡೌನ್‌ಗಳು ಬೇಕಾಗಬಹುದು” ಎಂದು ಕುಂಭಮೇಳದ ಚಿತ್ರವನ್ನು ಟ್ವೀಟ್ ಮಾಡಿ ಅವರು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಅವರು, ‘‘ಕುಂಭಮೇಳ…. ಶುಭವಿದಾಯ ಭಾರತ, ಸ್ವಾಗತ ಕೊರೊನಾ” ಎಂದು ಬರೆದಿದ್ದಾರೆ.

ಜೊತೆಗೆ ಅವರು, “ಪ್ರಸ್ತುತ ಬಾಹುಬಲಿ ರೂಪದ ಕುಂಭಮೇಳಕ್ಕೆ ಹೋಲಿಸಿದರೆ ಮಾರ್ಚ್ 2020 ರ ದೆಹಲಿ ತಬ್ಲೀಗಿ ಜಮಾತ್‌ ಒಂದು ಕಿರುಚಿತ್ರದಂತೆ. ನಾವೆಲ್ಲಾ ಹಿಂದೂಗಳು ಮುಸ್ಲಿಮರನ್ನು ಕ್ಷಮೆಯಾಚಿಸಬೇಕಿದೆ ಏಕೆಂದರೆ ಅವರು ಈ ಹಿಂದೆ ತಿಳಿಯದೆ ಮಾಡಿದ್ದರು. ಆದರೆ ನಾವು ಒಂದು ವರ್ಷದ ನಂತರ ಸಂಪೂರ್ಣವಾಗಿ ಎಲ್ಲಾ ತಿಳಿದ ನಂತರ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಅಲ್ಲ ಅದಕ್ಕಿಂತ ದೊಡ್ಡದು ಬಂದರೂ ರೈತ ಹೋರಾಟ ನಿಲ್ಲದು- ರಾಕೇಶ್ ಟಿಕಾಯತ್

“ಬಾಹ್ಯಾಕಾಶವು ಅನಂತವಾಗಿದೆಯೆ ಎಂದು ನನಗೆ ಖಚಿತವಾಗಿ ತಿಳಿದಿಲ್ಲ, ಆದರೆ ಮೂರ್ಖತನ ಅನಂತವಾಗಿದೆ” ಎಂಬ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಅವರ ಮಾತುಗಳನ್ನು ಉಲ್ಲೇಖಿಸಿರು ರಾಮ್ ಗೋಪಾಲ್ ವರ್ಮಾ, ಕುಂಭಮೇಳದ ಮತ್ತು ತಬ್ಲೀಗಿ ಜಮಾತ್‌ ಸಭೆಯ ಫೋಟೋವನ್ನು ಹಾಕಿ, ಎಡಭಾಗದಲ್ಲಿ ಕುಂಭಮೇಳ-2021 ಮತ್ತು ಬಲಭಾಗದಲ್ಲಿ ಜಮಾತ್‌-2020. ಈ ಮೌನದ ಕಾರಣ ದೇವರಿಗೆ ಮಾತ್ರ ತಿಳಿದಿದೆ” ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಕೊರೊನಾ ಉಲ್ಬಣ: ಕಳೆದ ಒಂದು ದಿನದಲ್ಲಿ ಹಲವು ದಾಖಲೆ ಮಾಡಿದ ಭಾರತ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here