ತನಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್ ಲಸಿಕೆ ಅಗತ್ಯವಿಲ್ಲ ಎಂದು ಹೇಳಿದ್ದ ಯೋಗ ಗುರು ರಾಮದೇವ್, ಯೂಟರ್ನ್ ಹೊಡೆದಿದ್ದು, ಶೀಘ್ರದಲ್ಲೇ ಕೊರೊನಾ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ. ಜೊತೆಗೆ ಅಲೋಪತಿ ವೈದ್ಯರನ್ನು “ಭೂಮಿಯ ಮೇಲಿನ ದೇವದೂತರು” ಎಂದು ಹೊಗಳಿದ್ದಾರೆ.
ಕೊರೊನಾ ಸಾಂಕ್ರಾಮಿಕದ ವಿರುದ್ಧ ಅಲೋಪಥಿಕ್ ಔಷಧಿಗಳ ಪರಿಣಾಮಕಾರಿತ್ವದ ಕುರಿತು ರಾಮ್‌ದೇವ್ ಈ ಹಿಂದೆ ಅಭಿಪ್ರಾಯ ಹೊರಹಾಕಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ವೈದ್ಯಕೀಯ ವಲಯ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತ್ತು. ಭಾರತೀಯ ವೈದ್ಯಕೀಯ ಸಂಘ ರಾಮ್‌ದೇವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಸ್ವಾಗತಿಸಿರುವ ಬಾಬಾ ರಾಮದೇವ್ ಇದನ್ನು “ಐತಿಹಾಸಿಕ” ಹೆಜ್ಜೆ ಎಂದು ಬಣ್ಣಿಸಿದರು ಮತ್ತು ತಮ್ಮನ್ನು ತಾವು ಲಸಿಕೆ ಪಡೆಯುವಂತೆ ಎಲ್ಲರಿಗೂ ಮನವಿ ಮಾಡಿದರು.
ಇದನ್ನೂ ಓದಿ: ರಾಜಸ್ಥಾನ: ಅಂಬೇಡ್ಕರ್ ಪೋಸ್ಟರ್ ತೆರವಿಗೆ ಆಕ್ಷೇಪಿಸಿದ ದಲಿತ ಯುವಕನ ಹತ್ಯೆ
“ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆಯಿರಿ. ಇದರ ಜೊತೆಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಪಡೆಯಿರಿ ಇದರಿಂದ ರಕ್ಷಣೆ ದೊರೆಯುತ್ತದೆ ಆಗ ಕೋವಿಡ್‌ನಿಂದ ಯಾವ ವ್ಯಕ್ತಿಯು ಸಾಯುವುದಿಲ್ಲ” ಎಂದಿದ್ದಾರೆ. ಶೀಘ್ರದಲ್ಲೇ ತಾವು ಲಸಿಕೆ ಪಡೆಯುವುದಾಗಿ ತಿಳಿಸಿದ್ದಾರೆ.
ಅಲೋಪತಿ ವೈದ್ಯರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ರಾಮ್‌ದೇವ್, ಉತ್ತಮ ಅಲೋಪತಿ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವೈದ್ಯರನ್ನು ಭೂಮಿಯ ಮೇಲಿನ ದೇವರ ದೂತರು ಎಂದು ಬಣ್ಣಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಯೊಂದಿಗೆ ನಡೆಯುತ್ತಿರುವ ವಿವಾದದ ಬಗ್ಗೆ ಮಾತನಾಡಿರುವ ಅವರು, ’ಯಾವುದೇ ಸಂಘಟನೆಯೊಂದಿಗೆ ದ್ವೇಷವಿಲ್ಲ. ಔಷಧಿಗಳ ಹೆಸರಿನಲ್ಲಿ ಜನರ ಮೇಲೆ ನಡೆಯುವ ಶೋಷಣೆಗೆ ನನ್ನ ವಿರೋಧ’ ಎಂದಿದ್ದಾರೆ.
ತುರ್ತು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗೆ ಬಂದಾಗ, ಅಲೋಪತಿ ಉತ್ತಮವಾಗಿದೆ. ಇದರ ಬಗ್ಗೆ ಎರಡು ಅಭಿಪ್ರಾಯಗಳಿಲ್ಲ. ಆದರೆ, ಅನೇಕ ವೈದ್ಯರು ಅಗ್ಗದ ಜನರಿಕ್ ಔಷಧಿಗಳ ಬದಲಿಗೆ ದುಬಾರಿ ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದ ಪ್ರವೃತ್ತಿಯಿಂದಾಗಿ ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಬೇಕಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ: ಹಿಂದೂ ಸಂಘಟನೆಗಳ ವಿರೋಧ: ಮಸೀದಿ, ಮದರಸಾಗಳಿಗೆ ಬಿಡುಗಡೆ ಮಾಡಿದ್ದ ಗೌರವಧನ ಹಿಂಪಡೆದ ಸರ್ಕಾರ


