ಕೇಂದ್ರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಕೊರೊನಾ ಲಸಿಕೆಗೆ ವಿವಿಧ ಬೆಲೆಗಳನ್ನು ನಿಗದಿ ಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ರಾಜಕೀಯ ನಾಯಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು.
ಲಸಿಕಿಗೆ ಕೇಂದ್ರ ಅಥವಾ ರಾಜ್ಯ ಯಾರು ಪಾವತಿಸಿದರೂ ಕೇಂದ್ರ ಸರ್ಕಾರವು ಒಂದೇ ಬೆಲೆಯನ್ನು ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ ಎಂದು ಹೇಳುವ ಬಿಜೆಪಿ,ಆದರೆ ಜೀವ ಉಳಿಸುವ ಲಸಿಕೆಗೆ ಒಂದು ಬೆಲೆ ಮಾಡುವುದಿಲ್ಲ ಎಂದಿದ್ದಾರೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಕೊರೊನಾ ವೈರಸ್ ವಿರೋಧಿ ಲಸಿಕೆ, ಕೋವಿಶೀಲ್ಡ್ ಅನ್ನು ರಾಜ್ಯ ಸರ್ಕಾರಗಳಿಗೆ 400 ರೂಪಾಯಿ ಮತ್ತು ದೇಶದ ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿಗೆ ಮಾರಾಟ ಮಾಡುವುದಾಗಿ ಬುಧವಾರ ಪ್ರಕಟಿಸಿದೆ.
ಇದನ್ನೂ ಓದಿ: ‘ಒಂದು ದೇಶ, ಒಂದು ದರ’ ಯಾಕಾಗಬಾರದು?; ಲಸಿಕೆ ವಿಷಯದಲ್ಲಿ ರಾಜ್ಯಗಳ ಪರ ನಿಂತ ಕಾಂಗ್ರೆಸ್
One nation, one party, one leader shouts BJP all the time but to save lives they can’t have one price for vaccine.
Every Indian needs free vaccine, regardless of age, caste, creed, location. GoI must fix ONE price for Covid vaccine irrespective of who pays— Centre or the States.
— Mamata Banerjee (@MamataOfficial) April 22, 2021
“ಯಾವಾಗಲೂ ಒಂದು ರಾಷ್ಟ್ರ, ಒಂದು ಪಕ್ಷ, ಒಬ್ಬ ನಾಯಕ ಎಂದು ಕೂಗುವ ಬಿಜೆಪಿ, ಜೀವ ಉಳಿಸಲು ಬೇಕಾದ ಲಸಿಕೆಗಾಗಿ ಒಂದು ಬೆಲೆ ನಿಗದಿಪಡಿಸುವುದಿಲ್ಲ. ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಮತ, ಸ್ಥಳ ಏನೇ ಇರಲಿ ಉಚಿತ ಲಸಿಕೆ ನೀಡಬೇಕು. ಕೇಂದ್ರ ಅಥವಾ ರಾಜ್ಯಗಳನ್ನು ಯಾರು ಪಾವತಿಸುತ್ತಾರೆ ಎಂಬುದನ್ನುಲೆಕ್ಕಿಸದೆ ಕೋವಿಡ್ ಲಸಿಕೆಗೆ ಭಾರತ ಸರ್ಕಾರ ಒಂದು ಬೆಲೆಯನ್ನು ನಿಗದಿಪಡಿಸಬೇಕು” ಎಂದು ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಕೊರೊನಾ ಲಸಿಕೆ ತಯಾರಕರಿಗೆ ತಮ್ಮ ಲಸಿಕೆಯನ್ನು ಪೂರ್ವ ನಿರ್ಧಾರಿತ ದರದಲ್ಲಿ ಭಾರತದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರವು ಸೋಮವಾರ ಅನುಮತಿ ನೀಡಿದೆ. ನಂತರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ದರ ಘೋಷಣೆ ಮಾಡಿತ್ತು.
ಬುಧವಾರ (ಏಪ್ರಿಲ್ 21) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಲಸಿಕೆಗಳ ಬೆಲೆಯಲ್ಲಿನ ವ್ಯತ್ಯಾಸದ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿ, ಮಧ್ಯಪ್ರವೇಶಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.
ಚುನಾವಣಾ ಫಲಿತಾಂಶ ಘೋಷಣೆಯಾದ ಕೂಡಲೇ ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ವ್ಯಾಕ್ಸಿನೇಷನ್‌ಗಾಗಿ ಪಶ್ಚಿಮ ಬಂಗಾಳ ಸರ್ಕಾರ 100 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಈಗಾಗಲೇ ಘೋಷಿಸಿದ್ದಾರೆ.
ಇದನ್ನೂ ಓದಿ: ಲಸಿಕೆಗಳು ಸಾರ್ವಜನಿಕ ಸ್ವತ್ತು, ಅವನ್ನು ರಾಜ್ಯಗಳಿಗೆ ಉಚಿತವಾಗಿ ಪೂರೈಸಬೇಕು: ಪ್ರಧಾನಿಗೆ ಕೇರಳ ಸಿಎಂ ಪತ್ರ


