Homeಮುಖಪುಟ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

#spinelessmodi ಮತ್ತು #DiaperSuryaExposed ಹ್ಯಾಶ್‌‌ಟ್ಯಾಗ್‌ಗಳ ಜೊತೆಗೆ #TejasviSuryaExposed, #ArrestBJPMLASatish , #BBMP_MustApologise ಮುಂತಾದ ಹ್ಯಾಶ್‌ಟ್ಯಾಗ್‌ಗಳೂ ಟ್ರೆಂಡ್ ಆಗಿದೆ.

- Advertisement -
- Advertisement -

ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಅತೀ ದೊಡ್ಡ ಐಟಿಸೆಲ್ ನೆಟ್‌ವರ್ಕ್ ಬಿಜೆಪಿಗಿದೆ. ಇದಾಗಿಯೂ ಕಳೆದೊಂದು ದಿನದಿಂದ ನೆಟ್ಟಿಗರು ಬಿಜೆಪಿ ವಿರುದ್ದ ಮುಗಿಬಿದ್ದಿದ್ದಾರೆ. #spinelessmodi , #TejasviSuryaExposed , #DiaperSuryaExposed , #ArrestBJPMLASatish , #BBMP_MustApologise ಎಂಬ ಹ್ಯಾಶ್ ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಕೊರೊನಾ ಹೆಚ್ಚುತ್ತಿರುವ ಮಧ್ಯೆ ಸರಿಯಾದ ಆರೋಗ್ಯ ಸೌಲಭ್ಯ ಸಿಗದೆ ಜನರು ಬೀದಿ ಬೀದಿಗಳಲ್ಲಿ ನರಳಾಡುತ್ತಿರುವುದು ವರದಿಯಾಗಿದೆ. ಆಡಳಿತ ಪಕ್ಷವಾದ ಬಿಜೆಪಿಯು ಸೋಂಕನ್ನು ಸರಿಯಾಗಿ ನಿರ್ವಹಣೆ ಮಾಡದೆ ಇದ್ದಿದ್ದು ಸಾಮಾನ್ಯ ಜನರ ನಡುವೆ ಅಸಹನೆ ಹಚ್ಚುತ್ತಿದೆ. ಇದರಿಂದಾಗಿ ಜನರು ತಮ್ಮ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಜನರು ತಮ್ಮ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿರುವುದರಿಂದ ಮುಜುಗರಕ್ಕೀಡಾಗಿದ್ದ ಯುಪಿ ಸರ್ಕಾರವು, ಸಮಸ್ಯೆ ಬರೆದ ಯುವಕನ ಮೇಲೆ ಎಫ್‌ಐಆರ್‌ ದಾಖಲು ಮಾಡಿ ಎಚ್ಚರಿಕೆ ಕೂಡಾ ರವಾನಿಸಿತ್ತು. ಆದರೆ ಸುಪ್ರೀಂಕೋರ್ಟ್ ಅದರ ವಿರುದ್ದ ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ನೀಡಿದ್ದು, ಸಮಸ್ಯೆ ಬರೆಯುವವರಿಗೆ ತೊಂದರೆ ಮಾಡದಂತೆ ಹೇಳಿತ್ತು.

ಇದನ್ನೂ ಓದಿ: ‘ಬೆಡ್‌ ಬ್ಲಾಕ್‌’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ

ಕೊರೊನಾ ಎರಡನೆ ಅಲೆ ಬರಲಿದೆ ಎಂದು ಹಲವಾರು ತಜ್ಞರು ಈ ಮೊದಲೆ ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಜ್ಯಗಳ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಮುಳುಗಿತ್ತು. ಇದೀಗ ದೇಶದಾದ್ಯಂತ ಜನರು ತೀವ್ರ ಸಂಕಷ್ಟದಲ್ಲಿದ್ದು ಪ್ರಧಾನಿ ಮೋದಿಯ ನಿಷ್ಕ್ರೀಯತೆಯನ್ನು ಪ್ರಶ್ನಿಸಿದ್ದು, ‘ಬೆನ್ನೆಲುಬಿಲ್ಲದ ಮೋದಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗಾರಮ್ ರಾಜು ಅವರು, “ಮೋದಿಗೆ ಯಾಕೆ ‘ಬೆನ್ನೆಲುಬಿಲ್ಲ’ ಎಂದರೆ, ಕೊರೊನಾವನ್ನು ಅವರು ಸರಿಯಾಗಿ ನಿರ್ವಹಣೆ ಮಾಡದೆ ಸಾವಿರಾರು ಜನರು ಆಮ್ಲಜನಕ, ಔಷಧಿ ಮತ್ತು ಇತರ ಆರೋಗ್ಯ ಸೌಲಭ್ಯದ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಆದರೆ ಅವರು ತಮ್ಮ ಹೊಸ ಮನೆ, ಸೆಂಟ್ರಲ್ ವಿಸ್ಟಾಕ್ಕಾಗಿ ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತಿದ್ದಾರೆ. ಶೇಮ್‌’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ಸಯಿದ್ ಜಿಬ್ರಾನ್ ಅವರು, “ನಾನು ಮೋದಿಗೆ ಬೆಂಬಲಿಸುತ್ತೇನೆ, ಯಾಕೆಂದರೆ ಅವರು ಅವರದೇ ಜನರನ್ನು ಕೊಲ್ಲುತ್ತಿದ್ದಾರೆ. ಒಂದು ಕ್ಷಣ ಯುಪಿಯಲ್ಲಿ ಮೃತಪಟ್ಟ ಜನರನ್ನು ನೋಡಿ. ಹಾಗೆ ಹೋಗುತ್ತಿರಿ ಮೋದಿ” ಎಂದು ಕಾರ್ಟೂನ್ ಒಂದರ ಚಿತ್ರವನ್ನು ಟ್ವೀಟ್ ಮಾಡಿ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಬೆಂಗಳೂರು ‘ಬೆಡ್‌ಬ್ಲಾಕ್‌’ ಪ್ರಕರಣದಲ್ಲಿ ಅನಾವಶ್ಯಕವಾಗಿ ಮುಸ್ಲಿಮರ ಹೆಸರನ್ನು ಮುನ್ನಲೆಗೆ ತಂದು ಕೋಮುವಾದಿಕರಣ ಮಾಡುವ ಪ್ರಯತ್ನಪಟ್ಟ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರ ರಾಜೀನಾಮೆ ಕೇಳಿ #TejasviSuryaExposed, #DiaperSuryaExposed, ಕೂಡಾ ಟ್ರೆಂಡ್ ಆಗುತ್ತಿದೆ.

