Homeಮುಖಪುಟಎಸ್‌ಬಿಐ ಬ್ಯಾಂಕ್‌ನಿಂದ ಗ್ರಾಹಕರಿಗೆ ಎಟಿಎಂ ವಿತ್‌ ಡ್ರಾ ಸೇರಿ ಹಲವು ಶುಲ್ಕಗಳು!

ಎಸ್‌ಬಿಐ ಬ್ಯಾಂಕ್‌ನಿಂದ ಗ್ರಾಹಕರಿಗೆ ಎಟಿಎಂ ವಿತ್‌ ಡ್ರಾ ಸೇರಿ ಹಲವು ಶುಲ್ಕಗಳು!

- Advertisement -
- Advertisement -

ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್‌ನಿಂದ ಉಂಟಾಗಿರುವ ಸಂಕಷ್ಟದಲ್ಲಿ ಇರುವ ಜನರ ಜೀವನದ ಮೇಲೆ ಬರೆ ಮೇಲೆ ಬರೆ ಬೀಳುತ್ತಿದೆ. ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್, ಡೀಸೆಲ್, ದಿನಸಿ ಪದಾರ್ಥಗಳ ಬೆಲೆ ಏರಿಕೆ ಜೊತೆಗೆ ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಂದ ಹಲವು ರೀತಿಯ ಶುಲ್ಕಗಳನ್ನು ವಿಧಿಸಲು ಮುಂದಾಗಿದೆ.

ಖಾತೆದಾರರಿಂದ ವಿವಿಧ ರೀತಿಯಲ್ಲಿ ಶುಲ್ಕ ವಸೂಲಿಗೆ ಮುಂದಾಗಿರುವ ಎಸ್‌ಬಿಐ, ಎಟಿಎಂ ಮಾತ್ರವಲ್ಲದೆ ಶಾಖೆಗಳಲ್ಲಿಯೂ ಹಣವನ್ನು ಹಿಂಪಡೆಯುವಿಕೆಗೂ (ವಿತ್‌ಡ್ರಾ) ಜುಲೈ 01 (ಇಂದಿನಿಂದ) ರಿಂದ ಶುಲ್ಕ ವಿಧಿಸುವುದಾಗಿ ಎಸ್‌ಬಿಐ ಮಾಹಿತಿ ನೀಡಿದೆ.

ಎಸ್‌ಬಿಐ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ (ಬಿಎಸ್‌ಬಿಡಿ) ಯನ್ನು ಹೊಂದಿರುವ ಖಾತೆದಾರರಿಗೆ ಎಂಟಿಎಂ ಮತ್ತು ಬ್ಯಾಂಕ್‌ ಶಾಖೆಗಳಲ್ಲಿ ಹಣವನ್ನು ವಿತ್‌ಡ್ರಾ ಮಾಡಿದರೂ ಶುಲ್ಕ ವಿಧಿಸಲಾಗುವುದು. ತಿಂಗಳಲ್ಲಿ ಮೊದಲ ನಾಲ್ಕು ಬಾರಿ ಎಟಿಎಂನಿಂದ ಅಥವಾ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಾಡಲು ಯಾವುದೇ ಶುಲ್ಕವಿಲ್ಲ.

ಆದರೆ, ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ಡ್ರಾ ಮಾಡಿದರೆ, 15 ರಿಂದ 75 ರೂಪಾಯಿಗಳ ವರೆಗೆ ಶುಲ್ಕ ಮತ್ತು ಜಿಎಸ್‌ಟಿ ವಿಧಿಸುವುದಾಗಿ ಎಸ್‌ಬಿಐ ತಿಳಿಸಿದೆ. ಆದರೆ, ಹಣಕಾಸು ವರ್ಗಾವಣೆ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಶುಲ್ಕವಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ಉಳಿತಾಯ ಖಾತೆದಾರನಿಗೆ ಮೊದಲ ಬಾರಿಗೆ ನೀಡಲಾಗುವ 10 ಲೀಫ್ ಚೆಕ್‌ಬುಕ್‌ಅನ್ನು ಉಚಿತವಾಗಿ ನೀಡಲಾಗುವುದು. ನಂತರ ಪಡೆಯುವ ಚೆಕ್‌ಬುಕ್‌ಗೆ 40 ರೂ. ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲಾಗುವುದು. ಅಲ್ಲದೆ, 25 ಲೀಫ್ ಚೆಕ್‌ಬುಕ್‌ಗೆ 75 ರೂ. ಶುಲ್ಕ ಮತ್ತು ಜಿಎಸ್‌ಟಿ ವಿಧಿಸಲಾಗುವುದು. ತುರ್ತಾಗಿ ಪಡೆಯುವ ಚೆಕ್‌ ಪುಸ್ತಕ (10 ಎಲೆ)ಕ್ಕೆ 50 ರೂ ಮತ್ತು ಜಿಎಸ್‌ಟಿ ವಿಧಿಸಲಾಗುವುದು ಎಂದು ತಿಳಿಸಿದೆ.

ಆದರೆ, ಹಿರಿಯ ನಾಗರಿಕರಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ ಎಂದು ಎಸ್‌ಬಿಐ ಹೇಳಿದೆ. ಬಿಎಸ್‌ಬಿಡಿ ಖಾತೆಯು ಪ್ರಾಥಮಿಕವಾಗಿ ಕಾರ್ಮಿಕ ವರ್ಗಕ್ಕೆ ಮೀಸಲಾಗಿರುವುದರಿಂದ, ಈ ಹೊಸ ನಿಯಮವು ಅವರ ಬ್ಯಾಂಕಿಂಗ್ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಬ್ಯಾಂಕ್‌ಗಳಲ್ಲಿ ಖಾತೆ ತೆರೆಸುವಾಗ, ದುಡಿಯುವ ವರ್ಗವನ್ನು ಹೂಡಿಕೆ ಮಾಡಲು ಮತ್ತು ಅವರ ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಉಳಿತಾಯ ಖಾತೆ ಅಥವಾ ಜಿರೋ ಬ್ಯಾಲೆನ್ಸ್ ಅಕೌಂಟ್‌ಗಳನ್ನು ತೆರೆಯಲು ಹೇಳಲಾಗುತ್ತಿತ್ತು. ಆದರೆ, ಇದೀಗ ಎಸ್‌ಬಿಐ ಸೇರಿದಂತ ಎಹಲವು ಬ್ಯಾಂಕ್‌ಗಳು ಈ ಪ್ರಮಾಣದಲ್ಲಿ ಶುಲ್ಕ ಮತ್ತು ಜಿಎಸ್‌ಟಿ ವಿಧಿಸುತ್ತಿರುವುದರಿಂದಾಗಿ ದುಡಿಯುವ ವರ್ಗವನ್ನು ಕಷ್ಟಕ್ಕೆ ದೂಡಿದಂತಾಗುತ್ತದೆ.


ಇದನ್ನೂ ಓದಿ: ಮಠಾಧೀಶರನ್ನು ಖರೀದಿಸಿ ಅಧಿಕಾರ ಹಿಡಿದವರು ಹೆಚ್ಚು ದಿನ ಇರಲ್ಲ: ಬಿಎಸ್‌ವೈ ವಿರುದ್ಧ ಯತ್ನಾಳ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ| ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ ಭ್ರೂಣ ಲಿಂಗ ಪತ್ತೆ, ಹತ್ಯೆ: ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಭಾನುವಾರ (ಮೇ 5) ರಾತ್ರಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪಾಂಡವಪುರದ ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ...