ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 47,029 ಕೊರೊನಾ ವೈರಸ್ ಪ್ರಕರಣಗಳು ಮತ್ತು 509 ಸಾವುಗಳು ವರದಿಯಾಗಿವೆ. ಇದರಲ್ಲಿ ಕೇರಳದಲ್ಲಿ 32,803 ಹೊಸ ಪ್ರಕರಣಗಳು ಮತ್ತು 173 ಸಾವುಗಳು ವರದಿಯಾಗಿವೆ. ಈ ಮೂಲಕ ಒಟ್ಟು ಕೊರೊನಾ ಪ್ರಕರಣಗಳು 3,28,57,937 (3.28 ಕೋಟಿ) ಕ್ಕೆ ಏರಿಕೆಯಾಗಿದೆ.
ಒಟ್ಟು ಸಾವಿನ ಸಂಖ್ಯೆ 4.39 ಲಕ್ಷಕ್ಕೆ (4,39,529) ಹೆಚ್ಚಾಗಿದೆ. ಪ್ರಸ್ತುತ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3.89 ಲಕ್ಷ (3,89,583) ಆಗಿದೆ.
ಕೊರೊನಾ ವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ಯುರೋಪ್, ಚೀನಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಚೀನಾ ಮತ್ತು ಮಧ್ಯಪ್ರಾಚ್ಯದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸೆಪ್ಟೆಂಬರ್ 3 ರಿಂದ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ತರಲು ತಿಳಿಸಿದೆ.
ಇದನ್ನೂ ಓದಿ: ‘ನಮ್ಮದು ಕೊರೊನಾ ವಿರೋಧಿ ಸರ್ಕಾರವೇ ಹೊರತು, ಹಿಂದೂ ವಿರೋಧಿಯಲ್ಲ’ – BJP ಗೆ ತಿರುಗೇಟು ನೀಡಿದ ಉದ್ದವ್ ಠಾಕ್ರೆ
ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಕಂಗಟ್ಟಿದ್ದ ಕಾರಣ ದೆಹಲಿ ಸರ್ಕಾರವು ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಕ್ರಯೋಜೆನಿಕ್ ಟ್ಯಾಂಕರ್‌ಗಳನ್ನು ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 16.
India reports 47,092 new #COVID19 cases, 35,181 recoveries and 509 deaths in last 24 hours, as per Health Ministry
Total cases: 3,28,57,937
Active cases: 3,89,583
Total recoveries: 3,20,28,825
Death toll: 4,39,529Total vaccination: 66,30,37,334 (81,09,244 in last 24 hours) pic.twitter.com/SJDvg3FQOH
— ANI (@ANI) September 2, 2021
ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವ ಜನರಿಗೆ ಕರ್ನಾಟಕ ರಾಜ್ಯ ಸರ್ಕಾರವು ಸಾಂಸ್ಥಿಕ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ. ಕೇರಳದ ಪ್ರಯಾಣಿಕರು ಅಲ್ಲಿ ಒಂದು ವಾರದವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಲಸಿಕೆ ಹಾಕಿದ ಮತ್ತು ಆರ್‌ಟಿ-ಪಿಸಿಆರ್ ನಗೆಟಿವ್ ಪರೀಕ್ಷಾ ವರದಿಯನ್ನು ಹೊಂದಿರುವವರಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಕರ್ನಾಟಕ ಆರೋಗ್ಯ ಸಚಿವ ಕೆ ಸುಧಾಕರ್ ಇತ್ತಿಚೆಗೆ ಹೇಳಿದ್ದರು.
ಕೇರಳದಿಂದ ವಿಮಾನದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ. ಸಾಂಸ್ಥಿಕ ಕ್ವಾರಂಟೈನ್‌ಗೆ ಗೊತ್ತುಪಡಿಸಲಾಗಿರುವ ತಮ್ಮ ಆಯ್ಕೆಯ ಹೋಟೆಲ್ ಅನ್ನು ಈ ಪ್ರಯಾಣಿಕರು ಆಯ್ಕೆ ಮಾಡಿಕೊಳ್ಳಬಹುದು ಎಂದು ಸುಧಾಕರ್ ಹೇಳಿದ್ದರು.
ಇದನ್ನೂ ಓದಿ: ಕೇರಳ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 3 ಲಕ್ಷ ರೂ. ಆರ್ಥಿಕ ನೆರವು