ಅವರು ಸ್ವತಃ ಬೆಡ್‌ಬ್ಲಾಕ್‌ ದಂಧೆಯ ಪ್ರಮುಖ ಆರೋಪಿಯೆಂದು ‘ವಿಜಯ ಕರ್ನಾಟಕ’ ವರದಿಯಲ್ಲಿ ಹೇಳಲಾಗಿರುವ ಆರೋಪಿ ಶಾಸಕ ಸತೀಶ್ ರೆಡ್ಡಿ ಅವರೊಂದಿಗೆ ಬೆಂಗಳೂರಿನ ವಾರ್‌ರೂಂ ಒಂದಕ್ಕೆ ದಾಳಿ ಮಾಡಿದ್ದರು. ಅಲ್ಲಿ ಅವರು ಹಗರಣದ ದಾರಿ ತಪ್ಪಿಸಲು ಬೇಕಾಗಿ ಹಗರಣಕ್ಕೆ ಕೋಮು ಬಣ್ಣ ಹಚ್ಚಿದ್ದರು. ಇದರಿಂದಾಗಿ ಬಿಬಿಎಂಪಿ 17 ಜನ ಸಿಬ್ಬಂದಿಯನ್ನು ‘ಮುಸ್ಲಿಂ’ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಿದೆ.

ಇದನ್ನೂ ಓದಿ: ಬೆಡ್‌ಬ್ಲಾಕ್‌ ದಂಧೆಯಲ್ಲಿ ಬಿಜೆಪಿ ಶಾಸಕ ಭಾಗಿ; ಸಂಬಂಧವಿಲ್ಲದ 17 ಸಿಬ್ಬಂದಿಗಳು `ಮುಸ್ಲಿಂ’ ಎಂಬ ಕಾರಣಕ್ಕೆ ವಜಾ!

ಇದರ ವಿರುದ್ದ ಕೂಡಾ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಬಿಬಿಎಂಪಿ ಈ ಪ್ರಕರಣದಲ್ಲಿ ಕ್ಷಮೆ ಕೇಳಬೇಕು ಎಂದು #BBMP_MustApologise ಆಗ್ರಹಿಸಿದ್ದಾರೆ. ಜೊತೆಗೆ ಬೆಡ್‌ಬ್ಲಾಕ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಶಾಸಕ ಸತೀಶ್ ರೆಡ್ಡಿಯನ್ನು ಬಂಧಿಸಬೇಕು #ArrestBJPMLASatish ಎಂದು ಕೂಡಾ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಡಾ. ರಿಹಾನ ಅವರು, “ತೇಜಸ್ವಿ ಸೂರ್ಯ ನಿಮ್ಮ ಆಪ್ತ ಸತೀಶ್ ರೆಡ್ಡಿ ಈ ಇಡೀ ಬೆಡ್‌ಸ್ಕ್ಯಾಮ್‌ನ ಹಿಂದೆ ಇದ್ದಾರೆ. ಅಮಾಯಕರನ್ನು ದೂಷಿಸಿರುವ ನೀವು, ಆದ ಪ್ರಮಾದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಬಿಬಿಎಂಪಿ ಕೂಡಾ ಬಿಜೆಪಿ ಗೂಂಡಾಗಳ ಅಣತಿಯಂತೆ ವರ್ತಿಸುವುದನ್ನು ನಿಲ್ಲಿಸಬೇಕು” ಎಂದು ಆಕ್ರಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ‘ಸರಕಾರಾತ್ಮಕ’ ಆಗಿಯಲ್ಲ

ಇಮ್ರಾನ್‌ ಖಾನ್ ಅವರು, “ತೇಜಸ್ವಿ ಸೂರ್ಯ ಅವರು ಕೋಮುವಾದಿ ಭಯೋತ್ಪಾದಕ. ಬಿಬಿಎಂಪಿ ಕಮಿಷನರ್‌ ಅವರನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.

ಯಶ್ವಂತ್ ನೇತಾಜಿ ಅವರು, “ತೇಜಸ್ವಿ ಸೂರ್ಯ ಬಿಜೆಪಿಯ ಕೋಮುವಾದಿ ಏಜೆಂಟ್” ಎಂದು ಕೊರೊನಾಗಿಂತ ಅಪಾಯಕಾರಿ ಎಂದು ಬರೆದಿರುವ ತೇಜಸ್ವಿ ಸೂರ್ಯ ಚಿತ್ರವನ್ನು ಹಾಕಿದ್ದಾರೆ. ಜೊತೆಗೆ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...