ಬಾಲಿಕ ವಧು ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ಹಿಂದಿ ನಟ ಮತ್ತು ಮಾಡೆಲ್ ಸಿದ್ದಾರ್ಥ್ ಶುಕ್ಲಾ ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 40ನೇ ವಯಸ್ಸಿನಲ್ಲಿಯೇ ವಿಧಿವಶರಾಗಿದ್ದಾರೆ.
ತೀವ್ರ ಎದೆಯ ನೋವಿನಿಂದ ಬಳಲುತಿದ್ದ ಸಿದ್ಧಾರ್ಥ್ ಶುಕ್ಲಾ ಅವರನ್ನು ಇಂದು ಬೆಳಗ್ಗೆ ಮುಂಬೈನ ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಕೂಪರ್ ಆಸ್ಪತ್ರೆಯ ಡಾಕ್ಟರ್ ಸುಖದೇವ್ ದೃಢಪಡಿಸಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಅವರ ಹಠಾತ್ ಸಾವಿಗೆ ಟೆಲಿವಿಷನ್ ನಟರು, ಬಾಲಿವುಡ್ ತೀವ್ರ ಸಂತಾಪ ಸೂಚಿಸಿದ್ದಾರೆ. ಸಹೋದ್ಯೋಗಿಗಳಾದ ಕಪಿಲ್ ಶರ್ಮಾ, ದಾರಾ ಸಿಂಗ್, ಸುನಿಲ್ ಗ್ರೋವರ್, ದೇವೋಲೀನಾ ಭಟ್ಟಾಚಾರ್ಜಿ, ಹಿಮಾಂಶಿ ಖುರಾನಾ, ಮುನ್ಮುನ್ ದತ್ತಾ ಮತ್ತು ಇತರರು ಸಂತಾಪ ಸೂಚಿಸಿದ್ದಾರೆ.
ನಟಿ ಮಾಧುರಿ ದೀಕ್ಷಿತ್, ಝರೀನ್ ಖಾನ್, ನಟ ಸೋನುಸೂದ್, ಮನೋಜ್ ಬಾಜ್ಪೇಯಿ, ಅಜಯ್ ದೇವಗನ್ ಸೇರಿದಂತೆ ಬಾಲಿವುಡ್ ನಟ, ನಟರು ಅಗಲಿದ ಕಲಾವಿದನಿಗೆ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ: ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೊ: ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ
2019 ರಲ್ಲಿ ಬಿಗ್ ಬಾಸ್ 13 ನೇ ಆವೃತ್ತಿ ಮತ್ತು ಖತ್ರೋನ್ ಕೆ ಖಿಲಾಡಿ 7ನೇ ಆವೃತ್ತಿ ಗೆದ್ದಿದ್ದ ಸಿದ್ದಾರ್ಥ್ ಶುಕ್ಲಾ ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
It's just unbelievable and shocking. You will always be remembered @sidharth_shukla. May your soul rest in peace. My heartfelt condolences to the family ?
— Madhuri Dixit Nene (@MadhuriDixit) September 2, 2021
ಸಿದ್ಧಾರ್ಥ್ ಶುಕ್ಲಾ 2008 ರ ಟಿವಿ ಶೋ ’ಬಾಬುಲ್ ಕಾ ಆಂಗನ್ ಚೂಟೇ ನಾ’ ಧಾರವಾಹಿ ಮೂಲಕ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಶುಕ್ಲಾ ಅವರು ಜಾನೆ ಪೆಹ್ಚಾನೆ ಸೆ … ಯೆ ಅಜ್ನಬ್ಬಿ, ಲವ್ ಯು ಜಿಂದಗಿ, ಸಿಐಡಿ ಮತ್ತು ದಿಲ್ ಸೆ ದಿಲ್ ತಕ್ ಸೇರಿ ಹಲವು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ದಿವಂಗತ ನಟಿ ಪ್ರತ್ಯೂಷಾ ಬ್ಯಾನರ್ಜಿಯೊಂದಿಗೆ ಕಾಣಿಸಿಕೊಂಡ ಬಾಲಿಕಾ ವಧು ಧಾರವಾಹಿಯಲ್ಲಿನ ಅವರ ಪಾತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು.
Oh god, it’s really shocking n heartbreaking, my condolences to the family n prayers for the departed soul ? Om Shanti https://t.co/BuyIepJjEi
— Kapil Sharma (@KapilSharmaK9) September 2, 2021
ಕಿರುತೆರೆ ಜೊತೆಗೆ ಹಲವು ಬಾಲಿವುಡ್ ಚಲನಚಿತ್ರಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಲಿಯಾ ಭಟ್ ಮತ್ತು ವರುಣ್ ಧವನ್ ಅಭಿನಯದ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಆಲ್ಬಂಬ್ ಸಾಂಗ್‌ಗಳಲ್ಲಿಯೂ ಸಿದ್ಧಾರ್ಥ್ ಶುಕ್ಲಾ ನಟಿಸಿದ್ದರು.
Hard to believe he is no more, my heartfelt condolences go to his family ? RIP my friend, u will be missed. pic.twitter.com/B9my98mrb7
— sonu sood (@SonuSood) September 2, 2021
ಇದನ್ನೂ ಓದಿ: ಗ್ಯಾಂಗ್ ರೇಪ್: ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ- ನಟಿ ರಮ್ಯಾ ಆಕ್ರೋಶ


