Homeಮುಖಪುಟಮಲದ ಗುಂಡಿ ಸ್ವಚ್ಛಗೊಳಿಸುವಾಗ ಒಂದೂ ಸಾವು ಸಂಭವಿಸಿಲ್ಲ: ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ

ಮಲದ ಗುಂಡಿ ಸ್ವಚ್ಛಗೊಳಿಸುವಾಗ ಒಂದೂ ಸಾವು ಸಂಭವಿಸಿಲ್ಲ: ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ

- Advertisement -
- Advertisement -

ಕಳೆದ ಐದು ವರ್ಷಗಳಲ್ಲಿ ಮಲದ ಗುಂಡಿಗಳನ್ನು (Manual Scavenging) ಸ್ವಚ್ಛಗೊಳಿಸುವಾಗ ಯಾವುದೇ ಸಾವುಗಳು ಸಂಭವಿಸಿಲ್ಲ ಎಂದು ಒಕ್ಕೂಟ ಸರ್ಕಾರ ಹೇಳಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತವಾಗಿ ಇಂತಹ ಉತ್ತರ ನೀಡಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವಾಗ ಉಂಟಾದ ಸಾವುಗಳು ಮತ್ತು ಪುನರ್ವಸತಿ ಪ್ರಕ್ರಿಯೆಗಳ ಬಗ್ಗೆ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅವರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಉತ್ತರಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ 66,692 ಕ್ಕೂ ಅಧಿಕ ಅಧಿಕೃತ ನೋಂದಾಯಿತ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವವರು ಇದ್ದಾರೆ ಎಂಬುದನ್ನು ಸಚಿವಾಲಯ ಒಪ್ಪಿಕೊಂಡಿದೆ, ಈ ಪದ್ಧತಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಾಗಿದೆ.

ಇದನ್ನೂ ಓದಿ: ಮೂವರು ಅಪ್ರ್ರಾಪ್ತ ಸಹೋದರರು ಸೇರಿದಂತೆ ಐವರು ಮಲದ ಗುಂಡಿಯಲ್ಲಿ ಮುಳುಗಿ ಸಾವು

'No Deaths Reported Due to Manual Scavenging': Centre Tells Rajya Sabha

ಜೊತೆಗೆ ಸೆಪ್ಟಿಕ್ ಟ್ಯಾಂಕ್‌ಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನು “ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್” ಎಂದು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

'No Deaths Reported Due to Manual Scavenging': Centre Tells Rajya Sabha

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಟ್ಟಿದ್ದಾಗಿ ಬಿಜೆಪಿ ಜಾಹೀರಾತು: ವಾಸ್ತವದಲ್ಲಿ ಬೀದಿಯಲ್ಲಿರುವ ಸಂತ್ರಸ್ತರು

ದೇಶಾದ್ಯಂತ ಚರಂಡಿ ಸ್ವಚ್ಛಗೊಳಿಸುವಿಕೆ, ಒಳಚರಂಡಿಗಳನ್ನು ಪ್ರವೇಶಿಸುವಾಗ ಉಂಟಾಗಿರುವ ನಿರ್ದಿಷ್ಟ ಸಂಖ್ಯೆಯ ಸಾವುಗಳ ಬಗ್ಗೆ ಕೇಳಿದಾಗ ಸಚಿವಾಲಯವು, 19 ರಾಜ್ಯಗಳಲ್ಲಿ 340 ಸಾವುಗಳು ಸಂಭವಿಸಿದ್ದು, ಅತಿ ಹೆಚ್ಚು (43) ತಮಿಳುನಾಡಿನಲ್ಲಿ ಸಂಭವಿಸಿದೆ ಎಂದು ಉತ್ತರಿಸಿದೆ.

ಕಳೆದ ಐದು ವರ್ಷಗಳಲ್ಲಿ ಮಲದ ಗುಂಡಿಗಳನ್ನು (Manual Scavenging) ಸ್ವಚ್ಛಗೊಳಿಸುವಾಗ  ಯಾವುದೇ ಸಾವುಗಳು ಸಂಭವಿಸಿಲ್ಲ ಎಂಬ ರಾಮದಾಸ್ ಅಠಾವಳೆಯವರ ಉತ್ತರಕ್ಕೆ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕರದ ಉತ್ತರ ಅಸೂಕ್ಷತೆಯಿಂದ ಕೂಡಿದೆ. ಮಲದ ಗುಂಡಿಯನ್ನು ಸ್ಪಚ್ಛಗೊಳಿಸುವವರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಈ ವರ್ಷ ಜನವರಿಯಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಇತರ ಚರಂಡಿ, ಒಳಚರಂಡಿಗಳನ್ನು ಸ್ವಚ್ಛಗೊಳಿಸುವಿಕೆಯಂತಹ ಅಪಾಯಕಾರಿ ಚಟುವಟಿಕೆಗಳನ್ನು ‘ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್’ ವ್ಯಾಖ್ಯಾನದ ಒಳಗೆ ಸೇರಿಸಲು ಶಿಫಾರಸು ಮಾಡಿದೆ.

ಭಾರತದಲ್ಲಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಿಷೇಧಿಸುವ 1993 ರ ಕಾನೂನಿಗೆ ಸರ್ಕಾರ ಕಳೆದ ವರ್ಷ ತಿದ್ದುಪಡಿ ತರಲು ಮುಂದಾಗಿತ್ತು. 2013 ರಲ್ಲಿಯೂ ಈ ಕಾನೂನನ್ನು ಹೆಚ್ಚು ಕಠಿಣವಾಗಿಸಲು ತಿದ್ದುಪಡಿ ಮಾಡಲಾಗಿತ್ತು.


ಇದನ್ನೂ ಓದಿ: ‘ಬಯಲು ಶೌಚ ಮುಕ್ತ ದೇಶ’ : ಪೊಳ್ಳು ಘೋಷಣೆ ಅಡಿಯ ಕಟು ವಾಸ್ತವ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮಲದ ಗುಂಡಿಗಳನ್ನು ಸ್ವಚ್ಛ ಗೊಳಿಸುವುದರಿಂದ ಸಾವುಗಳು ಸಂಭವಿಸುವುದಿಲ್ಲ. ಸ್ವಚ್ಛಗೊಳಿಸಲು ಹೆಚ್ಚು ಜನರು ಸೇರಿಕೊಳ್ಳಿ ಎಂಬ ಅರ್ಥ ಸಚಿವರದ್ದಾ ಗಿದೆ. ಇಂತಹ ಸಚಿವರುಗಳಿಂದಾಗಿ ಜೀವ ಹಾನಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...