ಜಗತ್ತಿನಲ್ಲಿ ಅತ್ಯಂತ ಅಮೂಲ್ಯ ವಸ್ತುಗಳ ಪಟ್ಟಿಯಲ್ಲಿ ವಜ್ರವು ಅಗ್ರಸ್ಥಾನವನ್ನು ಪಡೆದಿದೆ. ಅಮೂಲ್ಯವಾದ ವಜ್ರದ ಹರಳುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ವಜ್ರದ ಗಣಿಗಳು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆಫ್ರಿಕಾದ ಕೆಲವು ದೇಶಗಳನ್ನು ಹೊರತುಪಡಿಸಿದರೆ ಜಗತ್ತಿನಲ್ಲಿ‌ ಇನ್ನೆಲ್ಲೂ ಹೇರಳವಾದ ವಜ್ರದ ಗಣಿಗಳಿಲ್ಲ. ಈಗ ಜಗತ್ತಿನಲ್ಲಿ ಅನೇಕರ ಹುಬ್ಬೇರಿಸುವ ಅತಿದೊಡ್ಡ ವಜ್ರವೊಂದು ಬೋಟ್ಸ್ವಾನದಲ್ಲಿ ದೊರೆತಿದೆ. ಅತ್ಯಂತ ಶ್ರೇಷ್ಠ ಗುಣಮಟ್ಟದ ಈ ವಜ್ರ ಬರೋಬ್ಬರಿ 1098 ಕ್ಯಾರೆಟ್‌ನದ್ದಾಗಿದೆ. ಸದ್ಯ ಈ ವಜ್ರವನ್ನು ಬೋಟ್ಸ್ವಾನದ ಅಧ್ಯಕ್ಷ ಮೊಕಗ್ವೀತ್ಸಿ ಮಸಿಸಿ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಇದು ಜಗತ್ತಿನ 3 ನೇ ಅತಿದೊಡ್ಡ ವಜ್ರ ಎಂಬ ಹೆಗ್ಗಳಿಕೆ ಪಡೆದಿದೆ.

ಬೋಟ್ಸ್ವಾನ ರಾಜಧಾನಿ ಗಾಬೊರೇನೆ ಪಟ್ಟಣದಿಂದ 75 ಮೈಲಿ ದೂರವಿರುವ ಜ್ವನೆಂಗ್ ಗಣಿಯಿಂದ ಜೂನ್ ಮೊದಲ ವಾರದಲ್ಲಿ ಅದನ್ನು ಹೊರತೆಗೆಯಲಾಗಿತ್ತು.

ಈ ವಜ್ರದ ಗಣಿಯು ದೇಬಸ್ವಾನಾ‌ ಮೈನಿಂಗ್ ಕಂಪನಿ ಮತ್ತು ಬೋಟ್ಸ್ವಾನ ಸರ್ಕಾರದ ಜಂಟಿ ಆಡಳಿತದಲ್ಲಿ ನಡೆಯುತ್ತಿದೆ.

ಈ ವಜ್ರದಿಂದ ಬರುವ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಬೋಟ್ಸ್ವಾನ ಸರ್ಕಾರ ಟ್ವೀಟ್ ಮಾಡಿದೆ.

1982 ರಲ್ಲಿ ಆರಂಭವಾದ ದಬಸ್ವಾನ ವಜ್ರದ ಗಣಿಯಲ್ಲಿ ವರ್ಷಕ್ಕೆ 12.5 ಮಿಲಯನ್ ನಿಂದ 15 ಮಿಲಯನ್ ಕ್ಯಾರೆಟ್ ವರೆಗೆ ವಜ್ರವನ್ನು ಹೊರತೆಗೆಯಲಾಗುತ್ತದೆ. 1967 ರಲ್ಲಿ ಮೊಟ್ಟ ಮೊದಲ ಬಾರಿಗೆ ಬೋಸ್ವಾನಾದಲ್ಲಿ ವಜ್ರ ಸಿಕ್ಕಿತ್ತು.

ಜಗತ್ತಿನ ಅತಿದೊಡ್ಡ ವಜ್ರವು 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಅದನ್ನು ಕ್ಯುಲಿನನ್ ಡೈಮೆಂಡ್ ಎಂದು ಕರೆಯಲಾಗುತ್ತದೆ. 3,106 ಕ್ಯಾರೆಟ್‌ನ ಓ ವಜ್ರವನ್ನು ಚಿಕ್ಕ ಚಿಕ್ಕ ತುಣುಕುಗಳನ್ನಾಗಿ ಮಾಡಿ ಬ್ರಿಟನ್ ರಾಣಿಯ ಕಿರೀಟಕ್ಕೆ ಅಲಂಕರಿಸಲಾಗಿತ್ತು.

ಜಗತ್ತಿನ ಎರಡನೇ ಅತಿದೊಡ್ಡ ವಜ್ರವು 2015 ರಲ್ಲಿ ಬೋಟ್ಸ್ವಾನದಲ್ಲಿಯೇ ಪತ್ತೆಯಾಗಿತ್ತು. ಕೆನಡಾದ ಮೈನಿಂಗ್ ಕಂಪನಿ ಲ್ಯುಕಾರ ಕರೋವೆ ಗಣಿಯಲ್ಲಿ ಈ ವಜ್ರವನ್ನು ಹೊರತೆಗೆದಿತ್ತು. ಎರಡು ವರ್ಷಗಳ ನಂತರ 1,109 ಕ್ಯಾರೆಟ್‌ನ ಈ ವಜ್ರವನ್ನು 55 ಮಿಲಿಯನ್ ಡಾಲರ್ ಬೆಲೆಗೆ ಪ್ರಸಿದ್ಧ ವಜ್ರಾಭರಣ ತಯಾರಿಕಾ ಸಂಸ್ಥೆ ಗ್ರಾಫ್ ಖರೀದಿಸಿತ್ತು.


ಇದನ್ನೂ ಓದಿ: ಮುಸ್ಲಿಂ ವೃದ್ಧರ ಮೇಲೆ ಹಲ್ಲೆ ಪ್ರಕರಣ: ಟ್ವಿಟರ್‌ ಇಂಡಿಯಾ ಎಂಡಿಗೆ ಯುಪಿ ಪೊಲೀಸರ ನೋಟಿಸ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here