ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಫಲಿತಾಂಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋಲ್ಕತ್ತಾ ಹೈಕೋರ್ಟ್ ಜೂನ್ 24ಕ್ಕೆ ಮುಂದೂಡಿದೆ. ಬಿಜೆಪಿ ಅಭ್ಯರ್ಥಿಯಾಗಿ ಸುವೇಂದು ಅಧಿಕಾರಿ ಗೆಲುವು ಪಡೆದಿದ್ದರು.
ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸಿಲಾಗಿದ್ದ ಅರ್ಜಿ ವಿಚಾರಣೆಯನ್ನು ಜಸ್ಟೀಸ್ ಕೌಶಿಕ್ ಚಂದ ನಡೆಸುತ್ತಿದ್ದು, ನ್ಯಾಯಮೂರ್ತಿ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಕಾನೂನು ಸಲಹೆಗಾರರಾಗಿದ್ದ ಕೌಶಿಕ್ ಚಂದ ಅವರು ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾರೆ. ಅವರ ಮುಂದೆ ಮಮತಾ ಬ್ಯಾನರ್ಜಿಯವರ ನಂದಿಗ್ರಾಮ ಚುನಾವಣೆ ಫಲಿತಾಂಶದ ಅರ್ಜಿ ಇದೆ ಎಂದು ಟಿಎಂಸಿ ನಾಯಕರು ಟ್ವೀಟ್ ಮಾಡುತ್ತಿದ್ದಾರೆ.
ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್ ತಮ್ಮ ಟ್ವಿಟರ್ ಖಾತೆಯಲ್ಲಿ ಜಸ್ಟೀಸ್ ಕೌಶಿಕ್ ಚಂದ ಬಿಜೆಪಿ ಕಾನೂನು ಘಟಕದಲ್ಲಿದರು ಎಂದು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಮಾತ್ತು ಕೌಶಿಕ್ ಚಂದ ಅವರ ಚಿತ್ರಗಳನ್ನು ಶೇರ್ ಮಾಡಿ, ಇವರೇನಾ ಈಗೀನ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳು..? ಇವರ ಮುಂದೆ ಮಮತಾ ಬ್ಯಾನರ್ಜಿ ಸಲ್ಲಿಸಿರುವ ನಂದಿಗ್ರಾಮ ಚುನಾವಣೆ ಪ್ರಕರಣದ ಅರ್ಜಿ ವಿಚಾರಣೆ..? ನ್ಯಾಯಾಂಗ ಇಷ್ಟು ಕೆಳಮಟ್ಟಕ್ಕೆ ಇಳಿಯುವುದೆ..? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಜೈಲನ್ನು ತೋರಿಸಿ ನಮ್ಮನ್ನು ಬೆದರಿಸಲಾಗದು’ – ಬಿಡುಗಡೆಗೊಂಡ ವಿದ್ಯಾರ್ಥಿ ಹೋರಾಟಗಾರರ ಘೋಷಣೆಗಳಿವು!
Who is that person ‘circled’ in both pics ?
Is he Justice Kaushik Chanda of Calcutta High Court ?
Has he been assigned to hear the Nandigram election case ?
Can the judiciary sink any lower ? pic.twitter.com/cBbazffZ35
— Derek O'Brien | ডেরেক ও'ব্রায়েন (@derekobrienmp) June 18, 2021
ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಕೂಡ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ನಂದಿಗ್ರಾಮ ಪ್ರಕರಣವನ್ನು ಕೌಶಿಕ್ ಚಂದ ಅವರ ವಿಚಾರಣೆಗೆ ವಹಿಸಿರುವುದನ್ನು ಖಂಡಿಸಿ, ನ್ಯಾಯಾಂಗವನ್ನು ಉಳಿಸಿ ಎಂದಿದ್ದಾರೆ.
ಬಿಜೆಪಿಯ ಕಾನೂನು ವಿಭಾಗದ ಸದಸ್ಯ ಮತ್ತು ವಕೀಲರಾಗಿದ್ದ ಜಸ್ಟೀಸ್ ಕೌಶಿಕ್ ಚಂದ, ಮಮತಾ ಬ್ಯಾನರ್ಜಿಯವರ ನಂದಿಗ್ರಾಮದ ಅರ್ಜಿ ವಿಚಾರಣೆಯನ್ನು ನಡೆಸಲಿದ್ದಾರೆ. ನಮ್ಮ ನ್ಯಾಯಾಂಗವನ್ನು ಉಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
MiLord- get a conscience or at least a better veil!
Mamatadi’s Nandigaram petition listed before Justice Kaushik Chandra, member of BJP’s legal cell & BJP lawyer in numerous appearances
Save our judiciary! pic.twitter.com/taa4Jch5c7
— Mahua Moitra (@MahuaMoitra) June 18, 2021
ಪಶ್ಚಿಮ ಬಂಗಾಳ ಚುನಾವಣೆಯ ವಿಧಾನಸಭಾ ಕ್ಷೇತ್ರ ನಂದಿಗ್ರಾಮದ ಮತ ಏಣಿಕೆಯಲ್ಲಿ ಮೊದಲಿನಿಂದಲೂ ಮುನ್ನಡೆಯಲ್ಲಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊನೆಯಲ್ಲಿ ಸೋಲು ಕಂಡಿದ್ದಾರೆ ಎಂದು ಘೋಷಿಸಲಾಯಿತು. ಬಿಜೆಪಿಯ ಸುವೇಂಧು ಅಧಿಕಾರಿಗೆ ಗೆಲುವು ಎನ್ನಲಾಯಿತು. ಹಲವು ಗೊಂದಲಗಳಿಗೆ ಕಾರಣವಾದ ಫಲಿತಾಂಶದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು.
ನಂದಿಗ್ರಾಮದ ಫಲಿತಾಂಶವನ್ನು ಪ್ರಶ್ನಿಸಿ, ಮರು ಮತ ಏಣಿಕೆ ನಡೆಸುವಂತೆ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಚುನಾವಣಾ ಆಯೋಗ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಕುರಿತು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಚಾರಣೆಯನ್ನು ಜಸ್ಟೀಸ್ ಕೌಶಿಕ್ ಚಂದ ಅವರು ನಡೆಸಲಿದ್ದು, ಇವರು ಬಿಜೆಪಿ ಬೆಂಬಲಿತರು ಎಂದು ಟಿಎಂಸಿ ಆರೋಪಿಸುತ್ತಿದೆ.
ಇದನ್ನೂ ಓದಿ: ಯಾಸ್ ಚಂಡಮಾರುತ: ಕೇಂದ್ರದಿಂದ ಯಾವುದೇ ನೆರವು ಬಂದಿಲ್ಲ ಎಂದ ಮಮತಾ ಬ್ಯಾನರ್ಜಿ


