Homeಅಂತರಾಷ್ಟ್ರೀಯಅಮೆರಿಕ ಪರ ಯುದ್ಧದಲ್ಲಿ ಪಾಕ್ ಭಾಗವಹಿಸುವುದಿಲ್ಲ: ಇಮ್ರಾನ್ ಖಾನ್

ಅಮೆರಿಕ ಪರ ಯುದ್ಧದಲ್ಲಿ ಪಾಕ್ ಭಾಗವಹಿಸುವುದಿಲ್ಲ: ಇಮ್ರಾನ್ ಖಾನ್

- Advertisement -
- Advertisement -

ಪಾಕಿಸ್ತಾನ ಇನ್ನು ಮುಂದೆ ಎಂದೂ ಅಮೆರಿಕದೊಂದಿಗೆ ಯುದ್ಧದಲ್ಲಿ ಕೈಜೋಡಿಸಲಾರದು ಎಂದು ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌ ಬುಧವಾರ ಸಂಸತ್‌ನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಪಾಕಿಸ್ತಾನ ಅಮೆರಿಕದೊಂದಿಗೆ ಈ ಹಿಂದೆ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿತ್ತು. ಅಮೆರಿಕದೊಂದಿಗೆ ಯುದ್ಧದಲ್ಲಿ ಕೈಜೋಡಿಸಿದಾಗಿನಷ್ಟು ಅವಮಾನವನ್ನು ಪಾಕ್ ಈ ಹಿಂದೆ ಎಂದೂ ಅನುಭವಿಸಿಲ್ಲ. ನಾವು ಶಾಂತಿಯ ಕಾರಣಕ್ಕಾಗಿ ಮಾತ್ರ ಅಮೆರಿಕ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಯುದ್ದಕ್ಕಾಗಿ ಪಾಕ್ ಅಮೆರಿಕ ಮೈತ್ರಿ ಭವಿಷ್ಯದಲ್ಲಿ ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ನಿನ್ನೆ ತಮ್ಮ ಬಜೆಟ್‌ ಭಾಷಣದಲ್ಲಿ ಮಾತನಾಡಿದ್ದಾರೆ.

ಅಮೆರಿಕಕ್ಕೆ ಪಾಕಿಸ್ತಾನದಷ್ಟು ಸಹಾಯವನ್ನು ಯಾವ ದೇಶವೂ ಮಾಡಿಲ್ಲ. ನಮ್ಮ ತ್ಯಾಗದ ಬೆಲೆಯನ್ನು ಅಮೆರಿಕ ಎಂದಾದರೂ ಗುರುತಿಸಿದೆಯೇ? ಬದಲಾಗಿ ನಮ್ಮನ್ನೇ ಹಿಫೋಕ್ರೆಟ್‌ ಎಂದು ಅಮೆರಿಕ ಕರೆದಿದೆ. ಪಾಕಿಸ್ತಾನವನ್ನು ಜಗತ್ತಿನ ಮುಂದೆ ಕೆಟ್ಟದ್ದಾಗಿ ಬಿಂಬಿಸುತ್ತದೆ. ಪಾಕಿಸ್ತಾನ ಅಮೆರಿಕದ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ರಾಷ್ಟ್ರವಾಗಿ ನಿಂತಿತು. ಏನು ಪ್ರಯೋಜನ? ನಮಗೆ ಯುದ್ಧ ಯಾಕೆ ಬೇಕು ಎಂದು ಪದೇ ಪದೇ ದೇಶವನ್ನು ಪ್ರಶ್ನಿಸುತ್ತಲೇ ಬಂದಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದಾದರೂ ದೇಶ ಬೇರೆ ದೇಶದ ಯುದ್ಧಕ್ಕಾಗಿ ತನ್ನ 70,000 ಪ್ರಜೆಗಳನ್ನು ಬಲಿ ಕೊಟ್ಟಿದೆಯೇ? ಮುಂದೆ ಅತ್ಯಂತ ಕಠಿಣ ದಿನಗಳು ಪಾಕಿಸ್ತಾನದ ಮುಂದಿದೆ. ಸುಮಾರು 5000 ಜನ ತೆಹ್ರಿಕ್ ಇ ತಾಲಿಬಾನ್‌ ಪಾಕಿಸ್ತಾನ್‌ (TTP) ಉಗ್ರರು ಪಾಕಿಸ್ತಾನದ ಗಡಿ ಪ್ರವೇಶಿಸಲು ಕಾದಿದ್ದಾರೆಂದು ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಷೇಕ್ ರಶೀದ್, ಆಫ್ಘಾನಿಸ್ತಾನ್ ಮತ್ತು ಪಾಕಿಸ್ತಾನ ನಡುವೆ ಗಡಿ ವಿವಾದವಿದ್ದು ಡ್ಯುರಾಂಡ್ ರೇಖೆಯನ್ನೇ ಪಾಕ್-ಆಫ್ಘಾನ್ ನಡುವಿನ ಗಡಿರೇಖೆಯನ್ನಾಗಿ ಪಾಕ್ ಸರ್ಕಾರ ಪರಿಗಣಿಸಿದೆ. 80% ದಷ್ಟು ಗಡಿ ಬೇಲಿಗಳನ್ನು ನಿರ್ಮಿಸುವ ಕಾರ್ಯ ಮುಗಿದಿದೆ. ಗಡಿ ಬೇಲಿಗಳ ನಿರ್ಮಾಣಕ್ಕೆ ಸ್ಥಳಿಯ ನಿವಾಸಿಗಳ ತೀವ್ರ ವಿರೋಧವಿದ್ದು  ಆಫ್ಘಾನ್ ಸರ್ಕಾರ ಡ್ಯುರಾಂಡ್ ಗಡಿ ರೇಖೆಯನ್ನು ಒಪ್ಪಲು ಸಿದ್ಧವಿಲ್ಲದಿರುವುದೇ ಸಮಸ್ಯೆಯೆಂದಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ದದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಪಾಕ್ ಪ್ರಧಾನಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...