“ಕೊರೊನಾ ವೈರಸ್ ಸಮಯದಲ್ಲಿ ಕುಂಭಮೇಳ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದಕ್ಕೆ, ಉತ್ತರ ಪ್ರದೇಶದ ಲಕ್ನೋ ಮೂಲದ ಪತ್ರಕರ್ತೆ ಪ್ರಜ್ಞಾ ಮಿಶ್ರಾ ಎಂಬವರನ್ನು ಹಾಡಹಗಲೆ ಇರಿದು ಕೊಲೆ ಮಾಡಲಾಯಿತು” ಎಂಬ ಶಿರ್ಷಿಕೆಯೊಂದಿಗೆ, ಮಹಿಳೆಯೊಬ್ಬರನ್ನು ಇರಿಯುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.
ಈ ಹಿಂದೆ ಕೂಡಾ ಇದೇ ವಿಡಿಯೋವನ್ನು, “ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯನ್ನು ಹಾಡಹಗಲೆ ಇರಿದಿದ್ದಾನೆ” ಎಂದು ತಪ್ಪಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.
ಆದರೆ ಹಲವು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು, ಈ ಘಟನೆ ದೆಹಲಿಯಲ್ಲಿ ನಡೆದಿದ್ದು ಎಂದು ಕಂಡು ಹಿಡಿದಿದೆ. ಅಲ್ಲದೆ ಈ ಘಟನೆಯಲ್ಲಿ ಯಾವುದೆ ಕೋಮು ಆಯಾಮ ಇಲ್ಲ ಎಂಬುದಾಗಿ ದೆಹಲಿಯ ರೋಹಿಣಿ ಜಿಲ್ಲಾ ಡಿಸಿಪಿ ಪ್ರಣವ್ ತಯಾಲ್ ಅವರು ಹೇಳಿದ್ದಾಗಿ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಭೂಮ್ ಲೈವ್ ವರದಿ ಮಾಡಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ’ಬಾಲಾಕೋಟ್ ದಾಳಿಯಲ್ಲಿ 300 ಜನರ ಸಾವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ’ ಎಂದು ಸುಳ್ಳು ಸುದ್ದಿ
ವೈರಲ್ ವಿಡಿಯೊ ಸಿಸಿಟಿವಿಯಿಂದ ಪಡೆದ ದೃಶ್ಯಾವಳಿಗಳಾಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಇರಿಯುತ್ತಿರುವುದು ಕಾಣಿಸುತ್ತದೆ.
ಈ ವಿಡಿಯೊ ಜೊತೆಗೆ, “ಉತ್ತರ ಪ್ರದೇಶದ ಲಕ್ನೋ ಮೂಲದ ಪತ್ರಕರ್ತೆ ಪ್ರಜ್ಞಾ ಮಿಶ್ರಾ ಎಂಬವರನ್ನು ಹಾಡಹಗಲೆ ಇರಿದು ಕೊಲೆ ಮಾಡಲಾಯಿತು” ಎಂದು ಶಿರ್ಷಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದಿ ಹೇರಿಕೆ ವಿರೋಧಿ ಚಿತ್ರಗಳನ್ನು ರೈತರ ಅರಾಜಕತೆ ಎಂದು ಪೋಸ್ಟ್ ಮಾಡಿದ ಬಿಜೆಪಿಗರು!
ಇಷ್ಟೇ ಅಲ್ಲದೆ, ವಾಟ್ಸಪ್‌ನಲ್ಲಿ ಇದೇ ವಿಡಿಯೊ ಮತ್ತು ಫೋಟೊಗಳು, “ಕೊರೊನಾ ವೈರಸ್ ಸಮಯದಲ್ಲಿ ಕುಂಭಮೇಳ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದಕ್ಕೆ, ಉತ್ತರ ಪ್ರದೇಶದ ಲಕ್ನೋ ಮೂಲದ ಪತ್ರಕರ್ತೆ ಪ್ರಜ್ಞಾ ಮಿಶ್ರಾ ಎಂಬವರನ್ನು ಹಾಡಹಗಲೆ ಇರಿದು ಕೊಲೆ ಮಾಡಲಾಯಿತು” ಎಂಬ ಶಿರ್ಷಿಕೆಯಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್ ಚೆಕ್
ಈ ವೀಡಿಯೊವನ್ನು ಹಲವಾರು ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳು ಪರಿಶೀಲಿಸಿದೆ. ಘಟನೆಯು ದೆಹಲಿಯ ರೋಹಿಣಿ ಜಿಲ್ಲೆಯ ವಿಜಯ್ ವಿಹಾರ್ ಬಳಿ ನಡೆದಿದೆ. ವಿಡಿಯೊದಲ್ಲಿ ಇರಿಯುತ್ತಿರುವ ವ್ಯಕ್ತಿಯನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿ ನೀಲು ಮೆಹ್ತಾರನ್ನು 2021 ರ ಏಪ್ರಿಲ್ 10 ರಂದು ಹಾಡಹಗಲೇ ಕ್ರೂರವಾಗಿ ಇರಿದಿದ್ದಾನೆ.
ದೆಹಲಿಯ ರೋಹಿಣಿ ಜಿಲ್ಲೆಯ ಉಪ ಪೊಲೀಸ್ ಆಯುಕ್ತ ಪ್ರಣವ್ ತಯಾಲ್ ಅವರು ಹೇಳುವಂತೆ, “ಘಟನೆಗೆ ಯಾವುದೇ ಹಿಂದೂ-ಮುಸ್ಲಿಂ ಆಯಾಮವಿಲ್ಲ, ಗಂಡ ಮತ್ತು ಹೆಂಡತಿ ಇಬ್ಬರೂ ಒಂದೇ ಧರ್ಮದವರು, ಘಟನೆಯು ಅವರ ಮನೆಯ ಹೊರಗೆ ಸಂಭವಿಸಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಸಿಂಘು ಗಡಿಯ ಒಂದು ಭಾಗದಲ್ಲಿ ದಾಂಧಲೆ ಮಾಡಿದ್ದು ಸ್ಥಳೀಯರಲ್ಲ ಬಿಜೆಪಿ ಕಾರ್ಯಕರ್ತರು!
ಅಲ್ಲದೆ ಸ್ವತಃ ಪತ್ರಕರ್ತೆ ಪ್ರಜ್ಞಾ ಮಿಶ್ರಾ ಅವರೇ ಪ್ರತಿಕ್ರಿಯಿಸಿದ್ದು, “ನಾನು ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರೋಟೋಕಾಲ್ ಅನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿದ್ದೇನೆ. ನಾನು ಸಂಪೂರ್ಣವಾಗಿ ಸುರಕ್ಷಿತ” ಎಂದು ಹೇಳಿದ್ದಾರೆ.
दोस्तों कोविड प्रोटोकॉल्स की वजह से घर में हूँ एकदम जीवित और सुरक्षित हूँ..मेरे मर्डर की खबर अफवाह है..https://t.co/5man4uDZSb pic.twitter.com/bsH3WsTU2x
— Pragya Mishra (@PragyaLive) April 18, 2021
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಕಾಮಗಾರಿಗೆ 15,000 ಕೋಟಿ ಮಂಜೂರು?: ವಾಸ್ತವವೇನು?



